ವಾಟ್ಸಾಪ್‌ ಆಯ್ತು! ಇದೀಗ ಇನ್‌ಸ್ಟಾಗ್ರಾಮ್‌ನಲ್ಲೂ ತಾಂತ್ರಿಕ ದೋ‍ಷ ಪತ್ತೆ!

|

ಕಳೆದ ಕೆಲವು ದಿನಗಳಿಂದ ಮೆಟಾ ಒಡೆತನದ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ತಾಮತ್ರಿಕ ದೋಷ ಅನುಭವಿಸುತ್ತಿರುವ ವರದಿಗಳು ಮೇಲಿಂದ ಮೇಲೆ ಆಗುತ್ತಿವೆ. ಕಳೆದ ವಾರವಷ್ಟೇ ವಾಟ್ಸಾಪ್‌ನಲ್ಲಿ ದೋಷ ಕಂಡುಬಂದಿತ್ತು. ಇದೀಗ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಕೂಡ ಕಳೆದ ರಾತ್ರಿ ತಾಂತ್ರಿಕ ದೋಷವನ್ನು ಎದುರಿಸಿದೆ. ಇದರಿಂದ ಯಾವುದೇ ಸೂಚನೆಯಿಲ್ಲದೆ ಇನ್‌ಸ್ಟಾಗ್ರಾಮ್‌ ಬಳಕೆದಾರರ ಖಾತೆಗಳನ್ನು ಬ್ಲಾಕ್‌ ಮಾಡಲಾಗಿತ್ತು. ಅಲ್ಲದೆ ಕೆಲವು ಸಮಯದ ನಂತರ ಆ ಖಾತೆಗಳನ್ನು ರಿಸ್ಟೋರ್‌ ಮಾಡಲಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಕಳೆ ರಾತ್ರಿ ಉಂಟಾಗಿದ್ದ ತಾಂತ್ರಿಕ ದೋಷದಿಂದ ಬಳಕೆದಾರರ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಘಟನೆ ನಡೆದಿದೆ. ಬಳಕೆದಾರರ ಈ ಸಮಸ್ಯೆಯ ಬಗ್ಗೆ ವರದಿ ಮಾಡಿದ ನಂತರ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಮೆಟಾ ಕಂಪೆನಿ ಹೇಳಿದೆ. ಆದರೆ ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಮೆಟಾ ಒಡೆತನದ ಕಂಪೆನಿ ಸ್ಪಷ್ಟಪಡಿಸಿಲ್ಲ. ಹಾಗಾದ್ರೆ ಕಳೆ ರಾತ್ರಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಏನೆಲ್ಲಾ ಸಮಸ್ಯೆ ಉಂಟಾಗಿತ್ತು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಕಳೆದ ರಾತ್ರಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಉಂಟಾಗಿದ್ದ ದೋಷವನ್ನು ಬಗೆಹರಿಸಲಾಗಿದೆ ಎಂದು ಮೆಟಾ ಕಂಪೆನಿ ಹೇಳಿದೆ. ಆದರೆ ಅಸಲಿ ಸಮಸ್ಯೆಗ ಕಾರಣ ಏನು ಅನ್ನೊದನ್ನ ಮೆಟಾ ಕಂಪೆನಿ ಸ್ಪಷ್ಟಪಡಿಸಿಲ್ಲ. ಆದರೆ ರಾತ್ರಿ ಉಂಟಾಗಿದ್ದ ತಾಂತ್ರಿಕ ದೋಷದಿಂದ ಬಳಕೆದಾರರ ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ಬ್ಲಾಕ್‌ ಮಾಡಲಾಗಿತ್ತು ಎನ್ನಲಾಗಿದೆ. ತಾತ್ಕಾಲಿಕವಾಗಿ ಬ್ಲಾಕ್‌ ಆಗಿದ್ದ ಈ ಖಾತೆಗಳು ಇದೀಗ ರಿಸ್ಟೋರ್‌ ಆಘಿರುವುದು ಕಂಡು ಬಂದಿದೆ. ಕಳೆದ ವಾರ ವಾಟ್ಸಾಪ್‌ ಕೂಡ ಇದೇ ರೀತಿ ಎರಡು ಗಂಟೆಗಳ ಅವಧಿಗಿಂತ ಹೆಚ್ಚು ಕಾಲ ಸಮಸ್ಯೆಯನ್ನು ಅನುಭವಿಸಿತ್ತು.

ಇನ್‌ಸ್ಟಾಗ್ರಾಮ್‌

ಕಳೆ ರಾತ್ರಿ (ಅ.31) ಇನ್‌ಸ್ಟಾಗ್ರಾಮ್‌ ಬಳಕೆದಾರರು ಸಂಜೆ 6:30 PM ರ ನಂತರ ಸಮಸ್ಯೆಯನ್ನು ಎದುರಿಸಿದ್ದಾರೆ. ಬಳಕೆದಾರರ ಇನ್‌ಸ್ಟಾಗ್ರಾಮ್‌ ಖಾತೆಗಳು ಏಕಾಏಕಿ ಬ್ಲಾಕ್‌ ಆಗಿವೆ. ಇದರಿಂದ ಬಳಕೆದಾರರು ವರದಿ ಮಾಡಿದ್ದಾರೆ. ಈ ಸಮಸ್ಯೆ ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿನ ಬಳಕೆದಾರರ ಮೇಲೂ ಪರಿಣಾಮ ಬೀರಿದೆ. ಇದರಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಏನಾಗ್ತಿದೆ ಅನ್ನೊದನ್ನ ತಿಳಿಯದ ಬಳಕೆದಾರರು ಸಮಸ್ಯೆಗಳ ವಿರುದ್ದ ವರದಿ ಮಾಡಿದ್ದರು. ಇದಾದ ನಂತರ ಎಚ್ಚೆತ್ತ ಮೆಟಾ ಒಡೆತನದ ಕಂಪೆನಿ ಸಮಸ್ಯೆಯನ್ನು ಬಗೆಹರಿಸಿದೆ.

ಡೌನ್‌ಡೆಕ್ಟರ್

ಔಟ್ಟೇಜ್ ಟ್ರ್ಯಾಕರ್ ಪ್ರಕಾರ, ಡೌನ್‌ಡೆಕ್ಟರ್ ಭಾರತ ಮತ್ತು ಇತರ ದೇಶಗಳಲ್ಲಿನ ಹಲವಾರು ಇನ್‌ಸ್ಟಾಗ್ರಾಮ್‌ ಬಳಕೆದಾರರು ಲಾಗಿನ್‌ ಸಮಸ್ಯೆಗಳ್ನು ಎದುರಿಸುತ್ತಿದ್ದಾರೆ ಎಂಧು ವರದಿ ಮಾಡಿದ್ದಾರೆ. ಆದರೆ ಇತರರು "ಸರ್ವರ್ ಸಂಪರ್ಕ"-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಕೌಂಟ್‌ ಬ್ಲಾಕ್‌ ಸಮಸ್ಯೆ ಎದುರಿಸಿದ್ದ ಬಳಕೆದಾರರು ಇದೀಗ ತಮ್ಮ ಖಾತೆಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟ್ವೀಟ್‌ನಲ್ಲಿ, Instagram, "ನಾವು ಈಗ ಈ ದೋಷವನ್ನು ಪರಿಹರಿಸಿದ್ದೇವೆ. ಇದು ಪ್ರಪಂಚದ ವಿವಿಧ ಭಾಗಗಳಲ್ಲಿ ಜನರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಮತ್ತು ಕೆಲವು ಅನುಯಾಯಿಗಳ ಸಂಖ್ಯೆಯಲ್ಲಿ ತಾತ್ಕಾಲಿಕ ಬದಲಾವಣೆಯನ್ನು ಉಂಟುಮಾಡಿದೆ ಕ್ಷಮಿಸಿ ಎಂದು ಹೇಳಿದೆ.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಉಂಟಾಗಿದ್ದ ದೋಷಕ್ಕೆ ಅಸಲಿ ಕಾರಣ ಏನು ಅನ್ನೊದನ್ನ ಮೆಟಾ ಕಂಪೆನಿ ಇನ್ನು ಸ್ಪಷ್ಟಪಡಿಸಿಲ್ಲ. ಹಾಗಂತೆ ಮೆಟಾ ಒಡೆತನದ ಪ್ಲಾಟ್‌ಫಾರ್ಮ್‌ಗಳಲ್ಲಿ ಎದುರಾಗಿರುವ ತಾಂತ್ರಿಕ ದೋಷ ಇದೇ ಮೊದಲನೇಲ್ಲ. ಕಳೆದ ವಾರ ವಾಟ್ಸಾಪ್‌ ಅಪ್ಲಿಕೇಶನ್‌ ಕೂಡ ತಾಂತ್ರಿಕ ದೋಷವನ್ನು ಎದುರಿಸಿತ್ತು. ಇದರಿಂದ ವಾಟ್ಸಾಪ್‌ನಲ್ಲಿ ಮೆಸೇಜ್‌, ವಾಯ್ಸ್‌ ಕಾಲ್‌, ವೀಡಿಯೋ ಕಾಲ್‌ ಮಾಡುವುದಕ್ಕೆ ಕೂಡ ಸಾಧ್ಯವಾಗಿರಲಿಲ್ಲ. ಹೆಚ್ಚು ಕಡಿಮೆ ಎರಡು ಗಂಟೆಗಳ ಕಾಲ ಈ ಸಮಸ್ಯೆ ಉಂಟಾಗಿತ್ತು ಅನ್ನೊದು ಇಲ್ಲಿ ಗಮನಾರ್ಹವಾಗಿದೆ.

Best Mobiles in India

Read more about:
English summary
Instagram accounts of users were restored after a brief outage!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X