ಕ್ರಿಸ್ಮಸ್ ಗಿಫ್ಟ್- ಯುಎಸ್ ನಲ್ಲಿ ಐಫೋನ್ X ಗಿಂತ ಸ್ಯಾಮ್ಸಂಗ್ ಗ್ಯಾಲಕ್ಸಿ ಸ8 ಗೇ ಡಿಮಾಂಡ್ ಹೆಚ್ಚು!

By Tejaswini P G
|

ಇನ್ನೇನು ಕ್ರಿಸ್ಮಸ್ ಹಬ್ಬ ಶೀಘ್ರದಲ್ಲೇ ಬರಲಿದೆ. ಯುಎಸ್ ನಲ್ಲಂತೂ ಜನರು ತಮ್ಮ ಆತ್ಮೀಯರಿಗೆ ಹಬ್ಬದ ಉಡುಗೊರೆಗಳನ್ನು ಖರೀದಿಸಲು ಆರಂಭಿಸಿದ್ದಾರೆ.ಯುಎಸ್ ನಲ್ಲಿ ಆಪಲ್ ನ ಜನಪ್ರಿಯತೆಯನ್ನು ಗಮನಿಸಿದರೆ ಐಫೋನ್ಗಳು ಹದಿಹರೆಯದವರಿಗಾಗಲಿ ಅಥವಾ ವಯಸ್ಕರಿಗಾಗಲಿ ಉತ್ತಮ ಗಿಫ್ಟ್ ಆಯ್ಕೆ ಎಂದಿನಿಸುವುದು ತಪ್ಪೇನಲ್ಲ.

ಫೋನ್ X ಗಿಂತ ಸ್ಯಾಮ್ಸಂಗ್ ಗ್ಯಾಲಕ್ಸಿ ಸ8 ಗೇ ಡಿಮಾಂಡ್ ಹೆಚ್ಚು!!..USನಲ್ಲಿ!!

ಆದರೆ ಈ ವರ್ಷ ಈ ಟ್ರೆಂಡ್ ಬದಲಾವಣೆ ಕಾಣುತ್ತಿದೆ. ಆಪಲ್ ನ ದುರಾದೃಷ್ಟಕ್ಕೆ ಯುಸ್ ನ ಜನತೆ ನೂತನ ಐಫೋನ್ X ಬದಲಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ S8 ನತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.ಐಫೋನ್ X ನ ದುಬಾರಿ ಬೆಲೆಯೇ ಇದಕ್ಕೆ ಕಾರಣ ಎಂದು ನೀವು ತಿಳಿದಿದ್ದರೆ ಅದು ಖಂಡಿತ ತಪ್ಪು. ಜನಪ್ರಿಯ ಫೀಚರ್ಗಳಾದ ಹೆಡ್ಫೋನ್ ಜ್ಯಾಕ್ ಮತ್ತು ಫಿಂಗರ್ಪ್ರಿಂಟ್ ಸ್ಕ್ಯಾನರ್ಗಳನ್ನು ಕೈಬಿಟ್ಟಿರುವುದೇ ಇದಕ್ಕೆ ಮೂಲ ಕಾರಣವಂತೆ!

ಯುಎಸ್ ನ ಮಾರ್ಕೆಟ್ ರೀಸರ್ಚ್ ಸಂಸ್ಥೆಯಾದ ಪ್ರೊಪೆಲ್ಲರ್ ಇನಸೈಟ್ಸ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಸಮೀಕ್ಷೆಗೆ ಪ್ರತಿಕ್ರಯಿಸಿದ ಯುಎಸ್ ಜನತೆಯ ಪೈಕಿ ಶೇಕಡಾ 38% ನಷ್ಟು ಜನರು ಸ್ಯಾಮ್ಸಂಗ್ ಗ್ಯಾಲಕ್ಸಿ S8 ಅನ್ನೇ ಕ್ರಿಸ್ಮಸ್ ಹಬ್ಬದ ಉಡುಗೊರೆಯಾಗಿ ಪಡೆಯಲು ಬಯಸಿದ್ದಾರೆ. ಆದರೆ ಶೇಕಡಾ 20% ರಷ್ಟು ಮಂದಿ ಮಾತ್ರ ಐಫೋನ್ X ಅನ್ನು ಕ್ರಿಸ್ಮಸ್ ಗಿಫ್ಟ್ ಆಗಿ ಪಡೆಯುವ ಆಸೆ ತೋರಿದ್ದಾರೆ.ಇನ್ನು ಶೇಕಡಾ 22% ನಷ್ಟು ವಯಸ್ಕರು ಐಫೋನ್ 8 ಅನ್ನು ಬಯಸುವ ಮೂಲಕ, ಪಟ್ಟಿಯಲ್ಲಿ ಐಫೋನ್ X ಗಿಂತ ಸ್ವಲ್ಪ ಮೇಲಿನ ಸ್ಥಾನ ಗಿಟ್ಟಿಸಿಕೊಂಡಿದೆ.

ಆದರೆ ಹದಿಹರೆಯದವರಿಗೆ ಈಗಲೂ ಆಪಲ್ ನ ಐಫೋನ್ X ಪ್ರಿಯವಾಗಿದ್ದು ಆಪಲ್ ಗೆ ಇದು ಸಮಾಧಾನ ತರುವ ಸಂಗತಿಯಾಗಿದೆ. ಈ ಸಮೀಕ್ಷೆಗೆ ಪ್ರತಿಕ್ರಯಿಸಿದ ಶೇಕಡಾ 35% ರಷ್ಟು ಹದಿಹರೆಯದವರು ಕ್ರಿಸ್ಮಸ್ ಉಡುಗೊರೆಯಾಗಿ ಐಫೋನ್ X ಅನ್ನೇ ಬಯಸಿದ್ದಾರೆ. ಇನ್ನು ಕೆಲವು ಹದಿಹರೆಯದವರು ಐಫೋನ್ 8 ರತ್ತ ತಮ್ಮ ಒಲವು ತೋರಿದ್ದು ಒಟ್ಟು ಶೇಕಡಾ 70% ರಷ್ಟು ಹದಿಹರೆಯದವರು ಆಪಲ್ ನತ್ತ ವಾಲಿದ್ದಾರೆ.

2G,3G ಗ್ರಾಹಕರಿಗೆ 199 ರೂ.ಗೆ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ!.ಈಗ ವೊಡಾಫೋನ್ ಆಟ!!2G,3G ಗ್ರಾಹಕರಿಗೆ 199 ರೂ.ಗೆ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ!.ಈಗ ವೊಡಾಫೋನ್ ಆಟ!!

ಹಾಗಾಗಿ ಆಪಲ್ ಹದಿಹರೆಯದವರ ಪೈಕಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳುವುದರಲ್ಲಿ ಸಫಲವಾಗಿದೆ ಎಂದೇ ಹೇಳಬಹುದು. ಇದಕ್ಕೆ ಹೋಲಿಸಿದರೆ ಕೇವಲ ಶೇಕಡಾ 28%ರಷ್ಟು ವಯಸ್ಕರು ಮಾತ್ರ ಸ್ಯಾಮ್ಸಂಗ್ ನ ಫ್ಲ್ಯಾಗ್ಶಿಪ್ ಮೊಬೈಲ್ ಆದ ಸ್ಯಾಮ್ಸಂಗ್ ಗ್ಯಾಲಕ್ಸಿ S8 ಬಯಸಿದ್ದಾರೆ.

ಈ ವಿಷಯವನ್ನು ಇನ್ನೊಂದು ದಿಕ್ಕಿನಲ್ಲಿ ನೋಡುವುದಾದರೆ ಐಫೋನ್ X ನ ತಯಾರಿಯ ವೆಚ್ಚ $370 ( ಅಂದಾಜು ರೂ 24000) ಪ್ರತಿ ಫೋನ್ ಆಗಿದೆ. ಅಂದರೆ, ಆಪಲ್ ತನ್ನ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆ ಮಾಡಿರುವ ಐಫೋನ್ X ಅನ್ನು $999(ಅಂದಾಜು ರೂ 65000) ಕ್ಕೆ ಮಾರಾಟ ಮಾಡುವ ಮೂಲಕ ಉತ್ತಮ ಲಾಭವನ್ನೇ ಪಡೆಯುತ್ತಿದೆ. ಇನ್ನು ಕೆಲವು ಮಾರುಕಟ್ಟೆಗಳಲ್ಲಿ ಐಫೋನ್ X ನ ಬೆಲೆ ಮತ್ತಷ್ಟು ಹೆಚ್ಚಿದೆ.

ಸ್ಟ್ಯಾಟಿಸ್ಟಾ ಪ್ರಸ್ತುತ ಪಡಿಸಿರುವ ಚಾರ್ಟ್ ಒಂದರ ಅನುಸಾರ ಐಫೋನ್ 4S ನಿಂದ ಹಿಡಿದು ಇಂದಿನವರೆಗೆ ಐಫೋನ್ ನ ತಯಾರಿಯ ವೆಚ್ಚದಲ್ಲಿ ಬಹಳಷ್ಟು ಹೆಚ್ಚಳ ಕಂಡುಬಂದಿದೆ. ಈಗ ಐಫೋನ್ ತಯಾರಿಸಲು ತಗಲುವ ವೆಚ್ಚ 10 ಆವೃತ್ತಿಗಳ ಹಿಂದಿದ್ದ ವೆಚ್ಚಕ್ಕಿಂತ ಎರಡರಷ್ಟು ಹೆಚ್ಚಿದೆ. ಹಾಗೆಯೇ ಬೇಸ್ ಆವೃತ್ತಿಗಳನ್ನು ಪರಿಗಣಿಸಿದರೆ ಅದರ ಬೆಲೆಯೂ 5 ಪಟ್ಟು ಹೆಚ್ಚಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

Best Mobiles in India

English summary
The teenagers though, opted for the Apple iPhone X as a Christmas gift.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X