ಇನ್ಮುಂದೆ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದು!..ಹೇಗೆ ಗೊತ್ತಾ?

|

ಕಳೆದ ಕೆಲವು ಸಿನಗಳಿಂದಲೂ ಸದಾ ಒಂದಿಲ್ಲೊಂದು ಅಪ್‌ಡೇಟ್ ಅನ್ನು ಪಡೆದುಕೊಳ್ಳುತ್ತಿರುವ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ಇದೀಗ ಮತ್ತೊಂದು ವಿಶೇಷ ಫೀಚರ್ ಅನ್ನು ಪಡೆದುಕೊಂಡಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದಾದ ಹೊಸ ಫೀಚರ್ ಅನ್ನು ಇತ್ತೀಚಿಗಷ್ಟೇ ಪರಿಚಯಿಸಲಾಗಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಖಾತೆಯಲ್ಲಿ ಸಾವಿರಾರು ಹಾಡುಗಳನ್ನು ಸೇರಿಸಲು ಅವಕಾಶ ಮಾಡಿಕೊಡಲಾಗಿದೆ. ಬಳಕೆದಾರರು ಇನ್‌ಸ್ಟಾಗ್ರಾಮ್ನಲ್ಲಿ ನಿರ್ದಿಷ್ಟ ಹಾಡುಗಳನ್ನು ಹುಡುಕಿ ಆ ಹಾಡನ್ನು ಕೇಳಿ ತಮಗೆ ಇಷ್ಟವಾದರೆ ಆ ಹಾಡುಗಳನ್ನು ತಮ್ಮ ಪೋಸ್ಟ್‌ಗಳಿಗೆ ಅಳವಡಿಸಬಹುದು ಎಂದು ಇನ್‌ಸ್ಟಾಗ್ರಾಮ್ ಸಂಸ್ಥೆ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇನ್ಮುಂದೆ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದು!..ಹೇಗೆ?

ಇನ್‌ಸ್ಟಾಗ್ರಾಮ್ನಲ್ಲಿನ ಈ ನೂತನ ಫೀಚರ್ ನಲ್ಲಿ ಪೋಸ್ಟ್‌ಗಳ ಕೆಳಗೆ ರೆಕಾರ್ಡ್ ಬಟನ್ ಅಡಿಯಲ್ಲಿ ಸಂಗೀತ ಐಕಾನ್ ಕಾಣಿಸುತ್ತದೆ. ಇಲ್ಲಿ ಬಳಕೆದಾರರು ನಿರ್ದಿಷ್ಟ ಹಾಡುಗಳನ್ನು ಹುಡುಕಬಹುದು. ನಂತರ ಆಯ್ಕೆ ಮಾಡಿಕೊಂಡ ಹಾಡುಗಳನ್ನು ತಮ್ಮ ಪೋಸ್ಟ್‌ಗಳಿಗೆ ನಿಖರವಾಗಿ ಅಳವಡಿಸಬಹುದು ಎಂದು ಇನ್‌ಸ್ಟಾಗ್ರಾಮ್ ವಕ್ತಾರರು ಮಾಹಿತಿಯನ್ನು ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ನಿಖರವಾಗಿ ಸಂಗೀತವನ್ನು ಜೊಡಿಸುವ ಸಲುವಾಗಿ, ಬಳಕೆದಾರರು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಹಾಡುಗಳನ್ನು ತಮ್ಮ ಕಥೆಗೆ ಸರಿಹೊಂದುವ ಹಾಡಿನ ನಿಖರ ಭಾಗವನ್ನು ಉಪಯೋಗಿಸಲು ಬಳಕೆದಾರರಿಗೆ ಫಾವರ್ಡ್ ಮತ್ತು ರಿವೈಂಡ್ ಮಾಡುವ ಆಯ್ಕೆಗಳನ್ನು ನೀಡಲಾಗಿದೆ. ಇದು ಸುಲಭವಾಗಿ ಎಡಿಟ್ ಮಾಡಲು ಸಾಧ್ಯವಾಗಿಸುತ್ತದೆ.

ಇನ್ಮುಂದೆ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದು!..ಹೇಗೆ?

ಇನ್‌ಸ್ಟಾಗ್ರಾಮ್ ನಲ್ಲಿ ಪ್ರತಿದಿನ 400 ಮಿಲಿಯನ್ ಸ್ಟೋರಿಸ್ ಅಪ್ ಲೋಡ್ ಆಗುತ್ತವೆ. ಈ ಕಥೆಗಳ ಜೊತೆ ಮ್ಯೂಸಿಕ್ ಇದ್ದರೆ ಅದು ಮತ್ತಷ್ಟು ಚೆಂದವಾಗಿರುತ್ತದೆ. ಇದರಿಂದ ತಮ್ಮ ಸ್ನೇಹಿತರು ಮತ್ತು ಹಿಂಬಾಲಕರನ್ನು ಇನ್ನಷ್ಟು ಹತ್ತಿರವಾಗುವಂತೆ ಮಾಡಲು ಈ ನೂತನ ಫಿಚರ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಇನ್‌ಸ್ಟಾಗ್ರಾಮ್ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಓದಿರಿ: ಮೊಬೈಲ್ ಆಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ 7 ಹಂತಗಳು!!

Best Mobiles in India

English summary
Facebook-owned Instagram has introduced a new feature on “Stories” that would allow users to add a soundtrack to their content from a library of thousands of songs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X