ಜಿಯೋ 749ರೂ. ಪ್ಲ್ಯಾನ್‌ ರೀಚಾರ್ಜ್‌ ಮಾಡಿದ್ರೆ ಒಂದು ವರ್ಷ ಉಚಿತ ಸೇವೆ ಲಭ್ಯ!

|

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಾಯನ್ಸ್‌ ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗೆ ಆಕರ್ಷಕ ಧಮಾಕ್ ಆಫರ್ ಘೋಷಿಸಿದೆ. ಈಗಾಗಲೇ ಅಗ್ಗದ ರೀಚಾರ್ಜ್‌ ಪ್ಲ್ಯಾನ್‌ಗಳಿಂದ ಗಮನ ಸೆಳೆದಿದ್ದ ಜಿಯೋ ಈಗ ಕಡಿಮೆ ಬೆಲೆಯಲ್ಲಿ ವಾರ್ಷಿಕ ಅವಧಿಯ ಪ್ರಯೋಜನಗಳ ಯೋಜನೆಯನ್ನು ಪರಿಚಯಿಸಿ ಮತ್ತೆ ತನ್ನ ಗ್ರಾಹಕರನ್ನು ಖುಷಿಪಡಿಸಿದೆ.

ಹೌದು, ರಿಲಾಯನ್ಸ್‌ ಜಿಯೋ ಟೆಲಿಕಾಂ ಈಗ ಜಿಯೋ ಫೋನ್ ಬಳಕೆದಾರರಿಗಾಗಿ ಜಿಯೋ 749ರೂ. ರೀಚಾರ್ಜ್ ಯೋಜನೆಯನ್ನು ಘೋಷಿಸಿದೆ. ಈಗಾಗಲೇ ಜಿಯೋ ಫೋನ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಮಾತ್ರ ಈ ಯೋಜನೆಯು ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ವಾರ್ಷಿಕ ಅವಧಿಯ ಪ್ರಯೋಜನಗಳು ಲಭ್ಯವಾಗುತ್ತವೆ. ಜೊತೆಗೆ ಜಿಯೋ ಆಪ್ಸ್‌ಗಳ ಸೇವೆ ದೊರೆಯಲಿದೆ. ಹಾಗಾದರೇ ಈ ಯೋಜನೆಯ ಒಟ್ಟಾರೇ ಪ್ರಯೋಜನಗಳೆನು ಹಾಗೂ ಇತರೆ ಜಿಯೋ ಫೋನ್ ರೀಚಾರ್ಜ್ ಆಯ್ಕೆಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 749ರೂ. ಪ್ಲಾನ್

ಜಿಯೋ 749ರೂ. ಪ್ಲಾನ್

ಜಿಯೋದ 749ರೂ. ಪ್ಲಾನಿನಲ್ಲಿ ಒಂದು ವರ್ಷದ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಪ್ರತಿ ತಿಂಗಳು 2GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಹ ಲಭ್ಯವಾಗಲಿದೆ. ಇನ್ನು ಈ ಯೋಜನೆಯು ಎಕ್ಸಿಸ್ಟಿಂಗ್ ಜಿಯೋ ಫೋನ್ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಇದೇ ಮಾರ್ಚ್ 1, 2021ರಿಂದ ಲಭ್ಯವಾಗಲಿದೆ.

ಜಿಯೋ 75ರೂ. ಪ್ಲಾನ್

ಜಿಯೋ 75ರೂ. ಪ್ಲಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ಪ್ಲಾನ್

ಜಿಯೋ 125ರೂ. ಪ್ಲಾನ್

ಜಿಯೋದ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 155ರೂ. ಪ್ಲಾನ್

ಜಿಯೋ 155ರೂ. ಪ್ಲಾನ್

ಜಿಯೋದ ಈ 155ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 1GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 185ರೂ. ಪ್ಲಾನ್

ಜಿಯೋ 185ರೂ. ಪ್ಲಾನ್

ಜಿಯೋದ ಈ 185ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 2GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

Best Mobiles in India

English summary
The Jio 749 Plan offers benefits for 12 months but the big question is should you recharge.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X