ಅಂತರ್ಜಾಲದಲ್ಲಿ ಕನ್ನಡಿಗರ ಮೈಲಿಗಲ್ಲು..! ಇನ್ನು ಮುಂದೆ ಕನ್ನಡದಲ್ಲೇ ಡೊಮೈನ್ ನೇಮ್..!

|

ದೇಶಿಯ ಮಾರುಕಟ್ಟೆಯಲ್ಲಿ ಇಂಗ್ಲಿಷ್ ಭಾಷೆ ಬಳಕೆದಾರರಿಗಿಂತಲೂ ಪ್ರಾದೇಶಿಕ ಭಾಷಾ ಬಳಕೆದಾರರ ಸಂಖ್ಯೆಯೂ ಅಧಿಕವಾಗಿರುವ ಹಿನ್ನಲೆಯಲ್ಲಿ ಪ್ರಾಂತ್ಯ ಭಾಷೆಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ವಿಶಾಲ ರಾಷ್ಟ್ರ ಭಾರತದಲ್ಲಿ ಸಾವಿರಾರು ಭಾಷೆಗಳು ಬಳಕೆಯಲ್ಲಿದ್ದು, ಕೆಲವು ಭಾಷೆಗಳು ಬಹು ಸಂಖ್ಯಾತ ಸಮೂಹವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಆದ್ಯತೆ ಇಂಟರ್ನೆಟ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಇದಕ್ಕಾಗಿ ಸದ್ಯದಲ್ಲೇ ಕನ್ನಡವೂ ಸೇರಿದಂತೆ ಭಾರತದ 9 ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್ನೆಟ್ ಡೊಮೈನ್‌ ನೇಮ್‌ಗಳು ಶೀಘ್ರವೇ ಲೈವ್ ಆಗಲಿದೆ ಎನ್ನಲಾಗಿದೆ.

ಅಂತರ್ಜಾಲದಲ್ಲಿ ಕನ್ನಡಿಗರ ಮೈಲಿಗಲ್ಲು..! ಇನ್ನು ಮುಂದೆ ಕನ್ನಡದಲ್ಲೇ ಡೊಮೈನ್ ನೇಮ್

ಪ್ರಾದೇಶಿಕ ಭಾಷೆಗಳಲ್ಲಿ ಡೊಮೈನ್‌ಗಳನ್ನು ನಿರ್ಮಾಣ ಮಾಡಲು ದಿ ಇಂಟರ್ನೆಟ್ ಕಾರ್ಪೋರೇಶನ್ ಫಾರ್‌ ಅಸೈನ್ ನೇಮ್ಸ್ ಆಂಡ್ ನಂಬರ್ಸ್ (ICANN) ಕಂಪನಿಯೂ ಮುಂದಾಗಿದೆ. ಮೊದಲಿಗೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್ನೆಟ್ ಡೊಮೈನ್‌ ನೇಮ್‌ಗಳು ಆಯಾ ಭಾಷೆಗಳಲ್ಲಿಯೇ ನೀಡಲು ಈ ಕಂಪನಿಯೂ ಮುಂದಾಗಿದೆ. ಈ ಕಾರ್ಯವು ಯಶಸ್ವಿಯಾದ ನಂತರದಲ್ಲಿ ದೇಶದ 22 ಭಾಷೆಗಳಲ್ಲಿ ಡೊಮೈನ್‌ ನೇಮ್‌ ಗಳು ಕಾಣಿಸಿಕೊಳ್ಳಲಿದೆ.

ಲಿಪಿ ಇರುವ ಭಾಷೆಗಳು:

ಲಿಪಿ ಇರುವ ಭಾಷೆಗಳು:

ಕನ್ನಡ ಸೇರಿದಂತೆ ಲಿಪಿಗಳನ್ನು ಹೊಂದಿರುವ ಬೆಂಗಾಲಿ, ದೇವನಾಗರಿ, ಗುಜರಾತ್‌, ಗುರ್ಮುಖೀ, ಮಲಯಾಳಂ, ಒಡಿಯಾ, ತಮಿಳು ಮತ್ತು ತೆಲುಗು ಭಾಷೆಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಹೊಂದಿವೆ ಈ ಹಿನ್ನಲೆಯಲ್ಲಿ ಮೊದಲಿಗೆ ಈ ಭಾಷೆಗಳು ಡೊಮೈನ್‌ ನೇಮ್‌ಗಳನ್ನು ಹೊಂದಲಿವೆ. ನಂತರದಲ್ಲಿ 22 ಭಾಷೆಗಳು ಡೊಮೈನ್‌ ನೇಮ್‌ ಗಳನ್ನು ಪಡೆಯಲಿವೆ.

ಉದಾಹರಣೆಗೆ:

ಉದಾಹರಣೆಗೆ:

ಸದ್ಯ ಮಾರುಕಟ್ಟೆಯಲ್ಲಿ ನೀವು ಕನ್ನಡದಲ್ಲಿ ತಂತ್ರಜ್ಞಾನದ ಮಾಹಿತಿಗಾಗಿ kannada.Gizbot.com ಎಂದು ಸರ್ಚ್ ಮಾಡಬೇಕಾಗಿದೆ. ಆದರೆ ಡೊಮೈನ್ ನೇಮ್ ಕನ್ನಡದಲ್ಲಿಯೇ ಇದ್ದರೇ, ಕನ್ನಡ.ಗಿಜ್‌ಬಾಟ್.ಕಾಮ್ ಎಂದು ಟೈಪ್ ಮಾಡಿ ಹುಡುಕಬಹುದಾಗಿದೆ. com, .in, .net, .info, .news ಗಳು ಕನ್ನಡದಲ್ಲಿ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ಇಂಟರ್ನೆಟ್‌ನಲ್ಲಿಯೂ ಕನ್ನಡ ಬೆಳೆಯಲಿದೆ.

ಲಾಭವೇನು..?

ಲಾಭವೇನು..?

ಸದ್ಯ ನೀವು ಗೂಗಲ್‌ ಸರ್ಚ್‌ ಬಾರಿನಲ್ಲಿ ಕನ್ನಡದಲ್ಲಿ ಟೈಪ್ ಮಾಡಿದ ಸಂದರ್ಭದಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಗಳು ದೊರೆಯುತ್ತಿದೆ. ಆದರೆ ಅದರಲ್ಲಿ ಇಂಗ್ಲಿಷ್ ಭಾಷೆಯ ಡೊಮೈನ್ ನೇಮ್‌ಗಳು ಇರುತ್ತವೆ. ಆದರೆ ಡೊಮೈನ್ ನೇಮ್ ಕನ್ನಡದಲ್ಲಿಯೇ ಇದ್ದರೆ ಇನ್ನಷ್ಟು ಅಂಶಗಳು ಕನ್ನಡದಲ್ಲಿಯೇ ಕಾಣಿಸಿಕೊಳ್ಳುತ್ತವೆ.

ಇಂಗ್ಲಿಷ್ ಪ್ರಭಾವಕ್ಕೆ ಕೊನೆ:

ಇಂಗ್ಲಿಷ್ ಪ್ರಭಾವಕ್ಕೆ ಕೊನೆ:

ಇಂದು ಜಾಗತಿಕವಾಗಿ ಶೇ.52 ರಷ್ಟು ಮಂದಿ ಮಾತ್ರ ಇಂಟರ್ನೆಟ್‌ ಬಳಕೆ ಮಾಡುತ್ತಿದ್ದಾರೆ. ಆದರೆ ಇವರಲ್ಲಿ ಶೇ.48 ರಷ್ಟು ಮಂದಿ ಇಂಗ್ಲಿಷ್ ಭಾಷೆಯನ್ನು ಬಿಟ್ಟು ಬೇರೆ ಭಾಷೆ ಬಳಕೆದಾರರಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಬಿಟ್ಟು ಬೇರೆ ಬೇರೆ ಭಾಷೆಗಳನ್ನು ಬಳಕೆಗೆ ಮುಂದಾಗಲು ಪ್ರೋತ್ಸಾಹಿಸುವ ಸಲುವಾಗಿ ಈ ಹೊಸ ಸಾಹಸವನ್ನು ಮಾಡಲಾಗುತ್ತಿದೆ.

ಎಲ್ಲರಿಗೂ ಇಂಟರ್ನೆಟ್:

ಎಲ್ಲರಿಗೂ ಇಂಟರ್ನೆಟ್:

ಇಂಟರ್ನೆಟ್ ಬಳಕೆಯೂ ಕೇಲವ ಇಂಗ್ಲಿಷ್ ಬರುವವರಿಗೆ ಮಾತ್ರ ಎನ್ನುವ ಭಾವನೆಯನ್ನು ಹೊಗಲಾಡಿಸುವ ಸಲುವಾಗಿ ಮತ್ತು ಭಾಷೆ ಗೊತ್ತಿಲ್ಲದ ಕಾರಣಕ್ಕಾಗಿ ಇಂಟರ್ನೆಟ್‌ ಬಳಕೆಯಿಂದ ವಂಚಿತರಾಗಿವವರಿಗೆ ಸೇವೆಯನ್ನು ನೀಡುವ ಸಲುವಾಗಿ ಸ್ಥಳೀಯ ಭಾಷೆಯಲ್ಲೇ ಡೊಮೈನ್‌ಗಳನ್ನು ನೀಡಲು ಯೋಜನೆಯೂ ಸಿದ್ಧವಾಗುತ್ತಿದೆ.

ಡೊಮೈನ್ ನೋಡಿಕೊಳ್ಳುತ್ತವೆ:

ಡೊಮೈನ್ ನೋಡಿಕೊಳ್ಳುತ್ತವೆ:

ದಿ ಇಂಟರ್ನೆಟ್ ಕಾರ್ಪೋರೇಶನ್ ಫಾರ್‌ ಅಸೈನ್ ನೇಮ್ಸ್ ಆಂಡ್ ನಂಬರ್ಸ್ (ICANN) ಕಂಪನಿಯೂ ಜಗತ್ತಿನ ಉದ್ದಗಲಕ್ಕೂ ಇಂಟರ್ನೆಟ್‌ ಡೊಮೈನ್‌ ನೇಮ್‌ ವ್ಯವಸ್ಥೆ (ಡಿಎನ್‌ಎಸ್‌) ಯನ್ನೂ ನೋಡಿಕೊಳ್ಳುತ್ತಿದೆ. ಇದೇ ಈಗ ಭಾರತೀಯ ಮಾರುಕಟ್ಟೆಯಲ್ಲಿಯೂ ಹೊಸ ಮಾದರಿಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್ನೆಟ್ ಡೊಮೈನ್‌ ನೇಮ್‌ಗಳು ನಿರ್ಮಿಸಿಲು ಮುಂದಾಗಿದೆ. ಈ ಮೂಲಕ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವ ಮಾಡಲಿದೆ.

Most Read Articles
Best Mobiles in India

English summary
Internet domain names in kannada language soon. kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X