ಯಾವುದು ಚೀಪೆಸ್ಟ್ ಬ್ರಾಡ್ ಬ್ಯಾಂಡ್- ಜಿಯೋ ಫೈಬರ್ ಗೆ ಯಾವುದು ಸ್ಪರ್ಧೆಗೆ ಸಿದ್ಧ?

By Gizbot Bureau
|

ರಿಲಯನ್ಸ್ ಜಿಯೋ ಫೈಬರ್ ಇದೀಗ ಭಾರತದಾದ್ಯಂತ ಕಮರ್ಷಿಯಲ್ ಆಗಿ ಲಭ್ಯವಾಗುತ್ತಿದೆ. ಜಿಯೋ ಫೈಬರ್ ಡಾಟಾ ಪ್ಲಾನ್ ಗಳು, ಆಫರ್ ಗಳು ಮತ್ತು ಇತ್ಯಾದಿಗಳ ಸಂಪೂರ್ಣ ವಿವರವನ್ನು ಇದೀಗ ಟೆಲ್ಕೋ ಪ್ರಕಟಿಸಿದೆ.

ಜಿಯೋ ಅಧಿಕೃತ ವೆಬ್ ಸೈಟ್

ಆಕರ್ಷಕ ಬೆಲೆ ಮತ್ತು ಹಲವಾರು ಒಳ್ಳೆಯ ಕಾರಣಗಳಿಂದಾಗಿ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಜಿಯೋ ಫೈಬರ್ ಹೊಸ ಸಂಚಲನಕ್ಕೆ ಕಾರಣವಾಗುತ್ತಿರುವುದು ಮಾತ್ರ ಸತ್ಯ.ಜಿಯೋ ಫೈಬರ್ ರಿಜಿಸ್ಟ್ರೇಷನ್ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಆಸಕ್ತ ಗ್ರಾಹಕರು ಜಿಯೋ ಅಧಿಕೃತ ವೆಬ್ ಸೈಟ್ ಗೆ ತೆರಳಬಹುದಾಗಿದೆ. ನಾವಿಲ್ಲಿ ಜಿಯೋ ಫೈಬರ್ ಡಾಟಾ ಪ್ಲಾನ್ ಗಳನ್ನು ಇತರೆ ಬ್ರಾಡ್ ಬ್ಯಾಂಡ್ ಸೇವೆಗಳಾಗಿರುವ ಏರ್ ಟೆಲ್ ವಿ-ಫೈಬರ್, ಬಿಎಸ್ಎನ್ಎಲ್ ಭಾರತ್ ಫೈಬರ್ ಮತ್ತು ಆಕ್ಟರ್ ಫೈಬರ್ ನೆಟ್ ಜೊತೆಗೆ ಹೋಲಿಕೆ ಮಾಡಿ ತಿಳಿಸುತ್ತಿದ್ದೇವೆ.

ಜಿಯೋ ಫೈಬರ್

ಜಿಯೋ ಫೈಬರ್

ಜಿಯೋ ಫೈಬರ್ ಡಾಟಾ ಪ್ಲಾನ್ ಗಳು ಬ್ರಾನ್ಜ್, ಸಿಲ್ವರ್, ಗೋಲ್ಡ್, ಡೈಮಂಡ್, ಪ್ಲಾನಿಟಂ, ಟೈಟಾನಿಯಂ ಎಂದು ವಿಭಾಗಿಸಲಾಗಿದೆ. ಜಿಯೋ ಫೈಬರ್ ಮಾಸಿಕ ಪ್ಲಾನ್ ಗಳು ಉಚಿತ ವಾಯ್ಸ್ ಕರೆಗಳು, ವೀಡಿಯೋ ಕರೆಗಳು, ಗೇಮಿಂಗ್, ಹೋಮ್ ನೆಟ್ ವರ್ಕಿಂಗ್ ಮತ್ತು ನಾರ್ಟನ್ ಡಿವೈಸ್ ಸೆಕ್ಯುರಿಟಿಯನ್ನು ಒಳಗೊಂಡಿದೆ.ಜಿಯೋ ಫೈಬರ್ ಡೈಮಂಡ್, ಪ್ಲಾಟಿಟಂ ಮತ್ತು ಟೈಟಾನಿಯಂ ಪ್ಲಾನ್ ಗಳು ವಿಆರ್ ಅನುಭವ,ಫಸ್ಟ್-ಡೇ-ಫಸ್ಟ್ ಶೋ ಆಫರ್ ಮತ್ತು ವಾರ್ಷಿಕ ಓಟಿಟಿ ಆಪ್ಸ್ ಚಂದಾದಾರಿಕೆಯ ಆಫರ್ ನ್ನು ಮಾಡುತ್ತದೆ.

ಜಿಯೋ ಫೈಬರ್ ಬ್ರಾನ್ಝ್ ಪ್ಲಾನ್

ಜಿಯೋ ಫೈಬರ್ ಬ್ರಾನ್ಝ್ ಪ್ಲಾನ್ ನ ಬೆಲೆ 699 ರುಪಾಯಿಗಳಾಗಿದ್ದು ಇದರಲ್ಲಿ 100Mbps ಸ್ಪೀಡ್ ಜೊತೆಗೆ 100GB ಡಾಟಾ ಲಭ್ಯವಾಗುತ್ತದೆ. ಜಿಯೋ ಫೈಬರ್ ಸಿಲ್ವರ್ ಪ್ಲಾನ್ ನಲ್ಲಿ 100Mbps ಸ್ಪೀಡ್ ಜೊತೆಗೆ 200GB ಡಾಟಾ ಲಭ್ಯವಾಗಲಿದ್ದು ಇದರ ಬೆಲೆ 849 ರುಪಾಯಿಗಳು.ಜಿಯೋ ಫೈಬರ್ ಗೋಲ್ಡ್ ಪ್ಲಾನ್ ಗರಿಷ್ಟ 250Mbps ಸ್ಪೀಡ್ ಜೊತೆಗೆ 500GB ಡಾಟಾ ಒದಗಿಸಲಿದೆ ಮತ್ತು ಇದರ ಬೆಲೆ 1,299 ರುಪಾಯಿಗಳಾಗಿರುತ್ತದೆ.

ಜಿಯೋ ಫೈಬರ್ ಡೈಮಂಡ್ ಪ್ಲಾನ್

ಜಿಯೋ ಫೈಬರ್ ಡೈಮಂಡ್ ಪ್ಲಾನ್ ನ ಬೆಲೆ 2,499 ರುಪಾಯಿಗಳಾಗಿದ್ದು ಬಳಕೆದಾರರು 500Mbps ವೇಗದಲ್ಲಿ ಮತ್ತು 1250GB ಡಾಟಾವನ್ನು ಇದರಲ್ಲಿ ಪಡೆಯಲಿದ್ದಾರೆ.ಜಿಯೋ ಫೈಬರ್ ಪ್ಲಾಟಿನಂ ಪ್ಲಾನ್ ಗರಿಷ್ಟ ಡಾಟಾ ಸ್ಪೀಡ್ ಅಂದರೆ 1Gbps ಸ್ಪೀಡ್ ಹೊಂದಿರುತ್ತದೆ ಮತ್ತು ಅನಿಯಮತವಾಗಿ 2500GB ವರೆಗಿನ ಡಾಟಾ ಸಿಗುತ್ತದೆ. ಇದರ ಬೆಲೆ 3,999 ರುಪಾಯಿಗಳಾಗಿರುತ್ತದೆ. ಜಿಯೋ ಟೈಟಾನಿಯಂ ಪ್ಲಾನ್ ಅತ್ಯಂತ ದುಬಾರಿ ಪ್ಲಾನ್ ಆಗಿದ್ದು 8,499 ರುಪಾಯಿಯದ್ದಾಗಿದೆ. ನೀವಿಲ್ಲಿ 5000GB ಡಾಟಾವನ್ನು 1Gbps ಸ್ಪೀಡ್ ನಲ್ಲಿ ಬಳಸಲು ಅವಕಾಶವಿದೆ.

ಜಿಯೋ ಫೈಬರ್ ಮಾಸಿಕ ಪ್ಲಾನ್

ಜಿಯೋ ಫೈಬರ್ ಮಾಸಿಕ ಪ್ಲಾನ್ ನ್ನು ವಾರ್ಷಿಕ ಚಂದಾದಾರಿಕೆಯಾಗಿ ಕೂಡ ಪರಿವರ್ತಿಸಿಕೊಳ್ಳುವುದಕ್ಕೆ ಅವಕಾಶವಿದೆ.ಇದೇ ಆಫರ್ ಗಳು ಬಂಡಲ್ ನಲ್ಲಿ ಜಿಯೋ ಫೈಬರ್ ವಾರ್ಷಿಕ ಪ್ಲಾನ್ ನಲ್ಲೂ ಲಭ್ಯವಾಗುತ್ತದೆ ಆದರೆ ಇದರಲ್ಲಿ "ವೆಲ್ ಕಂ ಆಫರ್" ಹೆಸರಿನಲ್ಲಿ ಹೆಚ್ಚುವರಿ ಉಚಿತ ಸೌಲಭ್ಯಗಳಿದೆ. ಪ್ರತಿ ಜಿಯೋ ಫೈಬರ್ ವಾರ್ಷಿಕ ಪ್ಲಾನ್ ನಲ್ಲಿ ಜಿಯೋ 4ಕೆ ಸೆಟ್ ಅಪ್ ಬಾಕ್ಸ್ ಮತ್ತು ಜಿಯೋ ಹೋಮ್ ಗೇಟ್ ವೇಯನ್ನು ಉಚಿತವಾಗಿ ಪಡೆಯಬಹುದು. ಜಿಯೋ ಫೈಬರ್ ಬ್ರೌನ್ಝ್ ಪ್ಲಾನ್ ನಲ್ಲಿ ಮ್ಯೂಸ್ 2 ಬ್ಲೂಟೂತ್ ಸ್ಪೀಕರ್ ಮತ್ತು ಜಿಯೋ ಕಂಟೆಂಟ್ ವಾರ್ಷಿಕ ಚಂದಾದಾರಿಕೆ ಲಭ್ಯವಾಗುತ್ತದೆ.

ಜಿಯೋ ಫೈಬರ್ ಸಿಲ್ವರ್ ಪ್ಲಾನ್

ಜಿಯೋ ಫೈಬರ್ ಸಿಲ್ವರ್ ಪ್ಲಾನ್ ನಲ್ಲಿ ಥಂಪ್ 2 ಬ್ಲೂಟೂತ್ ಸ್ಪೀಕರ್ ಮತ್ತು ಓಟಿಟಿ ಆಪ್ಸ್ ಗೆ ವಾರ್ಷಿಕ ಚಂದಾದಾರಿಕೆ ಸಿಗುತ್ತದೆ. ಜಿಯೋ ಫೈಬರ್ ಗೋಲ್ಡ್ ಮತ್ತು ಡೈಮಂಟ್ ನಲ್ಲಿ 24-ಇಂಚಿನ HD ಟಿವಿ ಮತ್ತು ಪ್ಲಾಟಿನಂ ಚಂದಾದಾರಿಕೆಯಲ್ಲಿ 32-ಇಂಚಿನ HD TV ಸಿಗುತ್ತದೆ. ಜಿಯೋ ಫೈಬರ್ ಟೈಟಾನಿಯಂ ಚಂದಾದಾರಿಕೆಯಲ್ಲಿ 4K ಟಿವಿ ಉಚಿತವಾಗಿ ಲಭ್ಯವಾಗುತ್ತದೆ.

ಆಕ್ಟ್ ಫೈಬರ್ ನೆಟ್

ಆಕ್ಟ್ ಫೈಬರ್ ನೆಟ್

ACT ಫೈಬರ್ ನೆಟ್ ಜಿಯೋ ಫೈಬರ್ ಜೊತೆಗೆ ನೇರವಾಗಿ ಸ್ಪರ್ಧೆಗೆ ಇಳಿಯುವುದು ತನ್ನ 1Gbps ಸ್ಪೀಡ್ ನಲ್ಲಿ. ಆಕ್ಟ್ ಫೈಬರ್ ನೆಟ್ 1Gbps ಬ್ರಾಡ್ ಬ್ಯಾಂಡ್ ಸ್ಪೀಡ್ ನ್ನು ಚೆನೈ ಮತ್ತು ಬೆಂಗಳೂರು ಸರ್ಕಲ್ ನಲ್ಲಿ ಮಾತ್ರವೇ ಆಫರ್ ಮಾಡುತ್ತದೆ. ಚೆನೈ ಮಾಸಿಕ ಪ್ಲಾನ್ ನ ಬೆಲೆ 2,999 ರುಪಾಯಿಗಳು ಮತ್ತು 3000GBಯು 1Gbps ಸ್ಪೀಡ್ ನಲ್ಲಿ ಲಭ್ಯವಾಗುತ್ತದೆ. ಆಕ್ಟ್ ಫೈಬರ್ ನೆಟ್ ಬೆಂಗಳೂರಿನಲ್ಲಿ ರುಪಾಯಿ 5,999 ಕ್ಕೆ 2500GB ಡಾಟಾವನ್ನು 1Gbps ಸ್ಪೀಡ್ ನಲ್ಲಿ ನೀಡುತ್ತದೆ.

ಆಕ್ಟ್ ಫೈಬರ್ ನೆಟ್ 100Mbps

ಆಕ್ಟ್ ಫೈಬರ್ ನೆಟ್ 100Mbps ಮತ್ತು 150Mbps ಸ್ಪೀಡ್ ನ ಡಾಟಾ ಪ್ಲಾನ್ ಗಳು ಕೂಡ ಲಭ್ಯವಿದೆ. ದೆಹಲಿಯಲ್ಲಿ ಆಕ್ಟ್ ಸಿಲ್ವರ್ ಪ್ರೋಮೋ ಬೆಲೆ 749 ರುಪಾಯಿಗಳಾಗಿದ್ದು 500GB ಡಾಟಾವನ್ನು 100Mbps ಸ್ಪೀಡ್ ನಲ್ಲಿ ನೀಡುತ್ತದೆ. ಆಕ್ಟ್ ಪ್ಲಾಟಿನಂ ಪ್ರೋಮೋ ಬೆಲೆ 999 ರುಪಾಯಿಗಳಾಗಿದ್ದು 1000GB ಡಾಟಾವನ್ನು 150Mbps ಸ್ಪೀಡ್ ನಲ್ಲಿ ಆಫರ್ ಮಾಡುತ್ತದೆ.

ಏರ್ ಟೆಲ್ ವಿ-ಫೈಬರ್

ಏರ್ ಟೆಲ್ ವಿ-ಫೈಬರ್

ಏರ್ ಟೆಲ್ ವಿ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯು 300Mbps ಸ್ಪೀಡ್ ವರೆಗಿನ ಪ್ಲಾನ್ ನ್ನು ಆಫರ್ ಮಾಡುತ್ತದೆ ಆದರೆ ಹೆಚ್ಚಿನ ಪ್ಲಾನ್ ಗಳು 100Mbps ಸ್ಪೀಡ್ ನದ್ದಾಗಿದೆ. ಏರ್ ಟೆಲ್ ವಿ-ಫೈಬರ್ ಡಾಟಾ ಪ್ಲಾನ್ ರುಪಾಯಿ 1,099 ರಿಂದ ಆರಂಭವಾಗಲಿದ್ದು 300GB ಡಾಟಾವನ್ನು 100Mbps ಸ್ಪೀಡ್ ನಲ್ಲಿ ಆಫರ್ ಮಾಡುತ್ತದೆ. ಅನಿಯಮಿತ ಸ್ಥಳೀಯ, ಎಸ್ ಟಿಡಿ ಕರೆಗಳು, ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಝೀ5 ಮತ್ತು ಏರ್ ಟೆಲ್ ಟಿವಿ ಚಂದಾದಾರಿಕೆ ಇದರಲ್ಲಿದೆ. ನೆಟ್ ಫ್ಲಿಕ್ಸ್ ಚಂದಾದಾರಿಕೆ 3 ತಿಂಗಳಿಗಾದರೆ ಅಮೇಜಾನ್ ಪ್ರೈಮ್ 12 ತಿಂಗಳ ಚಂದಾದಾರಿಕೆಯನ್ನು ಹೊಂದಿರುತ್ತದೆ. ಏರ್ ಟೆಲ್ ವಿ-ಫೈಬರ್ 300Mbps ಡಾಟಾ ಪ್ಲಾನ್ ಹೊಂದಿದ್ದು ಅದರ ಬೆಲೆ ರುಪಾಯಿ 1,599 ಮತ್ತು 600GB ಡಾಟಾವನ್ನು ಹೊಂದಿದೆ.ಅನಿಯಮಿತ ಡಾಟಾ ಬಳಕೆಯನ್ನು 100Mbps ಸ್ಪೀಡ್ ನಲ್ಲಿ ಹೊಂದಿದ್ದು ಏರ್ ಟೆಲ್ ವಿ-ಫೈಬರ್ VIP ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ರುಪಾಯಿ 1,999ಕ್ಕೆ ಆಫರ್ ಮಾಡುತ್ತದೆ.

ಬಿಎಸ್ಎನ್ಎಲ್ ಭಾರತ್ ಫೈಬರ್

ಬಿಎಸ್ಎನ್ಎಲ್ ಭಾರತ್ ಫೈಬರ್

ಬಿಎಸ್ಎನ್ಎಲ್ ಕೂಡ ಬ್ರಾಡ್ ಬ್ಯಾಂಡ್ ಸ್ಪೀಡ್ ನ್ನು ಆರಂಭಿಕವಾಗಿ 50Mbps ನಿಂದ ಆಫರ್ ಮಾಡುತ್ತದೆ ಮತ್ತು 100Mbps ವರೆಗಿನ ಪ್ಲಾನ್ ಗಳು ಕೂಡ ಲಭ್ಯವಿದೆ. ಬೇಸ್ ಪ್ಲಾನ್ ನ ಬೆಲೆ ರುಪಾಯಿ 777 ಜೊತೆಗೆ 50Mbps ಸ್ಪೀಡ್ ಮತ್ತು 500GB ಡಾಟಾವನ್ನು ನೀಡುತ್ತದೆ. ಎರಡನೇ ಬಿಎಸ್ಎನ್ಎಲ್ ಭಾರತ್ ಫೈಬರ್ ಪ್ಲಾನ್ 849 ರುಪಾಯಿಯದ್ದಾಗಿದ್ದು 600GB ಡಾಟಾ ಮತ್ತು 50Mbps ಸ್ಪೀಡ್ ನಲ್ಲಿ ಲಭ್ಯವಾಗುತ್ತದೆ. ಭಾರತ್ ಫೈಬರ್ ಡಾಟಾ ಪ್ಲಾನ್ ರುಪಾಯಿ 1,277 ರಲ್ಲಿ 750GB ಡಾಟಾ ಮತ್ತು 100Mbps ಸ್ಪೀಡ್ ನಲ್ಲಿ ಸಿಗುತ್ತದೆ. ರುಪಾಯಿ 2,499, ರುಪಾಯಿ 4,499 ಮತ್ತು ರುಪಾಯಿ 5,999 ಪ್ಲಾನ್ ನಲ್ಲಿ ಬಳಕೆದಾರರಿಗೆ ಕ್ರಮವಾಗಿ ಪ್ರತಿದಿನ 40GB, 55GB ಮತ್ತು 80GB ಲಭ್ಯವಾಗುತ್ತದೆ.

ಬಿಎಸ್ಎನ್ಲ್ ಭಾರತ್ ಫೈಬರ್

ಹೆಚ್ಚು ಡಾಟಾ ಬಳಕೆಗಾಗಿ ಬಿಎಸ್ಎನ್ಲ್ ಭಾರತ್ ಫೈಬರ್ ನಲ್ಲಿ 120ಜಿಬಿ ಪ್ರತಿ ದಿನ 100Mbps ಸ್ಪೀಡ್ ನಲ್ಲಿ 9,999 ರುಪಾಯಿ ಬೆಲೆಗೆ ಲಭ್ಯವಿದೆ. ಅತ್ಯಂತ ದುಬಾರಿ ಭಾರತ್ ಫೈಬರ್ ಪ್ಲಾನ್ ಎಂದರೆ ಅದು 16,999ರದ್ದು ಮತ್ತು ಇದರಲ್ಲಿ 100Mbps ಸ್ಪೀಡ್ ಮತ್ತು 170ಜಿಬಿ ಡಾಟಾ ಪ್ರತಿ ದಿನ ಬಳಕೆಗೆ ಸಿಗುತ್ತದೆ.


Best Mobiles in India

English summary
Jio Fiber Vs Act Fibernet Vs Airtel Vs Fiber Vs Bharat Fiber Compared

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X