'ಐಫೋನ್ 7' ವಾಟರ್‌ ಪ್ರೂಫ್ ಡಿವೈಸ್‌: ವಾರಂಟಿಗೆ 'ದ್ರವ ಹಾನಿ' ಅಪ್ಲೇ ಆಗುವುದಿಲ್ಲ

By Suneel
|

ಟೆಕ್‌ ಕಂಪನಿಗಳು ಯಾವುದೇ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಡಿವೈಸ್‌ಗಳನ್ನು ಲಾಂಚ್‌ ಮಾಡಿದರು ಗ್ರಾಹಕರನ್ನು ಆಕರ್ಷಿಸಲು ಹೇಳುವುದು ' ವಾಟರ್ ಪ್ರೂಫ್‌' (ನೀರೂ ನಿರೋಧಕ) ಡಿವೈಸ್‌ ಎಂದು. ಅಂದಹಾಗೆ ಈ ಸಾಲಿಗೆ ಈಗ ಆಪಲ್‌ ಬಿಡುಗಡೆ ಮಾಡಿರುವ ಬಹು ನಿರೀಕ್ಷಿತ 'ಐಫೋನ್ 7 ಮತ್ತು ಐಫೋನ್ 7 ಪ್ಲಸ್‌' ಡಿವೈಸ್‌ಗಳು IP67 ಪ್ರಮಾಣಿತ ಮತ್ತು ನೀರು ನಿರೋಧಕ ಡಿವೈಸ್‌ಗಳಾಗಿದ್ದು, ವಾರಂಟಿಯನ್ನು ಈ ಡಿವೈಸ್‌ಗಳು 'ವಾಟರ್‌ ಪ್ರೂಫ್' ವಿಷಯದಲ್ಲಿ ಹೊಂದಿವೆ ಎಂದು ಆಪಲ್‌ ಹೇಳಿದೆ.

ಆಪಲ್‌ ಮಾತ್ರವಲ್ಲ ಆಂಡ್ರಾಯ್ಡ್‌ಸ ಹಲವು ಸ್ಮಾರ್ಟ್‌ಫೋನ್‌ಗಳನ್ನು ಆಕರ್ಷಿಸಲು ಟೆಕ್‌ ಕಂಪನಿಗಳು ವಾಟರ್‌ ಪ್ರೂಫ್‌ ಡಿವೈಸ್‌ ಎಂದು ಹೇಳುವುದು ಸಾಮಾನ್ಯವಾಗಿದೆ. ಹೀಗೆ ಹೇಳಿದ ಡಿವೈಸ್‌ಗಳನ್ನು ಖರೀದಿಸುವವರು ಇಲ್ಲೇ ಎಡವುದು ಹೆಚ್ಚು. ಕಂಪನಿಗಳು ವಾಟರ್‌ ಪ್ರೂಫ್ (ನೀರು ನಿರೋಧಕ) ಡಿವೈಸ್‌ ಎಂದು ಹೇಳುವುದರ ಜೊತೆಗೆ, ವಾರಂಟಿಯಲ್ಲಿ 'ದ್ರವ ಹಾನಿ (Liguicd damage)' ಒಳಗೊಂಡಿರುವುದಿಲ್ಲ ಎಂದು ಸಹ ಹೇಳಿರುತ್ತಾರೆ. ಈಗ 'ಐಫೋನ್ 7 ಮತ್ತು ಐಫೋನ್ 7 ಪ್ಲಸ್‌' ವಾರಂಟಿಯಲ್ಲಿ ನೀರು ನಿರೋಧಕ (ವಾಟರ್‌ ಪ್ರೂಫ್) ವಾರಂಟಿಯನ್ನು ಒಳಗೊಂಡಿದೆ ಎಂದು ಹೇಳುವುದರ ಜೊತೆಗೆ ಆಪಲ್ ವಾರಂಟಿಯಲ್ಲಿ 'ದ್ರವ ಹಾನಿ (Liguid Damage' ಅಂಶ ಒಳಗೊಂಡಿರುವುದಿಲ್ಲ ಎಂದು ಸಹ ಹೇಳಿದೆ. ಈ ರೀತಿಯಲ್ಲಿ ಇತರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸಹ ವಾರಂಟಿಯನ್ನು ನೀಡುತ್ತಿವೆ.

ಅಂದಹಾಗೆ ವಾಟರ್‌ ಪ್ರೂಫ್‌ ವಾರಂಟಿ ಐಫೋನ್‌ ಮತ್ತು ಸ್ಮಾರ್ಟ್‌ಫೋನ್‌ ಖರೀದಿಸುವವರು ''ದ್ರವ ಹಾನಿ (Liguid Damage' ವಾರಂಟಿಯಲ್ಲಿ ಒಳಗೊಂಡಿರುವುದಿಲ್ಲ ಎಂದರೆ ಏನು? ಎಂಬ ವಿಶೇಷ ಮಾಹಿತಿ ತಿಳಿಯಲೇಬೇಕಿದೆ. ಕೆಳಗಿನ ಸ್ಲೈಡರ್‌ ಓದಿರಿ.

ಐಫೋನ್ 7 ಫೂಟ್‌ ನೋಟ್‌

ಐಫೋನ್ 7 ಫೂಟ್‌ ನೋಟ್‌

ಐಫೋನ್ 7 ಪ್ರಾಡಕ್ಟ್‌ ಪೇಜ್‌ನಲ್ಲಿ ಸಣ್ಣ ಅಕ್ಷರಗಳಲ್ಲಿ ಆಪಲ್ 'ಸ್ಪ್ಲಾಶ್, ನೀರು, ಮತ್ತು ಧೂಳು ನಿರೋಧಕ ವಾರಂಟಿ ನಿಯಮಗಳು ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ಗೆ ಶಾಶ್ವತವಾಗಿರುವುದಿಲ್ಲ. ಫೋನ್‌ ತೇವವಾಗಿದ್ದಾಗ ಚಾರ್ಜ್‌ ಮಾಡಬೇಡಿ. ದ್ರವ ಹಾನಿ(Liguid Damage) ವಾರಂಟಿಯಲ್ಲಿ ಒಳಗೊಂಡಿರುವುದಿಲ್ಲ' ಎಂದು ಸೂಚನೆ ನೀಡಿದೆ.

ದ್ರವ ಹಾನಿ (Liguid Damage) ಎಂದರೇನು?

ದ್ರವ ಹಾನಿ (Liguid Damage) ಎಂದರೇನು?

ವಾಟರ್‌ ಪ್ರೂಫ್ (ನೀರು ನಿರೋಧಕ) ವಾರಂಟಿಯನ್ನು ಹೊಂದಿರುವ ಐಫೋನ್ ಮತ್ತು ಸ್ಮಾರ್ಟ್‌ಫೋನ್‌ಗಳು 'ವಾಟರ್‌ ಪ್ರೂಫ್' ವಾರಂಟಿ ಹೇಳಿಕೆ ಪ್ರಕಾರ ನೀರನ್ನು ಡಿವೈಸ್‌ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗಿರುತ್ತದೆ. ಆದರೆ ವಾರಂಟಿಯಲ್ಲಿ ದ್ರವ ಹಾನಿ (Liguid Damage) ಒಳಗೊಂಡಿರುವುದಿಲ್ಲ ಎಂದರೆ ಡಿವೈಸ್‌ ಒಳಗೆ ನೀರು ಸೇರಿದಲ್ಲಿ ವಾರಂಟಿಗೆ ಈ ಸಮಸ್ಯೆಗೆ ಅಪ್ಲೇ ಆಗುವುದಿಲ್ಲ ಎಂದಾಗಿದೆ.

 ಐಫೋನ್ 7 ಮತ್ತು ಐಫೋನ್ 7 ಪ್ಲಸ್‌

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌

ಆಪಲ್‌ ಕಂಪನಿ 'ಐಫೋನ್ 7 ಮತ್ತು ಐಫೋನ್ 7 ಪ್ಲಸ್‌' ಎರಡು ಡಿವೈಸ್‌ಗಳು 'ಸ್ಪ್ಲಾಶ್‌, ನೀರು, ಧೂಳು ನಿರೋಧಕವಾಗಿವೆ. ಡಿವೈಸ್‌ಗಳನ್ನು ನಿಯಂತ್ರಿತ ಲ್ಯಾಬ್‌ನಲ್ಲಿ IP67 ರೇಟಿಂಗ್‌ನಲ್ಲಿ ಪರೀಕ್ಷಿಸಲಾಗಿದೆ. ಆದರೆ ನೀರು ಹಾನಿ ಅಂಶ ವಾರಂಟಿಯಲ್ಲಿ ಒಳಗೊಳ್ಳುವುದಿಲ್ಲ ಎಂದು ಹೇಳಿದೆ. ಫೋನ್‌ ನೀರು ನಿರೋಧಕ. ಆದರೆ ನೀರು ಐಫೋನ್ ಒಳಗೆ ಹೋದಲ್ಲಿ ವಾರಂಟಿ ಅಪ್ಲೇ ಆಗುವುದಿಲ್ಲ ಎಂದಾಗಿದೆ.

ನೀರು ನಿರೋಧಕ

ನೀರು ನಿರೋಧಕ

ನೀರು ನಿರೋಧಕ ಎಂದರೆ ಫೋನ್‌ ಮೇಲೆ ನೀರು ಬಿದ್ದಲ್ಲಿ ನೀರನ್ನು ಡಿವೈಸ್‌ ತೆಗೆದುಕೊಳ್ಳುವುದಿಲ್ಲ ಎಂದಾಗಿದೆ. ಆದರೆ ಆಕಸ್ಮಿಕವಾಗಿ ಡಿವೈಸ್‌ ನೀರಲ್ಲಿ ಬಿದ್ದು, ಹೆಚ್ಚಿನ ಸಮಯ ನೀರಲ್ಲೇ ಇದ್ದು, ಡಿವೈಸ್‌ ಒಳಗೆ ನೀರು ಹೋದಲ್ಲಿ ದ್ರವ ಹಾನಿ ವಾರಂಟಿಗೆ ಅಪ್ಲೇ ಆಗುವುದಿಲ್ಲ. ಆಪಲ್‌ ರೀತಿಯಲ್ಲೇ ಸೋನಿ ಇದೇ ವರ್ಷ ತನ್ನ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ವಾರಂಟಿ ಕುರಿತಂತೆ ಹೇಳಿತ್ತು.

ಬಳಕೆದಾರರು ಖಚಿತಪಡಿಸಿಕೊಳ್ಳಿ

ಬಳಕೆದಾರರು ಖಚಿತಪಡಿಸಿಕೊಳ್ಳಿ

ವಾಟರ್‌ ಪ್ರೂಫ್ ವಾರಂಟಿ ಇರುವ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಖರೀದಿಮಾಡುವಾಗ ಬಳಕೆದಾರರು ಹೆಚ್ಚಿನ ಖಚಿತ ಮಾಹಿತಿಯನ್ನು ವಾಟರ್‌ ಪ್ರೂಫ್‌ ವಾರಂಟಿ ಬಗ್ಗೆ ತಿಳಿದು ಖರೀದಿಸಬೇಕಾಗಿದೆ.

Best Mobiles in India

Read more about:
English summary
iPhone 7 Warranty Doesn't Cover Liquid Damage Despite Water Resistance. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X