ಜಿಯೋ ಕಂಪೆನಿಯಿಂದ ಹೊಸ ಗೇಮ್‌ ಕಂಟ್ರೋಲರ್‌ ಬಿಡುಗಡೆ! ವಿಶೇಷತೆ ಏನು?

|

ದೇಶದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ಕಂಪನಿ ಭಾರತದಲ್ಲಿ ಹೊಸ ಗೇಮ್ ಕಂಟ್ರೋಲರ್ ಅನ್ನು ಬಿಡುಗಡೆ ಮಾಡಿದೆ. ಇದು ವಾಯರ್‌ಲೆಸ್ ಗೇಮಿಂಗ್ ಕಂಟ್ರೋಲರ್‌ ಆಗಿದ್ದು ಲಾಂಗ್‌ಲೈಫ್‌ ಹಾಗೂ ರೀಚಾರ್ಜ್‌ ಮಾಡಬಹುದಾದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಗೇಮ್‌ ಕಂಟ್ರೋಲರ್‌ ಪರಿಚಿತ ಬಟನ್‌ದೊಂದಿಗೆ ಕ್ಲಾಸಿಕ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. ಇದು ತಲ್ಲೀನಗೊಳಿಸುವ ಗೇಮಿಂಗ್ ಅನುಭವಕ್ಕಾಗಿ ಎರಡು ಕಂಪನ ಮೋಟಾರ್‌ಗಳು ಮತ್ತು ಎರಡು ಪ್ರೆಸರ್‌-ಪಾಯಿಂಟ್ ಟ್ರಿಗ್ಗರ್‌ಗಳನ್ನು ಹೊಂದಿದೆ.

 ಜಿಯೋ ಗೇಮ್‌ ಕಂಟ್ರೋಲರ್‌

ಹೌದು, ಜಿಯೋ ಕಂಪೆನಿ ಹೊಸ ಜಿಯೋ ಗೇಮ್‌ ಕಂಟ್ರೋಲರ್‌ ಅನ್ನು ಲಾಂಚ್‌ ಮಾಡಿದೆ. ಈ ಕಂಟ್ರೋಲರ್‌ ಅನ್ನು ವೈಡ್‌ ರೇಂಜ್‌ ಬ್ಲೂಟೂತ್ ಆಕ್ಟಿವ್‌ ಮಾಡಿದ ಆಂಡ್ರಾಯ್ಡ್‌ ಡಿವೈಸ್‌ಗಳೊಂದಿಗೆ ಸೆಟ್‌ ಮಾಡಬಹುದಾಗಿದೆ. ಇದು 10 ಮೀಟರ್ ವರೆಗೆ ವಾಯರ್‌ಲೆಸ್ ರೇಂಜ್‌ ಅನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನುಳಿದಂತೆ ಹೊಸ ಜಿಯೋ ಗೇಮ್‌ ಕಂಟ್ರೋಲರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ

ಹೊಸ ಜಿಯೋ ವಾಯರ್‌ಲೆಸ್ ಗೇಮಿಂಗ್ ಕಂಟ್ರೋಲರ್‌ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ ಟ್ಯಾಬ್ಲೆಟ್‌ಗಳು ಮತ್ತು ಆಂಡ್ರಾಯ್ಡ್‌ ಟಿವಿಗಳಿಗೆ ಹೊಂದಿಕೊಳ್ಳುತ್ತದೆ. ಗ್ರಾಹಕರು ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ, ಜಿಯೋ ಸೆಟ್-ಟಾಪ್-ಬಾಕ್ಸ್‌ನೊಂದಿಗೆ ಈ ಗೇಮ್‌ ಕಂಟ್ರೋಲರ್‌ ಅನ್ನು ಬಳಸುತ್ತಾರೆ ಎಂದು ಜಿಯೋ ಕಂಪೆನಿ ಹೇಳಿದೆ. ಇನ್ನು ಜಿಯೋ ಗೇಮ್ ಕಂಟ್ರೋಲರ್ ಲಾಂಗ್‌ ಲೈಫ್‌ ಬ್ಯಾಟರಿಯನ್ನು ಹೊಂದಿದ್ದು, ಇದು 8 ಗಂಟೆಗಳವರೆಗೆ ಬ್ಯಾಕಪ್ ಅನ್ನು ನೀಡಲಿದೆ.

ಜಿಯೋ ಗೇಮ್‌ ಕಂಟ್ರೋಲರ್‌

ಜಿಯೋ ಗೇಮ್‌ ಕಂಟ್ರೋಲರ್‌ ಅನ್ನು ಚಾರ್ಜ್ ಮಾಡಲು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ನೀಡಲಾಗಿದೆ. ಇದು ಎರಡು ಪ್ರೆಸರ್‌ ಪಾಯಿಂಟ್‌ ಮತ್ತು 8 ಡೈರೆಕ್ಷನ್‌ ಆರೋ ಬಟನ್ ಸೇರಿದಂತೆ 20 ಬಟನ್ ವಿನ್ಯಾಸವನ್ನು ಹೊಂದಿದೆ ಜೊತೆಗೆ ಎರಡು ಜಾಯ್‌ ಸ್ಟಿಕ್‌ ಅನ್ನು ಕೂಡ ಹೊಂದಿದೆ. ಇನ್ನು ಈ ಕಂಟ್ರೋಲರ್‌ ವೈಬ್ರೇಶನ್‌ ಫಿಡ್‌ಬ್ಯಾಕ್‌ ಮೋಟಾರ್‌ ಮತ್ತು ಹ್ಯಾಪ್ಟಿಕ್ ಕಂಟ್ರೋಲರ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಜಿಯೋ ಬಿಡುಗಡೆ ಮಾಡಿರುವ ಹೊಸ ಜಿಯೋ ಗೇಮ್ ಕಂಟ್ರೋಲರ್ ಪ್ರಸ್ತುತ ಅಧಿಕೃತ ಜಿಯೋ ಸೈಟ್‌ನಲ್ಲಿ ಲಭ್ಯವಿದೆ. ಇದರ ಬೆಲೆ 3,499ರೂ. ಆಗಿದ್ದು, ಮ್ಯಾಟ್ ಬ್ಲ್ಯಾಕ್ ಫಿನಿಶ್ ಅನ್ನು ಹೊಂದಿದೆ. ಇನ್ನು ಈ ಕಂಟ್ರೋಲರ್‌ ಅನ್ನು ಖರೀದಿಸುವವರಿಗೆ EMI ಆಫರ್‌ ಕೂಡ ಲಭ್ಯವಿದೆ.

ಜಿಯೋ

ಇದಲ್ಲದೆ ಜಿಯೋ ಟೆಲಿಕಾಂ ಕೆಲ ದಿನಗಳ ಹಿಂದೆ ಭಾರತದಲ್ಲಿ ಜಿಯೋಫೈ (JioFi) ಗಾಗಿ ಮೂರು ಹೊಸ ಪೋಸ್ಟ್‌ಪೇಯ್ಡ್ ಮಾಸಿಕ ರೀಚಾರ್ಜ್ ಆಯ್ಕೆಗಳನ್ನು ಪರಿಚಯಿಸಿದೆ. ನೂತನ ಮೂರು ರೀಚಾರ್ಜ್ ಆಯ್ಕೆಗಳು ಜಿಯೋಫೈ (JioFi)4G ವೈರ್‌ಲೆಸ್ ಹಾಟ್‌ಸ್ಪಾಟ್ ಸಬ್‌ಸ್ಕ್ರಿಪ್ಶನ್‌ಗಳು ಕ್ರಮವಾಗಿ 249ರೂ, 299ರೂ ಮತ್ತು 349ರೂ. ಗಳ ಬೆಲೆಯಲ್ಲಿವೆ. ಜಿಯೋ ಟೆಲಿಕಾಂ ಪರಿಚಯಿಸಿದ ಮೂರು ಹೊಸ ಯೋಜನೆಗಳು ಮಾಸಿಕ 30GB ಡೇಟಾವನ್ನು ವಿತರಿಸುವ 249 ರೂ. ಆಯ್ಕೆಯನ್ನು ಒಳಗೊಂಡಿವೆ. 40GB ಡೇಟಾದೊಂದಿಗೆ 299 ರೂ. ಯೋಜನೆ ಮತ್ತು 50GB ಡೇಟಾವನ್ನು ನೀಡುವ 349 ರೂ. ಯೋಜನೆ ಒಂದು ತಿಂಗಳು ಇವೆ. ಒಮ್ಮೆ ತಿಂಗಳ ನಿಗದಿತ ಡೇಟಾ ಮಿತಿಯನ್ನು ಬಳಕೆ ಮಾಡಿದ ಬಳಿಕೆ, ಇಂಟರ್ನೆಟ್ ವೇಗವು 64Kbps ಗೆ ಕಡಿಮೆಯಾಗುತ್ತದೆ. ಇನ್ನು ಈ ರೀಚಾರ್ಜ್ ಆಯ್ಕೆಗಳು ಯಾವುದೇ ಧ್ವನಿ ಅಥವಾ ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಹೊಂದಿಲ್ಲ. ಮತ್ತು 18-ತಿಂಗಳ ಲಾಕ್-ಇನ್ ಷರತ್ತು ಇದೆ.

Best Mobiles in India

English summary
Jio Game Controller Launched in India: Price, Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X