Subscribe to Gizbot

ಸೆಲ್ಫಿ ತೆಗೆಯಲು ಹೇಳಿ ಮಾಡಿಸಿರುವ ಉಪಕರಣಗಳಿವು

Written By:

ಸೆಲ್ಫಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಫಿಲಿಫೈನ್ಸ್ ಸೆಲ್ಫಿ ಫೋಟೋ ತೆಗೆಯಲೆಂದೇ ಒಂದು ಮ್ಯೂಸಿಯಮ್ ಅನ್ನು ರಚಿಸಿದ್ದು ಇಲ್ಲಿರುವ ಕಲಾಕೃತಿಗಳನ್ನು ಬಳಸಿ ನಿಮಗೆ ಅದ್ಭುತ ಸೆಲ್ಫಿಗಳನ್ನು ತೆಗೆಯಬಹುದಾಗಿದೆ. ಕಲಾ ಶಾಲೆ ಎಂದೇ ಪ್ರಸಿದ್ಧವಾಗಿರುವ ಫಿಲಿಫೈನ್ಸ್‌ನ ಮನೀಲಾ ಸೆಲ್ಫಿ ಕಲಾಶಾಲೆ ಸುಂದರ ಚಿತ್ರಕಲೆ, ಅದ್ಭುತ ಹಿನ್ನಲೆಯನ್ನು ಒಳಗೊಂಡಿದೆ.

ಓದಿರಿ:ಒಬಾಮಾ ಸೆಲ್ಫಿ ನೋಡಬನ್ನಿ ಇಲ್ಲಿ!!!

ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಸೆಲ್ಫಿ ಸ್ಟೈಲ್ ಅನ್ನು ಇನ್ನಷ್ಟು ಕಲಾತ್ಮಕವಾಗಿಸುವ ಗ್ಯಾಜೆಟ್‌ಗಳ ಪಟ್ಟಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಫಿ ಉಗಮ

ಸೆಲ್ಫಿಯ ಜನನ

ಫೋನ್‌ನಲ್ಲಿ ಮುಂಭಾಗ ಕ್ಯಾಮೆರಾ ಪರಿಕಲ್ಪನೆ ಬಂದ ನಂತರ ಸೆಲ್ಫಿಯ ಜನನವಾಯಿತು. 2013 ರಲ್ಲಿ ಸೆಲ್ಫಿ ಎಂಬ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತು.

ಟ್ವಿಟ್ಟರ್‌ ಪೋಸ್ಟ್

ಟು ವೇ ಮಿರರ್

ಟು ವೇ ಮಿರರ್ ಸ್ವಯಂಚಾಲಿತವಾಗಿ ನಿಮ್ಮ ಫೋಟೋವನ್ನು ತೆಗೆಯುತ್ತದೆ. ಅದೂ ಅಲ್ಲದೆ ಈ ಮಿರರ್ ನಿಮ್ಮ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಕೂಡ ಮಾಡುತ್ತದೆ.

ಸಣ್ಣ ತುಂಡು ಬ್ರೆಡ್‌

ಸೆಲ್ಫಿ ಟೋಸ್ಟರ್

ಸಣ್ಣ ತುಂಡು ಬ್ರೆಡ್‌ನಲ್ಲಿ ನಿಮ್ಮ ಸೆಲ್ಫಿ ಉರಿಯುತ್ತಿರುವಂತೆ ಇದು ಮಾಡುತ್ತದೆ. ನಿಜಕ್ಕೂ ಇದು ಅದ್ಭುತವಾಗಿದೆ.

ಲಂಡನ್ ಫ್ಯಾಶನ್ ವೀಕ್‌

ಸೆಲ್ಫಿ ಹ್ಯಾಟ್

ಲಂಡನ್ ಫ್ಯಾಶನ್ ವೀಕ್‌ನಲ್ಲಿ ಲಾಂಚ್ ಆದ ಈ ಸೆಲ್ಫಿ ಹ್ಯಾಟ್ ಸೆಲ್ಫಿ ಪ್ರಿಯರಿಗೆ ಹೇಳಿಮಾಡಿಸಿರುವಂಥದ್ದು. ಇದರಲ್ಲಿ ಲಗತ್ತಿಸಿರುವ ಕನ್ನಡಿ ನಿಮ್ಮ ಸುಂದರ ಸೆಲ್ಫಿಯನ್ನು ತೆಗೆಯಲು ಸಹಕಾರಿ.

ಹೇರ್ ಬ್ರಶ್

ಸೆಲ್ಫಿ ಬ್ರಶ್

ಇದು ಹೇರ್ ಬ್ರಶ್ ಆಗಿದ್ದರೂ ನಿಮ್ಮ ಅತ್ಯುತ್ತಮ ಸೆಲ್ಫಿ ತೆಗೆಯುವಲ್ಲಿ ಇದು ಖಂಡಿತ ನಿಮಗೆ ನೆರವನ್ನು ನೀಡಲಿದೆ.

ಹೆಡ್‌ಫೋನ್ ಸಾಕೆಟ್

ರಿಮೋಟ್ ಕಂಟ್ರೋಲ್ ಡಿವೈಸ್

ನಿಮ್ಮ ಐಫೋನ್‌ಗೆ ಹೆಡ್‌ಫೋನ್ ಸಾಕೆಟ್ ಅನ್ನು ಬಳಸಿ ಈ ರಿಮೋಟ್ ಕಂಡ್ರೋಲ್ ಡಿವೈಸ್ ಅನ್ನು ಸಂಪರ್ಕಪಡಿಸಿ. ರಿಮೋಟ್‌ನಲ್ಲಿರುವ ಬಟನ್ ಅನ್ನು ಒತ್ತಿದರೆ ಸಾಕು, ಇದು ನಿಮ್ಮ ಸೆಲ್ಫಿಯನ್ನು ತೆಗೆಯುತ್ತದೆ.

ಸೈಬರ್ ಶಾಟ್ ಕ್ಯಾಮೆರಾ

ಸೋನಿ ಸೈಬರ್ ಶಾಟ್ ಕ್ಯಾಮೆರಾ

ಸೋನಿಯ ಹೊಸ ಸೈಬರ್ ಶಾಟ್ ಪರ್ಫ್ಯೂಮ್ ಬಾಟಲ್ ಆಕಾರದಲ್ಲಿದ್ದು 3.3 ಇಂಚಿನ ಓಲೆಡ್ ಡಿಸ್‌ಪ್ಲೇ ಮತ್ತು 19.2 ಎಮ್‌ಪಿ ಕ್ಯಾಮೆರಾವನ್ನು ಹೊಂದಿದೆ.

ಸ್ಕ್ರೀನ್ ಪ್ರೊಟೆಕ್ಟರ್

ಗ್ಲಾಮ್ ಸ್ಕ್ರೀನ್

ಜಾಂಥನ್ ಚೆಬನ್ ಸೆಲ್ಫಿ ಕ್ರಿಯೇಶನ್ ಅನ್ನು ನೀವು ಮೆಚ್ಚದೇ ಇರಲು ಕಾರಣಗಳೇ ಇಲ್ಲ. ಇದೊಂದು ಸ್ಕ್ರೀನ್ ಪ್ರೊಟೆಕ್ಟರ್ ಆಗಿದ್ದು ನಿಮ್ಮ ಫೋನ್‌ಗೆ ಇದನ್ನು ಅಳವಡಿಸಿ ಸೆಲ್ಫಿಯನ್ನು ತೆಗೆಯಬಹುದಾಗಿದೆ.

ರಿಂಗ್

ಸೆಲ್ಫಿ ರಿಂಗ್

ಜಾಂಥನ್ ಚೆಬನ್‌ನ ಇನ್ನೊಂದು ಸೆಲ್ಫಿ ಉಪಕರಣವಾಗಿದೆ ಈ ರಿಂಗ್. ಇದರಲ್ಲಿ ಎರಡು ರಿಂಗ್‌ಗಳಿದ್ದು ಇದನ್ನು ನಿಮ್ಮ ಫೋನ್‌ನ ಹಿಂಭಾಗಕ್ಕೆ ಲಗತ್ತಿಸಲಾಗುವುದು.

ಸುಂದರ ಸೆಲ್ಫಿ

ಟ್ರೈಪೋಡ್

ಈ ಟ್ರೈಪೋಡ್ 420 ಗ್ರಾಮ್ ತೂಕವನ್ನು ಹೊಂದಿದ್ದು, ನಿಮ್ಮ ಫೋನ್ ಅನ್ನು ಸುಲಭವಾಗಿ ಇದು ಹೋಲ್ಡ್ ಮಾಡುತ್ತದೆ. ಮತ್ತು ಇದನ್ನು ಬಳಸಿ ಅತಿ ಸುಂದರ ಸೆಲ್ಫಿಯನ್ನು ನಿಮಗೆ ತೆಗೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Now also known as the 'selfie capital of the world,' the Philippines has an art museum that, instead of keeping you away from art pieces, encourages you take selfies with them and share your pictures with the world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot