ಐಟೆಲ್‌ನಿಂದ ಬ್ಲೂಟೂತ್‌ ಕಾಲಿಂಗ್‌ ಸ್ಮಾರ್ಟ್‌ವಾಚ್‌ ಬಿಡುಗಡೆ! ಬೆಲೆ ಎಷ್ಟಿದೆ?

|

ಐಟೆಲ್‌ ಕಂಪೆನಿ ಭಾರತದ ಟೆಕ್‌ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಡಿವೈಸ್‌ಗಳನ್ನು ಪರಿಚಯಿಸಿದೆ. ಸ್ಮಾರ್ಟ್‌ವಾಚ್‌ಗಳ ಮೂಲಕ ಕೂಡ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ. ಇದೀಗ ತನ್ನ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಮುಂದಾಗಿದೆ. ಅದರಂತೆ ಭಾರತದ ಮಾರುಕಟ್ಟೆಯಲ್ಲಿ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಐಟೆಲ್‌ ಸ್ಮಾರ್ಟ್‌ವಾಚ್‌ 2 ಮತ್ತು ಸ್ಮಾರ್ಟ್‌ವಾಚ್‌ 1GS ಎಂದು ಹೆಸರಿಸಲಾಗಿದೆ.

ಸ್ಮಾರ್ಟ್‌ವಾಚ್‌

ಹೌದು, ಐಟೆಲ್‌ ಕಂಪೆನಿ ಭಾರತದಲ್ಲಿ ಸ್ಮಾರ್ಟ್‌ವಾಚ್‌ 2 ಮತ್ತು ಸ್ಮಾರ್ಟ್‌ವಾಚ್‌ 1GS ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಈ ಎರಡು ಸ್ಮಾರ್ಟ್‌ವಾಚ್‌ಗಳು ಬಜೆಟ್‌ ಬೆಲೆಯಲ್ಲಿ ಬರಲಿವೆ. ಇದರಲ್ಲಿ ಸ್ಮಾರ್ಟ್‌ವಾಚ್‌ 1GS ಮಾದರಿಯು ಮೆಟಾಲಿಕ್ ಬಾಡಿ ವಿನ್ಯಾಸವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ 2 128MB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಲೋಕಲ್‌ ಮ್ಯೂಸಿಕ್‌ ಪ್ಲೇಯರ್‌ ನೀಡಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಟೆಲ್‌ ಸ್ಮಾರ್ಟ್‌ವಾಚ್ 1GS

ಐಟೆಲ್‌ ಸ್ಮಾರ್ಟ್‌ವಾಚ್ 1GS

ಐಟೆಲ್‌ ಸ್ಮಾರ್ಟ್‌ವಾಚ್ 1GS ವೃತ್ತಾಕಾರದ 1.32 ಇಂಚಿನ IPS LCD ಸ್ಕ್ರೀನ್‌ ಹೊಂದಿದೆ. ಇದು ಮೆಟಾಲಿಕ್ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅತಿಗೆಂಪು SpO2 ರಕ್ತದ ಆಮ್ಲಜನಕ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಸ್ಲಿಪ್‌ ಟ್ರ್ಯಾಕ್‌ ಫೀಚರ್ಸ್‌ ಕೂಡ ಒಳಗೊಂಡಿದೆ. ಇದರಲ್ಲಿ ನೀವು ನಿಮ್ಮ ಹೃದಯ ಬಡಿತವನ್ನು 24X7 ಅನ್ನು ಮ್ಯಾಪ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ. ಇದು 250mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲ್‌ ಮಾಡುವಾಗ 5 ಗಂಟೆಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ. ಇದು ಸ್ಟಾಪ್‌ವಾಚ್‌ನೊಂದಿಗೆ ಬರುತ್ತದೆ, ಇದು ರಿಮೋಟ್ ಕ್ಯಾಮೆರಾ, ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಬರುತ್ತದೆ.

ಐಟೆಲ್‌ ಸ್ಮಾರ್ಟ್‌ವಾಚ್‌ 2

ಐಟೆಲ್‌ ಸ್ಮಾರ್ಟ್‌ವಾಚ್‌ 2

ಐಟೆಲ್‌ ಸ್ಮಾರ್ಟ್‌ವಾಚ್‌ 2 128MB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಲೋಕಲ್‌ ಮ್ಯೂಸಿಕ್‌ ಪ್ಲೇಯರ್‌ನಲ್ಲಿ ಬಿಲ್ಟ್‌ ಮಾಡಲಾಗಿದೆ. ಇದರಿಂದ ಬಳಕೆದಾರರು ಇದರಲ್ಲಿ ತಮ್ಮ ನೆಚ್ಚಿನ 40 ಹಾಡುಗಳನ್ನು ಸ್ಟೋರೇಜ್‌ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಡ್ಯುಯಲ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಸ್ಮಾರ್ಟ್‌ವಾಚ್ ಜೋಡಿಯನ್ನು ಸ್ಮಾರ್ಟ್‌ಫೋನ್ ಜೊತೆಗೆ ಒಂದೇ ಸಮಯದಲ್ಲಿ TWS ಇಯರ್‌ಬಡ್‌ಗಳೊಂದಿಗೆ ಅನುಮತಿಸುತ್ತದೆ. ಇನ್ನು ಈ ಡಿವೈಸ್‌ ಥಂಡರ್ ಬ್ಯಾಟಲ್‌ಶಿಪ್, ಯಂಗ್ ಬರ್ಡ್ ಮತ್ತು 2048 ಗೇಮ್‌ಗಳನ್ನು ಆಡುವುದಕ್ಕೆ ಅವಕಾಶ ನೀಡಲಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಇನ್ನು ಈ ಎರಡೂ ಸ್ಮಾರ್ಟ್‌ವಾಚ್‌ಗಳು ಕೂಡ ಬ್ಲೂಟೂತ್ 5.1 ಮತ್ತು IP68 ನೀರಿನ ಪ್ರತಿರೋಧವನ್ನು ಹೊಂದಿವೆ. ಇವುಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿದೆ. ಅದರಲ್ಲೂ ಮಧ್ಯಮ ವರ್ಗದ ಗ್ರಾಹಕರು ಇದರ ಮುಖ್ಯ ಟಾರ್ಗೆಟ್‌ ಆಗಿದೆ. ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ವಾಚ್‌ ಬಯಸೋರನ್ನು ಗುರಿಯಾಗಿಸಿದೆ. ಸ್ಮಾರ್ಟ್‌ ಡಿವೈಸ್‌ಗಳಾಗಿರುವ ಈ ಎರಡು ಸ್ಮಾರ್ಟ್‌ವಾಚ್‌ಗಳು ಹೌಸ್‌ಎ ಮೈಕ್ ಮತ್ತು ಸ್ಪೀಕರ್ ಅನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್‌ ಮಾಡಿದಾಗ ಕಾಲ್‌ ರಿಸೀವ್‌ ಮಾಡುವ ಸಾಮರ್ಥ್ಯವನ್ನು ಪಡೆದಿವೆ. ಅಲ್ಲದೆ ಕರೆ ಕಡಿತಗೊಳಿಸುವ ಸಾಮರ್ಥ್ಯವನ್ನು ಕೂಡ ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಟೆಲ್‌ ಕಂಪೆನಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ವಾಚ್‌ 1GS ಭಾರತದಲ್ಲಿ ಕೇವಲ 2,999ರೂ. ಬೆಲೆಯನ್ನು ಹೊಂದಿದೆ. ಆದರೆ ಸ್ಮಾರ್ಟ್‌ವಾಚ್‌ 2 ಮಾದರಿಯ ಬೆಲೆ 2,499ರೂ. ಆಗಿದೆ. ಈ ಎರಡು ಸ್ಮಾರ್ಟ್‌ವಾಚ್‌ಗಳನ್ನು ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿವೆ. ಇವುಗಳನ್ನು ಪ್ರಮುಖ ರಿಟೇಲ್‌ ಸ್ಟೋರ್‌ಗಳನ್ನು ಖರೀದಿಸಬಹುದಾಗಿದೆ.

Best Mobiles in India

English summary
Itel Smartwatch 1GS & Smartwatch 2 with Bluetooth calling launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X