ನಾಳೆಯಿಂದ ಜಗತ್ತಿನಾದ್ಯಂತ ಬಂದ್‌ ಆಗಲಿದೆ ಇಂಟರ್‌ನೆಟ್‌! ಯಾಕೆ ಗೊತ್ತಾ?

|

ಇಂಟರ್‌ನೆಟ್‌ ಬಳಸುವ ಪ್ರತಿಯೊಬ್ಬರೂ ಈ ಸ್ಟೋರಿಯನ್ನು ಓದಲೇಬೇಕು. ಇಂಟರ್‌ನೆಟ್‌ ನಂಬಿ ಕೆಲಸ ಕಾರ್ಯನಿರ್ವಹಿಸುವವರು ಕೂಡ ಇಂದೇ ಈ ಸ್ಟೋರಿ ಓದಿದರೆ ಒಳಿತು. ಏಕೆಂದರೆ ನಾಳೆಯಿಂದ ಕೆಲವು ಬಳಕೆದಾರರು ಇಂಟರ್‌ನೆಟ್‌ ಬಳಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಸೆಪ್ಟೆಂಬರ್ 30 ರಿಂದ, ಅಂದರೆ ನಾಳೆ, ಕೆಲವು ಡಿವೈಸ್‌ ಅನ್ನು ಬಳಸುವವರು ವಿಶ್ವವ್ಯಾಪಿ ವೆಬ್ ಅನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ನಾಳೆಯಿಂದ ಇಂಟರ್ನೆಟ್ ಬ್ಲ್ಯಾಕೌಟ್ ಆಗಲಿದ್ದು ಲಕ್ಷಾಂತರ ಮಂದಿ ಇಂಟರ್‌ನೆಟ್‌ ಸೇವೆಗೆ ಪ್ರವೇಶವನ್ನು ಪಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ.

ಇಂಟರ್‌ನೆಟ್‌

ಹೌದು, ನಾಳೆಯಿಂದ ಕೆಲವರಿಗೆ ಇಂಟರ್‌ನೆಟ್‌ ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಇಂಟರ್‌ನೆಟ್‌ ಬಳಸುವುದಕ್ಕೆ ಅವಕಾಶ ನೀಡುವ IdentTrust DST ರೂಟ್ CA X3 ಪ್ರಮಾಣಪತ್ರದ ಅವಧಿ ನಾಳೆ ಮುಗಿಯಲಿದೆ. ಇದು ಜಾಗತಿಕವಾಗಿ ಇಂಟರ್ನೆಟ್ ಬಳಕೆದಾರರ ಕೆಲವು ವಿಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ನಿಮ್ಮ ಕಂಪ್ಯೂಟರ್‌ಗಳು, ಸ್ಮಾರ್ಟ್‌ಡಿವೈಸ್‌ಗಳು ಮತ್ತು ಬ್ರೌಸರ್‌ಗಳು ಅಪ್ಡೇಟ್‌ ಆಗದೇ ಇದ್ದರೆ ಇನ್ನು ಮುಂದೆ ಇಂಟರ್ನೆಟ್‌ಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ನಾಳೆಯಿಂದ ಯಾರೆಲ್ಲಾ ಇಂಟರ್‌ನೆಟ್‌ ಸೇವೆಯನ್ನು ಕಳೆದುಕೊಳ್ಳಲಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇಂಟರ್‌ನೆಟ್

ಟೆಕ್ ಕ್ರಂಚ್ ಮಾಡಿರುವ ವರದಿ ಪ್ರಕಾರ, ನಾಳೆ IdentTrust DST ರೂಟ್ CA X3 ಪ್ರಮಾಣಪತ್ರದ ಅವಧಿ ಮುಗಿಯುವುದರಿಂದ, ಇಂಟರ್‌ನೆಟ್ ಬ್ಲ್ಯಾಕೌಟ್ ಆಗಲಿದೆ. ಇದು ಜಾಗತಿಕವಾಗಿ ಪರಿಣಾಮ ಬೀರಲಿದೆ. ಇದರಿಂದ ಲಕ್ಷಾಂತರ ಕಂಪ್ಯೂಟರ್‌ ಬಳಕೆದಾರರು, ಬ್ರೌಸರ್‌ಗಳನ್ನು ಅಪ್ಡೇಟ್‌ ಮಾಡದೆ ಇರುವವರೆಲ್ಲರೂ ಇನ್ನು ಮುಂದೆ ಇಂಟರ್ನೆಟ್‌ಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ.

ಏನಿದು ರೂಟ್ CA X3 ಪ್ರಮಾಣಪತ್ರ?

ಏನಿದು ರೂಟ್ CA X3 ಪ್ರಮಾಣಪತ್ರ?

ಲೆಟ್ಸ್ ಎನ್‌ಕ್ರಿಪ್ಟ್ ಅನ್ನೊದು ಒಂದು ಲಾಭರಹಿತ ಸಂಸ್ಥೆಯಾಗಿದೆ. ಇದು ಇಂಟರ್‌ನೆಟ್ ನಿಮ್ಮ ಡಿವೈಸ್‌ಗಳ ನಡುವೆ ಸಂಪರ್ಕವನ್ನು ಎನ್‌ಕ್ರಿಪ್ಟ್ ಮಾಡುವುದಕ್ಕೆ ಈ ಪ್ರಮಾಣಪತ್ರಗಳನ್ನು ನೀಡುತ್ತೆ. ಮೊಬೈಲ್‌, ಲ್ಯಾಪ್‌ಟಾಪ್‌, ಎಲ್ಲಾ ಡಿವೈಸ್‌ಗಳು ಇಂಟರ್‌ನೆಟ್‌‌ ಕನೆಕ್ಷನ್‌ ಪಡೆಯುವುದಕ್ಕೆ ಈ ಪ್ರಮಾಣಪತ್ರ ಅಗತ್ಯವಿದೆ. ಈ ಪ್ರಮಾಣ ಪತ್ರ ಪಡೆಯುವುದರಿಂದ ನಿಮ್ಮ ಡೇಟಾ ಇಂಟರ್‌ನೆಟ್‌ನಲ್ಲಿ ಸುರಕ್ಷಿತವಾಗಿರಲಿದೆ. ಅದರಲ್ಲೂ HTTPS ನಿಂದ ಆರಂಬವಾಗುವ ವೆಬ್‌ಸೈಟ್‌ಗಳೆಲ್ಲವೂ ಸುರಕ್ಷಿತವಾಗಿರಲಿವೆ. ಸದ್ಯ ಲೆಟ್ಸ್ ಎನ್‌ಕ್ರಿಪ್ಟ್ ಸೆಪ್ಟೆಂಬರ್ 30 ರಿಂದ ಹಳೆಯ ಪ್ರಮಾಣಪತ್ರವನ್ನು ಬಳಸುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಇದೇ ಕಾರಣಕ್ಕೆ ನಾಳೆ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳ್ಳಲಿದೆ.

ಯಾರೆಲ್ಲಾ ಇಂಟರ್‌ನೆಟ್‌ ಸೇವೆ ಕಳೆದುಕೊಳ್ಳಲಿದ್ದಾರೆ?

ಯಾರೆಲ್ಲಾ ಇಂಟರ್‌ನೆಟ್‌ ಸೇವೆ ಕಳೆದುಕೊಳ್ಳಲಿದ್ದಾರೆ?

ಬಹುಪಾಲು ಇಂಟರ್‌ನೆಟ್‌ ಬಳಕೆದಾರರಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ನಿಜ. ಆದರೆ ಕೆಲವು ಬಳಕೆದಾರರ ಮೇಲೆ ಇದರ ಪರಿಣಾಮ ಬೀರಲಿದೆ. ಇತ್ತೀಚಿನ ಆವೃತ್ತಿಗಳಿಗೆ ಅಪ್‌ಡೇಟ್ ಆಗದ ಬ್ರೌಸರ್‌ಗಳು ನಾಳೆಯಿಂದ ಇಂಟರ್‌ನೆಟ್‌ ಬಳಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಕೆಲವರು ತಮ್ಮ ಡಿವೈಸ್‌ಗಳನ್ನು ಯಾವುದೇ ಅಪ್‌ಡೇಟ್‌ ಮಾಡಿರುವುದಿಲ್ಲ. ಕಾಲಕಾಲಕ್ಕೆ ಅಪ್ಡೇಟ್‌ ಮಾಡದ ಡಿವೈಸ್‌ಗಳು ಇಂಟರ್‌ನೆಟ್‌ ಸೇವೆಯನ್ನು ಕಳೆದುಕೊಳ್ಳಲಿವೆ. ಇದರಲ್ಲಿ ಎಂಬೆಡೆಡ್ ಸಿಸ್ಟಮ್‌ಗಳು, ಆಟೋಮ್ಯಾಟಿಕ್‌ ಆಗಿ ಅಪ್‌ಡೇಟ್ ಆಗದಂತೆ ವಿನ್ಯಾಸಗೊಳಿಸಲಾಗಿದೆ ಇಂತಹವುಗಳು ನಾಳೆಯಿಂದ ಇಂಟರ್‌ನೆಟ್‌ ಬೆಂಬಲ ಕಳೆದುಕೊಳ್ಳಲಿದ್ದು, ಇದೇ ಸಾಲಿಗೆ ಹಳೆಯ ಸಾಫ್ಟ್‌ವೇರ್ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಲಿವೆ.

ನಿಮ್ಮ ಸ್ಮಾರ್ಟ್‌ಫೋನ್‌ ಕಥೆ ಏನು?

ನಿಮ್ಮ ಸ್ಮಾರ್ಟ್‌ಫೋನ್‌ ಕಥೆ ಏನು?

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಆವೃತ್ತಿ 7.1.1 ಕ್ಕಿಂತ ಹಿಂದಿನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಡಿವೈಸ್‌ಗಳು ಇಂಟರ್‌ನೆಟ್‌ ಪ್ರವೇಶವನ್ನು ಕಳೆದುಕೊಳ್ಳಿವೆ. ಅದರೆ ಲೆಟ್ಸ್ ಎನ್‌ಕ್ರಿಪ್ಟ್ ಈಗಾಗಲೇ ಮೂರು ವರ್ಷಗಳವರೆಗೆ ಪ್ರಮಾಣಪತ್ರದ ಮಾನ್ಯತೆಯನ್ನು ವಿಸ್ತರಿಸಲು ಕೆಲಸ ಮಾಡಿದೆ. ಆದಾಗ್ಯೂ, ಆವೃತ್ತಿ 2.3.6 ಅನ್ನು ಇನ್ನೂ ಆಫ್‌ಲೈನ್‌ನಲ್ಲಿ ಕಾಣಬಹುದು. ಇನ್ನು ಐಒಎಸ್ 10 ಕ್ಕಿಂತ ಹಳೆಯ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಐಫೋನ್‌ ಕೂಡ ಇಂಟರ್‌ನೆಟ್‌ ಬೆಂಬಲ ಕಳೆದುಕೊಳ್ಳಲಿದೆ

ಡಿವೈಸ್‌

ಇದಲ್ಲದೆ "ಮ್ಯಾಕೋಸ್ 2016 ಮತ್ತು ವಿಂಡೋಸ್ ಎಕ್ಸ್‌ಪಿ (ಸರ್ವಿಸ್ ಪ್ಯಾಕ್ 3 ರೊಂದಿಗೆ) ನ ಹಿಂದಿನ ಆವೃತ್ತಿಗಳನ್ನು ಚಾಲನೆಯಲ್ಲಿರುವ ಬಳಕೆದಾರರು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಹಿಂದಿನ ಆವೃತ್ತಿಗಳನ್ನು ಬಳಸುತ್ತಿರುವ ಬಳಕೆದಾರರು ಓಪನ್‌ಎಸ್‌ಎಸ್‌ಎಲ್ 1.0.2 ಅಥವಾ ಅದಕ್ಕಿಂತ ಮುಂಚಿನ ಕ್ಲೈಂಟ್‌ಗಳನ್ನು ಬಳಸುತ್ತಿರುವವರು ಕೂಡ ಈ ಸಮಸ್ಯೆ ಎದುರಿಸಲಿದೆ. ಜೊತೆಗೆ ಹಳೆಯ ಪ್ಲೇಸ್ಟೇಷನ್ಸ್ 4 ಅನ್ನು ಹೊಸ ಫರ್ಮ್‌ವೇರ್‌ಗೆ ಅಪ್‌ಗ್ರೇಡ್ ಮಾಡದೇ ಇರುವವರು ಕೂಡ ಈ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಆದರಿಂದ ನೀವು ಕೂಡ ನಿಮ್ಮ ಡಿವೈಸ್‌ಗಳನ್ನು ಒಮ್ಮೆ ಅಪ್ಡೇಟ್‌ ಮಾಡಿಕೊಂಡರೆ ತುಂಬಾ ಒಳ್ಳೆಯದು.

Best Mobiles in India

English summary
Let’s Encrypt’s IdentTrust DST Root CA X3 certificate will expire on September 30.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X