ರಷ್ಯಾದ ಅಧ್ಯಕ್ಷರಿಗೆ ಚಿನ್ನದ ತಲೆಇರಿಸಿದ ಐಫೋನ್

Written By:

ಸಾಮಾನ್ಯವಾಗಿ ಎಲ್ಲರೂ ಐಫೋನ್ 6S ಅನ್ನು ಖರೀದಿ ಮಾಡಿದಾಗ ಎಲ್ಲರಿಗೂ ಒಂದೇ ರೀತಿಯ ಐಫೋನ್‌ 6S ದೊರೆಯಬಹುದು. ಆದರೆ ಐಫೋನ್‌ನಲ್ಲಿ ಗೋಲ್ಡ್‌ ಲೇಪನ ಇರುವುದನ್ನು ಎಲ್ಲಾದರೂ ನೋಡಿದ್ದೀರ ? ಖಂಡಿತ ಸಾಧ್ಯವಿಲ್ಲ. ಆದರೆ ರಷ್ಯಾದಲ್ಲಿ ಆಪಲ್‌ ಪ್ರಾಡಕ್ಟ್‌ಗಳನ್ನ ಕೊಂಡರೆ ನಿಮಗೆ ಅವುಗಳಲ್ಲಿ ಗೋಲ್ಡ್‌ ಲೇಪನ ಇರುತ್ತದೆ.

ಓದಿರಿ: ವೈರಿಗಳಿಗೆ ಸಿಂಹಸ್ವಪ್ನವಾಗಿರುವ ಜರ್ಮನ್ ಯುದ್ಧನೌಕೆ

ಹೌದು, ರಷ್ಯಾದಲ್ಲಿ ಆಪಲ್‌ನ ಯಾವುದೇ ಪ್ರಾಡಕ್ಟ್‌ ಕೊಂಡರೂ ಅದರಲ್ಲಿ ಗೋಲ್ಡ್‌ ಅಂಟಿಕೊಂಡಿರುತ್ತದೆ. ರಷ್ಯಾದವರು ತಮ್ಮ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲಿನ ಅಭಿಮಾನವನ್ನು ಹೇಳುವುದಿಲ್ಲ, ಆ ಅಭಿಮಾನವನ್ನು ಕೆಲವು ಕಾರ್ಯಗಳ ಮೂಲಕ ತೋರಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಐಫೋನ್‌ 6S ಹಿಂದೆ ಪುಟಿನ್ ರ ತಲೆಯನ್ನು ಗೋಲ್ಡ್‌ ಲೇಪನದಲ್ಲಿ ಅಂಟಿಸಿ ಹೊರತರಲಾಗಿದೆ. ಇದರ ವಿಶೇಷತೆ ಏನು ಎಂಬುದನ್ನು ತಿಳಿಯಲು ಈ ಲೇಖನ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಷ್ಯಾ ಜ್ಯುವೆಲರ್ ಕ್ಯಾವಿಯರ್

ರಷ್ಯಾ ಜ್ಯುವೆಲರ್ ಕ್ಯಾವಿಯರ್

ಇದು ರಷ್ಯಾ ಥೀಮ್‌ನಲ್ಲಿ ಆಪಲ್‌ ಪ್ರಾಡಕ್ಟ್‌ಗಳನ್ನು ಅದ್ಧೂರಿಯಾಗಿ ನಿರ್ಮಿತ ಮಾಡುವುದಕ್ಕೆ ಹೆಸರುವಾಸಿಯಾಗಿದೆ.

ಐಫೋನ್‌5S ಮತ್ತು ಆಪಲ್‌ ವಾಚ್‌

ಐಫೋನ್‌5S ಮತ್ತು ಆಪಲ್‌ ವಾಚ್‌

ಈಗಾಗಲೇ ರಷ್ಯಾ ಜ್ಯುವೆಲರ್ ಕ್ಯಾವಿಯರ್ ಐಫೋನ್‌5S ಮತ್ತು ಆಪಲ್‌ ವಾಚ್‌ಗಳಲ್ಲಿ ಪುಟಿನ್‌ರ ಗೋಲ್ಡೆನ್‌ ತಲೆಯನ್ನು ಲೇಪಿಸಿ ಪ್ರಾಡಕ್ಟ್‌ ಹೊರತಂದಿದೆ.

ಪುಟಿನ್‌ರ 63 ನೇ ಹುಟ್ಟುಹಬ್ಬ

ಪುಟಿನ್‌ರ 63 ನೇ ಹುಟ್ಟುಹಬ್ಬ

ಕಂಪನಿಯು 'Caviar Ti Gold Supremo Putin Anniversario Edizione 63',ಎಂಬ ಹೆಸರಿನಲ್ಲಿ ಐಫೋನ್‌ 6S ಸ್ಮಾರ್ಟ್‌ಫೋನ್‌ ಅನ್ನು ಪುಟಿನ್‌ರ 63ನೇ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಬಿಡುಗಡೆ ಮಾಡಿದೆ.

 63 ಸ್ಮಾರ್ಟ್‌ಫೋನ್‌ ಮಾರಾಟ

63 ಸ್ಮಾರ್ಟ್‌ಫೋನ್‌ ಮಾರಾಟ

ಪುಟಿನ್‌ 63 ನೇ ಹುಟ್ಟುಹಬ್ಬಕ್ಕೆ ಸೂಕ್ತವಾಗಿ ಬುಧವಾರ 63 ಐಫೋನ್‌ 6S ಮಾರಾಟವಾಗಿವೆ.

ರಷ್ಯಾ ಲಾಂಛನ ಮತ್ತು ರಾಷ್ಟ್ರಗೀತೆ

ರಷ್ಯಾ ಲಾಂಛನ ಮತ್ತು ರಾಷ್ಟ್ರಗೀತೆ

ಐಫೋನ್‌ 6S ಹಿಂಭಾಗದಲ್ಲಿ ಟೈಟಾನಿಯಂ ಮತ್ತು ಗೋಲ್ಡ್‌ ನಿಂದ ಪುಟಿನ್‌ರ ಮಾಹಿತಿ, ರಷ್ಯಾ ಲಾಂಛನ ಮತ್ತು ರಾಷ್ಟ್ರಗೀತೆಯ ಒಂದು ಪಂಕ್ತಿಯನ್ನು ನೀಡಲಾಗಿದೆ.

64GB ಮತ್ತು 128GB ವರ್ಸನ್

64GB ಮತ್ತು 128GB ವರ್ಸನ್

ಈ ವಿಶೇಷತೆ ಇರುವ ಐಫೋನ್‌ 6S ಸಾಮಾನ್ಯ ಐಫೋನ್‌ 6S ನಂತೆಯೇ ಇದ್ದು, 64GB ಮತ್ತು 128GB ಯ ಎರಡು ವರ್ಸನ್‌ಗಳು ಮಾತ್ರ ಲಭ್ಯವಿವೆ ಎನ್ನಲಾಗಿದೆ.

 ಬೆಲೆ

ಬೆಲೆ

64GB ಯ ಐಫೋನ್‌ 6S ಬೆಲೆಯು $ 3193 ಆಗಿದ್ದು, 128GB ಐಫೋನ್‌ 6S ಬೆಲೆ $ 3356.

ವುಡೆನ್‌ ಕೇಸ್‌

ವುಡೆನ್‌ ಕೇಸ್‌

ಗೋಲ್ಡ್‌ ನಲ್ಲಿ ಲೇಪನ ಮಾಡಿರುವ ಐಫೋನ್‌ 6S ಖರೀದಿದಾರರು ಅದನ್ನು ಕೊಂಡ್ಯೊಯಲು ಐಷಾರಾಮಿ ವುಡೆನ್ ಕೇಸ್‌ ಅನ್ನು ಬೆಲೆ $ 306 ಕೊಟ್ಟು ತೆಗೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Sure, you could buy a regular iPhone 6S like everyone else. But that really doesn't say anything about your unwavering love for Russia President Vladimir Putin, does it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot