JBL ಲೈವ್ ಪ್ರೊ 2 ಇಯರ್‌ಫೋನ್‌ ಲಾಂಚ್‌! 40 ಗಂಟೆಗಳ ಪ್ಲೇಬ್ಯಾಕ್!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಜೊತೆಗೊಂದು ಇಯರ್‌ಫೋನ್‌ ಬಳಸುವುದು ಸಾಮಾನ್ಯ. ಸ್ಮಾರ್ಟ್‌ಫೋನ್‌ಗೆ ಸೂಕ್ತವಾದ ಇಯರ್‌ಫೋನ್‌ ಗಳನ್ನು ಹೊಂದುವುದಕ್ಕೆ ಪ್ರತಿಯೊಬ್ಬರೂ ಬಯಸುತ್ತಾರೆ. ಸ್ಮಾರ್ಟ್‌ಫೋನ್‌ ಖರೀದಿಸಿದಾಗ ಇಯರ್‌ಫೋನ್‌ ನೀಡುವುದನ್ನು ಸ್ಟಾಪ್‌ ಮಾಡಿ ಬಹಳ ದಿನಗಳೇ ಆಗಿವೆ. ಇದೇ ಕಾರಣಕ್ಕೆ ಮ್ಯೂಸಿಕ್‌ ಪ್ರಿಯರು ತಮಗೆ ಬೇಕೆನಿಸುವ ಇಯರ್‌ಫೋನ್‌ ಅನ್ನು ಖರೀದಿಸುತ್ತಾರೆ. ಇದರಲ್ಲಿ ಹೆಚ್ಚಿನ ಜನರು ಬ್ರ್ಯಾಂಡ್‌ ಕಂಪೆನಿಗಳ ಇಯರ್‌ಫೋನ್‌ಗಳನ್ನು ಖರೀದಿಸುವುದಕ್ಕೆ ಮುಂದಾಗುತ್ತಾರೆ.

ಇಯರ್‌ಫೋನ್‌

ಹೌದು, ಇಯರ್‌ಫೋನ್‌ ಖರೀದಿಸುವ ಮುನ್ನ ಬಳಕೆದಾರರು ಕೆಲವು ಅಂಶಗಳನ್ನು ಪರಿಗಣಿಸುತ್ತಾರೆ. ಇದರಲ್ಲಿ ಇಯರ್‌ಬಡ್ಸ್‌ ಯಾವ ಕಂಪೆನಿಯದು ಎನ್ನುವ ಆಯ್ಕೆಯು ಕೂಡ ಪ್ರಮುಖವಾಗಿದೆ. ಅದರಿಂದ ಜನಪ್ರಿಯ ಬ್ರ್ಯಾಂಡ್‌ಗಳ ಇಯರ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಇವುಗಳಲ್ಲಿ ಕಂಪೆನಿ ಕೂಡ ಒಂದಾಗಿದೆ. ಜೆಬಿಎಲ್‌ ಕಂಪೆನಿ ಪ್ರಮುಖ ಹೆಡ್‌ಫೋನ್‌ ಕಂಪೆನಿಗಳಲ್ಲಿ ಒಂದಾಗಿದೆ. ಈಗಾಗಲೇ ಹಲವು ಮಾದರಿಯ ಹೆಡ್‌ಫೋನ್‌ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಮತ್ತೊಂದು ಹೊಸ ಹೆಡ್‌ಫೋನ್‌ ಲಾಂಚ್‌ ಮಾಡಿದೆ.

ಜೆಬಿಎಲ್‌

ಜೆಬಿಎಲ್‌ ಕಂಪೆನಿ ಭಾರತದಲ್ಲಿ ಹೊಸ JBL ಲೈವ್ ಪ್ರೊ 2 ಇಯರ್‌ಫೋನ್‌ ಪರಿಚಯಿಸಿದೆ. ಇದು ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೋ ಇಯರ್‌ಫೋನ್‌ ಆಗಿದೆ. ಈ ಇಯರ್‌ಫೋನ್‌ ಸ್ಮಾರ್ಟ್ ಆಂಬಿಯೆಂಟ್, 40 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಪರಿಪೂರ್ಣ ವಾಯ್ಸ್‌ ಕಾಲ್‌ ಗುಣಮಟ್ಟಕ್ಕಾಗಿ 6 ​​ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಟ್ರೂಲಿ ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ TWS ಅನ್ನು ಹೊಂದಿದೆ. ಹಾಗಾದ್ರೆ ಜೆಬಿಎಲ್‌ನ ಹೊಸ JBL ಲೈವ್ ಪ್ರೊ 2 ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

JBL ಲೈವ್ ಪ್ರೊ 2 ಫೀಚರ್ಸ್‌ ಹೇಗಿದೆ?

JBL ಲೈವ್ ಪ್ರೊ 2 ಫೀಚರ್ಸ್‌ ಹೇಗಿದೆ?

JBL ಲೈವ್ ಪ್ರೊ 2 ಇಯರ್‌ಫೋನ್‌ ಸ್ಟಿಕ್ ವಿನ್ಯಾಸವನ್ನು ಹೊಂದಿದೆ. ಇದು JBL ನ ಸಿಗ್ನೇಚರ್ ಸೌಂಡ್‌ ಅನ್ನು ತಲುಪಿಸುವ 11 ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ ಟ್ರೂಲಿ ಅಡಾಪ್ಟಿವ್ ನಾಯ್ಸ್‌ ಕ್ಯಾನ್ಸ್‌ಲೇಶನ್‌ ಅನ್ನು ಹೊಂದಿದೆ. ಅಲ್ಲದೆ ಅಗತ್ಯ ಎನಿಸಿದಾಗ ಬ್ಯಾಕ್‌ಗ್ರೌಂಡ್‌ ಸೌಂಡ್‌ ಬರುವಂತೆ ಮಾಡಲು ಆಂಬಿಯೆಂಟ್‌ ಸೌಂಡ್‌ ಬೆಂಬಲವನ್ನು ಕೂಡ ಒಳಗೊಂಡಿದೆ. ಈ ಇಯರ್‌ಬಡ್ಸ್‌ ಶಬ್ದ ಮತ್ತು ಗಾಳಿ ಪ್ರತ್ಯೇಕತೆಯ ಟೆಕ್ನಾಲಜಿಯನ್ನು ಹೊಂದಿರುವ 6 ಮೈಕ್ರೊಫೋನ್‌ಗಳನ್ನು ಹೊಂದಿವೆ.

ಗೂಗಲ್

ಇನ್ನು ಈ ಇಯರ್‌ಫೋನ್‌ಗಳು ಗೂಗಲ್ ಫಾಸ್ಟ್ ಜೋಡಿಯನ್ನು ಸಹ ಬೆಂಬಲಿಸುತ್ತವೆ. ಇದು ಅಮೆಜಾನ್‌ ಅಲೆಕ್ಸಾ ಮತ್ತು ಹೇ ಗೂಗಲ್‌ ನೊಂದಿಗೆ ಹ್ಯಾಂಡ್ಸ್-ಫ್ರೀ ಸೌಂಡ್‌ ಕಂಟ್ರೋಲ್‌ ಅನ್ನು ನೀಡಲಿದೆ. ಇದಲ್ಲದೆ JBL ಲೈವ್ ಪ್ರೊ 2 ಅನ್ನು JBL ಹೆಡ್‌ಫೋನ್‌ ಅಪ್ಲಿಕೇಶನ್‌ನೊಂದಿಗೆ ಕನೆಕ್ಟ್‌ ಮಾಡಬಹುದು. ಇದರಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮ್ಯೂಸಿಕ್‌ ಅನ್ನು ಕಸ್ಟಮೈಸ್‌ ಮಾಡಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ IPX5 ರೇಟ್‌ ಅನ್ನು ಹೊಂದಿದ್ದು, ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಯನ್ನು ನೀಡಲಿದೆ.

ಇಯರ್‌ಫೋನ್‌

JBL ಲೈವ್ ಪ್ರೊ 2 ಇಯರ್‌ಫೋನ್‌ ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದ ಈ ಇಯರ್‌ಬಡ್ಸ್‌ ಅನ್ನು ನೀವು ಕೇವಲ 15 ನಿಮಿಷಗಳ ಚಾರ್ಜ್‌ ಮಾಡಿದರೆ, 4 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ನೀಡಲಿದೆ ಎನ್ನಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಪೂರ್ತಿ ಚಾರ್ಜ್‌ನಲ್ಲಿ ಒಟ್ಟು 40 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ ಎಂದು ಜಿಬಿಎಲ್‌ ಕಂಪೆನಿ ಹೇಳಿಕೊಂಡಿದೆ. ಇದರಲ್ಲಿ ಇಯರ್‌ಬಡ್ಸ್‌ನಲ್ಲಿ 10 ಗಂಟೆಗಳು ಮತ್ತು ಚಾರ್ಜಿಂಗ್ ಕೇಸ್‌ನಿಂದ 30 ಗಂಟೆಗಳು ಸೇರಿವೆ.

ಇಯರ್‌ಫೋನ್‌

JBL ಲೈವ್ ಪ್ರೊ 2 ಇಯರ್‌ಫೋನ್‌ ಬಿಡುಗಡೆಯ ನಂತರ HARMAN ಇಂಡಿಯಾದ ಲೈಫ್‌ಸ್ಟೈಲ್‌ನ ಉಪಾಧ್ಯಕ್ಷ ವಿಕ್ರಮ್ ಖೇರ್ ತಮ್ಮದೇ ಆದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಂತೆ JBL ಲೈವ್ ಪ್ರೊ 2 ಇಯರ್‌ಫೋನ್‌ ಮೂಲಕ ಕೇಳುಗರಿಗೆ ಆಡಿಯೊ ಅನುಭವವನ್ನು ಹೊಸ ಮಾದರಿಯಲ್ಲಿ ನೀಡಲಿದೆ. ಅದರಲ್ಲೂ ಪ್ರಯಾಣದ ಸಂದರ್ಭದಲ್ಲಿ JBL ಲೈವ್ ಪ್ರೊ 2 ಇಯರ್‌ಫೋನ್‌ ನೀಡುವ ಅನುಭವ ಅಸಾಮಾನ್ಯ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ. ಮ್ಯೂಸಿಕ್‌ ಪ್ರಿಯರ ಆಡಿಯೋ ಕೇಳುವ ಅನುಭವವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಸಹ ಅಭಿಪ್ರಾಯ ಪಟ್ಟಿದ್ದಾರೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ JBL ಲೈವ್ ಪ್ರೊ 2 ಇಯರ್‌ಫೋನ್‌ ಬೆಲೆ 13,999ರೂ. ಆಗಿದೆ. ಈ ಇಯರ್‌ಫೋನ್‌ ಇಂದಿನಿಂದಲೇ ಖರೀದಿಗೆ ಲಭ್ಯವಾಗಲಿದೆ. ಇದು JBL.com, ಹರ್ಮನ್ ಬ್ರ್ಯಾಂಡ್ ಸ್ಟೋರ್‌ಗಳು ಮತ್ತು ಎಲ್ಲಾ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಹಾಗೂ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಪ್ರಸ್ತುತ JBL ಲೈವ್ ಪ್ರೊ 2 ಇಯರ್‌ಫೋನ್‌ಗಳು ನಿಮಗೆ ನೀಲಿ ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಜೆಬಿಎಲ್‌

ಇನ್ನು ಜೆಬಿಎಲ್‌ ಕಂಪನಿ ಭಾರತದಲ್ಲಿ ಇತ್ತೀಚಿಗೆ ಹೊಸ 'ಜೆಬಿಎಲ್‌ ಫ್ಲಿಪ್‌ 6' ಹೆಸರಿನ ವಾಟರ್‌ಫ್ರೂಫ್‌ ಬ್ಲೂಟೂತ್ ಸ್ಪೀಕರ್ ಅನ್ನು ಪರಿಚಯಿಸಿತ್ತು. ಈ ಡಿವೈಸ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ಎಂದು ರೇಟ್ ಮಾಡಲಾಗಿದ್ದು, ಬ್ಲೂಟೂತ್ v5.1 ಸೌಲಭ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡೂ ಸಾಧನಗಳಿಗೆ ಲಭ್ಯವಿರುವ (My JBL) ಮೈ ಜೆಬಿಎಲ್‌ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸ್ಪೀಕರ್‌ನ ಆಡಿಯೋ ಅನ್ನು ವೈಯಕ್ತೀಕರಿಸಬಹುದು.

ಜೆಬಿಎಲ್‌

ಇದಲ್ಲದೆ ಜೆಬಿಎಲ್‌ ಫ್ಲಿಪ್ 6 ಹಿಂದಿನ ಜೆಬಿಎಲ್‌ ಫ್ಲಿಪ್ 5 ನಂತೆಯೇ ಅದೇ ಕೊಳವೆಯ ವಿನ್ಯಾಸವನ್ನು ಹೊಂದಿದೆ. ಇದು ಪೋರ್ಟಬಲ್ ಸ್ಪೀಕರ್ ರೇಸ್‌ಟ್ರಾಕ್ ಆಕಾರದ ಆಡಿಯೋ ಡ್ರೈವರ್, ಟ್ವೀಟರ್ ಮತ್ತು ಡ್ಯುಯಲ್ ಬಾಸ್ ರೇಡಿಯೇಟರ್‌ಗಳೊಂದಿಗೆ ಟು ವೇ ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ. ಇದು ವೂಫರ್‌ಗೆ 30W - 20W ಮತ್ತು ಟ್ವೀಟರ್‌ಗೆ 10W ಪವರ್ ಔಟ್‌ಪುಟ್ ಅನ್ನು ನೀಡುತ್ತದೆ. ಹಾಗೆಯೇ ಈ ಸ್ಪೀಕರ್ 63Hz - 20kHz ಆವರ್ತನ ಪ್ರತಿಕ್ರಿಯೆ ಶ್ರೇಣಿಯನ್ನು ಒಳಗೊಂಡಿದೆ. ಟ್ಯೂಬ್ಯುಲರ್ ಸ್ಪೀಕರ್ ಪಾರ್ಟಿಬೂಸ್ಟ್‌ನೊಂದಿಗೆ ಬರುತ್ತದೆ.

Best Mobiles in India

English summary
JBL Live Pro 2 earbuds launched in India: starting price at Rs 13,999

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X