ಜಿಯೋ ಟೆಲಿಕಾಂನಿಂದ 'ಜಿರೋ ಎಂಟ್ರಿ ಕಾಸ್ಟ್‌' ಪ್ಲಾನ್‌ ಲಾಂಚ್‌!

|

ಜಿಯೋ ಟೆಲಿಕಾಂ ತನ್ನ ಪೋಸ್ಟ್‌ ಪೇಯ್ಡ್‌ ಚಂದಾದಾರರಿಗೆ ಕೆಲ ದಿನಗಳ ಹಿಂದೆ ಹೊಸ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದೀಗ ಈ ಪ್ಲಾನ್‌ಗಳು ಹೊಸ ಗ್ರಾಹಕರಿಗೆ ಜಿರೋ ಎಂಟ್ರಿ ಕಾಸ್ಟ್‌' ಆಗಿರಲಿದೆ ಎನ್ನಲಾಗಿದೆ. ಈ ಹೊಸ ಜಿರೋ ಎಂಟ್ರಿ ಕಾಸ್ಟ್‌ ಪ್ಲಾನ್‌ಗಳು 14 OTT ಕಂಟೆಂಟ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿವೆ. ಇವುಗಳನ್ನು ಹೆಚ್ಚುವರಿ ಬೆಲೆಯಲ್ಲಿ ಅಂದರೆ 100ರೂ ಅಥವಾ 200ರೂ.ಬೆಲೆಯ ಆಯ್ಕೆಯಲ್ಲಿ ಕಾಣಬಹುದಾಗಿದೆ.

ಜಿಯೋ ಫೈಬರ್‌

ಹೌದು, ಜಿಯೋ ಫೈಬರ್‌ನ ಹೊಸ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳು ಹೊಸ ಗ್ರಾಹಕರಿಗೆ ಜಿರೋ ಎಂಟ್ರಿ ಕಾಸ್ಟ್‌ ಪ್ರವೇಶ ನೀಡಲಿವೆ. ಇನ್ನು ಈ ಪ್ಲಾನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ಝೀ5, ಎರೋಸ್ ನೌ, ಮತ್ತು ಸೋನಿಲೈವ್ ಸೇರಿದಂತೆ ಅನೇಕ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಸಿಗಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಬಳಕೆದಾರರು ಕೂಡ ಈ ಹೊಸ ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಿಗೆ ವಲಸೆ ಹೋಗಬಹುದು. ಇನ್ನುಳಿದಂತೆ ಜಿರೋ ಎಂಟ್ರಿ ಕಾಸ್ಟ್‌ ಪ್ರೊಮೋಷನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ ಪರಿಚಯಿಸಿರುವ ಹೊಸ ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳು ಇಂದಿನಿಂದ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತವೆ. ಇದರಲ್ಲಿ ನೀವು ಆಯ್ಕೆ ಮಾಡುವ ಯಾವುದೇ ಪೋಸ್ಟ್‌ಪೇಯ್ಡ್ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ಗಾಗಿ ಸೈನ್ ಅಪ್ ಮಾಡುವ ಹೊಸ ಜಿಯೋ ಫೈಬರ್ ಬಳಕೆದಾರರು ಯಾವುದೇ 'ಎಂಟ್ರಿ ಕಾಸ್ಟ್‌' ಭರಿಸಬೇಕಾಗಿಲ್ಲ. ಅಗತ್ಯವಿರುವ ಇಂಟರ್ನೆಟ್ ಬಾಕ್ಸ್ , ಸೆಟ್-ಟಾಪ್ ಬಾಕ್ಸ್ ಮತ್ತು ಇನ್‌ಸ್ಟಾಲೇಶನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಗ್ರಾಹಕರು ಮೊದಲು ಕನಿಷ್ಠ ಮೂರು ತಿಂಗಳವರೆಗೆ ಸೈನ್ ಅಪ್ ಮಾಡಬೇಕಾಗುತ್ತದೆ.

ಹೊಸ

ಇದಲ್ಲದೆ ಹೊಸ ಬಳಕೆದಾರರಿಗಿಂತ, ಈಗಾಗಲೇ ಅಸ್ತಿತ್ವದಲ್ಲಿರುವ ಜಿಯೋ ಫೈಬರ್ ಬಳಕೆದಾರರು ಒಂದು ತಿಂಗಳ ಮುಂಗಡವನ್ನು ಪಾವತಿಸುವ ಮೂಲಕ ಹೊಸ ಪೋಸ್ಟ್‌ಪೇಯ್ಡ್ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ಗಳಿಗೆ ವಲಸೆ ಹೋಗಬಹುದಾಗಿದೆ. ಆದರೆ ಈ ಬಳಕೆದಾರರು OTT ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸೆಟ್-ಟಾಪ್ ಬಾಕ್ಸ್ ಅನ್ನು ಹೊಂದಿಲ್ಲದಿದ್ದರೆ, ಅವರು ತಮ್ಮ ಯೋಜನೆಯನ್ನು ಆಯ್ಕೆ ಮಾಡಿದ ನಂತರ ಫ್ರೀ ಯೂನಿಟ್‌ ಡೆಲಿವರಿಗಾಗಿ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಬಹುದು.

ಹೊಸ

ಇನ್ನು ಈ ಹೊಸ ಪ್ಲಾನ್‌ಗಳು 399ರೂ. ಮತ್ತು ತಿಂಗಳಿಗೆ 3,999ರೂ.ವರೆಗಿನ ಬೆಲೆಯಲ್ಲಿ ಲಭ್ಯವಾಗಲಿವೆ. ಈ ಎಲ್ಲಾ ಹೊಸ ಪ್ಲಾನ್‌ಗಳು ಅನಿಯಮಿತ ಇಂಟರ್ನೆಟ್ ಪ್ರವೇಶವನ್ನು ನೀಡುತ್ತವೆ. ಆದರೆ ಈ ಎಲ್ಲಾ ಪ್ಲಾನ್‌ಗಳು ವಿಭಿನ್ನ ಇಂಟರ್‌ನೆಟ್‌ ವೇಗವನ್ನು ಹೊಂದಿವೆ. ಆದರೆ ಈ ಪ್ಲಾನ್‌ಗಳಲ್ಲಿ 399ರೂ. ಮತ್ತು 699ರೂ. ಜಿಯೋ ಫೈಬರ್ ಯೋಜನೆಗಳು ಯಾವುದೇ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿರುವುದಿಲ್ಲ. ಆದರೆ ಬಳಕೆದಾರರು ಹೆಚ್ಚುವರಿ ಹಣ ಪಾವತಿಸುವ ಮೂಲಕ ಆರು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.

ಜಿಯೋ ಫೈಬರ್‌ 399ರೂ.ಪ್ಲಾನ್‌

ಜಿಯೋ ಫೈಬರ್‌ 399ರೂ.ಪ್ಲಾನ್‌
ಜಿಯೋ ಫೈಬರ್‌ 399ರೂ. ಪ್ಲಾನ್‌ 30mbps ವೇಗದ ಅನಿಯಮಿತ ಇಂಟರ್‌ನೆಟ್ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಹೆಚ್ಚುವರಿ ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಜೊತೆಗೆ ಗ್ರಾಹಕರು ತಿಂಗಳಿಗೆ 200ರೂ. ಹೆಚ್ಚುವರಿ ಪಾವತಿಸಿ ಮಾಡುವ ಮೂಲಕ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ನಲ್ಲಿ 14 ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಜಿಯೋ ಫೈಬರ್‌ 699ರೂ.ಪ್ಲಾನ್‌
ಜಿಯೋ ಫೈಬರ್‌ 699ರೂ. ಪ್ಲಾನ್‌ ನಿಮಗೆ 100mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಹಾಗೆಯೇ ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಫೈಬರ್‌

ಜಿಯೋ ಫೈಬರ್‌ 999ರೂ.ಪ್ಲಾನ್‌
ಜಿಯೋ ಫೈಬರ್‌ 999ರೂ.ಪ್ಲಾನ್‌ನಲ್ಲಿ ನೀವು 150mbps ವೇಗದ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಎಲ್ಲಾ ವಿಷಯಗಳಿಗೆ ಪ್ರವೇಶವನ್ನು ನೀಡುತ್ತದೆ.

ಜಿಯೋ ಫೈಬರ್‌ 1499ರೂ. ಪ್ಲಾನ್‌
ಯೋಜನೆಯು 300mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಅನ್ನು ನೀಡುತ್ತದೆ. ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಪ್ರವೇಶವನ್ನು ನೀಡುತ್ತದೆ, ಇದು ರೂ 199 ಮೌಲ್ಯದ್ದಾಗಿದೆ.

ಜಿಯೋ ಫೈಬರ್‌ 2499ರೂ. ಪ್ಲಾನ್‌
ಜಿಯೋ ಫೈಬರ್‌ 2499ರೂ. ಪ್ಲಾನ್‌ನಲ್ಲಿ 500mbps ವೇಗದ ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಪ್ರಯೋಜನ ದೊರೆಯಲಿದೆ. ಜೊತೆಗೆ ಈ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Jio Fiber Postpaid Monthly Plans With 'Zero Entry Cost', Video Streaming Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X