iOS 16 ಸೇರಿರುವ ಈ ಫೀಚರ್ಸ್‌ಗಳು ಆಂಡ್ರಾಯ್ಡ್‌ನಲ್ಲಿ ಈಗಾಗಲೇ ಲಭ್ಯವಿದೆ!

|

ಆಪಲ್‌ ಕಂಪೆನಿಯ ಹೊಸ iOS 16 ಸಾಫ್ಟ್‌ವೇರ್‌ ಅಪ್ಡೇಟ್‌ ಸಾಕಷ್ಟು ಗಮನ ಸೆಳೆದಿದೆ. iOS 16 ಒಳಗೊಂಡಿರುವ ಹೊಸ ಫೀಚರ್ಸ್‌ಗಳು ಆಪಲ್‌ ಫೋನ್‌ ಪ್ರಿಯರಿಗೆ ಹೊಸ ಅನುಭವ ನೀಡಲಿದೆ. ಆದರೆ ನೀವು ಆಂಡ್ರಾಯ್ಡ್‌ ಡಿವೈಸ್‌ ಅನ್ನು ಬಳಸುತ್ತಿರುವವರು iOS 16 ನಲ್ಲಿರುವ ಅನೇಕ ಫೀಚರ್ಸ್‌ಗಳನ್ನು ಈಗಾಗಲೇ ಬಳಸುತ್ತಿದ್ದಾರೆ. ಯಾಕಂದ್ರೆ iOS 16 ಸೇರಿರುವ ಹಲವು ಫೀಚರ್ಸ್‌ಗಳು ಈಗಾಗಲೇ ಆಂಡ್ರಾಯ್ಡ್‌ ನಲ್ಲಿ ಲಭ್ಯವಿದೆ.

ಆಪಲ್‌

ಹೌದು, ಆಪಲ್‌ ತನ್ನ iOS 16 ಸಾಫ್ಟ್‌ವೇರ್‌ನಲ್ಲಿ ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ಹಲವು ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಆಂಡ್ರಾಯ್ಡ್‌ನಲ್ಲಿರುವ ಫೀಚರ್ಸ್‌ಗಳನ್ನು ಆಪಲ್‌ ಕಂಪೆನಿ ಕಾಪಿ ಮಾಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲು ಮುಂದಾಗಿದೆ. ಹಾಗಾದ್ರೆ ಆಪಲ್‌ iOS 16ನಲ್ಲಿ ಆಂಡ್ರಾಯ್ಡ್‌ನಲ್ಲಿನ ಯಾವೆಲ್ಲಾ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನ್ಯೂ ಲಾಕ್ ಸ್ಕ್ರೀನ್

ನ್ಯೂ ಲಾಕ್ ಸ್ಕ್ರೀನ್

iOS 16 ಸಾಫ್ಟ್‌ವೇರ್‌ನಲ್ಲಿ ಲಭ್ಯವಾಗುವ ಹೊಸ ಲಾಕ್‌ ಸ್ಕ್ರೀನ್‌, ಕಸ್ಟಮೈಸೇಶನ್‌ ಎಕ್ಸ್‌ಪೀರಿಯನ್ಸ್‌ ನೀಡಲಿದೆ. ಇದು ಲಾಕ್‌ಸ್ಕ್ರೀನ್‌ನಲ್ಲಿ ವಿಜೆಟ್‌ಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ. ಇದರಲ್ಲಿ ನೀವು ಹವಾಮಾನ, ಏರ್‌ಪಾಡ್‌ ಬ್ಯಾಟರಿ ಸ್ಟೇಟಸ್‌, ಕ್ಯಾಲೆಂಡರ್‌ ಈವೆಂಟ್ಸ್‌ಗಳನ್ನು ಸೇರ್ಪಡೆ ಮಾಡಬಹುದು. ಇದೇ ಮಾದರಿಯ ಫೀಚರ್ಸ್‌ ಈಗಾಗಲೇ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ. ಅಲ್ಲದೆ ಇದು 2012 ರಲ್ಲಿ ಬಿಡುಗಡೆಯಾದ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ನಲ್ಲಿ ಪರಿಚಯಿಸಲಾಗಿದೆ.

ಟ್ರಾನ್ಸ್‌ಲೇಟ್‌ ಕ್ಯಾಮೆರಾ

ಟ್ರಾನ್ಸ್‌ಲೇಟ್‌ ಕ್ಯಾಮೆರಾ

iOS 16 ನಲ್ಲಿ ಗಮನ ಸೆಳೆದಿರುವ ಮತ್ತೊಂದು ಫೀಚರ್ಸ್‌ ಅಂದರೆ ಅದು ಟ್ರಾನ್ಸ್‌ಲೇಟ್‌ ಕ್ಯಾಮೆರಾ ಆಗಿದೆ. ಇದರಿಂದ ಐಫೋನ್‌ ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿ ಕ್ಲಿಕ್‌ ಮಾಡಿದ ಫೋಟೋದಲ್ಲಿರುವ ಟೆಕ್ಸ್ಟ್‌ ಅನ್ನು ಕೂಡ ಟ್ರಾನ್ಸ್‌ಲೇಟ್‌ ಮಾಡಬಹುದಾಗಿದೆ. ಆದರೆ ಇದೇ ಮಾದರಿಯಲ್ಲಿ ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಟ್ರಾನ್ಸ್‌ಲೇಟ್‌ ಮೂಲಕ ಲೈವ್ ವ್ಯೂಫೈಂಡರ್‌ನಲ್ಲಿ ಟ್ರಾನ್ಸ್‌ಲೇಟ್‌ ಮಾಡಬಹುದಾಗಿದೆ. ಟ್ರಾನ್ಸ್‌ಲೇಟ್‌ ಫೀಚರ್ಸ್‌ ಫೋಟೋವನ್ನು ಕ್ಲಿಕ್‌ ಮಾಡಲಿದೆ, ನಂತರ ಸೆರೆಹಿಡಿಯಲಾದ ಚಿತ್ರದಲ್ಲಿನ ಟೆಕ್ಸ್ಟ್‌ ಅನ್ನು ಟ್ರಾನ್ಸ್‌ಲೇಟ್‌ ಮಾಡಲಿದೆ.

ಆಟೋಮ್ಯಾಟಿಕ್ ಶೇರಿಂಗ್ ಇನ್ ಫೋಟೋಸ್

ಆಟೋಮ್ಯಾಟಿಕ್ ಶೇರಿಂಗ್ ಇನ್ ಫೋಟೋಸ್

ಆಟೋಮ್ಯಾಟಿಕ್‌ ಶೇರಿಂಗ್‌ ಇನ್‌ ಫೋಟೋಸ್‌ ಫೀಚರ್ಸ್‌ ಸಾಕಷ್ಟು ಗಮನ ಸೆಳೆದಿದೆ. ಆದರೆ ಇದೇ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ನಲ್ಲಿ ಕೂಡ ಕಾಣಬಹುದಾಗಿದೆ. ಇದು 2017ರಲ್ಲಿ ಪರಿಚಯಿಸಿರುವ ಗೂಗಲ್‌ ಲೈಬ್ರರಿ ಫೀಚರ್ಸ್‌ ಮಾದರಿಯಲ್ಲಿದೆ. ಆಪಲ್‌ನ ಐಕ್ಲೌಡ್‌ ಶೇರಿಂಗ್‌ ಫೋಟೋ ಲೈಬ್ರರಿ ಫೀಚರ್ಸ್‌ ಗೂಗಲ್‌ ಪೇಜ್‌ ಲೈಬ್ರರಿಯ ಫೀಚರ್ಸ್‌ನಿಂದ ಕಾಪಿ ಮಾಡಲಾಗಿದೆ. ಆದರೆ ಕೆಲವು ಬದಲಾವಣೆಗಳನ್ನು ಹೊರತುಪಡಿಸಿದರೆ ಈ ಎರಡು ಫೀಚರ್ಸ್‌ಗಳ ಕಾರ್ಯವೈಖರಿ ಒಂದೇ ಆಗಿದೆ,

ಲೈವ್ ಕ್ಯಾಪ್ಶನ್ಸ್‌

ಲೈವ್ ಕ್ಯಾಪ್ಶನ್ಸ್‌

iOS 16 ಸೇರಿರುವ ಲೈವ್‌ ಕ್ಯಾಪ್ಶನ್ಸ್‌ ಫೀಚರ್ಸ್‌ ಕೂಡ ಆಂಡ್ರಾಯ್ಡ್‌ನಲ್ಲಿನ ಲೈವ್ ಕ್ಯಾಪ್ಶನ್ಸ್‌ ಫೀಚರ್ಸ್‌ ಹೋಲಿಕೆಯನ್ನು ಹೊಂದಿದೆ. ಲೈವ್ ಕ್ಯಾಪ್ಶನ್ಸ್‌ಗಳು ಯಾವುದೇ ಆಡಿಯೊ ಕಂಟೆಂಟ್‌ ಅನ್ನು ಲಿಪ್ಯಂತರ ಮಾಡವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಫೇಸ್‌ಟೈಮ್ ಕಾಲ್ಸ್‌, ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ಸ್‌ ಐಫೋನ್‌, ಐಪ್ಯಾಡ್‌ ಮತ್ತು ಮ್ಯಾಕ್‌ ಮೂಲಕ ಇಂಗ್ಲಿಷ್‌ನಲ್ಲಿ ಲಿಪ್ಯಂತರ ಮಾಡಬಹುದು ಎಂದು ಆಪಲ್‌ ಹೇಳಿದೆ.

Best Mobiles in India

English summary
Here are some new iOS features that Apple 'borrowed' from Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X