ಐಫೋನ್‌ XR ಮೇಲೆ ಭಾರೀ ಡಿಸ್ಕೌಂಟ್‌..! ಹೇಗೆ ಪಡೆಯುವುದು..?

By Gizbot Bureau
|

ತನ್ನ ವಿಶ್ವಾಸಾರ್ಹ ಉತ್ಪನ್ನಗಳಿಂದಲೇ ಜಗತ್ತಿನ ಮನೆ ಮಾತಾಗಿರುವ ಆಪಲ್‌ ಕಂಪನಿ ಗ್ರಾಹಕರಿಗೆ ಮತ್ತೊಂದು ಕೊಡುಗೆಯನ್ನು ನೀಡಿದೆ. ಹೌದು, ಇತ್ತೀಚಿಗಷ್ಟೇ ಆಪಲ್‌ ಕಂಪನಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ತನ್ನ ಹೊಸ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ ಐಫೋನ್‌ XRನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಈ ಐಫೋನ್‌ನ್ನು ಆಪಲ್‌ ಕಂಪನಿ ವಿಶೇಷ ರಿಯಾಯಿತಿಯಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ.

ಐಫೋನ್‌ XR ಮೇಲೆ ಭಾರೀ ಡಿಸ್ಕೌಂಟ್‌..! ಹೇಗೆ ಪಡೆಯುವುದು..?

ಐಫೋನ್‌ XR ಮೇಲೆ ಈ ಏಪ್ರಿಲ್‌ನಲ್ಲಿ ಆಪಲ್‌ ಪ್ರಚಾರದ ಆಫರ್‌ನ್ನು ಘೋಷಿಸಿದೆ. ಏಪ್ರಿಲ್‌ನಲ್ಲಿಯೇ ಈ ಆಫರ್‌ ಘೋಷಣೆಯಾಗಿದ್ದರೂ ಜನಕ್ಕೆ ಮಾಹಿತಿಯಿಲ್ಲ. ಈ ಆಫರ್‌ ಮೂಲಕ ನೀವು ಐಫೋನ್‌ XR ಖರೀದಿಸಿದರೆ ಭಾರೀ ರಿಯಾಯಿತಿ ದೊರೆಯುವುದಂತೂ ಖಂಡಿತ. ಆಗಿದ್ರೆ, ಏನದು ಆಫರ್‌..? ಹೇಗೆ ಪಡೆಯುವುದು..? ಎಂಬುದನ್ನು ಮುಂದೆ ಓದಿ..

ಬರೋಬ್ಬರಿ 17,001 ರೂ. ರಿಯಾಯಿತಿ

ಬರೋಬ್ಬರಿ 17,001 ರೂ. ರಿಯಾಯಿತಿ

ಹೌದು, ಐಫೋನ್‌ XR ಮೇಲೆ ಕುಪರ್ಟಿನೋ ಮೂಲದ ಕಂಪನಿ 17,001 ರೂ. ಕಡಿತಗೊಳಿಸಿ, ಗ್ರಾಹಕರಿಗೆ ಭಾರೀ ರಿಯಾಯಿತಿಯನ್ನು ನೀಡಿದೆ. ನವೆಂಬರ್‌ 2018ರಲ್ಲಿ ಐಫೋನ್‌ XR ಬಿಡುಗಡೆಯಾದಾಗ ಆರಂಭಿಕ ಬೆಲೆ 76,900 ರೂ. ಆಗಿತ್ತು. ಬೆಲೆ ಕಡಿತದ ನಂತರ ಐಫೋನ್‌ XR (64GB) 59,900 ರೂ.ಗೆ ಮತ್ತು 128GB ಆವೃತ್ತಿ 64,900 ರೂ.ಗೆ ಮಾರಾಟವಾಗುತ್ತಿದ್ದು, ಇನ್ನಷ್ಟು ಅಗ್ಗದ ದರದಲ್ಲಿ ಫ್ಲಾಗ್‌ಶಿಪ್‌ ಐಫೋನ್‌ ಗ್ರಾಹಕರಿಗೆ ದೊರೆಯುತ್ತಿದೆ.

ಹೆಚ್ಚುವರಿ ಶೇ.10 ಡಿಸ್ಕೌಂಟ್‌

ಹೆಚ್ಚುವರಿ ಶೇ.10 ಡಿಸ್ಕೌಂಟ್‌

17,001 ರೂ. ಕಡಿತವಷ್ಟೇ ಅಲ್ಲದೇ ಐಫೋನ್‌ XR ಮೇಲೆ ಹೆಚ್‌ಡಿಎಫ್‌ಸಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಹೆಚ್ಚುವರಿ ಡಿಸ್ಕೌಂಟ್‌ ನೀಡುತ್ತಿದೆ. ಹೆಚ್‌ಡಿಎಫ್‌ಸಿ ಹಾಗೂ ಎಸ್‌ಬಿಐ ಕ್ರೆಡಿಟ್‌ ಮತ್ತು ಡೆಬಿಟ್ ಕಾರ್ಡ್‌ ಮೂಲಕ ಐಫೋನ್‌ XR ಖರೀದಿಸಿದರೆ ಹೆಚ್ಚುವರಿಯಾಗಿ ಶೇ.10ರಷ್ಟು ರಿಯಾಯಿತಿ ಸಿಗುತ್ತದೆ. ಈ ಆಫರ್‌ ಆಫ್‌ಲೈನ್‌ನಲ್ಲಿಯೂ ಲಭ್ಯವಿದ್ದು, ಆಯ್ದ ಆಪಲ್‌ ಮಾರಾಟ ಮಳಿಗೆಯಲ್ಲಿ ಹೆಚ್ಚುವರಿ ಶೇ.10 ಡಿಸ್ಕೌಂಟ್‌ ದೊರೆಯುತ್ತದೆ.

ನೋ-ಕಾಸ್ಟ್‌ ಇಎಂಐ

ನೋ-ಕಾಸ್ಟ್‌ ಇಎಂಐ

ಐಫೋನ್‌ XR ಖರೀದಿಸಲು ನಿಮಗೆ ನೋ-ಕಾಸ್ಟ್‌ ಇಎಂಐ ಸೌಲಭ್ಯ ಕೂಡ ಲಭ್ಯವಿದೆ. ಬಜಾಜ್‌ ಫೈನಾನ್ಸ್ ಲಿಮಿಟೆಡ್, ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕನ್ಸ್ಯೂಮರ್‌ ಲೋನ್ಸ್‌ ಮತ್ತು ಐಡಿಎಫ್‌ಸಿ ಫರ್ಸ್ಟ್‌ ಬ್ಯಾಂಕ್‌ಗಳಿಂದ ಇಎಂಐ ಸೌಲಭ್ಯ ದೊರೆಯುತ್ತಿದೆ. ಇನ್ನು, ಈ ಆಫರ್‌ಗೆ ಯಾವುದೇ ಸಮಯಮಿತಿಯನ್ನು ಆಪಲ್‌ ಕಂಪನಿ ವಿಧಿಸಿಲ್ಲ. ಸ್ಟಾಕ್‌ ಮುಗಿಯುವರೆಗೂ ಮಾತ್ರ ಈ ಆಫರ್‌ ಲಭ್ಯವಿರುತ್ತದೆ.

ಎಕ್ಸ್‌ಚೆಂಜ್‌ ಆಫರ್‌

ಎಕ್ಸ್‌ಚೆಂಜ್‌ ಆಫರ್‌

ಐಫೋನ್‌ XR ಖರೀದಿ ಮೇಲೆ ಎಕ್ಸ್‌ಚೆಂಜ್‌ ಆಫರ್‌ ಕೂಡ ನಿಮಗೆ ದೊರೆಯುತ್ತಿದ್ದು, ಐಫೋನ್‌ 7ನ್ನು ಎಕ್ಸ್‌ಚೆಂಜ್‌ ಮಾಡಿಕೊಂಡರೆ 20,000 ರೂ. ವಿನಿಮಯ ರಿಯಾಯಿತಿ ದೊರೆಯುತ್ತದೆ. ಇನ್ನು, ಐಫೋನ್‌ 6 ಮೇಲೆ 8,000 ರೂ. ಎಕ್ಸ್‌ಚೆಂಜ್‌ ಡಿಸ್ಕೌಂಟ್ ಸಿಗುತ್ತದೆ. ಆಸಕ್ತಿದಾಯಕ ವಿಷಯವೇನೆಂದರೆ, ಇತ್ತೀಚಿನ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಐಫೋನ್‌ XR 50,000 ರೂ. ವಿಶೇಷ ಬೆಲೆಯಲ್ಲಿ ಮಾರಾಟವಾಗಿದ್ದು, ಕೆಲವೇ ಗಂಟೆಗಳಲ್ಲಿ ಐಫೋನ್‌ಗಳೆಲ್ಲಾ ಖಾಲಿಯಾಗಿವೆ.

ಐಫೋನ್‌ XR ಫೀಚರ್ಸ್‌

ಐಫೋನ್‌ XR ಫೀಚರ್ಸ್‌

ಆಪಲ್‌ ಕಂಪನಿಯು ಐಫೋನ್‌ XS ಮತ್ತು ಐಪೋನ್‌ XS MAX ಜೊತೆ ಐಫೋನ್‌ XR ನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಈ ಮೂರು ಐಫೋನ್‌ಗಳು 2018ರಲ್ಲಿ ಬಿಡುಗಡೆಯಾದ ಅಗ್ಗದ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಾಗಿದ್ದು, ಐಫೋನ್‌ XR ಕಳೆದ ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿತು. ಆಪಲ್‌ ಐಫೋನ್‌ XR A12 ಬಯಾನಿಕ್‌ ಪ್ರೊಸೆಸರ್‌ನಿಂಸ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಇದಷ್ಟೇ ಅಲ್ಲದೇ ಐಫೋನ್‌ XR ವಾಟರ್‌ ಮತ್ತು ಪ್ಲಾಶ್ ರೆಸಿಸ್ಟಂಟ್‌ ಆಗಿದ್ದು, ಫೇಸ್‌ ಐಡಿಯಂತಹ ಫೀಚರ್‌ನೊಂದಿಗೆ ಗ್ರಾಹಕರ ಕೈಗೆ ದೊರೆಯುತ್ತಿದೆ. ಇನ್ನು, ಹಿಂಬದಿಯಲ್ಲಿ 12MP ಕ್ಯಾಮೆರಾ ಹಾಗೂ ಸೆಲ್ಫೀಗಾಗಿ 7MP ಕ್ಯಾಮೆರಾ ಹೊಂದಿದ್ದು, ಡಿಸ್‌ಪ್ಲೇ ವಿಚಾರದಲ್ಲಿ ಐಫೋನ್‌ XSಗಿಂತ ದೊಡ್ಡದಾದ 6.1 ಇಂಚು ಲಿಕ್ವಿಡ್‌ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ.

Best Mobiles in India

Read more about:
English summary
iPhone XR Now Available In India With Rs. 17,000 Discount

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X