ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಮಕ್ಕಳು ಏನ್‌ ಮಾಡ್ತಾರೆ ಅಂತಾ ತಿಳಿಸುತ್ತೆ ಈ ಫೀಚರ್‌!

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಭಾರತದಲ್ಲಿಯೂ ಕೂಡ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಅದರಲ್ಲೂ ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಇನ್‌ಸ್ಟಾಗ್ರಾಮ್‌ ಅನ್ನು ಬಳಸುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಕೂಡ ವಿವಿಧ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪೇರೆಂಟಲ್ ಸೂಪರ್ ವಿಷನ್ ಟೂಲ್ಸ್ ಅನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಹೊಸ ಪೇರೆಂಟಲ್ ಸೂಪರ್ ವಿಷನ್ ಟೂಲ್ಸ್ ಅನ್ನು ಪರಿಚಯಿಸಿದೆ. ಇದರಿಂದ ಪೋಷಕರು ತಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಹೇಗೆ ಬಳಸುತ್ತಾರೆ ಅನ್ನೊದನ್ನ ಕಂಟ್ರೋಲ್‌ ಮಾಡಲು ಅವಕಾಶ ಮಾಡಿಕೊಡಲಿದೆ. ಇದು ತುರ್ತ ಸಂದರ್ಭದಲ್ಲಿ ಕುಟುಂಬದವರಿಗೆ ಮಾಹಿತಿಯ್ನು ನೀಡಲಿದೆ. ಅಲ್ಲದೆ ನಿಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಎಷ್ಟು ಸಮಯ ಕಳೆದಿದ್ದಾರೆ ಅನ್ನೊದನ್ನ ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಪರಿಚಯಿಸಿರುವ ಹೊಸ ಪೇರೆಂಟಲ್ ಸೂಪರ್ ವಿಷನ್ ಟೂಲ್ಸ್ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸುವ ಆಕ್ಟಿವಿಟಿ ಮೇಲೆ ಕಂಟ್ರೋಲ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ನಿಮ್ಮ ಮಗು ಇನ್‌ಸ್ಟಾಗ್ರಾಮ್‌ನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಎನ್ನುವುದನ್ನು ಮೇಲ್ವಿಚಾರಣೆ ನಡೆಸುವುದಕ್ಕೆ ಅನುಮತಿಸಲಿದೆ. ಈ ಟೂಲ್ಸ ಮೂಲಕ ಮಿತಿಗಳನ್ನು ಸೆಟ್‌ ಮಾಡುವುದಕ್ಕೆ ಮತ್ತು ದಿನದಲ್ಲಿ ಬ್ರೇಕ್‌ ತೆಗೆದುಕೊಳ್ಳುವುದು ಯಾವಾಗ ಎನ್ನುವುದನ್ನು ನಿಗದಿಪಡಿಸುವುದಕ್ಕೆ ಅವಕಾಶ ಸಿಗಲಿದೆ.

ಪೋಷಕರು

ಇದಲ್ಲದೆ ಪೋಷಕರು ತಮ್ಮ ಮಗು ಇನ್‌ಸ್ಟಾಗ್ರಾಮ್‌ನಲ್ಲಿ ಯಾವ ಅಕೌಂಟ್‌ಗಳನ್ನು ಪಾಲೋ ಮಾಡುತ್ತಿ೯ದೆ. ಆ ಖಾತೆಗಳನ್ನು ಫಾಲೋ ಮಾಡುವುದು ಸೂಕ್ತವೇ ಅನ್ನೊದನ್ನ ತಿಳಿಯಬಹುದಾಗಿದೆ. ಮಕ್ಕಳು ಫಾಲೋ ಮಾಡುವ ಖಾತೆಗಳನ್ನು ವೀಕ್ಷಿಸುವುದಕ್ಕೆ ಪೋಷಕರಿಗೆ ಸಾಧ್ಯವಾಗಲಿದೆ. ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮಕ್ಕಳು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದರ ಕುರಿತು ಟ್ಯಾಬ್‌ಗಳನ್ನು ಇರಿಸಿಕೊಳ್ಳಲು ಪೋಷಕರಿಗೆ ಅನುಮತಿಸುತ್ತದೆ.

ಮಗುವಿಗೆ

ಇನ್ನು ನಿಮ್ಮ ಮಗುವು ಇನ್‌ಸ್ಟಾಗ್ರಾಮ್‌ನಲ್ಲಿ ಅಕೌಂಟ್‌ ಅನ್ನು ಬ್ಲಾಕ್‌ ಮಾಡಿದರೆ ಅದರ ಸೂಚನೆ ಪೋಷಕರಿಗೆ ತಿಳಿಸಲಿದೆ. ಇದರಿಂದ ಮಗುವಿಗೆ ಸಹಾಯ ಅಗತ್ಯವಿದ್ದರೆ ಅದನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ಪೋಷಕರು ಮತ್ತು ಯುವಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮೆಟಾ ಕಂಪೆನಿ ಭಾರತದ ತಜ್ಞರು, ಪೋಷಕರು, ಪೋಷಕರು ಮತ್ತು ಯುವಜನರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಅದರಂತೆ ಇನ್‌ಸ್ಟಾಗ್ರಾಮ್‌ ಪೋಷಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಟೂಲ್ಸ್‌ಗಳ ಬಗ್ಗೆ ಜಾಗೃತಿ ಮೂಡಿಸಲು Kidsstoppress.com ಜೊತೆಗೆ ಕೆಲಸ ಮಾಡಲಿದೆ.

ಫ್ಯಾಮಿಲಿ ಸೆಂಟರ್‌

ಫ್ಯಾಮಿಲಿ ಸೆಂಟರ್‌

ಇನ್‌ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಯಾಮಿಲಿ ಸೆಂಟರ್ ಅನ್ನು ಸಹ ಘೋಷಿಸಿದೆ. ಇದು ಪೋಷಕರು ಸಹಾಯ ಮಾಡಬಹುದಾದ ಲೇಖನಗಳು, ವೀಡಿಯೊಗಳು ಮತ್ತು ಸಲಹೆಗಳ ಮೂಲಕ ತಜ್ಞರಿಂದ ಸಂಪನ್ಮೂಲಗಳನ್ನು ಪ್ರವೇಶಿಸಬಹುದಾದ ಎಜುಕೇಶನ್‌ ಸೆಂಟರ್‌ ಆಗಿದೆ. ಸೊಶೀಯಲ್‌ ಮೀಡಿಯಾ ಕುರಿತು ಯುವಜನರೊಂದಿಗೆ ಹೇಗೆ ಮಾತನಾಡಬೇಕು ಎಂಬಂತಹ ವಿಷಯಗಳನ್ನು ಇದರಿಂದ ತಿಳಿದುಕೊಳ್ಳಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಪೋಸ್ಟ್‌ಗಳನ್ನು ರಿಪೋಸ್ಟ್‌ ಮಾಡಲು ಅನುಮತಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಹೊಸ ಬಟನ್‌ ಪರಿಚಯಿಸಲಿದ್ದು, ಶೀಘ್ರದಲ್ಲೇ ಇದು ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ರಿಪೋಸ್ಟ್‌ಗಳು ಬಳಕೆದಾರರು ತಮ್ಮ ಹಿಂಬಾಲಕರೊಂದಿಗೆ ಹಂಚಿಕೊಳ್ಳಲು ಬಯಸುವ ಪೋಸ್ಟ್‌ಗಳನ್ನು ನೇರವಾಗಿ ಅವರ ಹೋಮ್ ಫೀಡ್‌ಗಳಿಗೆ ಕಳುಹಿಸಲು ಅನುಮತಿಸುತ್ತದೆ.

ಫೀಚರ್‌

ಇನ್ನು ರಿಪೋಸ್ಟ್‌ ಫೀಚರ್‌ ಮೂಲಕ ಬಳಕೆದಾರರು ನಿರ್ದಿಷ್ಟ ಬಳಕೆದಾರರಿಂದ ಎಲ್ಲಾ ರಿಪೋಸ್ಟ್‌ಗಳನ್ನು ಪರಿಶೀಲಿಸಬಹುದಾಗಿದೆ. ಆದರೆ ಬಳಕೆದಾರರು ತಮ್ಮ ಪೋಸ್ಟ್ ಅನ್ನು ರಿಪೋಸ್ಟ್‌ ಮಾಡದಂತೆ ತಡೆಯುವುದಕ್ಕೆ ಕೂಡ ಅವಕಾಶವದೆ. ಈ ಆಯ್ಕೆಯು ಶೇರ್‌ ಮೆನುವಿನಲ್ಲಿ ಕಂಡುಬರುತ್ತದೆ. ಇನ್ನು ಈ ಫೀಚರ್‌ ಶೀಘ್ರದಲ್ಲೇ ಸೀಮಿತ ಸಂಖ್ಯೆಯ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಕೆಲವು ಆಯ್ದ ಬಳಕೆದಾರರ ಮೂಲಕ ಫೀಚರ್‌ ಅನ್ನು ಪರೀಕ್ಷಿಸಿ ನಂತರ ಅದನ್ನು ಅಧಿಕೃತ ಮಾಡುವ ಸಾಧ್ಯತೆಯಿದೆ.

Best Mobiles in India

Read more about:
English summary
Instagram has rolled out its new Parental Supervision tools in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X