ಜಿಯೋ ಎಫೆಕ್ಟ್‌ : ‌399ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಆಫರ್ ನೀಡಿದ BSNL!

|

ದೇಶಿಯ ಟೆಲಿಕಾಂ ವಲಯದಲ್ಲಿ ಇದೀಗ ಬದಲಾವಣೆಯ ಪರ್ವ ಆರಂಭವಾಗಿದ್ದು, ಜಿಯೋ ಗಿಗಾಫೈಬರ್‌ ಬ್ರಾಡ್‌ಬ್ಯಾಂಡ್‌ ವಲಯಕ್ಕೆ ಅದ್ಧೂರಿಯಾಗಿ ದುಮುಕಿದೆ. ಜಿಯೋ ಅತ್ಯುತ್ತಮ ಬ್ರಾಡ್‌ಬ್ಯಾಂಡ್ ಆಫರ್‌ಗಳನ್ನು ಘೋಷಿಸಿದ ಬೆನ್ನಲ್ಲೇ ಜಿಯೋಗೆ ಸ್ಪರ್ಧೆ ನೀಡುಲು ಬಿಎಸ್‌ಎನ್‌ಎಲ್ ಸಂಸ್ಥೆಯು ಮುಂದಾಗಿದೆ. ಹೀಗಾಗಿ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್‌ ಪ್ಯಾಕ್‌ಗಳಲ್ಲಿ ಅತ್ಯುತ್ತಮ ಆಫರ್‌ ನೀಡಲು ಆರಂಭಿಸಿದೆ.

ಜಿಯೋ ಎಫೆಕ್ಟ್‌ : ‌399ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಆಫರ್ ನೀಡಿದ BSNL

ಹೌದು, ಬಿಎಸ್‌ಎನ್‌ಎಲ್ ತನ್ನ ಜನಪ್ರಿಯ ವಾರ್ಷಿಕ್ 399ರೂ.ಗಳ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 999ರೂ.ಗಳ ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತವಾಗಿ ನೀಡುವುದಾಗಿ ತಿಳಿಸಿದೆ. ಈ ಮೊದಲು ಕೇವಲ ವಾರ್ಷಿಕ 499ರೂ. ಮತ್ತು ಅದಕ್ಕೂ ಮೇಲ್ಪಟ್ಟ ಪ್ಲ್ಯಾನ್‌ನೊಂದಿಗೆ ಮಾತ್ರ ಉಚಿತವಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ ನೀಡುತ್ತಿತ್ತು. ಇದರೊಂದಿಗೆ ಕ್ಯಾಶ್‌ಬ್ಯಾಕ್‌ ಆಫರ್‌ಗಳು ಲಭ್ಯ ಇದೆ.

ಜಿಯೋ ಎಫೆಕ್ಟ್‌ : ‌399ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಆಫರ್ ನೀಡಿದ BSNL

ಬಿಎಸ್‌ಎನ್‌ಎಲ್ ವಿವಿಧ ರೇಂಜ್‌ನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಒಳಗೊಂಡಿದ್ದು, ಅವುಗಳಲ್ಲಿ 849ರೂ.್ಳ ಪ್ಲ್ಯಾನ್ ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿ ಗುರುತಿಸಿಕೊಂಡಿದೆ. ಈ ಪ್ಲ್ಯಾನ್‌ನಲ್ಲಿ ಇಂಟರ್ನೆಟ್‌ ವೇಗವು 50 Mbps ಆಗಿದ್ದು, 600GB ಡೇಟಾ ಲಿಮಿಟ್ ನೀಡಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

BSNL-ಅಮೆಜಾನ್ ಪ್ರೈಮ್

BSNL-ಅಮೆಜಾನ್ ಪ್ರೈಮ್

ಬಿಎಸ್‌ಎನ್‌ಎಲ್ ಗ್ರಾಹಕರನ್ನು ಆಕರ್ಷಿಸಲು ತನ್ನ ಬ್ರಾಡ್‌ಬ್ಯಾಂಡ್‌ ಸೇವೆಯೊಂದಿಗೆ ಅಮೆಜಾನ್ ಪ್ರೈಮ್‌ ಸದಸ್ಯತ್ವ ನೀಡಲು ಶುರುಮಾಡಿತು. ಆರಂಭದಲ್ಲಿ 749ರೂ. ಮತ್ತು ಅದಕ್ಕಿಂತ ಅಧಿಕ ಬೆಲೆಯ ಪ್ಲ್ಯಾನ್‌ಗಳಿಗೆ ಮಾತ್ರ ಉಚಿತ ಅಮೆಜಾನ್ ಸದಸ್ಯತ್ವ ನೀಡುತ್ತಿತ್ತು. ಆನಂತರ 499ರೂ.ಗಳ ಪ್ಲ್ಯಾನಿಗೂ ಸಹ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವ ಒದಗಿಸಲು ಕಂಪನಿ ಮುಂದಾಯಿತು.

ಜಿಯೋ ಎಫೆಕ್ಟ್

ಜಿಯೋ ಎಫೆಕ್ಟ್

ಜಿಯೋ ಇದೀಗ ಗಿಗಾಫೈಬರ್ ಲಾಂಚ್ ಮಾಡಿದ್ದು, ಹೀಗಾಗಿ ಜಿಯೋದ ಎಂಟ್ರಿಯು ಬ್ರಾಡ್‌ಬ್ಯಾಂಡ್‌ ಮಾರುಕಟ್ಟೆಗೂ ಎಫೆಕ್ಟ್ ಆಗಿದೆ. ಜಿಯೋ ಪರಿಣಾಮದಿಂದಾಗಿ ಇತರೆ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ಆಫರ್ ನೀಡಲು ಸಜ್ಜಾಗಿದ್ದು, ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ತನ್ನ 399ರೂ.ಗಳ ವಾರ್ಷಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ 999ರೂ.ಗಳ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತ ವಾಗಿ ನೀಡುತ್ತಿದೆ.

ಅಮೆಜಾನ್ ಪ್ರೈಮ್‌ ಸೇವೆ

ಅಮೆಜಾನ್ ಪ್ರೈಮ್‌ ಸೇವೆ

ಅಮೆಜಾನ್ ಪ್ರೈಮ್ ಸೇವೆಯಲ್ಲಿ, ಪ್ರೈಮ್‌ ಮ್ಯೂಸಿಕ್, ಪ್ರೈಮ್ ವಿಡಿಯೊ, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಖರೀದಿಸದ ವಸ್ತುಗಳ ಉಚಿತ ಡೆಲಿವರಿ ಸೇವೆ ಮತ್ತು ವಿಶೇಷ ಸೇಲ್ ವೇಳೆ ಒಂದು ದಿನ ಮೊದಲೇ ಖರೀದಿಗೆ ಅವಕಾಶ ಸೇರಿದಂತೆ ಇನ್ನು ಅತ್ಯುತ್ತಮ ಸೌಲಭ್ಯಗಳ ಲಭ್ಯವಾಗಲಿದೆ. ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆಯ ಶುಲ್ಕವು 999ರೂ.ಗಳಾಗಿದೆ. ತಿಂಗಳ ಶುಲ್ಕ 129ರೂ ಆಗಿದೆ.

ಬಿಎಸ್ಎನ್‌ಎಲ್ ಕ್ಯಾಶ್‌ಬ್ಯಾಕ್

ಬಿಎಸ್ಎನ್‌ಎಲ್ ಕ್ಯಾಶ್‌ಬ್ಯಾಕ್

ಬಿಎಸ್‌ಎನ್‌ಎಲ್ನ ಆಯ್ದ ವಾರ್ಷಿಕ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಮೇಲೆ ಕಂಪನಿಯು ಶೇ.15%, ಶೇ. 20% ಮತ್ತು ಶೇ.25% ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ. 499ರೂ. ವರೆಗಿನ ಪ್ಲ್ಯಾನ್‌ಗಳಿಗೆ ಶೇ.15% ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಸುಮಾರು 499ರೂ.ಗಳಿಂದ 900ರೂ.ವರೆಗಿನ ಪ್ಲ್ಯಾನ್‌ಗಳಿಗೆ ಶೇ. 20% ಹಾಗೂ 900ರೂ.ಗಿಂತ ಅಧಿಕ ಪ್ಲ್ಯಾನ್ಗಳಿಗೆ ಶೇ.25% ಕ್ಯಾಶ್‌ಬ್ಯಾಕ್‌ ದೊರೆಯಲಿದೆ.

Best Mobiles in India

English summary
bsnl broadband plans priced over Rs 399 will now ship with Amazon Prime subscription free. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X