ಕೆಲವೇ ದಿನಗಳಲ್ಲಿ ದೇಶದ ನಂ.1 ಟೆಲಿಕಾಂ ಆಗಲಿದೆ ಜಿಯೋ!!

|

ಭಾರತದ ನಂಬರ್ ಒನ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಐಡಿಯಾ ಹಾಗೂ ಒಂದು ಕಾಲದ ದಿಗ್ಗಜ ಟೆಲಿಕಾಂ ಸಂಸ್ಥೆಗಳಿಗೆ ರಿಲಯನ್ಸ್ ಜಿಯೋ ಚೇತರಿಸಿಕೊಳ್ಳಲು ಸಾಧ್ಯವಾಗದಂತಹ ಹೊಡೆತವನ್ನು ನೀಡಿದೆ. ಇದೇ ಮಾರ್ಚ್ ತಿಂಗಳಿನಲ್ಲಿ ವೊಡಾಫೋನ್ ಐಡಿಯಾ ಕಂಪೆನಿಯ 14.5 ದಶಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದರೆ, ಏರ್‌ಟೆಲ್ 15.1 ದಶಲಕ್ಷ ಗ್ರಾಹಕರನ್ನು ಕಳೆದುಕೊಂಡಿರುವುದನ್ನು ಟ್ರಾಯ್ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕುಸಿತವೂ ಸೇರಿದಂತೆ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ಮೊಬೈಲ್ ಚಂದಾದಾರರು 1,183.68 ದಶಲಕ್ಷ ಗ್ರಾಹಕರಿಂದ 1,161.81 ದಶಲಕ್ಷ ಗ್ರಾಹಕರಿಗೆ ಇಳಿಕೆ ಕಂಡಿದೆ. ಇದರಿಂದಾಗಿ ಟೆಲಿಕಾಂನಲ್ಲಿ ಶೇ 1.85 ರಷ್ಟು ಮಾಸಿಕ ಕುಸಿತ ದಾಖಲಾಗಿದೆ. ಆದರೆ, ಎಂದಿನಂತೆ ಈ ಬಾರಿಯೂ ಜಿಯೋ ಗ್ರಾಹಕರನ್ನು ಆಕರ್ಷಿಸಿದ್ದು, ಮಾರ್ಚ್ ತಿಂಗಳಿನಲ್ಲಿ 9.4 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

ಕೆಲವೇ ದಿನಗಳಲ್ಲಿ ದೇಶದ ನಂ.1 ಟೆಲಿಕಾಂ ಆಗಲಿದೆ ಜಿಯೋ!!

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವರದಿ ನೀಡಿರುವ ಪ್ರಕಾರ, ಮಾರ್ಚ್ 2019ರ ವೇಳೆಗೆ ವೊಡಾಫೋನ್ ಐಡಿಯಾದ ಮೊಬೈಲ್ಸ್ತಂತು ಚಂದಾದಾರರ ಸಂಖ್ಯೆ 394.8 ದಶಲಕ್ಷಗಳಾಗಿದ್ದರೆ, ಇದೇ ವೇಳೆಯಲ್ಲಿ ಭಾರ್ತಿ ಏರ್‌ಟೆಲ್ ಮೊಬೈಲ್ ಚಂದಾದಾರರ ಸಂಖ್ಯೆ 325.1 ಮಿಲಿಯನ್ ಆಗಿದೆ. ಮತ್ತು ಈ ಎರಡೂ ಟೆಲಿಕಾಂ ಕಂಪೆನಿಗಳ ಪ್ರತಿಸ್ಪರ್ದಿ ಜಿಯೋ ಮಾರ್ಚ್ 2019 ರ ಹೊತ್ತಿಗೆ 306.7 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಟ್ರಾಯ್ ತಿಳಿಸಿದೆ.

ಇತ್ತೀಚಿಗಷ್ಟೇ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಈ ಬಾರಿ ಭಾರ್ತಿ ಏರ್‌ಟೆಲ್ ಅನ್ನು ಚಂದಾದಾರರ ಆಧಾರದ ಮೇಲೆ ಮೀರಿಸಿದೆ ಮತ್ತು ಭಾರತದ ಎರಡನೆಯ ಅತಿದೊಡ್ಡ ದೂರಸಂಪರ್ಕ ಕಂಪೆನಿಯಾಗಿ ಹೊರಹೊಮ್ಮಿದೆ. ರಿಲಯನ್ಸ್ ಜಿಯೋ ಪ್ರಸ್ತುತ 30.6 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ಏರ್‌ಟೆಲ್ ಕಂಪೆನಿ 28.4 ಕೋಟಿ ಗ್ರಾಹಕರಿಗೆ ಇಳಿದಿದೆ ಎಂಬ ಶಾಕಿಂಗ್ ರಿಪೋರ್ಟ್ ಒಂದು ಹೊರಬಿದ್ದಿತ್ತು. ಆದರೆ, ಏರ್‌ಟೆಲ್ ಈಗಲೂ ಸ್ವಲ್ಪ ಮುಂದಿದೆ ಎಂದು ಟ್ರಾಯ್ ತಿಳಿಸಿದೆ.

ಕೆಲವೇ ದಿನಗಳಲ್ಲಿ ದೇಶದ ನಂ.1 ಟೆಲಿಕಾಂ ಆಗಲಿದೆ ಜಿಯೋ!!

ರಿಲಯನ್ಸ್ ಜಿಯೋಗೆ ಎದುರಾಗಿ ಏರ್‌ಟೆಲ್ ಸೇರಿದಂತೆ ಇನ್ನುಳಿದ ದೇಶದ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿ ನೀಡಲು ಯತ್ನಿಸಿ ವಿಫಲವಾಗಿವೆ. ಜಿಯೋವಿನ ಸೇವೆಯನ್ನು ಭಾರತೀಯರು ಅಪ್ಪಿಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟ್ರಾಯ್ ಬಿಡುಗಡೆ ಮಾಡಿರುವ ರಿಪೋರ್ಟ್‌ಗಳ ಪ್ರಕಾರವೇ ಜಿಯೋ ಇನ್ನೇನು ಕೆಲವೇ ದಿನಗಳಲ್ಲಿ ವೊಡಾಫೋನ್-ಐಡಿಯಾವನ್ನು ಸಹ ಮೀರಿಸಿ ದೇಶದ ನಂ.1 ಟೆಲಿಕಾಂ ಕಂಪೆನಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಓದಿರಿ: ಏರ್‌ಟೆಲ್‌ಗೆ ಇತಿಹಾಸದಲ್ಲೇ ಬಿಗ್‌ಶಾಕ್!..ಇದನ್ನು ಆ ದೇವರೂ ಕೂಡ ಊಹಿಸಿರಲಿಲ್ಲವೇನೋ!

Best Mobiles in India

English summary
Vodafone Idea, Airtel lose 30 million customers; Reliance Jio adds 9.4 million users in March. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X