22 ಉಪಗ್ರಹಗಳನ್ನು ಒಂದೇ ಮಿಷನ್‌ನಲ್ಲಿ ಲಾಂಚ್‌ ಮಾಡಲಿರುವ ಇಸ್ರೊ

Written By:

ಭಾರತ ದೇಶಿಯವಾಗಿ ಮೊಟ್ಟ ಮೊದಲ ಬಾರಿಗೆ ಅಭಿವೃದ್ದಿಪಡಿಸಿದ ಪುನರ್ಬಳಕೆಯ ಬಾಹ್ಯಾಕಾಶ ಉಡಾವಣಾ ವಾಹನವನ್ನು ಯಶಸ್ವಿಯಾಗಿ ಕಳೆದವಾರವಷ್ಟೆ ಲಾಂಚ್‌ ಮಾಡಿತ್ತು. ಇದರ ಅದ್ಭುತ ವಿಶೇಷತೆ ಅಂದ್ರೆ 'ಆಮ್ಲಜನಕವನ್ನು' ಜೊತೆಯಲ್ಲೇ ಸಾಗಿಸುವ ಬದಲು ಸಂಚರಿಸುವ ವಾತಾವರಣದಲ್ಲೇ ಪಡೆಯುವ ವ್ಯವಸ್ಥೆಯನ್ನು ಹೊಂದಿರುವುದು.

ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಇತರೆ ದೇಶಗಳಿಗಿಂತ ಹಿಂದೆ ಉಳಿದಿಲ್ಲ ಅನ್ನೋದನ್ನು ಈಗ ಪತ್ತೆ ಸಾಬೀತುಪಡಿಸುತ್ತಿದೆ. ಕಳೆದ ವಾರವಷ್ಟೆ ಮರುಬಳಕೆಯ ಬಾಹ್ಯಾಕಾಶ ಉಡಾವಣಾ ವಾಹನವನ್ನು ಲಾಂಚ್‌ ಮಾಡಿದ್ದ 'ಭಾರತದ ಬಾಹ್ಯಾಕಾಶ ಸಂಸ್ಥೆ(ISRO)', ಮತ್ತೊಂದು ಹೊಸ ಸುದ್ದಿಯನ್ನು ಹೇಳಿದೆ. ಕೇವಲ ಒಂದು ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ 22 ಉಪಗ್ರಹಗಳನ್ನು ಲಾಂಚ್‌ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಪುನರ್ಬಳಕೆ ಉಡಾವಣಾ ವಾಹನದ ವಿಶೇಷತೆ/ಅದ್ಭುತ ಫೋಟೋಗಳು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 22 ಉಪಗ್ರಹಗಳು

22 ಉಪಗ್ರಹಗಳು

1

1 ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ 22 ಉಪಗ್ರಹಗಳನ್ನು ಲಾಂಚ್‌ ಮಾಡುವ ಬಗ್ಗೆ ಇಸ್ರೋ ಶನಿವಾರ ಮಾಹಿತಿ ನೀಡಿದೆ. "ಮುಂದಿನ ತಿಂಗಳಲ್ಲಿ 22 ಉಪಗ್ರಹಗಳನ್ನು ಲಾಂಚ್‌ ಮಾಡುತ್ತಿದ್ದು, ಅದರಲ್ಲಿ ಒಂದು ಕಾರ್ಟೊಗ್ರಾಫಿಕ್ ಸರಣಿ ಉಪಗ್ರಹವನ್ನು ಲಾಂಚ್‌ ಮಾಡುಲಾಗುತ್ತದೆ" ಎಂದು ಇಸ್ರೊ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.

3 ಭಾರತೀಯ ಉಪಗ್ರಹಗಳು

3 ಭಾರತೀಯ ಉಪಗ್ರಹಗಳು

2

ಕರ್ನಾಟಕ ವಾಣಿಜ್ಯ ಒಕ್ಕೂಟ ಮತ್ತು ಕೈಗಾರಿಕಾ ಚೇಂಚರ್ (FBCCI) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಸ್ರೊ ಅಧ್ಯಕ್ಷರಾದ ಕಿರಣ್‌ ಕುಮಾರ್ 22 ಉಪಗ್ರಹಗಳನ್ನು ಲಾಂಚ್‌ ಮಾಡುವ ಮಾಹಿತಿಯನ್ನು ತಿಳಿಸಿದ್ದು, 22 ಉಪಗ್ರಹಗಳಲ್ಲಿ 3 ಭಾರತೀಯ ಉಪಗ್ರಹಗಳು ಮತ್ತು ಉಳಿದವು ವಾಣಿಜ್ಯ ಉಪಗ್ರಹಗಳು ಎಂದಿದ್ದಾರೆ.

ಕೆ ಸಿವನ್‌

ಕೆ ಸಿವನ್‌

3

ಇತ್ತೀಚೆಗಷ್ಟೆ 'ವಿಕ್ರಮ್‌ ಸಾರಾಭಾಯ್‌ ಸ್ಪೇಸ್‌ ಸೆಂಟರ್‌'ನ ನಿರ್ದೇಶಕರಾದ ಕೆ ಸಿವನ್‌ ರವರು ಇಸ್ರೊದ 'ಪೋಲಾರ್‌ ರಾಕೆಟ್‌ PSLV C34' ಅನ್ನು ಅಮೇರಿಕ, ಕೆನಡಾ, ಇಂಡೋನೇಷ್ಯಾ, ಜರ್ಮನ್‌ನ ಸಹ ಪ್ರಯಾಣಿಕರನ್ನು ಮತ್ತು ಉಪಗ್ರಹಗಳನ್ನು ಲಾಂಚ್‌ ಮಾಡಲು ಬಳಸಲಾಗುತ್ತದೆ ಎಂದು ಹೇಳಿದ್ದರು.

 2008

2008

4

ಸ್ಪೇಸ್ ಏಜೆನ್ಸಿ 2008 ರಲ್ಲಿ ಒಂದೇ ಮಿಷನ್‌ನಲ್ಲಿ 10 ಉಪಗ್ರಹಗಳನ್ನು ಲಾಂಚ್‌ ಮಾಡಿತ್ತು.

ಕಿರಣ್‌ ಕುಮಾರ್‌'ರವರು ಹೇಳಿದ್ದೇನು?

ಕಿರಣ್‌ ಕುಮಾರ್‌'ರವರು ಹೇಳಿದ್ದೇನು?

5

"22 ಉಪಗ್ರಹಗಳನ್ನು ಲಾಂಚ್ ಮಾಡಿದ ನಂತರ, ತಕ್ಷಣ ನಾವು ಹೊಂದಿರುವ ಸ್ಕ್ಯಾಟ್ಟರೊಮೀಟರ್‌ ಲಾಂಚ್‌ ಆಗುತ್ತದೆ. ಅದನ್ನು INSAT 3DR ಎಂದು ಕರೆಯುತ್ತೇವೆ. ಇದು 'ಭೂಸ್ಥಾಯೀ ಉಪಗ್ರಹ'ದಿಂದ ಲಂಬವಾಗಿರುವ ಉಷ್ಣಾಂಶ ಮತ್ತು ಆರ್ದ್ರತೆ ಬಗ್ಗೆ ಪ್ರೊಫೈಲ್ ಒದಗಿಸುತ್ತದೆ" ಎಂದು ಕಿರಣ್‌ ಕುಮಾರ್‌'ರವರು ಹೇಳಿದ್ದಾರೆ.

ಮರುಬಳಕೆಯ ಉಡಾವಾಣಾ ವಾಹನ

ಮರುಬಳಕೆಯ ಉಡಾವಾಣಾ ವಾಹನ

6

ಪುನರ್ಬಳಕೆಯ ಉಡಾವಣಾ ವಾಹನ ಸ್ಪೇಸ್‌ಗೆ ಉಪಗ್ರಹವನ್ನು ಲಾಂಚ್‌ ಮಾಡುವ ವೆಚ್ಚವನ್ನು ಕಡಿಮೆಗೊಳಿಸುತ್ತದೆ.

RLV-TD ಬಾಹ್ಯಾಕಾಶ ಉಡಾವಣಾ ವಾಹನ

RLV-TD ಬಾಹ್ಯಾಕಾಶ ಉಡಾವಣಾ ವಾಹನ

7

ಇಸ್ರೊ RLV-TD ಬಾಹ್ಯಾಕಾಶ ಉಡಾವಣಾ ವಾಹನ ಚಾಲನಾ ವ್ಯವಸ್ಥೆಯಲ್ಲಿ ವಾತಾವರಣದಿಂದ ಆಮ್ಲಜನಕ ಪಡೆಯುವ ಬಗ್ಗೆ ಪರೀಕ್ಷೆಯನ್ನು ನಡೆಸುತ್ತಿದೆ. ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ ಆಮ್ಲಜನಕವನ್ನು ಸಾಗಿಸುವ ಬದಲು ಈ ತೀರ್ಮಾನ ಕೈಗೊಳ್ಳಲಾಗಿದೆ.

 50 ಕಿಲೋ ಮೀಟರ್‌ವರೆಗೆ ಆಕ್ಸಿಜನ್‌

50 ಕಿಲೋ ಮೀಟರ್‌ವರೆಗೆ ಆಕ್ಸಿಜನ್‌

8

ಬಾಹ್ಯಾಕಾಶ ಉಡಾವಣಾ ವಾಹನವನ್ನು ಧ್ವನಿ ಸಹಿತ ರಾಕೆಟ್‌ನೊಂದಿಗೆ ಜೂನ್‌ ಕೊನೆಯ ವಾರದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಶ್ರೀಹರಿಕೋಟಾದ 'ಸತೀಶ್ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಪರೀಕ್ಷೆಗೆ ಉಡಾವಣೆ ಮಾಡಲಾಗುವುದು. ಆಮ್ಲಜನಕ ಉಸಿರಾಟದ ವ್ಯವಸ್ಥೆಯನ್ನು ಭೂಮಿಯಿಂದ 50 ಕಿಲೋ ಮೀಟರ್‌ ಎತ್ತರದವರೆಗೆ ಹೊಂದುವ ಗುರಿ ಹೊಂದಿದೆ.

ರಾಕೆಟ್‌ ಸಾಮರ್ಥ್ಯ ಅಭಿವೃದ್ದಿ

ರಾಕೆಟ್‌ ಸಾಮರ್ಥ್ಯ ಅಭಿವೃದ್ದಿ

9

"RLV-TD ಉಡಾವಣಾ ವಾಹನವು ಒತ್ತೋಯ್ಯುವ ಸಾಮರ್ಥ್ಯವನ್ನು ಕಡಿಮೆ ಮಾಡಿ ಅದರ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಆಮ್ಮಜನಕ ಉಸಿರಾಟದ ವ್ಯವಸ್ಥೆಯನ್ನು ವಾತಾವರಣದಲ್ಲೇ ಪಡೆಯುವ ಗುರಿ ಹೊಂದಲಾಗಿದೆ," ಎಂದು ವಿಕ್ರಮ್‌ ಸಾರಾಭಾಯಿ ಸ್ಪೇಸ್‌ ಸೆಂಟರ್‌ನ ನಿರ್ದೇಶಕರಾದ ಸಿವನ್'ರವರು ಹೇಳಿದ್ದಾರೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Isro to launch 22 satellites in one mission next month. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot