ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್‌!

|

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಖಾಸಗಿ ಟೆಲಿಕಾಂಗಳು ತಮ್ಮ ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿವೆ. ಕಳೆದ ವರ್ಷವಷ್ಟೆ ಟಾರಿಫ್‌ ಬೆಲೆ ಏರಿಕೆ ಮಾಡಿದ್ದ ಟೆಲಿಕಾ ಕಂಪೆನಿಗಳು ಈ ವರ್ಷದ ದೀಪಾವಳಿ ವೇಳೆಗೆ ಮತ್ತೊಮ್ಮೆ ಬೆಲೆ ಏರಿಕೆ ಮಾಡುವ ಸೂಚನೆಯನ್ನು ನೀಡಿವೆ. ಈ ಮೂಲಕ ಖಾಸಗಿ ಟೆಲಿಕಾಂಗಳ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಈ ವರ್ಷ ಮತ್ತೊಮ್ಮೆ ಏರಿಕೆಯಾಗಲಿದೆ ಎನ್ನಲಾಗಿದೆ.

ಟೆಲಿಕಾಂ

ಹೌದು, ಖಾಸಗಿ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂಗಳು ತಮ್ಮ ಟಾರಿಫ್‌ ಅನ್ನು 10 ರಿಂದ 12% ವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. ಇದು ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ ಜಾರಿಗೆ ಬರಲಿದೆ ಎಂದು ET ಟೆಲಿಕಾಂ ವಿಶ್ಲೇಷಕರ ವರದಿಯಲ್ಲಿ ಉಲ್ಲೇಖವಾಗಿದೆ. ಇದರಿಂದ ಈಗಾಗಲೇ ಬೆಲೆ ಏರಿಕೆಯ ಬಿಸಿ ಅನುಭವಿಸಿರುವ ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್‌ ತಗುಲುವುದು ಪಕ್ಕಾ ಆಗಿದೆ. ಇನ್ನುಳಿದಂತೆ ಖಾಸಗಿ ಟೆಲಿಕಾಂಗಳ ಟಾರಿಫ್‌ ಶುಲ್ಕ ಹೆಚ್ಚಳ ಮಾಡಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌,ಜಿಯೋ ಮತ್ತು ವಿ ಟೆಲಿಕಾಂಗಳು ಈ ವರ್ಷದ ದೀಪಾವಳಿಗೆ ತಮ್ಮ ಟಾರಿಫ್‌ ಅನ್ನು ಹೆಚ್ಚಿಸಲಿವೆ. ಇದರಿಂದ ಬಳಕೆದಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈ ಟಾರಿಫ್‌ ಹೆಚ್ಚಳದ ನಡುವೆಯೂ ಮೂರು ಟೆಲಿಕಾಂ ಕಂಪನಿಗಳು ಸೇರಿ ಸುಮಾರು 35 ರಿಂದ 40 ಮಿಲಿಯನ್ ಹೊಸ ಚಂದಾದಾರರನ್ನು ಸೇರಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಅಲ್ಲದೆ ಕಳೆದ ವರ್ಷ ನವೆಂಬರ್-ಡಿಸೆಂಬರ್ ನಡುವೆ ಟಾರಿಫ್‌ ಅನ್ನು ಹೆಚ್ಚಳ ಮಾಡಿದ್ದರೂ ಕೂಡ ಚಂದಾದಾರರ ಸಂಖ್ಯೆಯಲ್ಲಿ ವ್ಯತ್ಯಾಸವಾಗದೇ ಇರುವುದರಿಂದ ಖಾಸಗಿ ಟೆಲಿಕಾಂ ಮತ್ತೊಮ್ಮೆ ಬೆಲೆ ಏರಿಕೆ ಮುಂದಾಗಿವೆ ಎನ್ನಲಾಗಿದೆ.

ಟಾರಿಫ್‌

ಇದಲ್ಲದೆ, ಈ ಭಾರಿ ಟಾರಿಫ್‌ ಅನ್ನು 10 ರಿಂದ 12% ಹೆಚ್ಚಿಸುವುದರ ಬಗ್ಗೆ ವರದಿಯಾಗಿದೆ. ಇದರೊಂದಿಗೆ ಸ್ಥಿರವಾದ ಚಂದಾದಾರರ ಲಾಭಗಳೊಂದಿಗೆ ಸೇರಿಕೊಂಡು ಜಿಯೋ, ವಿ ಮತ್ತು ಏರ್‌ಟೆಲ್‌ ತಮ್ಮ ARPU ಅನ್ನು ವರ್ಷಕ್ಕೆ 10% ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನಾ ಸಂಸ್ಥೆ ವಿಲಿಯಂ ಓ' ನೀಲ್ & ಕೋ ವರದಿ ಹೇಳಿದೆ. ಅಂದರೆ ಇದು ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾದ ARPU ಅನ್ನು ಕ್ರಮವಾಗಿ 200ರೂ, 185ರೂ ಮತ್ತು 135ರೂ. ಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ.

ಟೆಲಿಕಾಂಗಳು

ಇನ್ನು ಖಾಸಗಿ ಟೆಲಿಕಾಂಗಳು ಬೆಲೆ ಹೆಚ್ಚಿಸುವ ಬಗ್ಗೆ ವರದಿಯಾಗಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿಯೇ ಭಾರ್ತಿ ಏರ್‌ಟೆಲ್ ಎಂಡಿ ಮತ್ತು ಸಿಇಒ ಭಾರತ ಮತ್ತು ದಕ್ಷಿಣ ಏಷ್ಯಾದ ಸಿಇಒ ಗೋಪಾಲ್ ವಿಟ್ಟಲ್ ಅವರು 2022 ರಲ್ಲಿ ಏರ್‌ಟೆಲ್ ಎರಡನೇ ಸುತ್ತಿನ ಟಾರಿಫ್‌ ಹೆಚ್ಚಳವನ್ನು ಮಾಡಲಿದೆ ಎಂದು ಹೇಳಿದ್ದರು. ಇನ್ನು ವೊಡಾಫೋನ್ ಐಡಿಯಾ ಎಂಡಿ ಮತ್ತು ಸಿಇಒ ರವೀಂದರ್ ಟಕ್ಕರ್ ಅವರು ಕೂಡ ಈ ವರ್ಷದ ಜನವರಿಯಲ್ಲಿ ಟಾರಿಫ್‌ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದರು.

ಜಿಯೋ

ಕಳೆದ ವರ್ಷ ಟಾರಿಫ್‌ ಅನ್ನು ಹೆಚ್ಚಿಸಿದ ನಂತರ ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂಗಳ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯಲ್ಲಿ ಬದಲಾವಣೆಯಾಗಿತ್ತು. ಇದರಿಂದ ಹಲವು ಪ್ಲಾನ್‌ಗಳ ಬೆಲೆ ಏರಿಕೆಯಾಗಿತ್ತು, ಆದರೆ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಅನ್ನೊದು ಗಮನಿಸಬೇಕಾದ ಸಂಗತಿ. ಇನ್ನು ಇತ್ತೀಚಿಗೆ ಮಾಸಿಕ ಪ್ರಿಪೇಯ್ಡ್‌ ಪ್ಲಾನ್‌ಗಳು ಕ್ಯಾಲೆಂಡರ್‌ ಮಾನ್ಯತೆಯನ್ನು ನೀಡುತ್ತಿರೋದು ಕೂಡ ಗಮನಾರ್ಹವಾಗಿದೆ.

Best Mobiles in India

English summary
Jio, Airtel and Vi likely to hike their tariffs later this year:report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X