Subscribe to Gizbot

ತಾಂತ್ರಿಕ ನಗರ ಬೆಂಗಳೂರಿಗೆ ಇನ್ನೊಂದು ಮುಕುಟ

Written By:

ಸ್ಟಾರ್ಟಪ್ ಇಕೋಸಿಸ್ಟಮ್‌ನಲ್ಲಿ ಬೆಂಗಳೂರು ಅಸಾಮಾನ್ಯ ಸಾಧನೆಯನ್ನೇ ಮಾಡಿದೆ. ಜಾಗತಿಕ ನಕ್ಷೆಯಲ್ಲಿ ಅವಿಸ್ಮರಣೀಯ ಸ್ಥಾನವನ್ನು ಪಡೆದುಕೊಂಡಿರುವ ಸಿಲಿಕಾನ್ ಸಿಟಿಗೆ ಪೈಪೋಟಿ ಅಸಾಧ್ಯದ ಮಾತಾಗಿದೆ. ಇನ್ನು ಇತ್ತೀಚಿನ ಸ್ಟಾರ್ಟಪ್ ಗ್ಲೋಬಲ್ ಇಂಡೆಕ್ಸ್‌ನಲ್ಲಿ ವಿಶ್ವದಲ್ಲೇ ಬೆಂಗಳೂರು 15 ನೇ ಸ್ಥಾನವನ್ನು ಕಂಡಕೊಂಡಿದೆ. 2012 ರಲ್ಲಿ 19 ನೇ ಸ್ಥಾನದಲ್ಲಿದ್ದ ಉದ್ಯಾನ ನಗರಿ 15 ಸ್ಥಾನಕ್ಕೇರಿದೆ.

ಓದಿರಿ: ವೇಗವಾಗಿ ಬೆಳೆಯುತ್ತಿರುವ ಟೆಕ್ ನಗರ: ಬೆಂಗಳೂರಿಗೆ 2 ನೇ ಸ್ಥಾನ

ಇಂದಿನ ಲೇಖನದಲ್ಲಿ ಟೆಕ್ ಉದ್ಯಮದಲ್ಲಿ ಬೆಂಗಳೂರು ಬರೆದ ಈ ಹೊಸ ಮೈಲಿಗಲ್ಲಿನ ಬಗ್ಗೆ ಕೊಂಚ ಆಳವಾಗಿ ತಿಳಿದುಕೊಳ್ಳೋಣ. ನಗರದಲ್ಲಿ ಆರಂಭವಾಗುತ್ತಿರುವ ಟೆಕ್ ಸ್ಟಾರ್ಟಪ್‌ಗಳು ವಿಶ್ವದಲ್ಲೇ ಕೀರ್ತಿಪತಾಕೆಯನ್ನು ಹಾರಿಸುತ್ತಿದ್ದು ಇದರ ಒಳಗುಟ್ಟೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುವ ಟೆಕ್ಕಿ
  

20 ಹರೆಯದ ಯುವ ಟೆಕ್ಕಿಗಳೇ ಈ ಸ್ಟಾರ್ಟಪ್‌ಗಳ ಹರಿಕಾರರೆನಿಸಿದ್ದು ಇವರ ಹೊಸ ವಿಚಾರಗಳು ಆಧುನಿಕ ಯೋಚನೆಗಳು ಸ್ಟಾರ್ಟಪ್‌ಗಳ ಗೆಲುವಿಗೆ ಪ್ರೇರಕವಾಗಿದೆ.

ಮಾಹಿತಿ ತಂತ್ರಜ್ಞಾನ
  

ಮಾಹಿತಿ ತಂತ್ರಜ್ಞಾನವನ್ನು ಬೆಂಗಳೂರು ಸ್ವಾಗತಿಸುತ್ತಿದ್ದು ಬುದ್ಧಿವಂತಿಕೆ ಮತ್ತು ನಗರದಲ್ಲಿರುವ ಹೆಚ್ಚಿನ ಅವಕಾಶಗಳು ಸ್ಟಾರ್ಟಪ್‌ಗಳನ್ನು ಬಲಿಷ್ಟಗೊಳಿಸುತ್ತಿವೆ.

ಬಲಿಷ್ಟ ಐಟಿ ಸಂಸ್ಥೆಗಳು
  

ಇನ್ನು ಬಲಿಷ್ಟ ಐಟಿ ಸಂಸ್ಥೆಗಳು ದೊಡ್ಡ ಮಟ್ಟಿನ ಟೆಕ್ಕಿಗಳನ್ನು ಈ ಕ್ಷೇತ್ರಕ್ಕೆ ತರುತ್ತಿದ್ದು ವಿದ್ಯಾಭ್ಯಾಸ ಅಂತೆಯೇ ಇತರ ವಿಚಾರ ಧಾರೆಗಳಿಗೆ ಅನುವು ಮಾಡಿಕೊಡುತ್ತದೆ.

ವಿಜ್ಞಾನ ಕೇಂದ್ರ
  

ಇನ್ನು ನಗರವು ವಿಜ್ಞಾನ ಕೇಂದ್ರವನ್ನು ಹೊಂದಿದ್ದು 100 ಕ್ಕಿಂತಲೂ ಹೆಚ್ಚಿನ ಕೇಂದ್ರಗಳಿವೆ.

ತಂತ್ರಜ್ಞಾನ ಸಂಬಂಧಿತ ಜ್ಞಾನ
  

ಬೆಂಗಳೂರಿನಲ್ಲಿ ನೆಲೆಸಿರುವ ಹೆಚ್ಚಿನ ನಾಗರೀಕರು ತಂತ್ರಜ್ಞಾನ ಸಂಬಂಧಿತ ಜ್ಞಾನವನ್ನು ಪಡೆದುಕೊಂಡಿದ್ದು ಪ್ರತಿಯೊಂದು ಸ್ಟಾರ್ಟಪ್‌ಗಳ ಒಳಹೊರಗನ್ನು ಅವರು ಅರಿತುಕೊಂಡಿದ್ದಾರೆ.

ಸ್ಟಾರ್ಟಪ್‌
  

ಹೆಚ್ಚಿನ ಟೆಕ್ ಆಧಾರಿತ ಸ್ಟಾರ್ಟಪ್‌ಗಳು ಬೆಂಗಳೂರನ್ನು ಆಧರಿಸಿ ಇವೆ.

ರೀಟೈಲ್ ವೆಬ್‌ಸೈಟ್‌
  

ಇನ್ನು ರೀಟೈಲ್ ವೆಬ್‌ಸೈಟ್‌ಗಳಾದ ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್‌ಗಳೂ ಇಲ್ಲಿ ಉತ್ತಮ ವ್ಯವಹಾರವನ್ನು ಕಂಡುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
When it comes to the startup ecosystems in India, Bengaluru has finally got us on the global map. Recently the Startup Genome’s Global Index now known as Compass placed Bangalore at the 15th position in the overall world ranking, which means the city has stepped up by four places from its 19th spot in 2012.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot