ಪುನರ್ಬಳಕೆ ಉಡಾವಣಾ ವಾಹನದ ವಿಶೇಷತೆ/ಅದ್ಭುತ ಫೋಟೋಗಳು!!

Written By:

ಭಾರತ ದೇಶಿಯವಾಗಿ ಇದೇ ಮೊಟ್ಟ ಮೊದಲು ಬಾರಿಗೆ ಅಭಿವೃದ್ದಿಪಡಿಸಿದ ಪುನರ್ಬಳಕೆಯ ಬಾಹ್ಯಾಕಾಶ ಉಡಾವಣಾ ವಾಹನವನ್ನು ಯಶಸ್ವಿಯಾಗಿ ಸೋಮವಾರ ಉಡಾವಣೆ ಮಾಡಿದೆ. ಇಸ್ರೋ ಅಭಿವೃದ್ದಿಪಡಿಸಿ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದ ಬಾಹ್ಯಾಕಾಶ ಉಡಾವಣಾ ವಾಹನದ ವಿಶೇಷ ಅಂದ್ರೆ ಆಮ್ಲಜನಕ'ವನ್ನು ಜೊತೆಯಲ್ಲಿ ಸಾಗಿಸುವ ಬದಲು, ಸಂಚರಿಸುವ ವಾತಾವರಣದಲ್ಲೇ ಪಡೆಯಲಿದೆಯಂತೆ.

ಅಂದಹಾಗೆ ಜಾಗತಿಕವಾಗಿ ಮತ್ತು ಭಾರತದ ಸ್ಪೇಸ್‌ ಇಂಡಸ್ಟ್ರಿಯಲ್ಲಿ ಪುನರ್ಬಳಕೆಯ ಬಾಹ್ಯಾಕಾಶ ಉಡಾವಣೆ ವಾಹನ ಲಾಂಚ್‌ ಮಾಡಿರುವುದು ಉತ್ತಮ ಮೈಲಿಗಲ್ಲಾಗಿದೆ. ಇಸ್ರೋ ಉಡಾವಣೆ ಮಾಡಿದ RLV-TD ಬಾಹ್ಯಾಕಾಶ ನೌಕೆ ಉಡಾವಣ ವಾಹನದ ವಿಶೇಷತೆ ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ ಮತ್ತು ಅದ್ಭುತ ಫೋಟೋಗಳನ್ನು ನೋಡಿರಿ.

ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ
ಚಿತ್ರ ಕೃಪೆ:ISRO

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
RLV-TD ಬಾಹ್ಯಾಕಾಶ ಉಡಾವಣಾ ವಾಹನ

RLV-TD ಬಾಹ್ಯಾಕಾಶ ಉಡಾವಣಾ ವಾಹನ

1

ಇಸ್ರೊ RLV-TD ಬಾಹ್ಯಾಕಾಶ ಉಡಾವಣಾ ವಾಹನ ಚಾಲನಾ ವ್ಯವಸ್ಥೆಯಲ್ಲಿ ವಾತಾವರಣದಿಂದ ಆಮ್ಲಜನಕ ಪಡೆಯುವ ಬಗ್ಗೆ ಪರೀಕ್ಷೆಯನ್ನು ನಡೆಸುತ್ತಿದೆ. ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ ಆಮ್ಲಜನಕವನ್ನು ಸಾಗಿಸುವ ಬದಲು ಈ ತೀರ್ಮಾನ ಕೈಗೊಳ್ಳಲಾಗಿದೆ.

50 ಕಿಲೋ ಮೀಟರ್‌ವರೆಗೆ ಆಕ್ಸಿಜನ್‌

50 ಕಿಲೋ ಮೀಟರ್‌ವರೆಗೆ ಆಕ್ಸಿಜನ್‌

2

ಬಾಹ್ಯಾಕಾಶ ಉಡಾವಣಾ ವಾಹನವನ್ನು ಧ್ವನಿ ಸಹಿತ ರಾಕೆಟ್‌ನೊಂದಿಗೆ ಜೂನ್‌ ಕೊನೆಯ ವಾರದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಶ್ರೀಹರಿಕೋಟಾದ 'ಸತೀಶ್ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಪರೀಕ್ಷೆಗೆ ಉಡಾವಣೆ ಮಾಡಲಾಗುವುದು. ಆಮ್ಲಜನಕ ಉಸಿರಾಟದ ವ್ಯವಸ್ಥೆಯನ್ನು ಭೂಮಿಯಿಂದ 50 ಕಿಲೋ ಮೀಟರ್‌ ಎತ್ತರದವರೆಗೆ ಹೊಂದುವ ಗುರಿ ಹೊಂದಿದೆ.

ರಾಕೆಟ್‌ ಸಾಮರ್ಥ್ಯ ಅಭಿವೃದ್ದಿ

ರಾಕೆಟ್‌ ಸಾಮರ್ಥ್ಯ ಅಭಿವೃದ್ದಿ

3

"RLV-TD ಉಡಾವಣಾ ವಾಹನವು ಒತ್ತೋಯ್ಯುವ ಸಾಮರ್ಥ್ಯವನ್ನು ಕಡಿಮೆ ಮಾಡಿ ಅದರ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಆಮ್ಮಜನಕ ಉಸಿರಾಟದ ವ್ಯವಸ್ಥೆಯನ್ನು ವಾತಾವರಣದಲ್ಲೇ ಪಡೆಯುವ ಗುರಿ ಹೊಂದಲಾಗಿದೆ," ಎಂದು ವಿಕ್ರಮ್‌ ಸಾರಾಭಾಯಿ ಸ್ಪೇಸ್‌ ಸೆಂಟರ್‌ನ ನಿರ್ದೇಶಕರಾದ ಸಿವನ್'ರವರು ಹೇಳಿದ್ದಾರೆ.

ದೀರ್ಘ ಸಮಯದ ಚಾಲನೆ

ದೀರ್ಘ ಸಮಯದ ಚಾಲನೆ

4

ಹೊಸ ಚಾಲನೆ ವ್ಯವಸ್ಥೆಯಲ್ಲಿ ಇಸ್ರೊ ಪುನರ್ಬಳಕೆಯ ಉಡಾವಣಾ ವಾಹನ ಅಭಿವೃದ್ದಿಯನ್ನು ದೀರ್ಘ ಸಮಯದ ಚಾಲನೆ ದೃಷ್ಟಿಯಿಂದ ಅಭಿವೃದ್ದಿಪಡಿಸಿದೆ. ಅಲ್ಲದೇ ಸ್ಕ್ರಾಮ್‌ಜೆಟ್‌ ಇಂಜಿನ್‌ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸೋಲಾರ್‌ ಪವರ್

ಸೋಲಾರ್‌ ಪವರ್

5

ಇತರೆ ಉಪಗ್ರಹಗಳು ಸೋಲಾರ್‌ ಪವರ್‌ ಉಪಯೋಗಿಸುವಂತೆ 'RLV-TD' ಯು ಆಕ್ಸಿಜನ್‌ ಒತ್ತೋಯ್ಯುವ ಬದಲಾಗಿ ವಾತಾವರಣದಿಂದ ಆಮ್ಲಜನಕ ಇಂಧಣ ಪಡೆಯಲಿದೆ ಎಂದು ಸಿವನ್‌ ಹೇಳಿದ್ದಾರೆ.

ಇಸ್ರೊ

ಇಸ್ರೊ

6

ಉಡಾವಣಾ ವಾಹನದ ವೆಚ್ಚ ಕಡಿಮೆ ಮಾಡಲು ಇಸ್ರೊ ಹಲವು ಟೆಕ್ನಾಲಜಿಗಳನ್ನು ಪರೀಕ್ಷೆ ನಡೆಸುತ್ತಿದೆ. ರಾಷ್ಟ್ರೀಯ ಸ್ಪೇಸ್‌ ಏಜೆನ್ಸಿಯು ಇತ್ತೀಚೆಗೆ ಒಂದೇ ಮಷಿನ್‌ನಿಂದ ಹಲವು ಉಪಗ್ರಹಗಳಿಗೆ ಕಳುಹಿಸುವ ರಾಕೆಟ್‌ ಅನ್ನು ಅಭಿವೃದ್ದಿಪಡಿಸಿತ್ತು.

"RLV-TD" ವಿಶೇಷತೆ

7

RLV-TD ತನ್ನ ಎಲ್ಲಾ ಉದ್ದೇಶಗಳನ್ನು ತಲುಪಿದ್ದು ಅದ್ಭುತ ಯಶಸ್ಸು ಪಡೆದಿದೆ. ಶಬ್ದಾತೀತ ವೇಗದಲ್ಲಿ ಹಾರುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

RLV-TD ವೇಗ

RLV-TD ವೇಗ

8

RLV-TD ಶಬ್ದಾತೀತ ವೇಗ Mach 4.9.

RLV-TD ಅಭಿವೃದ್ದಿ ವೆಚ್ಚ

RLV-TD ಅಭಿವೃದ್ದಿ ವೆಚ್ಚ

9

RLV-TD ಅಭಿವೃದ್ದಿ ಪಡಿಸಲು 5 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು ಮತ್ತು ಭಾರತ ಸರ್ಕಾರ 95 ಕೋಟಿ ವೆಚ್ಚವನ್ನು ಈ ಯೋಜನೆಗೆ ಬಂಡವಾಳ ನೀಡಿತ್ತು.

ಬಂಗಾಳ ಕೊಲ್ಲಿ

ಬಂಗಾಳ ಕೊಲ್ಲಿ

10

RLV-TDಯು 770 ಸೆಕೆಂಡ್‌ಗಳಲ್ಲಿ ಮರಳಿ ಬಂಗಾಳ ಕೊಲ್ಲಿಯಲ್ಲಿ ಇಳಿಯಿತು.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Amazing Pictures From The India’s First Ever Space Shuttle Launch. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot