ಆಪ್‌ಗಳನ್ನು ಅಪ್‌ಡೇಟ್‌ ಮಾಡಲು ಸಮಸ್ಯೆ ಎದುರಾದ್ರೆ ಈ ಕ್ರಮ ಅನುಸರಿಸಿ

|

ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಹಲವು ಸಾಮಾಜಿಕ ಆಪ್‌ಗಳು, ಗೇಮ್‌ ಆಪ್‌ಗಳು ಹಾಗೂ ಬ್ಯಾಂಕಿಂಗ್‌ ಆಪ್‌ಗಳು ಸೇರಿದಂತೆ ಇನ್ನಿತರೆ ಆಪ್‌ಗಳು ಇದ್ದೇ ಇರುತ್ತವೆ. ವಿವಿಧ ಉಪಯೋಗಕ್ಕಾಗಿ ಈ ಆಪ್‌ಗಳನ್ನು ನಿರಂತರವಾಗಿ ಬಳಕೆ ಮಾಡುತ್ತಲೇ ಬರುತ್ತೇವೆ. ಆದರೆ ಕಂಪೆನಿಗಳು ತಮ್ಮ ಆಪ್‌ನಲ್ಲಿ ಏನಾದರೂ ನವೀಕರಣ ಮಾಡಿದಾಗ ಆಪ್‌ ಅನ್ನು ಅಪ್‌ಡೇಟ್‌ ಮಾಡಲೇ ಬೇಕಾಗುತ್ತದೆ. ಇಲ್ಲವಾದರೆ ಆಪ್‌ ಕೆಲಸ ಮಾಡುವುದಿಲ್ಲ. ಕೆಲವೊಮ್ಮೆ ಆಪ್‌ ಅಪ್‌ಗ್ರೇಡ್‌ ಮಾಡುವಾಗ ಬಹುಪಾಲು ಬಳಕೆದಾರರು ಸಮಸ್ಯೆ ಎದುರಿಸುತ್ತಾರೆ.

ಅಪ್ಲಿಕೇಶನ್‌

ಹೌದು, ಅಪ್ಲಿಕೇಶನ್‌ಗಳು ಸರಾಗವಾಗಿ ಕಾರ್ಯನಿರ್ವಹಿಸಲು ಕಂಪೆನಿಯು ಆಗಾಗ್ಗೆ ಹೊಸ ನವೀಕರಣವನ್ನು ನೀಡುತ್ತಿರುತ್ತದೆ. ಆದರೆ, ನಾವು ಅಪ್‌ಡೇಟ್ ಬಟನ್ ಒತ್ತಿದಾಗ ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್ ಅದನ್ನು ಅಪ್‌ಡೇಟ್‌ ಮಾಡುವುದಿಲ್ಲ. ಈ ವೇಳೆ ಸಮಸ್ಯೆ ಉಂಟಾಗುತ್ತದೆ. ಈ ತೊಂದರೆಯನ್ನು ನಿವಾರಿಸಿಕೊಳ್ಳಲು ನೀವು ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಆ ವಿವರವನ್ನು ಇಲ್ಲಿ ನೀಡಲಾಗಿದೆ ಓದಿರಿ.

ಇಂಟರ್ನೆಟ್ ಕನೆಕ್ಟಿವಿಟಿ ಪರಿಶೀಲಿಸಿ

ಇಂಟರ್ನೆಟ್ ಕನೆಕ್ಟಿವಿಟಿ ಪರಿಶೀಲಿಸಿ

ಈ ರೀತಿಯ ಸಮಸ್ಯೆ ನಿಮಗೆ ಎದುರಾದರೆ ಮೊದಲು ನೀವು ಮಾಡಬೇಕಿರುವುದು ಇಂಟರ್ನೆಟ್ ಕನೆಕ್ಟಿವಿಟಿ ಸರಿಯಾಗಿದೆಯಾ ಎಂಬುದನ್ನು ಪರಿಶೀಲಿಸಬೇಕಿದೆ. ಅದಷ್ಟೇ ಅಲ್ಲದೆ ಸಾಕಷ್ಟು ನೆಟ್‌ವರ್ಕ್‌ ಬಾರ್‌ಗಳು ಇರುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಸ್ಪೀಡ್ ಟೆಸ್ಟ್ ವೆಬ್‌ಸೈಟ್‌ಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಇಂಟರ್ನೆಟ್ ವೇಗ ಎಷ್ಟಿದೆ ಎಂಬುದನ್ನು ಕಂಡುಕೊಳ್ಳಿ.

ಡಿವೈಸ್‌ ಸ್ಟೋರೇಜ್‌ ಪರಿಶೀಲಿಸಿ

ಡಿವೈಸ್‌ ಸ್ಟೋರೇಜ್‌ ಪರಿಶೀಲಿಸಿ

ಪ್ರಮುಖವಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸಮಸ್ಯೆ ಎದುರಾಗುತ್ತದೆ. ಹೆಚ್ಚಿನ ಜಂಕ್‌ ಫೈಲ್‌ ಹಾಗೂ ದೊಡ್ಡ ಗಾತ್ರದ ಫೈಲ್‌ಗಳು ಡಿವೈಸ್‌ ಸ್ಟೋರೇಜ್‌ ಅನ್ನು ಕಡಿಮೆ ಮಾಡಿರುತ್ತವೆ. ಆಗ ಬೇಡವಾದ ಆಪ್‌ ಅಥವಾ ಫೈಲ್‌ ಗಳನ್ನು ಡಿಲೀಟ್ ಮಾಡಿ, ಜೊತೆಗೆ ಸೆಕ್ಯೂರಿಟಿ ಆಪ್‌ಗಳ ಮೂಲಕ ಜಂಕ್‌ ಫೈಲ್‌ ಅನ್ನು ಸಹ ಡಿಲೀಟ್‌ ಮಾಡಿ.

ಪ್ಲೇ ಸ್ಟೋರ್ ಆಪ್‌ನಲ್ಲಿ ಕ್ಯಾಶ್(cache) ಕ್ಲಿಯರ್‌ ಮಾಡಿ

ಪ್ಲೇ ಸ್ಟೋರ್ ಆಪ್‌ನಲ್ಲಿ ಕ್ಯಾಶ್(cache) ಕ್ಲಿಯರ್‌ ಮಾಡಿ

ಎರಡೂ ಆಯ್ಕೆಗಳ ಹೊರತಾಗಿಯೂ ನೀವು ಈ ಮಾರ್ಗದ ಮೂಲಕವೂ ಆಪ್‌ ಅಪ್‌ಡೇಟ್‌ ಮಾಡಬಹುದು. ಅಪ್‌ಡೇಟ್‌ ಅವಶ್ಯಕತೆ ಇದ್ದರೂ ಕೆಲವು ಸಲ ಗೂಗಲ್ ಆಪ್‌ ನವೀಕರಣವನ್ನು ತಡೆಯುತ್ತದೆ. ಹೀಗಾಗಿ ನಿಮ್ಮ ಆಪ್‌ ಅಪ್‌ಡೇಟ್‌ ಮಾಡುವ ಮುನ್ನ ಪ್ಲೇ ಸ್ಟೋರ್‌ನ ಸ್ಟೋರೇಜ್ ಡೇಟಾವನ್ನು ಡಿಲೀಟ್‌ ಮಾಡಬೇಕಿದೆ. ಇದರಿಂದ ಆಪ್‌ಗಳು ಸರಾಗವಾಗಿ ಅಪ್‌ಡೇಟ್‌ ಆಗುತ್ತವೆ.

ಆಟೋ-ಅಪ್‌ಡೇಟ್‌ ಆಪ್‌ಗಳು

ಆಟೋ-ಅಪ್‌ಡೇಟ್‌ ಆಪ್‌ಗಳು

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ-ಅಪ್‌ಡೇಟ್‌ ಆಯ್ಕೆ ಸಹ ಇದ್ದು, ನೀವು ಮೇಲೆ ವಿವರಿಸಲಾದ ಯಾವ ಕೆಲಸವನ್ನೂ ಮಾಡಬೇಕಿಲ್ಲ. ಯಾಕೆಂದರೆ ಆಪ್‌ಗಳು ನವೀಕರಣ ಆಗಲು ಮುಂದಾದಾಗ ಸ್ಮಾರ್ಟ್‌ಫೋನ್‌ ಅದಕ್ಕೆ ಬೆಂಬಲ ನೀಡುತ್ತದೆ. ಜೊತೆಗೆ ಆಟೋಮ್ಯಾಟಿಕ್‌ ಆಗಿ ಆಪ್‌ಗಳು ಕಾಲಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಿರುತ್ತವೆ.

ದಿನಾಂಕ ಮತ್ತು ಸಮಯವನ್ನು ಪರಿಶೀಲಿಸಿ

ದಿನಾಂಕ ಮತ್ತು ಸಮಯವನ್ನು ಪರಿಶೀಲಿಸಿ

ಪ್ರಮುಖ ವಿಷಯ ಎಂದರೆ ಸ್ಮಾರ್ಟ್‌ಫೋನ್‌ ಆಪ್‌ಗಳ ಅಪ್‌ಡೇಟ್‌ಗೂ ನಿಮ್ಮ ಫೋನ್‌ನಲ್ಲಿ ಕಾಣಿಸಿಕೊಳ್ಳುವ ದಿನಾಂಕ ಅಥವಾ ಸಮಯಕ್ಕೂ ಸಂಬಂಧ ಇದೆ. ದಿನಾಂಕ ಹಾಗೂ ಸಮಯ ಸರಿಯಾಗಿ ಇಲ್ಲ ಎಂದರೆ ಕೆಲವು ಆಪ್‌ಗಳು ಅಪ್‌ಡೇಟ್‌ ಆಯ್ಕೆಗೆ ಸಪೋರ್ಟ್‌ ಮಾಡುವುದಿಲ್ಲ.

ಫೋರ್ಸ್‌ಸ್ಟಾಪ್‌ ಮಾಡಿ

ಫೋರ್ಸ್‌ಸ್ಟಾಪ್‌ ಮಾಡಿ

ಗೂಗಲ್ ಪ್ಲೇ ಸ್ಟೋರ್ ಅನ್ನು ಫೋರ್ಸ್‌ಸ್ಟಾಪ್‌ ಮಾಡುವ ಮೂಲಕ ಎಲ್ಲಾ ಡೇಟಾವನ್ನು ಡಿಲೀಟ್‌ ಮಾಡಿ ಮತ್ತೆ ಹೊಸದಾಗಿ ಅಪ್‌ಡೇಟ್‌ ಮಾಡಿಕೊಳ್ಳಬಹುದು. ಇದರಲ್ಲಿ ಮತ್ತೆ ನೀವು ನಿಮ್ಮ ಮಾಹಿತಿಯನ್ನು ದೃಢೀಕರಿಸಬೇಕಾಗುತ್ತದೆ.

ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಗೂಗಲ್ ಪ್ಲೇ ಸ್ಟೋರ್‌ ಮೂಲಕ ಎಲ್ಲಾ ರೀತಿಯ ಆಪ್‌ಗಳನ್ನು ಅಧಿಕೃತವಾಗಿ ಅಪ್‌ಡೇಟ್‌ ಮಾಡಬಹುದು. ಅದಕ್ಕೂ ಮಿಗಿಲಾಗಿ ನೀವು ಗೂಗಲ್‌ ಅಲ್ಲದ ಸಂಪನ್ಮೂಲದಿಂದ APK ಫೈಲ್ ಅನ್ನು ಬಳಸಿಕೊಂಡು ಆಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದರೆ ಅದನ್ನು ಅನ್‌ಇನ್‌ಸ್ಟಾಲ್‌ ಮಾಡಿ.

ಅನಿರ್ಬಂಧಿತ ಡೇಟಾ ಬಳಕೆಗೆ ಅನುಮತಿ ನೀಡಿ

ಅನಿರ್ಬಂಧಿತ ಡೇಟಾ ಬಳಕೆಗೆ ಅನುಮತಿ ನೀಡಿ

ಸಾಮಾನ್ಯವಾಗಿ ಡೇಟಾವನ್ನು ಉಳಿಸಲು ನೀವು ಡೇಟಾ ಸೇವರ್ ಮೋಡ್ ಸಕ್ರಿಯಗೊಳಿಸಿದ್ದರೆ ಅದನ್ನು ಅಪ್‌ಡೇಟ್‌ ಮಾಡುವ ವೇಳೆ ಆಫ್‌ ಮಾಡಿ. ಡೇಟಾ ಸೇವರ್ ಮೋಡ್ ಆನ್ ಆಗಿರುವಾಗಲೂ ಪ್ಲೇ ಸ್ಟೋರ್ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಅಪ್‌ಡೇಟ್‌ ಸಮಯದಲ್ಲಿ ಸಾಕಷ್ಟು ಡೇಟಾ ಬೇಕಿರುವುದರರಿಂದ ಇದನ್ನು ಆಪ್ ಮಾಡಲೇ ಬೇಕು.

ಗೂಗಲ್‌ ಖಾತೆಯನ್ನು ಮತ್ತೊಮ್ಮೆ ಸೆಟ್ ಮಾಡಿ

ಗೂಗಲ್‌ ಖಾತೆಯನ್ನು ಮತ್ತೊಮ್ಮೆ ಸೆಟ್ ಮಾಡಿ

ಕೆಲವು ಬಾರಿ ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ ಖಾತೆಯ ಮಾಹಿತಿ ವಿಫಲವಾಗುತ್ತದೆ. ಹೀಗಾಗಿ ಆಂಡ್ರಾಯ್ಡ್‌ಡಿವೈಸ್‌ಗಳಲ್ಲಿ ಅಪ್‌ಗಳನ್ನು ಅಪ್‌ಡೇಟ್‌ ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮ ಪ್ರಸ್ತುತ ಇರುವ ಖಾತೆಯನ್ನು ಡಿಲೀಟ್‌ ಮಾಡಿ ಮತ್ತೆ ಹೊಸದಾಗಿ ಎಂಟ್ರಿ ಮಾಡಿ.

ಡೇಟಾ ಸೇವರ್ ಮೋಡ್ ನಿಷ್ಕ್ರಿಯಗೊಳಿಸಿ

ಡೇಟಾ ಸೇವರ್ ಮೋಡ್ ನಿಷ್ಕ್ರಿಯಗೊಳಿಸಿ

ಸಾಮಾನ್ಯವಾಗಿ ಡೇಟಾ ಉಳಿಸಲು ಇನ್‌ಬಿಲ್ಟ್‌ ಡೇಟಾ ಸೇವರ್ ಮೋಡ್‌ ಫೀಚರ್ಸ್‌ ಸ್ಮಾರ್ಟ್‌ಫೋನ್‌ನಲ್ಲಿ ಇರುತ್ತದೆ. ಸಕ್ರಿಯ ಡೇಟಾ ಸೇವರ್ ಮೋಡ್ ಅಪ್ಲಿಕೇಶನ್ ನವೀಕರಣ ಕಾರ್ಯವನ್ನು ತಡೆಯುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ.

Best Mobiles in India

English summary
Smartphones usually have many apps. If there is any update problem in the apps, read this article. It has an explanation.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X