ಭಾರತದಲ್ಲಿ ಐಪ್ಯಾಡ್‌ ಪ್ರೊ (2022) ಅನಾವರಣ! ಬೆಲೆ ಎಷ್ಟು?

|

ಟೆಕ್‌ ದೈತ್ಯ ಆಪಲ್‌ ಕಂಪೆನಿ ಭಾರತದಲ್ಲಿ ಬಹು ನಿರೀಕ್ಷಿತ ಐಪ್ಯಾಡ್‌ ಪ್ರೊ (2022) ಬಿಡುಗಡೆ ಮಾಡಿದೆ. ಈ ಐಪ್ಯಾಡ್‌ ಮಾದರಿಗಳು ಆಪಲ್‌ M2 ಪ್ರೊಸೆಸರ್‌ ಹೊಂದಿದ್ದು, ಐಪ್ಯಾಡ್‌ OS 16ನಲ್ಲಿ ಕಾರ್ಯನಿರ್ವಹಿಸಲಿವೆ. ಇನ್ನು ಈ ಪ್ಯಾಡ್‌ ಆಪಲ್‌ ಪೆನ್ಸಿಲ್ ಅನ್ನು ಬೆಂಬಲಿಸಲಿದೆ. ಇನ್ನು ಈ ಐಪ್ಯಾಡ್‌ 11 ಇಂಚಿನ ಮತ್ತು 12.9 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ProRES ವೀಡಿಯೊವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಹೊಸ ಐಪ್ಯಾಡ್‌ ಪ್ರೊ (2022) ಅನ್ನು ಪರಿಚಯಿಸಿದೆ. ಇನ್ನು ಈ ಐಪ್ಯಾಡ್‌ನಲ್ಲಿ AI ವೇಗವರ್ಧನೆಗಾಗಿ ನ್ಯೂರಲ್ ಇಂಜಿನ್ ಅನ್ನು ಸಹ ಸುಧಾರಿಸಲಾಗಿದೆ ಎಂದು ಆಪಲ್‌ ಕಂಪೆನಿ ಹೇಳಿಕೊಂಡಿದೆ. ಜೊತೆಗೆ 50% ಮೆಮೊರಿ ಬ್ಯಾಂಡ್‌ವಿಡ್ತ್ ಅನ್ನು ಸುಧಾರಿಸಿದೆ ಎನ್ನಲಾಗಿದೆ. ಇದಲ್ಲದೆ ಈ ಐಪ್ಯಾಡ್‌ ಪ್ರೊ ಮಾದರಿಗಳು 16GB ವರೆಗೆ ಏಕೀಕೃತ ಮೆಮೊರಿ ಸ್ಟೋರೇಜ್‌ ಅನ್ನು ಬೆಂಬಲಿಸಲಿವೆ. ಇನ್ನುಳಿದಂತೆ ಈ ಹೊಸ ಐಪ್ಯಾಡ್‌ ಪ್ರೊ ಜಮಾದರಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಪ್ಯಾಡ್‌ ಪ್ರೊ (2022)

ಐಪ್ಯಾಡ್‌ ಪ್ರೊ (2022)

ಐಪ್ಯಾಡ್‌ ಪ್ರೊ (2022) ಮಾದರಿಗಳು 11 ಇಂಚಿನ ಮತ್ತು 12.9 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ 11 ಇಂಚಿನ ಐಪ್ಯಾಡ್‌ ಪ್ರೊ 1688x2388 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ರೇಟ್‌ ಬೆಂಬಲಿಸುವ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ ಇದಾಗಿದೆ. ಇನ್ನು 12.9 ಇಂಚಿನ ಐಪ್ಯಾಡ್‌ ಪ್ರೊ ಆಯ್ಕೆಯು 2048x2732 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಜೊತೆಗೆ ಲಿಕ್ವಿಡ್ ರೆಟಿನಾ XDR ಮಿನಿ-LED ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ.

ಡಿಸ್‌ಪ್ಲೇ

ಇನ್ನು ಈ ಎರಡೂ ಡಿಸ್‌ಪ್ಲೇ ಗಾತ್ರದ ಐಪ್ಯಾಡ್‌ ಪ್ರೊ ಮಾಡೆಲ್‌ಗಳು ಕೂಡ ಟ್ರೂ ಟೋನ್ ಮತ್ತು P3 ವೈಡ್ ಕಲರ್ ಗ್ಯಾಮಟ್ ರಿ ಪ್ರೊಡಕ್ಷನ್‌ ಅನ್ನು ಬೆಂಬಲಿಸುತ್ತವೆ. ಇದು ಆಪಲ್‌ M2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಪ್ರೊಸೆಸರ್‌ ಎಂಟು ಕಾರ್ಯಕ್ಷಮತೆ ಮತ್ತು ದಕ್ಷತೆಯ ಕೋರ್‌ಗಳಲ್ಲಿ 15% ಉತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ. ಜೊತೆಗೆ ಸಂಯೋಜಿತ 10-ಕೋರ್ GPU 35 ಪ್ರತಿಶತದಷ್ಟು ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಐಪ್ಯಾಡ್‌

ಐಪ್ಯಾಡ್‌ ಪ್ರೊ (2022) ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಮತ್ತು ಎರಡನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಜೊತೆಗೆ LiDAR ಸ್ಕ್ಯಾನರ್ ಅನ್ನು ಒಳಗೊಂಡಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.

ಐಪ್ಯಾಡ್‌

ಐಪ್ಯಾಡ್‌ ಪ್ರೊ (2022) ಥಂಡರ್‌ಬೋಲ್ಟ್‌ 4 ಸಂಪರ್ಕವನ್ನು ಮತ್ತು USB ಟೈಪ್-C ಪೋರ್ಟ್‌ನಲ್ಲಿ 6K ರೆಸಲ್ಯೂಶನ್ ಡಿಸ್‌ಪ್ಲೇಗಳಿಗೆ ಬೆಂಬಲವನ್ನು ನೀಡಲಿವೆ. ಇತರೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6E ಮತ್ತು ಬ್ಲೂಟೂತ್ 5.3 ಬೆಂಬಲಿಸಲಿವೆ. ಇದಲ್ಲದೆ ಬಾಕ್ಸ್‌ನಲ್ಲಿ 20W USB ಟೈಪ್-C ಪವರ್ ಅಡಾಪ್ಟರ್‌ನೊಂದಿಗೆ ಬರುತ್ತವೆ. ಇದರಲ್ಲಿ ನಾಲ್ಕು-ಸ್ಪೀಕರ್ ಸೆಟಪ್ ಮತ್ತು ಐದು ಮೈಕ್ರೊಫೋನ್‌ಗಳನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಪ್ಯಾಡ್‌ ಪ್ರೊ (2022) 11 ಇಂಚಿನ ಮಾದರಿಯ ಆಯ್ಕೆಯು ವೈ-ಫೈ ಮಾದರಿಗೆ 81,900ರೂ. ಬೆಲೆ ಹೊಂದಿಗೆ. ಅಲ್ಲದೆ ಇದರ ವೈ-ಫೈ + ಸೆಲ್ಯುಲಾರ್ ಮಾದರಿಯ ಆಯ್ಕೆಗೆ 96,900ರೂ.ಬೆಲೆ ನಿಗಧಿಪಡಿಸಲಾಗಿದೆ. ಇನ್ನು ಐಪ್ಯಾಡ್‌ ಪ್ರೊ (2022) 12.9 ಇಂಚಿನ ಮಾದರಿಯು ವೈ-ಫೈ ಮಾದರಿಗೆ 1,12,900ರೂ. ಬೆಲೆ ಪಡೆದಿದೆ. ಇನ್ನು ವೈ-ಫೈ + ಸೆಲ್ಯುಲಾರ್ ಮಾದರಿಗೆ 1,27,900ರೂ. ಬೆಲೆ ಪಡೆದುಕೊಂಡಿದೆ. ಇವುಗಳು ಸಿಲ್ವರ್ ಮತ್ತು ಸ್ಪೇಸ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಅಕ್ಟೋಬರ್ 26 ರಿಂದ ಮಾರಾಟಕ್ಕೆ ಬರಲಿದೆ. ಇಂದಿನಿಂದಲೇ ಪ್ರೀ ಆರ್ಡರ್‌ ಬುಕ್ಕಿಂಗ್‌ ಲಭ್ಯವಾಗಲಿದೆ.

Best Mobiles in India

English summary
iPad Pro (2022) With 5G Connectivity Launched in India: Price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X