Subscribe to Gizbot

ಐಫೋನ್ X ಇಂಪಿರಿಯರ್ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ..!

Written By: Lekhaka

ದುಬಾರಿ ಬೆಲೆಯ ಐಫೋನ್ X ಭಾರೀ ಸದ್ದು ಮಾಡಿತ್ತು. ಇದಾದ ನಂತರದಲ್ಲಿ ಐಫೋನ್ X ಗಿಂತಲೂ ದುಬಾರಿಯಾದ ಐಫೋನ್ X ಕೇಸ್ ಒಂದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಿದ್ದೇವು. ಸದ್ಯ ಇದೇ ಮಾದರಿಯಲ್ಲಿ ದುಬಾರಿ ವಸ್ತುಗಳ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ಕಾವಿರ್ ಕಂಪನಿಯು ಸ್ಪೆಷಲ್ ಎಡಿಷನ್ ಐಫೋನ್ X ಅನ್ನು ನಿರ್ಮಿಸಿದೆ.

ಐಫೋನ್ X ಇಂಪಿರಿಯರ್ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ..!

ಐಫೋನ್ X ಕ್ಲೌನ್ ಇದಾಗಿದ್ದು, ಐಫೋನ್ X ಹೊರ ಕವಚವನ್ನು ಅಮೂಲ್ಯ ವಸ್ತುಗಳಿಂದ ನಿರ್ಮಿಸಲಾಗಿದೆ. 344 ಡೆಮೆಂಡ್ ಗನ್ನು ಐಫೋನ್ X ನಲ್ಲಿ ಬಳಸಿಕೊಳ್ಳಲಾಗಿದೆ. ಜೊತೆಗೆ ಅಮೂಲ್ಯವಾದ 300 ರತ್ನಗಳನ್ನು ಈ ಫೋನಿನ ಹೊರ ಕವಚದಲ್ಲಿ ಅಳವಡಿಸಲಾಗಿದೆ. ಅಲ್ಲದೇ ಚಿನ್ನದ ಹೊದಿಕೆಯೂ ಇದಕ್ಕಿದೆ.

ಈ ಕ್ಲೌನ್ ಐಫೋನ್ X ಬೆಲೆ ರೂ.26,28,400 ಆಗಲಿದ್ದು, ಕೇವಲ ಸ್ಥಿತಿವಂತರು ಮಾತ್ರವೇ ಖರೀದಿಸಬಹುದಾಗಿದ್ದು, ಅಲ್ಲದೇ ಇದು ಕೆಲವೇ ಕೆಲವೇ ಸಂಖ್ಯೆಯಲ್ಲಿ ಮಾರಾಟವಾಗಲಿದೆ. ಈ ಫೋನ್ ಕೇಲವ ಹೊರಭಾಗದಲ್ಲಿ ಮಾತ್ರವೇ ಬದಲಾವಣೆಯನ್ನು ಕಾಣಬಹುದಾಗಿದ್ದು, ಮಿಕ್ಕಿದೆಲ್ಲವೂ ಐಫೋನ್ X ವಿಶೇಷತೆಗಳೇ ಆಗಿದೆ.

ಬ್ಲಾಕ್ ಫ್ರೈಡೇ ಡೀಲ್‌ನಲ್ಲಿ ಕಡಿಮೆ ಬೆಲೆಗೆ ಅಮೆರಿಕಾದ ಶಾಪಿಂಗ್ ತಾಣದಲ್ಲಿ ಖರೀದಿಸಿ ತರಿಸಿಕೊಳ್ಳುವುದು ಹೇಗೆ?

ಐಫೋನ್ X ಇಂಪಿರಿಯರ್ ಕ್ರವನ್ ಎಂದು ಈ ಫೋನ್ ಗೆ ಹೆಸರಿಡಲಾಗಿದ್ದು, ನೋಡಲು ರಾಯಲ್ ಲುಕ್ ಹೊಂದಿದೆ ಎನ್ನಲಾಗಿದೆ. ಈಗಾಗಲೇ ಹಲವಾರು ದುಬಾರಿ ಫೋನ್ ಗಳನ್ನು ವಿನ್ಯಾಸ ಮಾಡಿರುವ ಕಾವಿರ್ ಸಂಸ್ಥೆಗೆ ಇದೊಂದು ಹೊಸ ಸೇರ್ಪಡೆಯಾಗಿದೆ.

ಈಗಾಗಲೇ ದುಬಾರಿ ಫೋನ್ ಹಣೆಪಟ್ಟಿಯನ್ನು ಪಡೆದುಕೊಂಡಿದ್ದ ಐಫೋನ್ X ಗಿಂತಲೂ ಊಹಿಸಲಾಗದಷ್ಟು ದುಬಾರಿಗೆ ಐಫೋನ್ X ಕ್ಲೌನ್ ಮಾರಾಟವಾಗುತ್ತಿದೆ. ನಿಮಗೂ ಬೇಕಾ ಈಪೋನ್..?

Read more about:
English summary
The iPhone X Imperial Crown's rear panel has a golden coat with more than 300 engraved precious stones in its chassis.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot