Subscribe to Gizbot

ಐಪಿಎಲ್ 2015: ಕ್ಯಾಮೆರಾಗಳೆಂಬ ಅಂಪೈಯರ್‌ಗಳ ರೋಚಕ ಆಟ

Written By:

2015 ರ ಕ್ರಿಕೆಟ್ ವರ್ಲ್ಡ್ ಕಪ್‌ನಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಲಾಯಿತು ಎಂಬುದು ವಿಶ್ವದ ಕ್ರಿಕೆಟ್ ಪ್ರೇಮಿಗಳಿಗೆ ತಿಳಿದೇ ಇದೆ. ಅಂಪೈಯರ್ ಏನಾದರೂ ತಪ್ಪು ನಿರ್ಣಯ ಕೊಟ್ಟಲ್ಲಿ ಅಳವಡಿಸಿರುವ ಉಪಕರಣಗಳು ಇದನ್ನು ತಿಳಿಸಿ ಹೇಳುವಷ್ಟು ಟೆಕ್ನಾಲಜಿಯ ಬಳಕೆಯನ್ನು ಇಲ್ಲಿ ಮಾಡಲಾಗಿತ್ತು.

ಇದನ್ನೂ ಓದಿ: ಎಕ್ಸೆಲ್‌ನಲ್ಲಿ ನಿಮ್ಮನ್ನು ನುರಿತರನ್ನಾಗಿಸುವ ಸೂಪರ್ ಟಿಪ್ಸ್

ಯಾವುದೇ ನಿರ್ಧಾರ ನಿಖರ ಮತ್ತು ದೋಷರಹಿತವಾಗಿರುವುದು ಕಡ್ಡಾಯವಾಗಿತ್ತು. ಇದೇ ಸಂಪ್ರದಾಯವನ್ನು ಪೆಪ್ಸಿ ಐಪಿಎಲ್ 2015 ರಲ್ಲಿ ಕೂಡ ಅಳವಡಿಸಲಾಗಿದೆ. ಇಂದಿನ ಲೇಖನದಲ್ಲಿ ಅದು ಯಾವ ಬಗೆಯ ತಂತ್ರಜ್ಞಾನ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಇಡಿ

ಸ್ಟಂಪ್‌ಗಳಲ್ಲಿ ಎಲ್‌ಇಡಿ ಬಳಕೆ

ಸ್ಟಂಪ್ ಕ್ಯಾಮೆರಾಗಳು ಇದೀಗ ತೆರೆಮರೆಗೆ ಸರಿದಿವೆ. ಸ್ಟಂಪ್‌ಗಳಲ್ಲಿರುವ ಬೇಲ್ಸ್‌ಗಳಲ್ಲಿ ಎಲ್‌ಇಡಿ ಲೈಟ್‌ಗಳನ್ನು ಇದೀಗ ಅಳವಡಿಸಲಾಗಿದ್ದು ಸ್ಟಂಪ್‌ಗಳಿಂದ ಸಂಪೂರ್ಣವಾಗಿ ಬೇಲ್ಸ್‌ಗಳು ಹೊರದೂಡಲ್ಪಟ್ಟಾಗ ಇದರಲ್ಲಿ ಬೆಳಕು ಕಂಡುಬರುತ್ತದೆ ಇದು ಥರ್ಡ್ ಅಂಪಾಯರ್ ಗೊಂದಲವನ್ನು ಕಡಿಮೆ ಮಾಡಿವೆ.

ಸ್ನಿಕೊ ಡಿವೈಸ್

ರಿಯಲ್ ಟೈಮ್ ಸ್ನಿಕೊ

ಓಪನರ್ ಬ್ಯಾಟ್ಸ್‌ಮನ್‌ಗಳು ತಮ್ಮಿಂದ ಉಂಟಾಗುವ ಸ್ಲಿಪ್‌ಗಳಿಂದ ಅಥವಾ ವಿಕೆಟ್ ಕೀಪರ್‌ಗಳಿಂದ ಅಪಾಯಕ್ಕೆ ಸಿಲುಕುತ್ತಾರೆ. ಈ ಸಮಯದಲ್ಲಿ ಬಾಲ್‌ ಬ್ಯಾಟ್‌ಗೆ ತಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತದೆ. ಇದಕ್ಕಾಗಿ ಸ್ನಿಕೊ ಎಂಬ ಡಿವೈಸ್ ಅನ್ನು ಬಳಸಲಾಗುತ್ತಿದ್ದು ಇದು ಬಾಲ್ ಪಾಸ್ ಆದಾಗ ಅದರ ಧ್ವನಿ ಮತ್ತು ಶಬ್ಧವನ್ನು ಸಮಾಲೋಚಿಸುತ್ತದೆ. 2008 ರಲ್ಲಿ ಸ್ನಿಕೊವನ್ನು ಬಳಸಲಾಗಿತ್ತು.

3ಡಿ

ಐ ಬಾಲ್ ಟ್ರ್ಯಾಕಿಂಗ್

ಬೌಲರ್‌ನ ಕೈಯಿಂದ ಹೊರಟ ಬಾಲ್‌ನ ಹಾದಿಯ ಮೇಲೆ ಕಣ್ಣಿಡುವ ಆರು ಕ್ಯಾಮೆರಾಗಳ ಅದ್ಭುತ ಟೆಕ್ನಾಲಜಿ ನಿಜಕ್ಕೂ ಮನಸೆಳೆಯುವಂಥದ್ದು. ಕ್ಯಾಮೆರಾದಲ್ಲಿರುವ ಚಿತ್ರಗಳನ್ನು ಕಂಪ್ಯೂಟರ್‌ 3ಡಿ ಗೆ ಬದಲಾಯಿಸುತ್ತವೆ. ಇದು ಬಾಲ್‌ನ ವೇಗ, ಕ್ರಿಕೆಟ್ ಪಿಚ್ ಬೌನ್ಸ್ ಮತ್ತು ಬಾಲ್‌ನ ಬೀಸುವಿಕೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

ಪಿಚ್ ವಿಶನ್

ಪಿಚ್ ವೀಕ್ಷಣೆ

ಪಿಚ್ ವಿಶನ್ ಬ್ಯಾಟ್ಸ್‌ಮೆನ್‌ನ ಬ್ಯಾಟಿಂಗ್ ಪ್ರದರ್ಶನ, ಬಾಲ್ ಪಿಚ್‌ನಲ್ಲಿ ಅಡಿಇಡುತ್ತಿರುವುದು, ಉದ್ದ ಮೊದಲಾದವುಗಳ ಮಾಹಿತಿ ನೀಡುತ್ತದೆ. ಬೌಲರ್ ಮತ್ತು ಬ್ಯಾಟ್ಸ್‌ಮೆನ್‌ಗಳಿಗೆ ತಮ್ಮ ಪ್ರದರ್ಶನವನ್ನು ಚೆನ್ನಾಗಿ ಅರಿಯಲು ಇದು ಸಹಾಯ ಮಾಡುತ್ತದೆ.

ಸೂಕ್ಷ್ಮ ವೀಕ್ಷಣೆ

ಸ್ಪೈಡರ್ ಕ್ಯಾಮ್

ಆಟದ ಅತಿ ಸೂಕ್ಷ್ಮ ವೀಕ್ಷಣೆಯನ್ನು ಮಾಡುವುದಕ್ಕಾಗಿ ಕ್ರಿಕೆಟ್ ಪ್ರಸಾರಕರು ಅಳವಡಿಸಿರುವ ಕ್ಯಾಮೆರಾ ಆಗಿದೆ. ಕ್ರಿಕೆಟ್ ಪಿಚ್ ಮತ್ತು ಮೈದಾನದಲ್ಲಿ ಕೇಬಲ್‌ಗಳ ಮೂಲಕ ಸಂಪರ್ಕವನ್ನು ಹೊಂದಿರುವ ಈ ಕ್ಯಾಮೆರಾ ಅಡ್ಡಲಾಗಿ ಮತ್ತು ಲಂಬವಾಗಿ ಚಲಿಸುತ್ತದೆ.

ರೆವಲ್ಯೂಶನ್ ಪರ್ ಮಿನಿಟ್

ಬಾಲ್ ಸ್ಪಿನ್ ಆರ್‌ಪಿಎಮ್

ಬಾಲ್ ಸ್ಪಿನ್ ಆರ್‌ಪಿಎಮ್ (ರೆವಲ್ಯೂಶನ್ ಪರ್ ಮಿನಿಟ್) ಇದು ಸ್ಪಿನ್ ಬೌಲರ್‌ನ ಕೈಯಿಂದ ಬಿಡುಗಡೆಯಾದ ಬಾಲ್ ಎಷ್ಟು ವೇಗದಲ್ಲಿ ಸ್ಪಿನ್ ಆಗುತ್ತಿದೆ ಎಂಬುದನ್ನು ಅಳತೆ ಮಾಡುತ್ತದೆ. ಟಿವಿ ಪರದೆಯಲ್ಲಿ ಬಾಲ್‌ ವೇಗದ ಸುತ್ತುವಿಕೆಯನ್ನು ಗಮನಿಸಬಹುದಾಗಿದೆ.

ಬಾಲ್ ಹಿಟ್

ಹಾಟ್ ಸ್ಪಾಟ್

ಬ್ಯಾಟ್ಸ್‌ಮನ್, ಬ್ಯಾಟ್ ಅಥವಾ ಪ್ಯಾಡ್‌ಗೆ ಬಾಲ್ ತಗುಲಿದೆಯೇ ಎಂಬುದನ್ನು ನಿರ್ಧರಿಸಲು ಹಾಟ್ ಸ್ಪಾಟ್ ಸಹಕಾರಿ. ವಾತಾವರಣದ ತಾಪಮಾನಕ್ಕನುಗುಣವಾಗಿ ಬ್ಯಾಟ್ ಅಥವಾ ಪ್ಯಾಡ್‌ಗೆ ಬಾಲ್ ಹಿಟ್ ಆಗಿದೆಯೇ ಎಂಬುದನ್ನು ವಿರುದ್ಧ ಬದಿಯಲ್ಲಿ ಅಳವಡಿಸಲಾದ ಗಾಢ ಕೆಂಪು ಕ್ಯಾಮೆರಾವನ್ನು ಬಳಸಿ ಇದು ನಿರ್ಧರಿಸುತ್ತದೆ.

ತೆರೆಯ ನೋಟ ಬದಲಾವಣೆ

ಅಂಪೈಯರ್ ಕ್ಯಾಮ್

ಐಪಿಎಲ್‌ಗೆ ಸೇರ್ಪಡಿಸಲಾದ ಅತ್ಯಾಧುನಿಕ ತಂತ್ರಜ್ಞಾನವಾಗಿದೆ ಅಂಪೈಯರ್ ಕ್ಯಾಮ್. ಪ್ರಧಾನ ಅಂಪೈಯರ್ ಕ್ಯಾಪ್‌ನಲ್ಲಿ ಹೆಚ್ಚು ವೇಗದ 'ಗೊಪ್ರೊ' ಕ್ಯಾಮೆರಾವನ್ನು ಅಳವಡಿಸಲಾಗಿರುತ್ತದೆ. ತೀರ್ಪುಗಾರರು ಮತ್ತು ವೀಕ್ಷಕರು ಪಡೆಯುವ ಕ್ರಿಕೆಟ್ ಪಿಚ್‌ನ ತೆರೆಯ ನೋಟವನ್ನು ಈ ಕ್ಯಾಮೆರಾಗಳು ಬದಲಾಯಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The 2015 Crickret World Cup has lots of technology backing it up. Any wrong decision from the umpire could turn out to be a catastrophe at this level of the game. Here's an account of the technology that's being used in the game to make more accurate decisions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot