ಭಾರತದ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆಯ ಟಾಪ್‌ ಬ್ರ್ಯಾಂಡ್‌ಗಳು ಯಾವುವು!

|

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಮಾತ್ರವಲ್ಲ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆ ಕೂಡ ವಿಶಾಲವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಲಾಗಿದೆ. ಅದರಲ್ಲೂ 2022ರ 2ನೇ ತ್ರೈ ಮಾಸಿಕದಲ್ಲಿ 23.9 ಮಿಲಿಯನ್ ವೆರಿಯೆಬಲ್ಸ್‌ ಡಿವೈಸ್‌ಗಳು ಮಾರಾಟ ಕಂಡಿವೆ. ಅಂದರೆ ಭಾರತದಲ್ಲಿ ಕೈಗೆ ಧರಿಸಬಹುದಾದ ಡಿವೈಸ್‌ಗಳ ಮಾರಾಟ ವರ್ಷದಿಂದ ವರ್ಷಕ್ಕೆ 113% ಬೆಳೆವಣಿಗೆ ಕಾಣುತ್ತಿದೆ ಎಂದು ವರದಿಯಾಗಿದೆ.

ಭಾರತದ

ಹೌದು, ಭಾರತದ ಮಾರುಕಟ್ಟೆಯಲ್ಲಿ ಕೈಗೆ ಧರಿಸಬಹುದಾದ(ಸ್ಮಾರ್ಟ್‌ ವೆರಿಯೆಬಲ್ಸ್‌) ಡಿವೈಸ್‌ಗಳ ಮಾರಾಟ ಜಾಸ್ತಿಯಾಗಿದೆ. ಹೆಲ್ತ್‌ ಫಿಟ್ನೆಸ್‌ ಫೀಚರ್ಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ಪರಿಣಾಮ ಈ ವರ್ಷದ ಜನವರಿ-ಜೂನ್ ತಿಂಗಳ ನಡುವೆ 38 ಮಿಲಿಯನ್ ಯೂನಿಟ್‌ ಡಿವೈಸ್‌ಗಳು ಮಾರಾಟವಾಗಿವೆ. ಹೊಸ ಡಿವೈಸ್‌ಗಳ ಬಿಡುಗಡೆ, ರಿಯಾಯಿತಿಗಳು ಮತ್ತು ಮಾರ್ಕೆಟಿಂಗ್‌ನಿಂದಾಗಿ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರಾಟ ಹೆಚ್ಚಾಗಿದೆ ಎನ್ನಲಾಗಿದೆ. ಹಾಗಾದ್ರೆ ಭಾರತದ ಸ್ಮಾರ್ಟ್‌ ವೆರಿಯೆಬಲ್ಸ್‌ ಡಿವೈಸ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿರುವ ಟಾಪ್‌ ಬ್ರ್ಯಾಂಡ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಟರ್‌ನ್ಯಾಷನಲ್

ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಇಂಡಿಯಾ ಟ್ರ್ಯಾಕರ್‌ ಪ್ರಕಾರ, 2022 ರ 2ನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಒಟ್ಟಾರೆ ಸರಾಸರಿ ಮಾರಾಟದ ಬೆಲೆ (ASP) 7.2% ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಆದರೆ ವಾಚ್-ಆಧಾರಿತ ವೇರಿಯೆಬಲ್ಸ್‌ 6.4 ಮಿಲಿಯನ್ ಯುನಿಟ್‌ಗಳ ಶಿಪ್ಪಿಂಗ್ ಕಂಡಿದ್ದು, 98.4% ಬೆಳೆವಣಿಗೆ ಸಾಧಿಸಿದೆ. 2Q22 ರಲ್ಲಿ ವಾರ್ಷಿಕವಾಗಿ 306.4% ಅಂದರೆ 95.2% ರಷ್ಟು ಪಾಲು ಬೆಳೆಯುವುದರೊಂದಿಗೆ ಮೂಲ ಕೈಗಡಿಯಾರಗಳು ಪ್ರಾಬಲ್ಯ ಸಾಧಿಸಿವೆ.

ಟಾಪ್ 5 ಧರಿಸಬಹುದಾದ ಡಿವೈಸ್‌ ಕಂಪನಿಗಳು

ಟಾಪ್ 5 ಧರಿಸಬಹುದಾದ ಡಿವೈಸ್‌ ಕಂಪನಿಗಳು

ಬೋಟ್‌
ಭಾರತದ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪೆನಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಂದರೆ 2Q22 ನಲ್ಲಿ 34.3% ಮಾರುಕಟ್ಟೆ ಪಾಲನ್ನು ಪಡೆದಿದೆ. ಇದು ವರ್ಷದಿಂದ ವರ್ಷಕ್ಕೆ 76.6% ಬೆಳವಣಿಗೆ ಸಾಧಿಸಿದೆ. ಇದು ಇಯರ್‌ವೇರ್ ಡಿವೈಸ್‌ಗಳ ಮೇಲೆ ಕೇಂದ್ರೀಕರಿಸಿದೆ. ಅದರಂತೆ TWS ನಲ್ಲಿ 42.8% ಪಾಲನ್ನು ಹೊಂದಿದೆ.

ನಾಯ್ಸ್‌

ನಾಯ್ಸ್‌

ನಾಯ್ಸ್‌ ಕಂಪೆನಿ ಸ್ಮಾರ್ಟ್‌ ವೆರಿಯೆಬಲ್ಸ್‌ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಅದರಂತೆ 2Q22ರಲ್ಲಿ 11.5% ಮಾರುಕಟ್ಟೆ ಪಾಲು ಪಡೆದುಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು ನಾಯ್ಸ್‌ ಕಂಪೆನಿ ವಾಚ್-ಆಧಾರಿತ ವೇರಬಲ್ಸ್ ವಿಭಾಗದಲ್ಲಿ 28.5% ಪಾಲನ್ನು ಪಡೆದಿದ್ದು, 2Q22 ನಲ್ಲಿ ವಾರ್ಷಿಕವಾಗಿ 296.6% ಬೆಳವಣಿಗೆ ಸಾಧಿಸಿದೆ. ಜೊತೆಗೆ TWS ಡಿವೈಸ್‌ಗಳ ಮಾರುಕಟ್ಟೆಯಲ್ಲಿ 8.0% ವರ್ಗದ ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನಪಡೆದಿದೆ.

ಒನ್‌ಪ್ಲಸ್

ಒನ್‌ಪ್ಲಸ್

ಪ್ರೀಮಿಯಂ ಡಿವೈಸ್‌ಗಳಿಗೆ ಪ್ರಸಿದ್ಧಿ ಪಡೆದಿರುವ ಒನ್‌ಪ್ಲಸ್ ಕಂಪೆನಿ ಸ್ಮಾರ್ಟ್‌ ವೆರಿಯೆಬಲ್ಸ್‌ ಡಿವೈಸ್‌ ಮಾರುಕಟ್ಟೆ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. 2Q22 ನಲ್ಲಿ 129.7 % ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಒಟ್ಟಾರೆ ಇಯರ್‌ವೇರ್ ವಿಭಾಗದಲ್ಲಿ 11.9% ಪಾಲನ್ನು ಹೊಂದಿದ್ದು, TWS ವಿಭಾಗದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಫೈರ್ - ಬೋಲ್ಟ್

ಫೈರ್ - ಬೋಲ್ಟ್

ಫೈರ್ - ಬೋಲ್ಟ್ ಕಂಪೆನಿ 1,432.5% ಬೆಳವಣಿಗೆಯನ್ನು ಸಾಧಿಸಿದ್ದು, 2Q22 ರಲ್ಲಿ ವೆರಿಯೆಬಲ್ಸ್‌ ಡಿವೈಸ್‌ ಮಾರುಕಟ್ಟೆಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಆದರೆ ಇದು 24.8% ಪಾಲನ್ನು ಹೊಂದಿರುವ ವಾಚ್-ಆಧಾರಿತ ಧರಿಸಬಹುದಾದ ವಸ್ತುಗಳಲ್ಲಿ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಫೈರ್‌ ಬೋಲ್ಟ್‌ ಕಂಪೆನಿಯ ಡಿವೈಸ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ರಿಯಲ್‌ಮಿ

ರಿಯಲ್‌ಮಿ

ಸ್ಮಾರ್ಟ್‌ ವೆರಿಯೆಬಲ್ಸ್‌ ಡಿವೈಸ್‌ಗಳಲ್ಲಿ ರಿಯಲ್‌ಮಿ ಕಂಪೆನಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ದಿನೇ ದಿನೇ ಸಾಕಷ್ಟು ಜನಪ್ರಿಯತೆ ಸಾಧಿಸುತ್ತಿರುವ ರಿಯಲ್‌ಮಿ ಬಡ್ಸ್ ವೈರ್‌ಲೆಸ್ 2 ನಿಯೋ ಮತ್ತು ಟೆಕ್ ಲೈಫ್ ಬಡ್ಸ್ N100 ಮೂಲಕ 2Q22 ರಲ್ಲಿ 87.9% ಬೆಳವಣಿಗೆ ಸಾಧಿಸಿದೆ. ಒಟ್ಟಾರೆ ಶಿಪ್ಟಿಂಗ್‌ನಲ್ಲಿ 42.9% ಬೆಳವಣಿಗೆ ಹೊಂದಿದೆ.

Best Mobiles in India

English summary
Watch-based wearables continue to be the fastest-growing category shipping 6.4 million units; a growth of 298.4 percent YoY.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X