ಭಾರತೀಯರಿಗೆ ವಿಮಾನದಲ್ಲಿ ಇಂಟರ್ನೆಟ್ ನಲ್ಲಿ ಬ್ರೌಸಿಂಗ್ ಮಾಡುವ ಅವಕಾಶ..!

By Lekhaka
|

ಭಾರತೀಯರು ಶೀಘ್ರವೇ ವಿಮಾನದಲ್ಲಿ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ ಫ್ಲೇಟ್ ನಲ್ಲಿ ಬ್ರೌಸಿಂಗ್ ಮಾಡಲು ಡಿಪರ್ಟ್ ಮೆಂಟ್ ಆಫ್ ಟೆಲಿಕಮ್ಯೂನಿಕೇಷನ್ ಅನುಮತಿಯನ್ನು ನೀಡಿದ್ದು, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಏರ್ ಲೈನ್ ಗಳಿಗೆ ಲೈಸೆನ್ಸ್ ಗಳನನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಇನ್ನು ಮುಂದೆ ನೀವು ವಿಮಾನದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿಯೂ ಸ್ಮಾರ್ಟ್ಫೋನ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಭಾರತೀಯರಿಗೆ ವಿಮಾನದಲ್ಲಿ ಇಂಟರ್ನೆಟ್ ನಲ್ಲಿ ಬ್ರೌಸಿಂಗ್ ಮಾಡುವ ಅವಕಾಶ..!

ಮೊದಲಿಗೆ ಟೆಲಿಕಾಂ ಕಂಪನಿಗಳಿಗೆ ಎರಡು ತಿಂಗಳ ಲೈಸೆನ್ಸ್ ಗಳನ್ನು ನೀಡಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಈ ಲೈಸೆಸ್ಸ್ ಅನ್ನು ವಿಸ್ತರಿಸಲಿದೆ. ಆಕ್ಟೋಬರ್ ನಿಂದಲೇ ಈ ಸೇವೆಯೂ ಶುರುವಾಗಲಿದ್ದು, ಅಂದಿನಿಂದಲೇ ನೀವು ಫ್ಲೇಟ್ ನಲ್ಲಿಯೂ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ.

ಡಿಪರ್ಟ್ ಮೆಂಟ್ ಆಫ್ ಟೆಲಿಕಮ್ಯೂನಿಕೇಷನ್ ಅನುಮತಿಯನ್ನು ನೀಡುವ ಸಲುವಾಗಿ ಟೆಲಿಕಾಂ ರೆಗ್ಯೂಲೆಟರಿ ಆಥರಿಟಿ ಆಫ್ ಇಂಡಿಯಾ ನಿಂದ ಗೇಡ್ ಲೈನ್ ಪಡೆದುಕೊಂಡಿದ್ದು, ಲೈಸೆನ್ಸ್ ದೊರೆತ ನಂತರದಲ್ಲಿ ಟೆಲಿಕಾಂ ಕಂಪನಿಗಳು ಸೇವೆಯನ್ನು ನೀಡಲು ಅನುಮತಿಯನ್ನು ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಏರ್ ಲೈನ್ ಗಳಲ್ಲಿ ಡೇಟಾ ಮತ್ತು ವಾಯ್ಸ್ ಕರೆಯನ್ನು ಮಾಡುವ ಅವಕಾಶವನ್ನು ಮಾಡಿಕೊಡಲು ಟ್ರಾಯ್ ಅನುಮತಿಯನ್ನು ನೀಡಿದೆ. 3000 ಮೀಟರ್ ಎತ್ತರದಲ್ಲಿ ಸಾಗುವ ವಿಮಾನದಲ್ಲಿ ಸೇವೆಯನ್ನು ಮೊದಲಿಗೆ ನೀಡಲಾಗುವುದು. ಸದ್ಯಕ್ಕೆ ರೂ.1 ಕ್ಕೆ ಲೈಸೆನ್ಸ್ ಅನ್ನು ನೀಡುತ್ತಿದೆ. ಇದಾದ ನಂತರದಲ್ಲಿ ಬೆಲೆಯನ್ನು ಏರಿಕೆ ಮಾಡಲಿದೆ. ಇದಾದ ನಂತರದಲ್ಲಿ ಸೇವೆಯಲ್ಲಿಯೂ ವ್ಯತ್ಯಾಸವಾಗಲಿದೆ.

ಇದರಿಂದಾಗಿ ಏರೋ ಪ್ಲೇನ್ ನಲ್ಲಿ ಪ್ರಯಾಣಿಸುವವರು ಫ್ಲೇಟ್ ಮೋಡ್ ನಲ್ಲಿ ತಮ್ಮ ಗ್ಯಾಜೆಟ್ ಗಳನ್ನು ಇಡುವ ಅಗತ್ಯವಿಲ್ಲ. ಪ್ರಯಾಣಿಸುವ ಸಂದರ್ಭದಲ್ಲಿ ಸುಲಭವಾಗಿ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಪ್ರಯಾಣಿಸುವ ಸಂದರ್ಭದಲ್ಲಿಯೂ ಕರೆಗಳನ್ನು ಮಾಡಬುಹುದಾಗಿದೆ ಅದುವೇ ಯಾವುದೇ ಅಡೆತಡೆಗಳು ಇಲ್ಲದೆಯೇ.

ಶೀಘ್ರವೇ ಈ ಸೇವೆಯೂ ಆರಂಭವಾಗುವುದರಿಂದ ದೇಶದಲ್ಲಿ ಪ್ರಯಾಣಿಸುವ ವಿಮಾನಗಳಲ್ಲಿಯೂ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ. ಅಲ್ಲದೇ ಪ್ರಯಾಣೀಕರಿಗೂ ಹೆಚ್ಚಿನ ಲಾಭವಾಗಲಿದೆ. ಟೆಲಿಕಾಂ ಕಂಪನಿಗಳು ಉತ್ತಮ ಸೇವೆಯನ್ನು ನೀಡುವದರಿಂದ ಗ್ರಾಹಕರನ್ನು ಪಡೆದುಕೊಳ್ಳಬಹುದಾಗಿದೆ.

ಅಕ್ಟೋಬರ್ ನಿಂದ ಆರಂಭವಾಗುವ ಸೇವೆಗೆ ಹೆಚ್ಚಿನ ಮಂದಿ ಕಾಯುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ಇಂಟರ್ನೆಟ್ ಸೇವೆಯನ್ನು ನೀಡಿದರೆ ಅವರು ಸಹ ಬಳಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ಹೆಚ್ಚಿನ ಪ್ರಮಾಣದ ಹಣವನ್ನು ಸಹ ನೀಡಲಿದ್ದಾರೆ.

Best Mobiles in India

English summary
Indians will soon be able to make calls, browse internet during flight but there is a catch. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X