TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕೌಂಟರ್‌ನಲ್ಲಿ ಬುಕ್ ಆದ ರೈಲ್ವೇ ಟಿಕೆಟ್‌ನ್ನು ಆನ್‌ಲೈನ್‌ನಲ್ಲಿ ಕ್ಯಾನ್ಸಲ್ ಮಾಡಿ..!
ಇತ್ತೀಚೆಗೆ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿ ರೈಲ್ವೇ ಇಲಾಖೆಯು ತನ್ನ ಪ್ರಯಾಣಿಕರ ಪ್ರಯಾಣವು ಆರಾಮದಾಯಕವಾಗಿರುವಂತೆ ಮಾಡುತ್ತಿದೆ. ಅದ್ರಲ್ಲೂ ಆನ್ ಲೈನ್ ವ್ಯವಸ್ಥೆಯು ಬಹಳವಾಗಿ ಬದಲಾಗಿದೆ. IRCTC ಮಾಡಿರುವ ಆನ್ ಲೈನ್ ವ್ಯವಸ್ಥೆಗಳು ಗ್ರಾಹಕರಿಗೆ ರೈಲ್ವೇ ಇಲಾಖೆಯನ್ನು ಮತ್ತಷ್ಟು ಹತ್ತಿರವಾಗಿಸುತ್ತಿದೆ.
ಇದೀಗ ಮತ್ತೊಂದು ಅಧ್ಬುತ ಸೇವೆಯನ್ನು IRCTC ಬಿಡುಗಡೆಗೊಳಿಸಿದ್ದು, ಪ್ರಯಾಣಿಕರು ಒಂದು ವೇಳೆ ರೈಲ್ವೇ ಕೌಂಟರ್ ಗೆ ತೆರಳಿ ಟಿಕೆಟ್ ಪ್ರೀಬುಕ್ಕಿಂಗ್ ಮಾಡಿ ಬಂದಿದ್ದು, ತಮ್ಮ ಪ್ರಯಾಣವನ್ನು ಕ್ಯಾನ್ಸಲ್ ಮಾಡಿದರೆ ಆ ಟಿಕೆಟ್ ಕ್ಯಾನ್ಸಲ್ ಮಾಡುವುದಕ್ಕೆ ಮತ್ತೆ ಕೌಂಟರ್ ಗೆ ತೆರಳಬೇಕಾಗಿಲ್ಲ ಬದಲಾಗಿ ಆನ್ ಲೈನ್ ನಲ್ಲಿಯೇ ಹೀಗೆ ಬುಕ್ ಮಾಡಿದ ಟಿಕೆಟ್ ಗಳನ್ನು ಕ್ಯಾನ್ಸಲ್ ಮಾಡಲು ಇನ್ನು ಮುಂದೆ IRCTC ಅವಕಾಶ ನೀಡುತ್ತದೆ.
ಶುಲ್ಕವಿದೆ ಅಷ್ಟೇ..!
ಎಲ್ಲರಿಗೂ ತಿಳಿದಿರುವ ಹಾಗೆ ಒಮ್ಮೆ ಬುಕ್ ಮಾಡಿದ ಟಿಕೆಟ್ ನ್ನು ಕ್ಯಾನ್ಸಲ್ ಮಾಡಲು ಅಲ್ಪ ಪ್ರಮಾಣದ ಕ್ಯಾನ್ಸಲೇಷನ್ ಫೀಸ್ ನ್ನು ಪಡೆಯಲಾಗುತ್ತದೆ. ಆದರೆ ಹೀಗೆ ಟಿಕೆಟ್ ಕ್ಯಾನ್ಸಲ್ ಮಾಡಲು ಕ್ಯೂ ನಲ್ಲಿ ನಿಲ್ಲುವ ತಾಪತ್ರಯ ಯಾರಿಗೆ ಬೇಕು ಅಲ್ಲವೇ?
ಆನ್‌ಲೈನ್‌ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುವುದು ಹೇಗೆ?
ಕೌಂಟರ್ ನಲ್ಲಿ ಮಾಡಿದ ಟಿಕೆಟ್ ಕ್ಯಾನ್ಸಲ್ ಮಾಡಲು ಮೊದಲಿಗೆ ನೀವು IRCTC ವೆಬ್ ಸೈಟ್ ಗೆ ತೆರಳಬೇಕು ಮತ್ತು ಟ್ರೈನ್ಸ್ ಎಂಬ ಸಬ್ ಹೆಡ್ಡಿಂಗ್ ನ ಅಡಿಯಲ್ಲಿ ಕ್ಯಾನ್ಸಲ್ ಟಿಕೆಟ್ ಮೆನುವನ್ನು ಹುಡುಕಿ. ಇಲ್ಲಿ ನೀವು ಕೌಂಟರ್ ಟಿಕೆಟ್ ಆಯ್ಕೆಯನ್ನು ಕ್ಲಿಕ್ಕಿಸಬೇಕು. ಇದನ್ನು ಮಾಡುವುದರಿಂದಾಗಿ ನೀವು ನಿಮ್ಮ ಟಿಕೆಟ್ ನಲ್ಲಿ ಬರೆಯಲಾಗಿರುವ ಪಿಎನ್ಆರ್ ನಂಬರ್ ಮತ್ತು ಟ್ರೈನ್ ನಂಬರ್ ನ್ನು ಬರೆಯಬೇಕಾಗಿರುವ ಪೇಜಿಗೆ ತೆರಳುತ್ತೀರಿ. ಇದಾದ ನಂತರ ಸಬ್ ಮಿಟ್ ಆಯ್ಕೆಯನ್ನು ಕ್ಲಿಕ್ಕಿಸಬೇಕು. ಜೊತೆಗೆ ನೀವು ಕ್ಯಾನ್ಸಲೇಷನ್ ಪ್ರೊಸೀಜರ್ ನ್ನು ಓದಿದ್ದೀರಿ ಎಂಬುದಾಗಿ ಟಿಕ್ ಮಾಡಿರಬೇಕು.
ನಂತರ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ನೀಡಲಾಗಿರುವ ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿಯನ್ನು ಟಿಪ್ ಮಾಡಿ ಸರಳವಾಗಿ ಪಿಎನ್ಆರ್ ಡಿಟೇಲ್ಸ್ ನ್ನು ವ್ಯಾಲಿಡೇಟ್ ಮಾಡಿದರೆ ನಿಮ್ಮ ಬುಕ್ ಆಗಿರುವ ಟಿಕೆಟ್ ಕ್ಯಾನ್ಸಲ್ ಆಗುತ್ತದೆ.
ರೀಫಂಡ್ ವಿವರ ಬರಲಿದೆ
ಕ್ಯಾನ್ಸಲೇಷನ್ ಮುಗಿದ ನಂತರ ಅದೇ ಮೊಬೈಲ್ ನಂಬರಿಗೆ ಪಿಎನ್ಆರ್ ನಂಬರಿನ ವಿವರದ ಜೊತೆಗೆ ಎಷ್ಟು ಮೊತ್ತವು ರೀಫಂಡ್ ಆಗಲಿದೆ ಎಂಬ ವಿವರಗಳನ್ನೊಳಗೊಂಡ ಮೆಸೇಜ್ ಒಂದು ಬರಲಿದೆ. ರೀಫಂಡ್ ಅಮೌಂಟ್ ನ್ನು ಹತ್ತಿರದ ಸ್ಟೇಷನ್ ನಿಂದ ಕಲೆಕ್ಟ್ ಮಾಡಿಕೊಳ್ಳಬಹುದು ಅಥವಾ ಹತ್ತಿರದ ಸ್ಯಾಟಲೈಟ್ ಪಿಆರ್ ಎಸ್ ಲೊಕೇಷನ್ ನಿಂದ ಪಡೆಯಬಹುದು.
4 ಗಂಟೆ ಮುಂಚೆ ಕ್ಯಾನ್ಸಲ್ ಮಾಡಿ
ಆದರೆ ಈ ಕ್ಯಾನ್ಸಲೇಷನ್ ನ್ನು ಪ್ರಯಾಣ ಆರಂಭವಾಗುವ 4 ಘಂಟೆಗಳ ಮುನ್ನದವರೆಗೆ ಮಾತ್ರ ಮಾಡಲು ಆನ್ ಲೈನ್ ನಲ್ಲಿ ಅವಕಾಶವಿರುತ್ತದೆ. ಒಂದು ವೇಳೆ ಟಿಕೆಟ್ RAC/Waitlist ನಲ್ಲಿದ್ದದ್ದಾದರೆ ಹೊರಡುವ ಸಮಯಕ್ಕೂ 30 ನಿಮಿಷದ ಒಳಗೆ ಕ್ಯಾನ್ಸಲೇಷನ್ ಮಾಡಿಸಿಕೊಳ್ಳಬಹುದು. ಆದರೆ ಇದೆಲ್ಲವೂ ಸರಿಯಾದ ಮೊಬೈಲ್ ನಂಬರ್ ಸೌಲಭ್ಯ ದೊರಕಿಸಿಕೊಟ್ಟರೆ ಮಾತ್ರ ಸಾಧ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ನೀವು IRCTC ವೆಬ್ ಸೈಟ್ ಗೆ ತೆರಳಬಹುದು.