ಐಟೆಲ್‌ನಿಂದ ಮತ್ತೊಂದು ಎಂಟ್ರಿ ಲೆವೆಲ್‌ ಫೋನ್‌ ಅನಾವರಣ! ಫೀಚರ್ಸ್‌ ಹೇಗಿದೆ?

|

ಮೊಬೈಲ್‌ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್‌ ಫೋನ್‌ಗಳಿಗೆ ಐಟೆಲ್‌ ಕಂಪೆನಿ ಪ್ರಸಿದ್ಧಿ ಪಡೆದಿದೆ. ಕೈ ಗೆಟಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸೋರಿಗೆ ಐಟೆಲ್‌ ಫೋನ್‌ಗಳು ನೆಚ್ಚಿನ ಆಯ್ಕೆಯಾಗಿವೆ. ಇದಕ್ಕೆ ತಕ್ಕಂತೆ ಐಟೆಲ್‌ ಕಂಪೆನಿ ಕೂಡ ಹಲವು ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಪರಿಚಯಿಸಿದೆ. ಇದೀಗ ತನ್ನ ಹೊಸ ಐಟೆಲ್‌ A24 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್‌ ದಪ್ಪವಾದ ಬೆಜೆಲ್ಸ್‌ ಹೊಂದಿರುವ ಸ್ಮಾಲ್‌ ಡಿಸ್‌ಪ್ಲೇ ಒಳಗೊಂಡಿದೆ.

ಐಟೆಲ್‌ನಿಂದ ಮತ್ತೊಂದು ಎಂಟ್ರಿ ಲೆವೆಲ್‌ ಫೋನ್‌ ಅನಾವರಣ! ಫೀಚರ್ಸ್‌ ಹೇಗಿದೆ?

ಹೌದು, ಐಟೆಲ್‌ ಕಂಪೆನಿ ಹೊಸ ಐಟೆಲ್‌ A24 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು ಕೇವಲ 5 ಇಂಚಿನ ಡಿಸ್‌ಪ್ಲೇ ಹೊಂದಿರುವ ಕಾಂಪ್ಯಾಕ್ಟ್ ಫೋನ್ ಆಗಿದೆ. ಇನ್ನು ಸ್ಮಾರ್ಟ್‌ಫೋನ್‌ ಯುನಿಸೋಕ್‌ SC9832E ಕ್ವಾಡ್‌ಕೋರ್‌ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 3,020mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಐಟೆಲ್‌ A24 ಪ್ರೊ ಸ್ಮಾರ್ಟ್‌ಫೋನ್‌ 5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 850 x 480 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 65.36 ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಜೊತೆಗೆ 294 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ನೀಡಲಿದೆ. ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಸ್ಮಾಲ್‌ ಡಿಸ್‌ಪ್ಲೇ ಹೊಂದಿರುವುದರಿಂದ ಇದು ಕಂಪ್ಯಾಕ್ಟ್‌ ಫೋನ್‌ ಆಗಿದೆ.

ಐಟೆಲ್‌ನಿಂದ ಮತ್ತೊಂದು ಎಂಟ್ರಿ ಲೆವೆಲ್‌ ಫೋನ್‌ ಅನಾವರಣ! ಫೀಚರ್ಸ್‌ ಹೇಗಿದೆ?

ಪ್ರೊಸೆಸರ್‌ ಯಾವುದು?
ಈ ಸ್ಮಾರ್ಟ್‌ಫೋನ್‌ ಯುನಿಸೋಕ್‌ SC9832E ಕ್ವಾಡ್‌ಕೋರ್‌ ಚಿಪ್‌ಸೆಟ್‌ನಲ್ಲಿ ರನ್‌ ಆಗಲಿದೆ. ಇದು ಆಂಡ್ರಾಯ್ಡ್‌ 12 (Go ಆವೃತ್ತಿ) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು 32GB ವರೆಗೆ ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ.

ಕ್ಯಾಮೆರಾ ಸೆಟ್‌ಅಪ್‌ ಏನು?
ಐಟೆಲ್‌ A24 ಪ್ರೊ ಸ್ಮಾರ್ಟ್‌ಫೋನ್‌ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ 0.3 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇನ್ನು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್‌ ಅನ್ನು ಕೂಡ ಅಳವಡಿಸಲಾಗಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಕೂಡ ಎಲ್‌ಇಡಿ ಫ್ಲ್ಯಾಷ್‌ ಅನ್ನು ಬೆಂಬಲಿಸಲಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್‌ ಜೂಮ್‌ ಅನ್ನು ಅಳವಡಿಸಲಾಗಿದೆ.

ಐಟೆಲ್‌ನಿಂದ ಮತ್ತೊಂದು ಎಂಟ್ರಿ ಲೆವೆಲ್‌ ಫೋನ್‌ ಅನಾವರಣ! ಫೀಚರ್ಸ್‌ ಹೇಗಿದೆ?

ಬ್ಯಾಟರಿ ಮತ್ತು ಇತರೆ
ಐಟೆಲ್‌ A24 ಪ್ರೊ ಸ್ಮಾರ್ಟ್‌ಫೋನ್‌ 3,020mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಮೈಕ್ರೋ ಯುಎಸ್‌ಪಿ ಪೋರ್ಟ್‌ ಮೂಲಕ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೊಮೀಟರ್ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಐಟೆಲ್‌ A24 ಪ್ರೊ ಸ್ಮಾರ್ಟ್‌ಫೋನ್‌ ಪ್ರಸ್ತುತ ಬಾಂಗ್ಲಾದೇಶದಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ಆ ದೇಶದಲ್ಲಿ BDT 5,990 ( ಅಂದಾಜು 4,592ರೂ.) ಬೆಲೆಯಲ್ಲಿ ದೊರೆಯಲಿದೆ. ಇದು ಭಾರತಕ್ಕೆ ಅತಿ ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಹಸಿರು ಬಣ್ಣದಲ್ಲಿ ಮಾತ್ರ ದೊರೆಯಲಿದೆ. ಭಾರತದ ಮಾರುಕಟ್ಟೆಯಲ್ಲಿ ಕೂಡ ಈ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಪ್ರೈಸ್‌ಟ್ಯಾಗ್‌ನಲ್ಲಿಯೇ ಬರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Itel A24 Pro with 5-inch Display Launched; details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X