ಜಿಯೋ ಏರ್‌ ಫೈಬರ್‌ ಘೋಷಣೆ: ಇದರ ಪ್ರಯೋಜನಗಳೇನು?

|

ರಿಲಯನ್ಸ್‌ ಸಂಸ್ಥೆ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಜಿಯೋ 5G, ಜಿಯೋ ಏರ್‌ಫೈಬರ್‌ ಹಾಗೂ ಇತರ ಸೇವೆಗಳನ್ನು ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಮಾತನಾಡಿದ ರಿಲಯನ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೆಶಕ ಮುಖೇಶ್‌ ಅಂಬಾನಿ ದೀಪಾವಳಿ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ, ಹೊಸದಾಗಿ ಜಿಯೋ ಏರ್‌ಫೈಬರ್‌ ಡಿವೈಸ್‌ ಬಗ್ಗೆ ಘೋಷಣೆ ಮಾಡಿದ್ದಾರೆ.

ಜಿಯೋ

ಇನ್ನು ಜಿಯೋ ಏರ್‌ಫೈಬರ್‌ ನಿಮಗೆ ಯಾವುದೇ ರೀತಿಯ ವೈರ್‌ ಸಹಾಯವಿಲ್ಲ ಫೈಬರ್‌ ತರಹದ ವೇಗದ ಇಂಟರ್‌ನೆಟ್‌ ಸೇವೆ ಪಡೆಯುವುದಕ್ಕೆ ಅವಕಾಶ ನೀಡಲಿದೆ. ಅಂದರೆ ಜಿಯೋ ಏರ್‌ಫೈಬರ್‌ ಬಳಸುವವರಿಗೆ ಯಾವುದೇ ರೀತಿಯ ವಾಯರ್‌ ಕನೆಕ್ಟಿವಿಟಿ ಅವಶ್ಯಕತೆಯಿಲ್ಲ. ಜಿಯೋ ಏರ್‌ಫೈಬರ್ ಒಂದೇ ಡಿವೈಸ್‌ ಮೂಲಕ ನೀವು ಮನೆ ಅಥವಾ ಕಚೇರಿಗಳಲ್ಲಿ ವೈಯುಕ್ತಿಕ ವೈಫೈ ಹಾಟ್‌ಸ್ಪಾಟ್‌ನಂತೆ ಬಳಸಿಕೊಳ್ಳಬಹುದಾಗಿದೆ. ಹಾಗಾದ್ರೆ ಜಿಯೋ ಏರ್‌ಫೈಬರ್‌ ಎಂದರೇನು? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಏರ್‌ಫೈಬರ್‌ ಎಂದರೇನು?

ಜಿಯೋ ಏರ್‌ಫೈಬರ್‌ ಎಂದರೇನು?

ರಿಲಯನ್ಸ್‌ ಜಿಯೋ ಹೊಸದಾಗಿ ಘೋಷಣೆ ಮಾಡಿರುವ ಜಿಯೋ ಏರ್‌ಫೈಬರ್‌ ಪ್ಲಗ್-ಅಂಡ್-ಪ್ಲೇ ಡಿವೈಸ್‌ ಅನ್ನು ಬಳಕೆದಾರರಿಗೆ ಯಾವುದೇ ವಾಯರ್‌ಗಳಿಲ್ಲದೆ ಗಾಳಿಯಲ್ಲಿ ಫೈಬರ್ ತರಹದ ವೇಗವನ್ನು ಅನುಭವಿಸುವುದಕ್ಕೆ ಅವಕಾಶ ನೀಡುವ ಡಿವೈಸ್‌ ಆಗಿದೆ. ಈ ಡಿವೈಸ್‌ ಮೂಲಕ ನೀವು ಮನೆ ಅಥವಾ ಕಚೇರಿಗಳಲ್ಲಿ ವೈಯುಕ್ತಿಕ ವೈಫೈ ಹಾಟ್‌ಸ್ಪಾಟ್‌ ಪಡೆದುಕೊಳ್ಳಬಹುದಾಗಿದೆ. ಇದು ಅಲ್ಟ್ರಾ-ಹೈ-ಸ್ಪೀಡ್ ಜಿಯೋ ಟ್ರೂ 5G ಇಂಟರ್ನೆಟ್‌ಗೆ ಸಂಪರ್ಕ ಹೊಂದಿರಲಿದೆ.

ಜಿಯೋ

ಇನ್ನು ಜಿಯೋ ಏರ್‌ಫೈಬರ್‌ ಗಾಳಿಯಲ್ಲಿ ವೇಗದ ಫೈಬರ್‌ ಸೇವೆ ಪಡೆದ ಅನುಭವ ನೀಡಲಿದೆ. ಇದರ ಮೂಲಕ ನೀವು ಅನೇಕ ವೀಡಿಯೊಗಳನ್ನು ಸ್ಟ್ರೀಮ್‌ ಮಾಡಬಹುದು. ಒಂದೇ ಸಮಯದಲ್ಲಿ ಅನೇಕ ಕ್ಯಾಮೆರಾ ವ್ಯೂವ್‌ಗಳನ್ನು ಅಲ್ಟ್ರಾ-ಹೈ ಡೆಫಿನಿಷನ್‌ನಲ್ಲಿ ತೋರಿಸುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ನಾವು ಯಾವ ಕ್ಯಾಮೆರಾ ಕೋನದಲ್ಲಿ ಗಮನಹರಿಸಬೇಕೆಂದು ನಾವು ಕ್ರಿಯಾತ್ಮಕವಾಗಿ ಆಯ್ಕೆ ಮಾಡಬಹುದು ಅನ್ನೊದನ್ನ ಮುಖೇಶ್‌ ಅಂಬಾನಿ ಹೇಳಿದ್ದಾರೆ.

ಏರ್‌ಫೈಬರ್‌

ಇದಲ್ಲದೆ ಜಿಯೋ ಏರ್‌ಫೈಬರ್‌ ನೂರಾರು ಮನೆಗಳು ಮತ್ತು ಕಛೇರಿಗಳನ್ನು ಕಡಿಮೆ ಅವಧಿಯಲ್ಲಿ ಅಲ್ಟ್ರಾ-ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್‌ಗೆ ಸಂಪರ್ಕಿಸುವ ಸಾಮರ್ಥ್ಯವನ್ನು ನೀಡುತ್ತದೆ. ಇದು ಇಂಟರ್‌ ಆಕ್ಟಿವ್‌ ಲೈವ್ ಕಂಟೆಂಟ್‌, ಕ್ಲೌಡ್ ಗೇಮಿಂಗ್, ಇಂಪ್ರೆಸ್ಸಿವ್‌ ಶಾಪಿಂಗ್ ಇತ್ಯಾದಿ ನೀವು ತೊಡಗಿಸಿಕೊಳ್ಳುವ ಅನುಭವಗಳನ್ನು ಅನ್ಲಾಕ್ ಮಾಡಲಿದೆ. ಇದಲ್ಲದೆ ಜಿಯೋ ಏರ್‌ಫೈಬರ್‌ ಒಂದೇ ಸಮಯದಲ್ಲಿ ಬಳಕೆದಾರರು ಅಲ್ಟ್ರಾ HD ಯಲ್ಲಿ ಮಲ್ಟಿ ಕ್ಯಾಮೆರಾ ಕೋನಗಳೊಂದಿಗೆ ಲೈವ್ IPL ಮ್ಯಾಚ್‌ ವೀಕ್ಷಿಸಲು ಸಾಧ್ಯವಾಗುತ್ತದೆ. ಬಳಕೆದಾರರು ಕ್ಯಾಮೆರಾ ಕೋನಗಳ ನಡುವೆ ಕ್ರಿಯಾತ್ಮಕವಾಗಿ ಬದಲಾಯಿಸಬಹುದು.

ರಿಲಯನ್ಸ್‌

ಇನ್ನು ರಿಲಯನ್ಸ್‌ ಜಿಯೋದ 45ನೇ ವಾರ್ಷಿಕ ಸಮ್ಮೇಳನದಲ್ಲಿ ಹೊಸ ಜಿಯೋ ಕ್ಲೌಡ್‌ PC ಯನ್ನು ಕೂಡ ಬಿಡುಗಡೆ ಮಾಡಿದೆ. ಗ್ರಾಹಕರು ಯಾವುದೇ ಅಪ್‌ಗ್ರೇಡ್‌ಗಳಿಲ್ಲದೆ ಜಿಯೋ ವರ್ಚುವಲ್ ಪಿಸಿಯನ್ನು ಪಡೆಯಬಹುದಾಗಿದೆ. ಜಿಯೋ ಟ್ರೂ 5G ಮತ್ತು ಅದರ ಇತರ ಸೇವೆಗಳು ಕೃಷಿ, ಆರೋಗ್ಯ ಮತ್ತು ಶಿಕ್ಷಣದಂತಹ ವಿವಿಧ ಕೈಗಾರಿಕೆಗಳು ಮತ್ತು ಕ್ಷೇತ್ರಗಳಿಗೆ ಇದು ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿದೆ.

ರಿಲಯನ್ಸ್‌

ಇದಲ್ಲದೆ ರಿಲಯನ್ಸ್‌ ಕಂಪೆನಿ 2022 ರ ದೀಪಾವಳಿ ವೇಳೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಜಿಯೋ 5G ಸೇವೆಗಳನ್ನು ಹೊರತರಲಿದೆ ಎಂದು ಘೊಷಣೆ ಮಾಡಿದೆ. ಇದನ್ನು ಹಂತ ಹಂತವಾಗಿ ದೇಶದ ಇತರ ನಗರಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸಲಾಗುವುದು ಎಂದಿದೆ. ಜೊತೆಗೆ ಡಿಸೆಂಬರ್ 2023 ರ ವೇಳೆಗೆ ದೇಶದ ಎಲ್ಲಾ ಭಾಗಕ್ಕೂ ಈ ಸೇವೆಯನ್ನು ನೀಡುವುದಾಗಿ ಹೇಳಿಕೊಂಡಿದೆ. ಭಾರತದಲ್ಲಿ 5G ಸಲ್ಯೂಶನ್‌ ಅಭಿವೃದ್ಧಿಪಡಿಸಲು ಜಿಯೋ ಕೂಡ ಕ್ವಾಲ್ಕಾಮ್‌ನೊಂದಿಗೆ ಕೈ ಜೋಡಿಸುತ್ತಿದೆ.

5G

ಇನ್ನು ಭಾರತದಲ್ಲಿ ಇತ್ತೀಚಿಗೆ ನಡೆದ 5G ಸ್ಪೆಕ್ಟ್ರಂ ಹರಾಜಿನಲ್ಲಿ ಜಿಯೋ 700Mhz 5G ಸ್ಪೆಕ್ಟ್ರಮ್ ಅನ್ನು ಖರೀದಿಸುವ ಮೂಲಕ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇದರಿಂದ ಜಿಯೋದ 5G ನೆಟ್‌ವರ್ಕ್‌ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಸದ್ಯ ದೀಪಾವಳಿ ವೇಳೆಗೆ ಭಾರತದಲ್ಲಿ ಜಿಯೋ 5G ಪ್ರಾರಂಭವಾಗುವುದು ಪಕ್ಕಾ ಆಗಿರುವುದರಿಂದ ಶೀಘ್ರದಲ್ಲೇ ಜಿಯೋ 5G ನೆಟ್‌ವರ್ಕ್‌ ಅನ್ನು ಬಳಸಬಹುದಾಗಿದೆ. ಆದರೆ ಪ್ರಾರಂಭದಲ್ಲಿ ಇದು ಕೆಲವೇ ಕೆಲ ನಗರ ಪ್ರದೇಶಕ್ಕೆ ಸೀಮಿತವಾಗಿರಲಿದೆ.

Best Mobiles in India

English summary
Reliance has also announced Jio AirFiber – a plug-and-play device for users to experience fiber-like speed over the air without any wires.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X