ಬಳಕೆದಾರರಿಗೆ ಅತಿ ಅವಶ್ಯಕವಾದ ಫೀಚರ್ಸ್‌ ಪರಿಚಯಿಸಿದ ಇನ್‌ಸ್ಟಾಗ್ರಾಮ್‌!

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ವೀಡಿಯೋ ಮತ್ತು ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಇನ್‌ಸ್ಟಾಗ್ರಾಮ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೆನ್ಸಿಟಿವ್‌ ಕಂಟೆಂಟ್‌ ಅನ್ನು ಕಂಟ್ರೋಲ್‌ ಮಾಡುವ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೂಕ್ಷ್ಮ ವಿಷಯದ ಪ್ರಮಾಣವನ್ನು ಕಂಟ್ರೋಲ್‌ ಮಾಡುವ ಫೀಚರ್ಸ್‌ ಪರಿಚಯಿಸಿದೆ. ಅಂದರೆ ಬಳಕೆದಾರರು ಸೆನ್ಸಿಟಿವ್‌ ಎನಿಸುವ ಕಂಟೆಂಟ್‌ ಪ್ರಮಾಣವನ್ನು ಕಂಟ್ರೋಲ್‌ ಮಾಡಲು ಅನುವು ಮಾಡಿಕೊಡಲಿದೆ. ಇದರಿಂದ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಸೂಕ್ಷ್ಮ ವಿಷಯವನ್ನು ಬಯಸದಿದ್ದರೆ, ಅದನ್ನು ಕತ್ತರಿಸುವುದಕ್ಕೆ ಅವಕಾಶ ಸಿಗಲಿದೆ. ಹಾಗಾದ್ರೆ ಸೆನ್ಸಿಟಿವ್‌ ಕಂಟೆಂಟ್‌ ಕಂಟ್ರೋಲ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೆನ್ಸಿಟಿವ್‌ ಕಂಟೆಂಟ್‌ ಅನ್ನು ಕಂಟ್ರೋಲ್‌ ಮಾಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಪರಿಚಯಿಸಿರುವ ಸೆನ್ಸಿಟಿವ್ ಕಂಟ್ರೋಲ್‌ ಫೀಚರ್ಸ್‌ ಇನ್‌ಸ್ಟಾಗ್ರಾಮ್‌ ಸರ್ಚ್‌, ರೀಲ್ಸ್‌, ಇನ್-ಫೀಡ್ ಶಿಫಾರಸುಗಳಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೀಚರ್ಸ್‌ ಅನ್ನು ಇನ್‌ಸ್ಟಗ್ರಾಮ್‌ ಕಳೆದ ವರ್ಷವೇ ಘೋಷಣೆ ಮಾಡಿತ್ತು. ಆದರೆ ಅದು ಕೇವಲ ಎಕ್ಸ್‌ಪ್ಲೋರ್ ಟ್ಯಾಬ್‌ಗೆ ಮಾತ್ರ ಸೀಮಿತವಾಗಿತ್ತು. ಇದೀಗ, ಹೊಸದಾಗಿ ಅಪ್ಡೇಟ್‌ ಮಾಡಿರುವ ಸೆನ್ಸಿಟಿವ್‌ ಕಂಟೆಂಟ್‌ ಕಂಟ್ರೋಲ್‌ ಎಕ್ಸ್‌ಪ್ಲೋರ್ ಟ್ಯಾಬ್‌ ಮಾತ್ರವಲ್ಲ ಹೆಚ್ಚಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್‌ಸ್ಟಾಗ್ರಾಮ್

ಇನ್ನು ಇನ್‌ಸ್ಟಾಗ್ರಾಮ್ ಹೊಸ ಸೆನ್ಸಿಟಿವ್‌ ಕಂಟ್ರೋಲ್‌ ಫೀಚರ್ಸ್‌ ಬಗ್ಗೆ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ. ಇದರಲ್ಲಿ "ಅನ್ವೇಷಣೆಯ ಜೊತೆಗೆ, ಯುವರ್‌ ಸರ್ಚ್‌, ರೀಲ್ಸ್‌, ನೀವು ಅನುಸರಿಸಬಹುದಾದ ಖಾತೆಗಳು, ಹ್ಯಾಶ್‌ಟ್ಯಾಗ್ ಪೇಜ್‌ಗಳು ಮತ್ತು ಇನ್-ಫೀಡ್ ಶಿಫಾರಸುಗಳಲ್ಲಿ ನೀವು ನೋಡುವ ಸೆನ್ಸಿಟಿವ್‌ ಕಂಟೆಂಟ್‌ ಮತ್ತು ಅಕೌಂಟ್‌ಗಳ ಪ್ರಮಾಣವನ್ನು ಕಂಟ್ರೋಲ್‌ ಮಾಡಲು ನಿಮಗೆ ಸಾಧ್ಯವಾಗಲಿದೆ" ಎಂದು ಹೇಳಿದೆ. ಈ ಹೊಸ ಸೆನ್ಸಿಟಿವ್‌ ಕಂಟ್ರೋಲ್‌ ನಿಮಗೆ ಕಂಟೆಂಟ್‌ ಶಿಫಾರಸು ಮಾಡುವ ಅಪ್ಲಿಕೇಶನ್‌ನಲ್ಲಿನ ಎಲ್ಲಾ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ರೀಲ್‌ಗಳು, ಖಾತೆಗಳು ಮತ್ತು ಇತರ ಸ್ಥಳಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತದೆ.

ಸೆನ್ಸಿಟಿವ್‌ ಕಂಟೆಂಟ್‌ ಕಂಟ್ರೋಲ್‌ ಫೀಚರ್ಸ್‌ ಕಾರ್ಯನಿರ್ವಹಣೆ ಹೇಗೆ?

ಸೆನ್ಸಿಟಿವ್‌ ಕಂಟೆಂಟ್‌ ಕಂಟ್ರೋಲ್‌ ಫೀಚರ್ಸ್‌ ಕಾರ್ಯನಿರ್ವಹಣೆ ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಸೆನ್ಸಿಟಿವ್‌ ಕಂಟೆಂಟ್‌ ಅನ್ನು ಕನಿಷ್ಠಕ್ಕೆ ಸೆಟ್‌ ಮಾಡಿದರೆ, ಅದು ಸೆನ್ಸಿಟಿವ್‌ ಅಕೌಂಟ್‌ಗಳು, ರೀಲ್‌ಗಳು ಅಥವಾ ವೀಡಿಯೊಗಳನ್ನು ಶಿಫಾರಸು ಮಾಡುವುದಿಲ್ಲ. ಅಲ್ಲದೆ ಎಲ್ಲಾ ಸೆನ್ಸಿಟಿವ್‌ ಕಂಟೆಂಟ್‌ಗಳಿಗೆ ಅನುಮತಿಸಲು ಸೆಟ್‌ ಮಾಡಿದರೆ, ಅದು ಫಿಲ್ಟರ್ ಆಗುವುದಿಲ್ಲ, ಸೆನ್ಸಿಟಿವ್‌ ಕಂಟೆಂಟ್‌ ಸೇರಿದಂತೆ ಎಲ್ಲಾ ರೀತಿಯ ವಿಷಯವನ್ನು ನೋಡಲು ನಿಮಗೆ ಅನುಮತಿಸುತ್ತದೆ.

ಸೆನ್ಸಿಟಿವ್

ಇನ್ನು ಸೆನ್ಸಿಟಿವ್ ಕಂಟೆಂಟ್ ಕಂಟ್ರೋಲ್ ಟ್ಯಾಬ್ ಆಯ್ಕೆ ಮಾಡಲು ಮೂರು ಆಯ್ಕೆಗಳನ್ನು ಹೊಂದಿರುತ್ತದೆ. (1) ಮೋರ್‌, (2)ಸ್ಟ್ಯಾಂಡರ್ಡ್‌, ಮತ್ತು (3) ಲೆಸ್‌. ಇದರಲ್ಲಿ ನೀವು "ಮೋರ್‌" ಆಯ್ಕೆ ಮಾಡಿದರೆ, ನೀವು ಹೆಚ್ಚು ಸೆನ್ಸಿಟಿವ್‌ ಕಂಟೆಂಟ್‌ ಶಿಫಾರಸುಗಳನ್ನು ಪಡೆಯಬಹುದಾಗಿದೆ. ಬದಲಿಗೆ ನೀವು "ಲೆಸ್‌" ಆಯ್ಕೆಯನ್ನು ಸೆಟ್‌ ಮಾಡಿದರೆ ನೀವು ಕನಿಷ್ಟ ಪ್ರಮಾಣದ ಸೆನ್ಸಿಟಿವ್‌ ಕಂಟೆಂಟ್‌ ಅನ್ನು ಕಾಣಬಹುದು. ಹಾಗೆಯೇ "ಸ್ಟ್ಯಾಂಡರ್ಡ್" ಆಯ್ಕೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗುತ್ತದೆ. ಇದಲ್ಲದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ "ಮೋರ್‌" ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸೆನ್ಸಿಟಿವ್‌ ಕಂಟೆಂಟ್‌ ಕಂಟ್ರೋಲ್‌ ಸೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಸೆನ್ಸಿಟಿವ್‌ ಕಂಟೆಂಟ್‌ ಕಂಟ್ರೋಲ್‌ ಸೆಟ್‌ ಮಾಡುವುದು ಹೇಗೆ?

ಹಂತ:1 ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
ಹಂತ:2 ಇದರಲ್ಲಿ ಹ್ಯಾಂಬರ್ಗರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ ಅಕೌಂಟ್‌ > ಸೆನ್ಸಿಟಿವ್‌ ಕಂಟ್ರೋಲ್‌ ಮೇಲೆ ಕ್ಲಿಕ್ ಮಾಡಿ.
ಹಂತ:4 ಇದೀಗ, ಮೋರ್‌, ಸ್ಟ್ಯಾಂಡರ್ಡ್‌,ಡೀಫಾಲ್ಟ್ ಆಯ್ಕೆಗಳಲ್ಲಿ ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ.
ಹಂತ:5 ನಂತರ ಕನ್ಫರ್ಮ್‌ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

Best Mobiles in India

English summary
Instagram Sensitive controls now work in all places of the app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X