ಇಂಟೆಲ್‌ನಿಂದ 13ನೇ ತಲೆಮಾರಿನ ಪ್ರೊಸೆಸರ್‌ ಬಿಡುಗಡೆ! ಕಾರ್ಯದಕ್ಷತೆ ಹೇಗಿದೆ?

|

ಇಂಟೆಲ್ ಕಂಪೆನಿ ಕಾಲಕಾಲಕ್ಕೆ ತಕ್ಕಂತೆ ತನ್ನ ಪ್ರೊಸೆಸರ್‌ಗಳನ್ನು ಅಪ್ಡೇಟ್‌ ಮಾಡುತ್ತಾ ಬಂದಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಭಾರತದಲ್ಲಿ ತನ್ನ 13 ನೇ ತಲೆಮಾರಿನ ಡೆಸ್ಕ್‌ಟಾಪ್ ಪ್ರೊಸೆಸರ್‌ಗಳನ್ನು ಬಿಡುಗಡೆ ಮಾಡಿದೆ. ಇದು ಹೊಸ i9-13900K ಸೇರಿದಂತೆ 22 ಪ್ರೊಸೆಸರ್‌ಗಳನ್ನು ಒಳಗೊಂಡಿದೆ. ಇನ್ನು ಈ ಪ್ರೊಸೆಸರ್‌ ವಿಶ್ವದ ಅತ್ಯಂತ ವೇಗದ ಪ್ರೊಸೆಸರ್ ಎಂದು ಇಂಟೆಲ್‌ ಕಂಪೆನಿ ಹೇಳಿಕೊಂಡಿದೆ. ಈ ಯೂನಿಟ್‌ 24 ಕೋರ್‌ಗಳನ್ನು ಒಳಗೊಂಡಿದೆ.

ಇಂಟೆಲ್‌

ಹೌದು, ಇಂಟೆಲ್‌ ಕಂಪೆನಿ 13ನೇ ತಲೆಮಾರಿನ ಪ್ರೊಸೆಸರ್‌ ಅನ್ನು ಪರಿಚಯಿಸಿದೆ. ಈ ಪ್ರೊಸೆಸರ್‌ 32 ಥ್ರೆಡ್‌ಗಳನ್ನು ಹೊಂದಿದ್ದು, ಗರಿಷ್ಠ ಗಡಿಯಾರದ ವೇಗ 5.8GHz ಆಗಿದೆ. ಅಲ್ಲದೆ ಇದರಲ್ಲಿ ಅತ್ಯುತ್ತಮ ಗೇಮಿಂಗ್, ಸ್ಟ್ರೀಮಿಂಗ್ ಮತ್ತು ರೆಕಾರ್ಡಿಂಗ್ ಅನುಭವವನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಈ ಪ್ರೊಸೆಸರ್‌ನ ಕೋರ್‌ಗಳು 36MB L3 ಸ್ಟೋರೇಜ್‌ ಮತ್ತು 32MB L2 ಸ್ಟೋರೇಜ್‌ನೊಂದಿಗೆ ಸಹಾಯ ಮಾಡಲಿವೆ. ಹಾಗಾದ್ರೆ ಇಂಟೆಲ್‌ನ ಈ ಹೊಸ ಪ್ರೊಸೆಸರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇಂಟೆಲ್

ಇಂಟೆಲ್‌ ಕಂಪೆನಿಯ 13 ನೇ ತಲೆಮಾರಿನ ಇಂಟೆಲ್ ಕೋರ್ ಡೆಸ್ಕ್‌ಟಾಪ್ ಪ್ರೊಸೆಸರ್‌ ಭಾರತಕ್ಕೆ ಎಂಟ್ರಿ ನೀಡಿದೆ. ಈ ಪ್ರೊಸೆಸರ್‌ ಭಾರತದಲ್ಲಿ ಎಲ್ಲಾ ಆರು ರೂಪಾಂತರಗಳಲ್ಲಿಯೂ ಲಭ್ಯವಾಗಲಿದೆ. ಇನ್ನ ಇಂಟೆಲ್ 13 ನೇ ತಲೆಮಾರಿನ ಪ್ರೊಸೆಸರ್‌ ಫ್ಯಾಮಿಲಿ ನೇತೃತ್ವವನ್ನು i9-13900K ಹೊಂದಿದೆ. ಇದರಲ್ಲಿ 24 ಕೋರ್‌ಗಳು ಮತ್ತು 32 ಥ್ರೆಡ್‌ಗಳು ಮತ್ತು 5.8 GHz ವರೆಗಿನ ಗಡಿಯಾರದ ವೇಗವನ್ನು ಪಡೆಯಬಹುದು. ಇದು ವಿಶ್ವದ ಅತ್ಯಂತ ವೇಗದ ಡೆಸ್ಕ್‌ಟಾಪ್ ಪ್ರೊಸೆಸರ್ ಎಂದು ಕಂಪನಿಯು ಹೇಳಿಕೊಂಡಿದೆ.

ಪ್ರೊಸೆಸರ್‌

ಇನ್ನು ಹೊಸ ತಲೆಮಾರಿನ ಪ್ರೊಸೆಸರ್‌ ಫ್ಯಾಮಿಲಿಯ ಇತರ ಪ್ರೊಸೆಸರ್‌ಗಳನ್ನು i9-13900KF, i7-13700K, i7-13700KF, i5-13600K, ಮತ್ತು i513600KF ಎಂದು ಹೆಸರಿಸಲಾಗಿದೆ. ಈ ಪ್ರೊಸೆಸರ್‌ಗಳು ಗೇಮಿಂಗ್, ಸ್ಟ್ರೀಮಿಂಗ್ ಮತ್ತು ರೆಕಾರ್ಡಿಂಗ್ ನಲ್ಲಿ ಉತ್ತಮ ಅನುಭವ ನೀಡಲಿವೆ. ಅ್ಲದೆ ಇದರಲ್ಲಿರುವ 22 ಪ್ರೊಸೆಸರ್‌ಗಳು ಮತ್ತು 125 ಕ್ಕೂ ಹೆಚ್ಚು ಪಾಲುದಾರ ಸಿಸ್ಟಮ್ ವಿನ್ಯಾಸಗಳನ್ನು ಒಳಗೊಂಡಿದೆ. 22 ಹೊಸ ಪ್ರೊಸೆಸರ್‌ಗಳಲ್ಲಿ ಆರು ಸಹ ಅನ್‌ಲಾಕ್ ಆಗಿದ್ದು, ಸುಧಾರಿತ ಬಳಕೆದಾರರಿಗೆ ಅಗತ್ಯವಿದ್ದಾಗ ಹೆಚ್ಚಿನ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಲು ಓವರ್‌ಲಾಕ್ ಮಾಡಲು ಅವಕಾಶ ನೀಡಲಾಗಿದೆ.

ಅಪ್ಡೇಟ್‌

ಇದು ಸಾಕಷ್ಟು ಅಪ್ಡೇಟ್‌ ವರ್ಷನ್‌ ಆಗಿದ್ದು, ಹಿಂದಿನ ತಲೆಮಾರಿನ ಪ್ರೊಸೆಸರ್‌ಗಿಂತ ಹೆಚ್ಚು ವೇಗವನ್ನು ನೀಡಲಿದೆ. ಇದರಲ್ಲಿ ಪ್ರತ್ಯೇಕ GPU ಗಳನ್ನು ಸ್ಥಾಪಿಸದ ಸಿಸ್ಟಮ್‌ಗಳಿಗಾಗಿ ಇಂಟೆಲ್ UHD ಗ್ರಾಫಿಕ್ಸ್ 770 ಇಂಟರ್‌ಬಿಲ್ಟ್‌ ಮಾಡಲಾಗಿದೆ. ಇನ್ನು ಇಂಟೆಲ್‌ i9-13900k ಪ್ರೊಸೆಸರ್‌ 15% ಉತ್ತಮ ಸಿಂಗಲ್-ಥ್ರೆಡ್ ಕಾರ್ಯಕ್ಷಮತೆಯನ್ನು ನೀಡಲಿದೆ. ಅಲ್ಲದೆ 41% ವರೆಗೆ ಉತ್ತಮ ಮಲ್ಟಿ-ಥ್ರೆಡ್ ಕಾರ್ಯಕ್ಷಮತೆಯನ್ನು ನೀಡಲಿದೆ.

ಇಂಟೆಲ್

ಇನ್ನು ಇಂಟೆಲ್ 13 ನೇ ಜನ್ ಕುಟುಂಬವು ಅಡಾಪ್ಟಿವ್ ಬೂಸ್ಟ್ ತಂತ್ರಜ್ಞಾನ ಮತ್ತು ಥರ್ಮಲ್ ವೆಲಾಸಿಟಿ ಬೂಸ್ಟ್‌ನೊಂದಿಗೆ ಬರುತ್ತದೆ. ಇದು ಕೆಲಸದ ಹೊರೆಗೆ ಅನುಗುಣವಾಗಿ ಪ್ರೊಸೆಸರ್ ಕ್ಲಾಕ್‌ ಪ್ರಿಕ್ವೆನ್ಸಿಗಳನ್ನು ಹೆಚ್ಚಿಸಲಿದೆ. ಇದು 13ನೇ Gen i9 ಪ್ರೊಸೆಸರ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಇದು PCIe Gen 5.0 ಬೆಂಬಲವನ್ನು ಹೊಂದಿದೆ. ಇನ್ನು ಇದರ ಆರು ಮಾದರಿಗಳು ಕೂಡ 20 CPU PCIe ಲೇನ್‌ಗಳನ್ನು ಹೊಂದಿವೆ.

ಇಂಟೆಲ್

ಇವುಗಳಲ್ಲಿ ಇಂಟೆಲ್ ಕೋರ್ i9-13900K ಪ್ರೊಸೆಸರ್ 24 ಕೋರ್‌ಗಳು ಮತ್ತು 32 ಥ್ರೆಡ್‌ಗಳನ್ನು ಹೊಂದಿದೆ. ಇದು 36MB L3 ಸಂಗ್ರಹ ಮತ್ತು 32MB L2 ಸ್ಟೋರೇಜ್‌ ಅನ್ನು ಹೊಂದಿದೆ. ಜೊತೆಗೆ 5.8GHz ವರೆಗಿನ ಗರಿಷ್ಠ ಫ್ರಿಕ್ವೆನ್ಸಿ ಮತ್ತು 3GHz ಬೇಸ್‌ ಫ್ರೀಕ್ವೆನ್ಸಿಯನ್ನು ಹೊಂದಿದೆ. ಇದನ್ನು ಇಂಟೆಲ್‌ ಯುಎಚ್‌ಡಿ ಗ್ರಾಫಿಕ್ಸ್ 770 ನೊಂದಿಗೆ ಸಂಯೋಜಿಸಲಾಗಿದೆ.

Best Mobiles in India

Read more about:
English summary
Intel launched its 13th generation of desktop processors in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X