2021 ರ ದ್ವಿತೀಯಾರ್ಧದಲ್ಲಿ ಲಭ್ಯವಾಗಲಿದೆ ಜಿಯೋ 5G ನೆಟ್‌ವರ್ಕ್‌ ಸೇವೆ?

|

ಭಾರತದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ಭಾರತದಲ್ಲಿ 5G ನೆಟ್‌ವರ್ಕ್‌ ಪರಿಚಯಿಸೋದಕ್ಕೆ ಮುಂದಾಗಿರೋದು ನಿಮಗೆಲ್ಲಾ ತಿಳಿದೆ ಇದೆ. 2021 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ 5G ಸೇವೆಯನ್ನು ಪರಿಚಯಿಸಲಾಗುತ್ತೆ ಅನ್ನೊದನ್ನ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಇಂಡಿಯನ್‌ ಮೊಬೈಲ್ ಕಾಂಗ್ರೆಸ್ (IMC) 2020 ಪ್ರಧಾನ ಅಧಿವೇಶನದಲ್ಲಿ ಘೋಷಣೆ ಮಾಡಿದ್ದಾರೆ.

ಜಿಯೋ 5G

ಹೌದು, ಭಾರತದಲ್ಲಿ ಜಿಯೋ 5G ಸೇವೆ 2021 ರ ದ್ವಿತೀಯಾರ್ಧದಲ್ಲಿ ಬಿಡುಗಡೆ ಆಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್‌ ಅಂಬಾನಿ ಘೋಷಣೆ ಮಾಡಿದ್ದಾರೆ. ಅಲ್ಲದೆ 5G ಟೆಲ್ಕೊ ಸೇವೆ ಭಾರತ ಸರ್ಕಾರದ ಆತ್ಮನಿರ್ಭಾರ ಭಾರತ್ ನೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಜಿಯೋದಿಂದ 5G ಸೇವೆಯನ್ನು ಹೊರತರುವುದರ ಜೊತೆಗೆ, ಕಂಪನಿಯು ಗೂಗಲ್ ಸಹಯೋಗದೊಂದಿಗೆ 4,000 ರೂ. ಬೆಲೆಯ ಸ್ಮಾರ್ಟ್‌ಫೋನ್ ಅನ್ನು 2021 ರ ಮೊದಲ ತ್ರೈಮಾಸಿಕದಲ್ಲಿ ಅನಾವರಣಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಜಿಯೋ 5G ನೆಟ್‌ವರ್ಕ್‌ ವಿಶೇಷತೆ ಏನು ತಿಳಿಯೋಣ ಬನ್ನಿರಿ.

ಜಿಯೋ 5 ಜಿ ನೆಟ್‌ವರ್ಕ್

ಜಿಯೋ 5 ಜಿ ನೆಟ್‌ವರ್ಕ್

ರಿಲಯನ್ಸ್ ಜಿಯೋ ಕೆಲವು ಸಮಯದಿಂದ ಭಾರತದಲ್ಲಿ 5G ನೆಟ್‌ವರ್ಕ ಪರಿಚಯಿಸುವ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಾಗತಿಕ ಎಲ್ ಟಿಇ-ಎಕ್ಸ್ಕ್ಲೂಸಿವ್ ನೆಟ್ವರ್ಕ್ ಕವರೇಜ್ ಟೆಲ್ಕೊಗೆ ಮುಂದಿನ ಪೀಳಿಗೆಯ ನೆಟ್‌ವರ್ಕ್‌ಗೆ ಏರ್‌ಟೆಲ್ ಮತ್ತು ವಿ ನಂತಹ ಇತರರಿಗಿಂತ ಬೇಗನೆ ಬದಲಾಗಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ 5G ಅನ್ನು ವಾಸ್ತವಕ್ಕೆ ತರುವ ಸಲುವಾಗಿ, ಜಿಯೋ ಕ್ವಾಲ್ಕಾಮ್ ಮತ್ತು ಸ್ಯಾಮ್‌ಸಂಗ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಜಿಯೋ 5G

ಇನ್ನು ಜಿಯೋ 5G ಸೆಲ್ಯುಲಾರ್ ಸೇವೆಯ ಬಗ್ಗೆ ಕೇಳುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಜುಲೈನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್‌ನ 43 ನೇ ಎಜಿಎಂನಲ್ಲಿ, ಸ್ಪೆಕ್ಟ್ರಮ್ ಲಭ್ಯವಾದ ತಕ್ಷಣ ಭಾರತದಲ್ಲಿ 5 ಜಿ ಸೇವೆಗಳನ್ನು ಪರೀಕ್ಷಿಸಲು ಪ್ರಾರಂಭಿಸುವುದಾಗಿ ಟೆಲ್ಕೊ ಘೋಷಿಸಿತು. ಜೊತೆಗೆ ಇತ್ತೀಚೆಗೆ, ಅಕ್ಟೋಬರ್‌ನಲ್ಲಿ ನಡೆದ ಕ್ವಾಲ್ಕಾಮ್ 5 ಜಿ ಶೃಂಗಸಭೆಯಲ್ಲಿ, ಟೆಲ್ಕೊ ತನ್ನ 5 ಜಿ ಯೋಜನೆಗಳನ್ನು ವಿವರಿಸಿದೆ ಮತ್ತು ಅದರ 5G ರಾನ್ (ರೇಡಿಯೊ ಆಕ್ಸೆಸ್ ನೆಟ್‌ವರ್ಕ್) ಅಭಿವೃದ್ಧಿಯನ್ನು ಘೋಷಿಸಿತ್ತು. ಇದು ಮುಂದಿನ ಪೀಳಿಗೆಯ ಸೆಲ್ಯುಲಾರ್ ನೆಟ್‌ವರ್ಕ್ ಅನ್ನು ಪ್ರಮಾಣದಲ್ಲಿ ಪರೀಕ್ಷಿಸಲು ಸಹಾಯ ಮಾಡಲಿದೆ ಎಂದು ಸಹ ಹೇಳಲಾಗಿದೆ.

ಜಿಯೋ 5G

ಸದ್ಯ ಜಿಯೋ 5G ನೆಟ್‌ವರ್ಕ್‌ನ ಆಗಮನವು ಕಂಪನಿಯ ಪ್ಲಾಟ್‌ಫಾರ್ಮ್‌ಗಳ ಅಸ್ತಿತ್ವದಲ್ಲಿರುವ ಮತ್ತು ಹೊಸ ಬೆಳವಣಿಗೆಗಳನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಇದು ಭಾರತೀಯ ಟೆಲಿಕಾಂ ಉದ್ಯಮದಲ್ಲಿ ಟೆಲ್ಕೊ ಮೇಲುಗೈ ಸಾಧಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಹಾಗಂತ 4G ಯಿಂದ 5G ಗೆ ಅಪ್‌ಗ್ರೇಡ್ ಮಾಡುವುದು ಅಂದುಕೊಂಡಷ್ಟು ಸರಳವಲ್ಲ. ಬಳಕೆದಾರರು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾದರೆ, ಟೆಲಿಕಾಂ ಆಪರೇಟರ್‌ನ ಕೊನೆಯಲ್ಲಿ ಸಾಕಷ್ಟು ಕೆಲಸಗಳು ಬೇಕಾಗುತ್ತವೆ. ಅದರಲ್ಲೂ ಟೆಲಿಕಾಂ ಆಪರೇಟರ್ ಹೊಸ ಸ್ಪೆಕ್ಟ್ರಮ್ ಅನ್ನು ಖರೀದಿಸಬೇಕಾಗುತ್ತದೆ, ಅದನ್ನು ಸರ್ಕಾರದ ಸ್ಪೆಕ್ಟ್ರಮ್ ಆಡಿಷನ್ ಮೂಲಕ ಬಳಸಲಾಗುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ದೇಶಾದ್ಯಂತ ಸಾಧನಗಳನ್ನು ಸ್ಥಾಪಿಸುವ ಅಗತ್ಯವಿದೆ, ಅದರ ಮೂಲಕ ನೆಟ್‌ವರ್ಕ್ ಸಿಗ್ನಲ್ಸ್‌ ಅನ್ನು ನಿಯೋಜಿಸಬೇಕಾಗುತ್ತದೆ.

4G ಗಿಂತ 5G ಹೇಗೆ ಉತ್ತಮ?

4G ಗಿಂತ 5G ಹೇಗೆ ಉತ್ತಮ?

4G ನೆಟ್‌ವರ್ಕ್‌ ಗಿಂತ 5G ನೆಟ್‌ವರ್ಕ್‌ ಉತ್ತಮವಾಗಿದ್ದು, 5G ನೆಟ್‌ವರ್ಕ್‌ 20gbps ಡೌನ್‌ಲಿಂಕ್ ಮತ್ತು 10gbps ಅಪ್‌ಲಿಂಕ್ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ 5G ನೆಟವರ್ಕ್‌ ವೇಗವಾಗಿ ಡೇಟಾ ಟ್ರಾನ್‌ಫರ್‌ ಮಾಡುವ ಜೊತೆಗೆ ಏಕಕಾಲಕ್ಕೆ ಹಲವು ಡಿವೈಸ್‌ಗಳೊಂದಿಗೆ ಕನೆಕ್ಟ್‌ ಆಗುವ ಸಾಮರ್ಥ್ಯಹೊಂದಿರಲಿದೆ. ಜೊತೆಗೆ 100Mbps ಡೌನ್‌ಲೋಡ್ ವೇಗ ಮತ್ತು 50Mbps ಅಪ್‌ಲೋಡ್ ವೇಗವನ್ನುಒದಗಿಸಲಿದೆ. ಕೇವಲ ವೇಗವನ್ನು ನೀಡುವುದರ ಹೊರತಾಗಿ, 5G ನೆಟ್‌ವರ್ಕ್ ಮೂಲಕ ಗೇಮಿಂಗ್ ಅನ್ನು ತಡೆರಹಿತವಾಗಿ ಅನುಭವಿಸಬಹುದು. ಅಲ್ಲದೆ, ವೀಡಿಯೊ ಕರೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಅನುಭವಿಸಬಹುದಾಗಿದೆ.

Best Mobiles in India

English summary
Jio 5G service will rollout in India in the second half of 2021, Reliance Industries Chairman and Managing Director Mukesh Ambani revealed during his keynote at India Mobile Congress 2020 on Tuesday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X