ಎರಡನೇ ಸಿಮ್‌ ಬಳಕೆಯನ್ನು ಕಡಿಮೆ ಮಾಡಿದ ಭಾರತೀಯರು? ಕಾರಣ ಏನು?

|

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಟೆಲಿಕಾಂ ಮಾರುಕಟ್ಟೆ ಚಿಕ್ಕದಾಗುತ್ತಿದೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ ಎರಡನೇ ಸಿಮ್‌ ಬಳಸುವವರ ಪ್ರಮಾಣ ತುಂಬಾನೇ ಕಡಿಮೆಯಾಗ್ತಿದೆ. ನಿಜ, ಟೆಲಿಕಾಂ ಕಂಪೆನಿಗಳು ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಶೈಲಿಯನ್ನು ಬದಲಾಯಿಸಿದ ನಂತರ ಹೆಚ್ಚಿನ ಜನರು ಎರಡನೇ ಸಿಮ್‌ ಬಳಸುತ್ತಿಲ್ಲ. ಇದೀಗ ಅನಿಯಮಿತ ಕರೆ ಪ್ರಯೋಜನಗಳ ಪ್ಲಾನ್‌ಗಳು ಲಭ್ಯವಿರುವುದರಿಂದ ಎರಡನೇ ಸಿಮ್‌ ಬಳಕೆಯೆ ಪ್ರಶ್ನೆಯೆ ಉದ್ಭವಿಸುತ್ತಿಲ್ಲ ಎನ್ನಲಾಗಿದೆ.

ಸಿಮ್‌

ಹೌದು, ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಸಿಮ್‌ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಟ್ರಾಯ್‌ ಹೇಳಿದೆ. ಟ್ರಾಯ್‌ನ ಏಪ್ರಿಲ್ ತಿಂಗಳ ಮಾಸಿಕ ವರದಿಯ ಪ್ರಕಾರ ಭಾರತದಲ್ಲಿ ಸುಮಾರು 7.5 ಮಿಲಿಯನ್ ಚಂದಾದಾರರು ಸಿಮ್‌ ಬಳಕೆಯನ್ನು ನಿಲ್ಲಿಸಿದ್ದಾರೆ. ಹಾಗಂತ ಇವರೆಲ್ಲರೂ ಸಿಮ್‌ ಬಳಕೆಯನ್ನು ಮಾಡುತ್ತಿಲ್ಲ ಎಂದಲ್ಲ. ಇವರೆಲ್ಲರೂ ನಿಲ್ಲಿಸಿರುವುದು ಎರಡನೇ ಸಿಮ್‌ ಬಳಕೆಯನ್ನು ಎನ್ನಲಾಗಿದೆ. ಇದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಕಾಂ

ಟೆಲಿಕಾಂ ಆಪರೇಟರ್‌ಗಳು ನೀಡುವ ಸಿಮ್‌ ಸ್ಮಾರ್ಟ್‌ಫೋನ್‌ ಬಳಸುವುದಕ್ಕೆ ಅಗತ್ಯವಾಗಿ ಬೇಕಿದೆ. ಸಿಮ್‌ ಇಲ್ಲದೆ ಹೋದರೆ ಕರೆ ಮಾಡುವುದಕ್ಕೆ ನಿಮಗೆ ಸಾದ್ಯವೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಲಕ್ಷಾಂತರ ಜನರು ಏಕಾಏಕಿ ಸಿಮ್‌ ಬಳಕೆಯನ್ನು ತ್ಯಜಿಸಿದ್ದಾರೆ ಎಂದರೆ ಅವರೆಲ್ಲರೂ ಸಂಪರ್ಕಕ್ಕಾಗಿ ಏನನ್ನು ಬಳಸಲು ಸಾಧ್ಯ. ಈ ಪ್ರಶ್ನೆಗೆ ಟ್ರಾಯ್‌ ಉತ್ತರ ನೀಡಿದೆ. ಟ್ರಾಐ್‌ ನೀಡಿರುವ ವರದಿಯ ಪ್ರಕಾರ ಹೆಚ್ಚಿನ ಜನರು ಎರಡನೇ ಸಿಮ್‌ ಬಳಕೆಯನ್ನು ನಿಲ್ಲಿಸಿದ್ದಾರೆ.

ಏರ್‌ಟೆಲ್

ಇದು ಬಳಕೆದಾರರು ಸ್ವಯಂಪ್ರೇರಿತವಾಗಿ ತೆಗೆದುಕೊಂಡ ನಿರ್ಧಾರವೋ ಇಲ್ಲವೋ ತಿಳಿದಿಲ್ಲ. ಆದರೆ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೊದಂತಹ ಉನ್ನತ ಟೆಲ್ಕೋಗಳು ಸಕ್ರಿಯ ಯೋಜನೆಗೆ ಚಂದಾದಾರರಾಗಲು ಪಾವತಿಸದ ಬಳಕೆದಾರರನ್ನು ಸಕ್ರಿಯವಾಗಿ ಹೊರಹಾಕುತ್ತಿವೆ. ಸಕ್ರಿಯ ಚಂದಾದಾರಾಗುವಲ್ಲಿ ವಿಫಲವಾದರೆ ಚಂದಾದಾರರು ತಮ್ಮ ಸಂಖ್ಯೆಯನ್ನು ಕಡಿತಗೊಳಿಸಿರುವುದು ವರದಿಯಾಗಿದೆ ಇದು ಕೂಡ ಸಿಮ್‌ ಬಳಕೆಯ ಪ್ರಮಾಣ ಕಡಿಮೆಯಾಗಲು ಮೂಲ ಕಾರಣವಾಗಿದೆ.

ಟಾರಿಫ್‌

ಇದಲ್ಲದೆ ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಟೆಲಿಕಾಂ ಕಂಪೆನಿಗಳು ತಮ್ಮ ಟಾರಿಫ್‌ ಅನ್ನು ಹೆಚ್ಚಿಸುತ್ತಿವೆ. ಈಗಾಗಲೇ ಎಲ್ಲಾ ಮೂರು ಟೆಲಿಕಾಂಗಳು ಸುಮಾರು 20-25% ರಷ್ಟು ಸುಂಕವನ್ನು ಹೆಚ್ಚಿಸಿವೆ. ಇದರಿಂದ ಎರಡನೇ ಸಿಮ್‌ ಬಳಸುವವರಿಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಇದರ ನಡುವೆ ಏರ್‌ಟೆಲ್ ಮತ್ತು ಜಿಯೋ ಇಬ್ಬರೂ ಒಟ್ಟಾಗಿ ತಿಂಗಳಿಗೆ 2.5 ಮಿಲಿಯನ್ ಚಂದಾದಾರರನ್ನು ಸೇರಿಸಿದ್ದಾರೆ ಎಂದು ಟ್ರಾಯ್‌ ವರದಿ ಹೇಳಿದೆ.

ಟ್ರಾಯ್‌

ಇನ್ನು ಟ್ರಾಯ್‌ ನೀಡಿರುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಏರ್‌ಟೆಲ್‌,ಜಿಯೋ, ವಿ ಹಾಗೂ ಸರ್ಕಾರಿ ಸ್ವಾಮ್ಯದ BSNL ಸೇರಿದಂತೆ ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ಸಕ್ರಿಯ ಚಂದಾದಾರರನ್ನು ಕಳೆದುಕೊಂಡಿದ್ದಾರೆ. ಈ ರೀತಿಯ ಕುಸಿತಕ್ಕೆ ಎರಡನೇ ಸಿಮ್‌ ಬಳಕೆಯ ಪ್ರಮಾಣ ಕಡಿಯಾಗಿರುವುದು ಆಗಿದೆ. ಹಾಗೇ ನೋಡಿದ್ರೆ 2022ರ ಮೊದಲ ಮೂರು ತಿಂಗಳುಗಳಲ್ಲಿ, ಟೆಲಿಕಾಂ ಕಂಪೆನಿಗಳು 21 ಮಿಲಿಯನ್ ಸಕ್ರಿಯ ಚಂದಾದಾರರನ್ನು ಪಡೆದುಕೊಂಡಿವೆ. ಆರದೆ ಏಪ್ರಿಲ್‌ ತಿಂಗಳ ವೇಳೆಗೆ ಕುಸಿತವನ್ನು ದಾಖಲಿಸಿವೆ.

ಟೆಲಿಕಾಂ

ಭಾರತದಲ್ಲಿ 2010ರ ಸಮಯದಲ್ಲಿ ಟೆಲಿಕಾಂ ಕಂಪೆನಿಗಳ ಸಂಖ್ಯೆ ಹೆಚ್ಚಾದ ನಂತರ ಹೊಸ ಹೊಸ ರೀಚಾರ್ಜ್‌ ಪ್ಲಾನ್‌ಗಳ ಕಾರಣದಿಂದಾಗಿ ಎರಡನೇ ಸಿಮ್‌ ಬಳಕೆ ಹೆಚ್ಚಾಗಿತ್ತು. ಒಂದು ಹಂತದಲ್ಲಿ ಭಾರತದ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಸಿಮ್‌ಗಳು ಭಾರತದಲ್ಲಿ ಬಳಕೆಯಲ್ಲಿದ್ದವು ಎನ್ನಲಾಗಿದೆ. ಆದರೆ ನಂತರದ ದಿನಗಳಲ್ಲಿ ಹೆಚ್ಚಿನ ಜನರು ಉತ್ತಮ ಡೇಟಾ ಪ್ಯಾಕ್‌ ಹಾಗೂ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಕಾರಣದಿಂದ ಒಂದೇ ಸಿಮ್‌ ಬಳಕೆಗೆ ಮುಂದಾಗಿದ್ದಾರೆ.

ಮಿಲಿಯನ್

ಇನ್ನು ಈಗಾಗಲೇ ನಷ್ಟದಲ್ಲಿರುವ ವೋಡಾಫೋನ್‌ ಐಡಿಯಾ ಟೆಲಿಕಾಂ ಮತ್ತೆ 1.5 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ. ಇದರಿಂದ ಕಳೆದ 12 ತಿಂಗಳುಗಳಲ್ಲಿ ಸುಮಾರು 23 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ. ಇದೆಲ್ಲವನ್ನೂ ಗಮನಿಸಿದರೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳ 10 ಚಂದಾದಾರರಲ್ಲಿ 9 ಜನರು ಮಾತ್ರ ಸಕ್ರಿಯ ಚಂದಾದಾರರಾಗಿದ್ದಾರೆ. ಅಂದರೆ ಒಂದು ಬಿಲಿಯನ್ ಟೆಲಿಕಾಂ ಚಂದಾದಾರರು ಸಕ್ರಿಯ ಚಂದಾದಾರಿಕೆ ಯೋಜನೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಟೆಲಿಕಾಂ

ಇದಲ್ಲದೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಏಪ್ರಿಲ್‌ ತಿಂಗಳಿನ ವರದಿಯ ಪ್ರಕಾರ ಜಿಯೋ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದೇ ಅವಧಿಯಲ್ಲಿ ಹೊಸದಾಗಿ 16.8 ಲಕ್ಷ ಮೊಬೈಲ್ ಚಂದಾದಾರರನ್ನು ಜಿಯೋ ಗಳಿಸಿದೆ ಎನ್ನಲಾಗಿದೆ. ಆದರೆ ಭಾರ್ತಿ ಏರ್‌ಟೆಲ್ 8.1 ಲಕ್ಷ ಬಳಕೆದಾರರನ್ನು ಸೇರಿಸಿದೆ ಎಂದು ಟ್ರಾಯ್‌ ಡೇಟಾ ತಿಳಿಸಿದೆ. ಆದರೆ ಮೂರನೇ ಸ್ಥಾನದಲ್ಲಿರುವ ವೊಡಾಫೋನ್ ಐಡಿಯಾ ಏಪ್ರಿಲ್ 2022 ರಲ್ಲಿ ಸುಮಾರು 15.7 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಏರ್‌ಟೆಲ್‌

ಇನ್ನು ಏರ್‌ಟೆಲ್‌ ಮತ್ತು ಜಿಯೋ ಲಾಭ ಗಳಿಸಿದರೆ ವಿ ಟೆಲಿಕಾಂ ಮತ್ತೆ ನಷ್ಟದ ಹಾದಿಯನ್ನು ಹಿಡಿದಿದೆ. ಏಪ್ರಿಲ್‌ ತಿಂಗಳಿನಲ್ಲಿ 15.68 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಇದರಿಂದ ಅದರ ಒಟ್ಟು ಬಳಕೆದಾರರ ಸಂಖ್ಯೆ 25.9 ಕೋಟಿಗೆ ಕುಸಿದಿದೆ. ಒಟ್ಟಾರೆಯಾಗಿ, ಏಪ್ರಿಲ್ 2022 ರ ಅಂತ್ಯದ ವೇಳೆಗೆ ಭಾರತದ ಒಟ್ಟು ವಾಯರ್‌ಲೆಸ್ ಚಂದಾದಾರರ ಸಂಖ್ಯೆ 114.3 ಕೋಟಿಗೆ ಏರಿದೆ ಎಂದು TRAI ನ ಡೇಟಾ ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಏಪ್ರಿಲ್‌ ತಿಂಗಳ ಅಂತ್ಯದ ವೇಳೆಗೆ ದೇಶದ ನಗರ ಪ್ರದೇಶಗಳಲ್ಲಿ ವಾಯರ್‌ಲೆಸ್ ಚಂದಾದಾರಿಕೆಗಳು 62.4 ಕೋಟಿಗೆ ಇಳಿದಿದ್ದರೆ, ಗ್ರಾಮೀಣ ಮಾರುಕಟ್ಟೆಗಳಲ್ಲಿನ ಚಂದಾದಾರಿಕೆಗಳು 51.8 ಕೋಟಿಗೆ ತಲುಪಿದೆ.

ಚಂದಾದಾರಿಕೆಯ

ಸದ್ಯ ನಗರ ಚಂದಾದಾರಿಕೆಯ ಮಾಸಿಕ ಬೆಳವಣಿಗೆ ದರ -0.07% ಇದ್ದರೆ, ಗ್ರಾಮೀಣ ವಾಯರ್‌ಲೆಸ್ 0.20% ಹೊಂದಿರುವುದಾಗಿ TRAIನ ವರದಿ ಹೇಳಿದೆ. ಅಂದರೆ ಮಾಸಿಕ ವರದಿಯ ಆಧಾರದ ಮೇಲೆ, ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರು ಏಪ್ರಿಲ್ ಅಂತ್ಯದ ವೇಳೆಗೆ 78.87 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಬಹುದಾಗಿದೆ. ಈ ಸೇವಾ ಪೂರೈಕೆದಾರರಲ್ಲಿ ರಿಲಯನ್ಸ್ ಜಿಯೋ (41.1 ಕೋಟಿ), ಭಾರ್ತಿ ಏರ್‌ಟೆಲ್ (21.5 ಕೋಟಿ), ಮತ್ತು ವೊಡಾಫೋನ್ ಐಡಿಯಾ (12.2 ಕೋಟಿ) ಹೊಂದಿವೆ ಎಂದು ವರದಿಯಾಗಿದೆ.

Best Mobiles in India

Read more about:
English summary
Airtel, Reliance Jio, Vodafone Idea and BSNL all lost active subscribers in April, according to data from TRAI.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X