ಆನ್‌ಲೈನ್ ಶಾಪಿಂಗ್‌ ಮಾಡುವ ಮುನ್ನ ತಿಳಿದಿರಲೇಬೇಕಾದ 5 ಅಂಶಗಳು!

|

ಪ್ರತಿವರ್ಷ ಅಕ್ಟೋಬರ್ ತಿಂಗಳಿನ ಮೊದಲ ಅಥವಾ ಎರಡನೇ ವಾರದಲ್ಲಿ ಆನ್‌ಲೈನ್ ಇ ಕಾಮರ್ಸ್ ಮಾರಾಟ ಸಂಸ್ಥೆಗಳ ಭರಾಟೆ ಹೆಚ್ಚಾಗುತ್ತದೆ. ಸಾಲು ಸಾಲು ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಈ ಬಾರಿಯೂ ಅಮೆಜಾನ್‌, ಫ್ಲಿಪ್‌ಕಾರ್ಟ್ ಸೇರಿ ಬಹುತೇಕ ಎಲ್ಲಾ ಜಾಲತಾಣಗಳು ತಾಮುಂದು ತಾಮುಂದು ಎಂದು ಡಿಸ್ಕೌಂಟ್‌ ದರದಲ್ಲಿ ಉತ್ಪನ್ನಗಳನ್ನು ನೀಡುತ್ತಿವೆ.

ಆನ್‌ಲೈನ್ ಶಾಪಿಂಗ್‌ ಮಾಡುವ ಮುನ್ನ ತಿಳಿದಿರಲೇಬೇಕಾದ 5 ಅಂಶಗಳು!

ಆನ್‌ಲೈನ್‌ನಿನಲ್ಲಿ ಬಾರೀ ಡಿಸ್ಕೌಂಟ್ಸ್ ಸಹ ದೊರೆಯುವುದರಿಂದ ಜನರು ಆನ್‌ಲೈನ್ ಶಾಪಿಂಗ್‌ಗೆ ಮೊರೆಹೋಗುವುದು ಸಹಜವೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಶಾಪಿಂಗ್‌ನಿಂದ ನಿಜಕ್ಕೂ ಲಾಭವಿದೆಯೇ? ಆನ್‌ಲೈನ್‌ ಖರೀದಿ ಸುರಕ್ಷಿತವೇ? ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳು ಯಾವುವು? ಎಂಬ ಕೊರೆವ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.

ಆನ್‌ಲೈನ್‌ನಲ್ಲಿ ಉತ್ತಮ ಬೆಲೆಗೆ ವಸ್ತುಗಳು ಸಿಗುತ್ತವೆಯೇ?

ಆನ್‌ಲೈನ್‌ನಲ್ಲಿ ಉತ್ತಮ ಬೆಲೆಗೆ ವಸ್ತುಗಳು ಸಿಗುತ್ತವೆಯೇ?

ನಿಜ ಹೇಳಬೇಕೆಂದರೆ, ಇಲ್ಲ. ಆನ್‌ಲೈನ್‌ ಬೆಲೆಗಳನ್ನು ನೋಡಿದರೆ, ತೀರ ಕಡಿಮೆ ಎಂದೆನಿಸುವುದು ಸಹಜ. ಸಾಧಾರಣವಾಗಿ ಉತ್ತಮ ಬೆಲೆಗೇ ವಸ್ತುಗಳು ಲಭ್ಯವಾದರೂ, ಕೆಲವೊಂದು ಉತ್ಪನ್ನಗಳು ಹೊರಗಿನ ಅಂಗಡಿಗಳಲ್ಲಿ ಸಿಗುವುದಕ್ಕಿಂತಲೂ ದುಬಾರಿಯಾಗಿರುತ್ತವೆ. ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಒಳ್ಳೆಯ ಆಫರ್‌ಗಳಿರುತ್ತವೆ. ಫೋನ್‌ ಖರೀದಿ ಮಾಡುತ್ತಿದ್ದರೆ, ಕೇಬಲ್‌, ಎಸ್‌ಡಿ ಕಾರ್ಡ್‌ ಉಚಿತವಾಗಿರುತ್ತದೆ. ಆದರೆ ಆನ್‌ಲೈನಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಖರೀದಿಗೆ ಮುನ್ನ ಮಾರುಕಟ್ಟೆ, ಆನ್‌ಲೈನ್‌ ದರದ ಬಗ್ಗೆ ತುಲನೆ ಮಾಡುವುದು ಒಳ್ಳೆಯದು.

ಆನ್‌ಲೈನ್‌ನಲ್ಲಿ ಸಿಗುವ ವಸ್ತುಗಳು ಅಸಲಿಯೇ?

ಆನ್‌ಲೈನ್‌ನಲ್ಲಿ ಸಿಗುವ ವಸ್ತುಗಳು ಅಸಲಿಯೇ?

ಆನ್‌ಲೈನ್‌ನಲ್ಲಿ ಯಾವಾಗಲೂ ವಾರೆಂಟಿ ಪತ್ರಕ್ಕೆ ಸೀಲ್, ಸಹಿ ಹಾಕಿ ಕೊಡುವುದಿಲ್ಲ. ಬದಲಿಗೆ ಉತ್ಪನ್ನದ ವಿವರದ ಬಳಿ ಅದಕ್ಕೆ ವಾರೆಂಟಿ ಅನ್ವಯವಾಗುತ್ತದೆಯೇ ಇಲ್ಲವೇ ಎಂಬುದನ್ನು ಬರೆದಿರುತ್ತಾರೆ. ಇದನ್ನು ಖರೀದಿದಾರರು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯ. ಅಸಲಿಯನ್ನೇ ಆನ್‌ಲೈನ್‌ನಲ್ಲೂ ಮಾರಾಟ ಮಾಡುತ್ತಿದ್ದರೂ, ಅವರು ಉತ್ಪನ್ನದ ಅಧಿಕೃತ ಡೀಲರ್‌ ಅಲ್ಲದಿದ್ದರೆ, ವಾರೆಂಟಿ ಅನ್ವಯವಾಗುವುದಿಲ್ಲ.ಈ ಬಗ್ಗೆ ಕೆಲವು ಆನ್‌ಲೈನ್‌ ಶಾಪಿಂಗ್‌ ತಾಣಗಳು ಅಧಿಕೃತ ಡೀಲರ್‌ ಅಲ್ಲ ಎಂಬುದನ್ನು ಕಂಪನಿಗಳೇ ಘೋಷಿಸಿರುತ್ತವೆ.

ನಮ್ಮ ವೈಯಕ್ತಿಕ ದಾಖಲೆ/ ಬ್ಯಾಂಕಿಂಗ್ ಸುರಕ್ಷಿತವೇ?

ನಮ್ಮ ವೈಯಕ್ತಿಕ ದಾಖಲೆ/ ಬ್ಯಾಂಕಿಂಗ್ ಸುರಕ್ಷಿತವೇ?

ಆನ್‌ಲೈನ್‌ ಶಾಪಿಂಗ್‌ ವೇಳೆ ಬ್ಯಾಂಕ್‌ ಅಕೌಂಟ್ ನಮೂದಿಸಿ ಹಣ ಪಾವತಿ ಮಾಡುತ್ತೀರಿ. ಇವೆಲ್ಲಾ ವಿವರಗಳು ಸುರಕ್ಷಿತವೇ ಎಂಬುದು ದೊಡ್ಡ ಪ್ರಶ್ನೆ. ಇದಕ್ಕಾಗಿ ದೊಡ್ಡ ಜಾಲತಾಣಗಳು ಅತ್ಯಂತ ಸುರಕ್ಷಿತವಾದ ಸರ್ವರ್‌ಗಳನ್ನು ನಿರ್ವಹಿಸುತ್ತವೆ. ಅದರಿಂದ ಗ್ರಾಹಕರ ಯಾವುದೇ ಮಾಹಿತಿಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುತ್ತವೆ. ಬ್ಯಾಂಕಿಂಗ್‌ ವಿವರಗಳೂ ಸೋರಿಕೆಯಾಗದಂತೆ ಅವುಗಳು ಅತ್ಯಂತ ಎಚ್ಚರಿಕೆ ವಹಿಸುತ್ತವೆ. ಅದಕ್ಕಾಗಿ, ನೀವು ಜನಪ್ರಿಯ ಮತ್ತು ನಂಬಿಕಸ್ಥ ಜಾಲತಾಣಗಳನ್ನು ನೆಚ್ಚಿಕೊಳ್ಳುವುದು ಒಳ್ಳೆಯದು.

ಖರೀದಿಸಿದ ಉತ್ಪನ್ನ ಮನೆಗೆ ಬಾರದಿದ್ದರೆ?

ಖರೀದಿಸಿದ ಉತ್ಪನ್ನ ಮನೆಗೆ ಬಾರದಿದ್ದರೆ?

ಆನ್‌ಲೈನ್‌ನಲ್ಲಿ ಹೊಸದಾಗಿ ಶಾಪಿಂಗ್‌ ಮಾಡುವವರ ದೊಡ್ಡ ಸಮಸ್ಯೆ ಎಂದರೆ, ಕೆಲವೊಮ್ಮೆ ಕೊರಿಯರ್‌ನಲ್ಲಿ ಉತ್ಪನ್ನದ ಬದಲಾಗಿ ಕಲ್ಲು, ಮರಳು ಬಂದಿದ್ದೂ ಇದೆ. ಈ ವಿಚಾರದಲ್ಲಿ ಗ್ರಾಹಕರ ವಿಶ್ವಾಸಾರ್ಹತೆಯನ್ನು ಕಾಪಿಡಲು ಅಮೆಜಾನ್‌, ಫ್ಲಿಪ್‌ಕಾರ್ಟ್ ಇತ್ಯಾದಿ ಶಾಪಿಂಗ್‌ ತಾಣಗಳು ಖರೀದಿಸಿದ ವಸ್ತುಗಳು ಹಾಳಾಗಿದ್ದರೆ, ಅಥವಾ ತಪ್ಪಾಗಿ ಬಂದಿದ್ದರೆ, ವಾಪಾಸ್‌ ಕಳಿಸುವ, ಮನೆಗೇ ಬಂದು ತೆಗೆದುಕೊಂಡು ಹೋಗುವ, ಹಣ ವಾಪಾಸ್ ಪಾವತಿಸುವ ಪರಿಪಾಠ ಹೊಂದಿದೆ. ಹಾಗಾಗಿ, ಯೋಚಿಸಿ ಶಾಪಿಂಗ್ ಮಾಡಿ.

ಆನ್‌ಲೈನ್‌ ಖರೀದಿಯಿಂದ ಏನು ಲಾಭ?

ಆನ್‌ಲೈನ್‌ ಖರೀದಿಯಿಂದ ಏನು ಲಾಭ?

ಆನ್‌ಲೈನ್‌ ಶಾಪಿಂಗ್‌ ತಾಣಗಳ ಬೆಲೆಗಳ ಬಗ್ಗೆ ಕೂತಲ್ಲೇ ಸಂಪೂರ್ಣವಾಗಿ ತುಲನೆ ಮಾಡಬಹುದು ಮತ್ತು ಕೊನೆಯಲ್ಲಿ ಕಡಿಮೆ ದರ ಇರುವ ತಾಣದಲ್ಲಿ ಖರೀದಿಸಬಹುದು ಒಂದು ಲಾಭವಾದರೆ, ಒಂದು ಉತ್ಪನ್ನದ ಬಗ್ಗೆ ಎಲ್ಲಾ ದೃಷ್ಟಿಯಿಂದಲೂ ಮಾಹಿತಿ ಪಡೆದೇ ಖರೀದಿ ಮಾಡುವುದು. ಖರೀದಿಸಿದವರು ಬಳಕೆದಾರರ ಅಭಿಪ್ರಾಯಗಳನ್ನು ಓದುವುದು, ಹಾಗೂ ಬ್ಯಾಂಕ್‌ಗಳಿಂದ ದೊರೆಯುವ ಕ್ಯಾಶ್‌ಬ್ಯಾಕ್ ದೊರೆಯುವುದು ಆನ್‌ಲೈನ್‌ ಖರೀದಿ ಮತ್ತಷ್ಟು ಲಾಭಗಳಾಗಿವೆ.

Best Mobiles in India

English summary
Is online shopping safe or not? is online shopping good or bad. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X