ಗೂಗಲ್‌ಗೂ ಸೆಡ್ಡು ಹೊಡೆದ ಜಿಯೋ!..ದೇಶದಲ್ಲೇ ಮೊದಲ 'ಜಿಯೋಬ್ರೌಸರ್' ಲಾಂಚ್!!

  |

  ಟೆಲಿಕಾಂ, ಇ ಕಾಮರ್ಸ್ ಕಂಪೆನಿಗಳು ಸೇರಿದಂತೆ ಮೊಬೈಲ್ ಕಂಪೆಗಳಿಗೂ ಸೆಡ್ಡು ಹೊಡೆದಿರುವ ಜಿಯೋ ಈಗ ಗೂಗಲ್‌ಗೂ ಸೆಡ್ಡು ಹೊಡೆಯಲು ತಯಾರಾಗಿದೆ. ರಿಲಯನ್ಸ್ ಜಿಯೋ ಈಗ ಮತ್ತೊಂದು ವಿನೂತನ ಆವಿಷ್ಕಾರದೊಂದಿಗೆ ಬಳಕೆದಾರರ ಮುಂದೆ ಬಂದಿದ್ದು, ಗ್ರಾಹಕರಿಗೆ ಹೊಸ ಸೌಲಭ್ಯಗಳನ್ನು ನೀಡುವ ಸಲುವಾಗಿ ಇದೀಗ 'ಜಿಯೋಬ್ರೌಸರ್' ಅನ್ನು ಬಿಡುಗಡೆ ಮಾಡಿದೆ.

  ಹೌದು, ಭಾರತದ ಮೊಟ್ಟ ಮೊದಲ ಬ್ರೌಸರ್ ಅನ್ನು ಜಿಯೋ ಅಭಿವೃದ್ದಿಪಡಿಸಿದೆ. ದೇಶದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಬಂದಿರುವ ಮೊದಲ ಬ್ರೌಸರ್ ಇದಾಗಿದೆ ಎಂದು ಜಿಯೋ ಬಣ್ಣಿಸಿರುವುದು ಗೂಗಲ್‌ಗೂ ಜಿಯೋ ಸೆಡ್ಡು ಹೊಡೆಯುವುದೇ ಎಂಬ ಪ್ರಶ್ನೆ ಮೂಡಿದೆ. ಆದರೆ, ಜಿಯೋಬ್ರೌಸರ್ ಅನ್ನು ಗೂಗಲ್ ಪ್ರತಿಸ್ಪರ್ಧಿ ಎಂದು ತಿಳಿದಿಲ್ಲ ಎಂದು ಕೆಲ ವರದಿಗಳು ಹೇಳಿವೆ.

  ಗೂಗಲ್‌ಗೂ ಸೆಡ್ಡು ಹೊಡೆದ ಜಿಯೋ!..ದೇಶದಲ್ಲೇ ಮೊದಲ 'ಜಿಯೋಬ್ರೌಸರ್' ಲಾಂಚ್!!

  ಈಗಷ್ಟೇ ಪ್ಲೇ ಸ್ಟೋರ್‌ನಲ್ಲಿ ಕಾಣಿಸಿಕೊಂಡಿರುವ ಜಿಯೋಬ್ರೌಸರ್ ಇಂಟರ್‌ಫೇಸ್ ಗೂಗಲ್‌ ರೀತಿಯಲ್ಲೇ ಕಾಣಿಸುತ್ತಿದೆ.ಇದರಲ್ಲಿ ಜಿಯೋ ಒಡೆತನದ ಕಂಟೆಂಟ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದನ್ನು ಸಹ ನಾವು ಕಾಣಬಹುದಾಗಿದ್ದು, ಹಾಗಾದರೆ ಭಾರತದ ಮೊದಲ ಬ್ರೌಸರ್ ಎಂಬ ಹೆಗ್ಗಳಿಕೆ ಪಡೆದ 'ಜಿಯೋ ಬ್ರೌಸರ್' ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಜಿಯೋ ಬ್ರೌಸರ್!

  ಭಾರತದ ಮೊಟ್ಟ ಮೊದಲ ಬ್ರೌಸರ್ ಆಗಿ 'ಜಿಯೋ ಬ್ರೌಸರ್' ಭಾರತದಲ್ಲಿ ಬಿಡುಗಡೆಯಾಗಿದೆ. ಗೂಗಲ್‌ನಂತೆಯೇ ಕ್ರಿಕೆಟ್, ಪ್ರವಾಸ, ಶಾಪಿಂಗ್, ಮನರಂಜನೆ ಸೇರಿದಂತೆ ವೈವಿಧ್ಯಮಯ ಮಾಹಿತಿ ಸಿಗಲಿರುವ ಆಪ್ ಇದಾಗಿದೆ. ಇದರಲ್ಲಿ ಹೊಸ ವಿಭಾಗವೂ ಇದ್ದು ಗ್ರಾಹಕರು ತಮಗೆ ಬೇಕಾದ ಸುದ್ದಿ ಮತ್ತು ಮೂಲವನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು ಎಂದು ಜಿಯೋ ತಿಳಿಸಿದೆ.

  ಫಾಸ್ಟ್ & ಈಸಿ ಬ್ರೌಸರ್!

  ಭಾರತದ ಮೊದಲ ಬ್ರೌಸರ್ ಆಗಿರುವ 'ಜಿಯೋ ಬ್ರೌಸರ್' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ಮೊದಲು ಬಿಡುಗಡೆಯಾಗಿದೆ. ಜಿಯೊಬ್ರೌಸರ್ ತುಂಬಾ ಹಗುರವಾಗಿದ್ದು ಕೇವಲ 5 ಎಂಬಿಗಿಂತಲೂ ಕಡಿಮೆ ಗಾತ್ರವನ್ನು ಹೊಂದಿದೆ. ಈ ಮೂಲಕ ಕಡಿಮೆ ಸಾಮರ್ಥ್ಯದ ಮೊಬೈಲ್‌ಗಳಲ್ಲೂ ಇದು ಸಲೀಸಾಗಿ ಕಾರ್ಯನಿರ್ವಹಿಸಲಿದೆ ಎಂದು ಜಿಯೋ ಮಾಹಿತಿ ಹೇಳಿದೆ.

  ಭಾರತೀಯ ಭಾಷೆಗಳಲ್ಲಿ ಜಿಯೊಬ್ರೌಸರ್

  ಕನ್ನಡ ಸೇರಿ ಎಂಟು ಭಾರತೀಯ ಭಾಷೆಗಳನ್ನು ಬೆಂಬಲಿಸುವ ರೀತಿಯಲ್ಲಿ 'ಜಿಯೊಬ್ರೌಸರ್' ಬಿಡುಗಡೆಯಾಗಿದೆ. ಜಿಯೋಬ್ರೌಸರ್ 8 ಭಾರತೀಯ ಭಾಷೆಗಳಿಗೆ ಬೆಂಬಲ ನೀಡುವುದು ವಿವಿಧ ರಾಜ್ಯಗಳಲ್ಲಿನ ಭಾರತೀಯ ಬಳಕೆದಾರರಿಗೆ ಪ್ರತ್ಯೇಕವಾಗಿ ಬ್ರೌಸರ್ ಅನ್ನು ಬಳಸಲು 'ಜಿಯೊಬ್ರೌಸರ್' ಆಪ್ ಅನ್ನು ಅರ್ಪಣೆ ಮಾಡಿರುವುದಾಗಿ ಜಿಯೋ ಪ್ರಕಟಣೆಯ ಮೂಲಕ ತಿಳಿಸಿದೆ.

  ಬಳಕೆದಾರರಿಗೆ ಉತ್ತಮ ಅನುಭವ!

  ಜಿಯೋಬ್ರೌಸರ್ ಅಪ್ಲಿಕೇಶನ್ ಕೃತಕ ಬುದ್ದಿಮತ್ತೆ ಆಧಾರಿತವಾಗಿರುವುದರಿಂದ ನೀವು ಸುಗಮ ಮತ್ತು ವೇಗವಾಗಿ ಬ್ರೌಸಿಂಗ್ ಅನುಭವವನ್ನು ಪಡೆಯುತ್ತೀರಾ ಎಂದು ಜಿಯೋ ಹೇಳಿಕೊಂಡಿದೆ. ಅತ್ಯುತ್ತಮವಾದ ತಜ್ಞರ ತಂಡವು ವಿನ್ಯಾಸಗೊಳಿಸಿರುವ ಜಿಯೋಬ್ರೌಸರ್ ಆಪ್‌ನಲ್ಲಿ ವೆಬ್‌ಸೈಟ್‌ಗಳಿಗೆ ತ್ವರಿತ ಸಂಪರ್ಕಗಳನ್ನು ನಾವು ಸಂಯೋಜಿಸುವುದಾಗಿ ಜಿಯೋ ಮಾಹಿತಿ ನೀಡಿದೆ.

  ಖಾಸಗಿ ಬ್ರೌಸಿಂಗ್ ಫೀಚರ್ ಇದೆ!

  ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ರಕ್ಷಿಸಲು ಮತ್ತು ಖಾಸಗಿ ಬ್ರೌಸಿಂಗ್ ಅನುಭವವನ್ನು ನೀಡಲು ಜಿಯೋ ಅಜ್ಞಾತ ( Incognito mode ) ಮೋಡ್ ಅನ್ನು ಸಹ ಜಿಯೋಬ್ರೌಸರ್‌ನಲ್ಲಿ ಪರಿಚಯಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಡೌನ್‌ಲೋಡ್ ಮ್ಯಾನೇಜರ್, ಕಂಟೆಂಟ್ ಶೇರಿಂಗ್, ಲೋಗೋ ಕ್ಲಿಕ್ ಸರ್ಫಿಂಗ್‌ನಂತ ಹಲವು ಫೀಚರ್ಸ್‌ಗಳನ್ನು ಆಪ್‌ನಲ್ಲಿ ಕಾಣಬಹುದಾಗಿದೆ.

  ಜಿಯೊಬ್ರೌಸರ್‌ನಲ್ಲಿ ಏನೆಲ್ಲಾ ಲಭ್ಯ?

  ಸಾಮಾಜಿಕ ಮಾಧ್ಯಮಗಳು ಸೇರಿದಂತೆ, ಸ್ಥಳೀಯ ಸುದ್ದಿ ವಿಭಾಗ, ಸಂಬಂಧಿತ ಸುದ್ದಿಗಳು, ಇತ್ತೀಚಿನ ಘಟನೆಗಳು ಮತ್ತು ಆಕರ್ಷಕವಾಗಿರುವ ವೀಡಿಯೊಗಳು, ವೇಗವಾಗಿ ಬ್ರೌಸಿಂಗ್ ಮಾಡಬಹುದಾದ ಎಲ್ಲಾ ಸೇವೆಗಳನ್ನು ಜಿಯೋ ಪರಿಚಯಿಸಿದೆ. ಗ್ರಾಹಕರು ತಮಗೆ ಬೇಕಾದ ರೀತಿಯಲ್ಲಿ ಜಿಯೋ ಬ್ರೌಸರ್ ಅನ್ನು ಕಸ್ಟಮೈಸ್ ಮಾಡಿಕೊಳ್ಳಬದು ಎಂದು ಕಂಪೆನಿ ತಿಳಿಸಿದೆ.

  ಸಧ್ಯ ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ

  ಜಿಯೋಬ್ರೌಸರ್ ಸದ್ಯಕ್ಕೆ ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ ಇದು ಲಭ್ಯವಿದೆ. ಐಒಎಸ್ ಕಾರ್ಯಾಚರಣೆ ಫೋನ್‌ಗಳಿಗೆ ಈ ಬ್ರೌಸರ್ ಬಿಡುಗಡೆ ಮಾಡಲಾಗುತ್ತದೆಯೇ ಇಲ್ಲವೆ ಎಂಬ ಬಗ್ಗೆ ರಿಲಯನ್ಸ್ ಜಿಯೋ ಯಾವುದೇ ಸೂಚನೆ ನೀಡಿಲ್ಲ. ಆದರೆ, ಭಾರತದಲ್ಲಿ ಆಪಲ್ ಐಒಎಸ್ ಬಳಕೆದಾರರು ಹೆಚ್ಚಿರುವುದರಿಂದ ಐಒಎಸ್ ಆಧಾರಿತ ಆಪ್ ಸಹ ಶೀಘ್ರವೇ ಬರಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Jio Browser is a fast and easy to use browser for your android smartphone, due to small size of the app it is extremely light and efficient for your device.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more