ವಿಶ್ವಕ್ಕೆ ಸವಾಲಾಗಿರುವ 'ಸುಳ್ಳು ಸುದ್ದಿ' ಪತ್ತೆಗೆ ಮೈಸೂರಿನ ಟೆಕ್ಕಿಯಿಂದ ಪರಿಹಾರ?!

|

ಭಾರತ ಸೇರಿದಂತೆ ವಿಶ್ವದಾಧ್ಯಂತ ಸುಳ್ಳು ಸುದ್ದಿಗಳಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಸರ್ಕಾರಕ್ಕೂ ಸಾಧ್ಯವಾಗುತ್ತಿಲ್ಲ. ಇತ್ತೀಚಿಗಂತೂ ಭಾರತದಲ್ಲಿ ಹಬ್ಬಿಕೊಂಡಿರುವ 'ಮಕ್ಕಳ ಕಳ್ಳರು' ಎಂಬ ಸುಳ್ಳು ಸುದ್ದಿ ಎಷ್ಟೋ ಜನರ ಜೀವ ತೆಗೆದದ್ದು ಎಲ್ಲರಿಗೂ ತಿಳಿದಿದೆ. ಆದರೂ ಸಹ, ಈ ಸುಳ್ಳು ಸುದ್ದಿ ಸಮಸ್ಯೆಗೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ.

ವಾಟ್ಸ್ಆಪ್ , ಫೇಸ್‌ಬುಕ್‌ನಂತಹ ಜಾಲಾತಾಣಗಳು ಹಾಗೂ ಆನ್‌ಲೈನ್ ಮಿಡಿಯಾಗಳ ಈ ಕಾಲದಲ್ಲಿ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕುವುದು ಸುಲಭದ ಮಾತೇನಲ್ಲ.! ಇಲ್ಲಿ ಸುಳ್ಳು ಸುದ್ದಿ ಯಾವುವು ಹಾಗೂ ಸುಳ್ಳು ಯಾವುದು ಎಂಬುದನ್ನು ಪತ್ತೆ ಮಾಡುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿದ್ದು, ರಾಶಿರಾಶೀ ರಾಗಿಯನ್ನು ಕುಳಿತು ಒಂದೊಂದಾಗಿ ಎಣಿಸುವಂತೆಯೇ ಸರಿ.

ವಿಶ್ವಕ್ಕೆ ಸವಾಲಾಗಿರುವ 'ಸುಳ್ಳು ಸುದ್ದಿ' ಪತ್ತೆಗೆ ಮೈಸೂರಿನ ಟೆಕ್ಕಿಯಿಂದ ಪರಿಹಾರ

ಇದರಿMದಾಗಿ ಈ ಆಧುನಿಕ ಯುಗದಲ್ಲಿ ಸುಳ್ಳು ಸುದ್ದಿ ಎಂಬುದು ಪರಿಹಾರ ಸಿಗದ ಸಮಸ್ಯೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದರು. ಆದರೆ, ಸುಳ್ಳು ಸುದ್ದಿಯನ್ನೆ ಪತ್ತೆ ಮಾಡುವುದೇ ಒಂದು ದೊಡ್ಡ ಸವಾಲಿನ ಸಂಗತಿಯಾಗಿರುವ ಸಮಯದಲ್ಲಿ ಮೈಸೂರು ಮೂಲದ ಲಿರಿಕ್ ಜೈನ್‌ ಇಂಗ್ಲೆಂಡ್‌ನ‌ಲ್ಲಿ ವಿನೂತನ ಸ್ಟಾರ್ಟಪ್ ಒಂದನ್ನು ಸ್ಥಾಪಿಸಿ ಕುತೋಹಲ ಮೂಡಿಸಿದ್ದಾರೆ.

ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು!

ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು!

ವಿಶ್ವದಾಧ್ಯಂತ ಸುಳ್ಳು ಸುದ್ದಿಗಳಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಎದುರಿಸುವ ಸಲುವಾಗಿ, ಕೇಂಬ್ರಿಜ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರುವ ಮೈಸೂರು ಮೂಲಕ 'ಲಿರಿಕ್ ಜೈನ್‌' ಅವರು ನವೋದ್ಯಮವೊಂದನ್ನು ಸ್ಥಾಪಿಸಿದ್ದಾರೆ. ತಂತ್ರಜ್ಞಾನಕ್ಕೆ ತಂತ್ರಜ್ಞಾನವೇ ಮದ್ದು ಎಂದು ತಂತ್ರಜ್ಞಾನವನ್ನು ಬಳಸಿಕೊಂಡು ಈ ನವೋದ್ಯಮ ತನ್ನ ಕೆಲಸ ಮಾಡಲಿದೆ.

ಯಾವ ತಂತ್ರಜ್ಞಾನ?

ಯಾವ ತಂತ್ರಜ್ಞಾನ?

ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿಗಳಲ್ಲಿರುವ ಸುಳ್ಳನ್ನು ಪತ್ತೆ ಮಾಡುವ ಕೆಲಸವನ್ನು ಈ ನವೋದ್ಯಮ ಮಾಡಲಿದೆ. ಇದಕ್ಕಾಗಿ "ಮಶಿನ್ ಲರ್ನಿಂಗ್ ಅಲ್ಗೊರಿದಂ' ಅನ್ನು ಬಳಸಿ ಲಾಜಿಕಲಿ ಎಂಬ ಟೂಲ್ ಅನ್ನು 'ಲಿರಿಕ್ ಜೈನ್‌' ಅವರು ಸಿದ್ಧಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಸುಮಾರು 70 ಸಾವಿರ ಡೊಮೇನ್‌ಗಳಿಂದ ಸುದ್ದಿಗಳನ್ನು ಗ್ರಹಿಸುವ ಲಾಜಿಕಲಿ ಪ್ಲಾಟ್‌ಫಾರಂ, ಪ್ರತಿ ಲೇಖನದಲ್ಲಿರುವ ಎಲ್ಲ ಮಾಹಿತಿಯನ್ನೂ ಪರಿಶೀಲಿಸುತ್ತದೆಯಂತೆ. ಅವುಗಳಲ್ಲಿ ಇರಬಹುದಾದ ತಪ್ಪುಗಳನ್ನು ಈ ಪ್ಲಾಟ್‌ಫಾರಂ ಕಂಡುಹಿಡಿಯಲಿದೆ. ಇದರಿಂದ ಜನರು ಈ ಸುದ್ದಿ ವಿಶ್ವಾಸಾರ್ಹವೇ ಎಂಬುದನ್ನು ತಕ್ಷಣ ಅರಿಯಬಹುದು ಎನ್ನಲಾಗಿದೆ.

ಮಾನವ ಹಸ್ತಕ್ಷೇಪ ಇಲ್ಲ!

ಮಾನವ ಹಸ್ತಕ್ಷೇಪ ಇಲ್ಲ!

ಸುಳ್ಳು ಸುದ್ದಿ ಕಂಡುಕೊಳ್ಳಲೆಂದೇ ಅಲ್ಗೊರಿದಂ ವಿನ್ಯಾಸಗೊಳಿಸಲಾಗಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಮೂಲಕ ಇದು ಕೆಲಸ ಮಾಡುತ್ತದೆ. ಹೀಗಾಗಿ ಇಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇರದೆ, ಲಕ್ಷಾಂತರ ಸುದ್ದಿಗಳು ಪ್ರತಿನಿತ್ಯ ಪರಿಶೀಲಿಸುತ್ತದೆ. ಮ್ಯಾನ್ಯುವಲ್ ಆಗಿ ಸಾಧ್ಯವಾಗದದನ್ನು ಕೃತಕ ಬುದ್ದಿ ಮತ್ತೆ ಸಾಧಿಸುವ ವಿಶ್ವಾಸವನ್ನು ಇಡಲಾಗಿದೆ.

10 ಕೋಟಿ ರೂ. ಬಂಡವಾಳ

10 ಕೋಟಿ ರೂ. ಬಂಡವಾಳ

ಲಾಜಿಕಲಿ ಎಂಬ ನವೋಧ್ಯಮಕ್ಕೆ 'ಲಿರಿಕ್ ಜೈನ್‌' ಅವರು 10 ಕೋಟಿ ರೂ. ಬಂಡವಾಳವನ್ನೂ ಹೂಡಿಕೆ ಮಾಡಿದ್ದಾರೆ. ವಿವಿಧ ತಾಂತ್ರಿಕ ವಿಶ್ವವಿದ್ಯಾಲಯಗಳ ಪದವೀಧರರನ್ನು ನೇಮಿಸಿಕೊಂಡು ಒಟ್ಟು 38 ಜನರು ಕೆಲಸ ಮಾಡುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್‌ ಹಾಗೂ ಭಾರತದಲ್ಲಿ ಕಚೇರಿಗಳನ್ನು ತೆರೆದಿರುವ ಹೊಸ ನವೊಧ್ಯಮ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.

ಪರೀಕ್ಷೆಯಲ್ಲಿ ಪಾಸ್‌ ಆಗುತ್ತದೆಯೇ?

ಪರೀಕ್ಷೆಯಲ್ಲಿ ಪಾಸ್‌ ಆಗುತ್ತದೆಯೇ?

ಜಗತ್ತಿನಾದ್ಯಂತ ಸರ್ಕಾರಗಳು, ನ್ಯಾಯಾಲಯಗಳು ಈ ಫೇಕ್‌ನ್ಯೂಸ್ ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಈ ತಂತ್ರಜ್ಞಾನವು ಪರೀಕ್ಷೆಯಲ್ಲಿ ಪಾಸ್‌ ಆದರೆ, ಫೇಕ್ ನ್ಯೂಸ್‌ಗಳಿಗೆ ಬ್ರೇಕ್‌ ಹಾಕುವುದು ಸುಲಭವಾಗಲಿದೆ. ಆದರೆ, ಸುದ್ದಿಗಳನ್ನು ತಂತ್ರಜ್ಞಾನದ ಮೂಲಕ ವಿಭಾಗಿಸಲು ಸಾಧ್ಯವೇ? ಎಂಬುದು ಇಲ್ಲಿ ಪ್ರಶ್ನೆಯಾಗಿ ಉಳಿದಿದೆ.!

Best Mobiles in India

English summary
Indian-origin entrepreneur's UK-based start-up that uses a machine-learning algorithm to sift fact from fiction is set to combat fake news around the world, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X