ಜಿಯೋ ಗಿಗಾಫೈಬರ್ ಬೆಲೆ ಲೀಕ್..4,500 ರೂ. ಡೆಪಾಸಿಟ್!..3 ತಿಂಗಳು ಉಚಿತ ಸೇವೆ!!

|

ಕಳೆದ ವರ್ಷ ಆಗಸ್ಟ್ 15 ರಂದು ಜಿಯೋ ಘೋಷಿಸಿದ ರಿಲಯನ್ಸ್ ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ಏಪ್ರಿಲ್ ತಿಂಗಳ ಮೊದಲ ವಾರದಿಂದಲೇ ಆರಂಭವಾಗಲಿದ್ದು, ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲು ತಯಾರಾಗಿದೆ ಎಂಬ ಭರ್ಜರಿ ಸಿಹಿಸುದ್ದಿ ಹೊರಬಿದ್ದಿದೆ. ಜೊತೆಗೆ ಜಿಯೋ ಗಿಗಾ ಫೈಬರ್ ಸೇವೆಯ ಪ್ಲಾನ್‌ಗಳ ಮಾಹಿತಿ ಕೂಡ ಲೀಕ್ ಆಗಿದೆ.

ಹೌದು, ರಿಲಯನ್ಸ್ ಜಿಯೋ ಗಿಗಾ ಪೈಬರ್ ಬ್ರಾಡ್ ಬ್ಯಾಂಡ್ ಕನೆಕ್ಷನ್‌ ನೀಡಲು ಅಂತಿಮ ಹಂತದ ಟೆಸ್ಟಿಂಗ್ ಅನ್ನು ಪೂರ್ಣಗೊಳಿಸುತ್ತಿದ್ದು ತನ್ನ ಬ್ರಾಡ್ ಬ್ಯಾಂಡ್ ಸೇವೆಯನ್ನು ದೇಶದ ಜನರಿಗೆ ನೀಡುವುದಕ್ಕೆ ತಯಾರಾಗಿದೆ. ದೇಶದಲ್ಲಿ 1,100 ನಗರಗಳಲ್ಲಿ ಜಿಯೋ ಗಿಗಾ ಫೈಬರ್ ಸೇವೆಯನ್ನು ಆರಂಭಿಸುತ್ತಿದ್ದು, 2019 ನೇ ಏಪ್ರಿಲ್ ವೇಳೆಗೆ ಎಲ್ಲಾ ನಗರಗಳು ಸೇವೆ ಪಡೆದುಕೊಳ್ಳಲಿವೆ ಎನ್ನಲಾಗಿದೆ.

ಜಿಯೋ ಗಿಗಾಫೈಬರ್ ಬೆಲೆ ಲೀಕ್..4,500 ರೂ. ಡೆಪಾಸಿಟ್!..3 ತಿಂಗಳು ಉಚಿತ ಸೇವೆ!!

ಒಂದು ವೇಳೆ ನೀವು ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲು ಆಸಕ್ತರಾಗಿದ್ದಲ್ಲಿ ಪ್ರಾಥಮಿಕವಾಗಿ 4,500 ರೂಪಾಯಿ ಡೆಪಾಸಿಟ್ ಇಡಬೇಕಿದ್ದು, ಈ ಮೊತ್ತವನ್ನು ನಿಮಗೆ ಕನೆಕ್ಷನ್ ಹಿಂಪಡೆದಾಗ ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಾದರೆ, ಜಿಯೋ ಗಿಗಾ ಪೈಬರ್ ಬಗ್ಗೆ ಏನೆಲ್ಲಾ ಸುದ್ದಿಗಳು ಹೊರಬಿದ್ದಿವೆ ಎಂಬುದನ್ನು ಮುಂದೆ ಓದಿರಿ.

ಗಿಗಾಫೈಬರ್ ಸೇವೆ ಪಡೆಯುವ ಮೊದಲ ನಗರಗಳು!

ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ, ಪುಣೆ, ಗುರುಗ್ರಾಂ, ಲಕ್ನೋ, ಕಾನ್ಫುರ, ರಾಯ್ ಪುರ, ನಾಗಪುರ, ಇಂದೋರ್, ಪುಣೆ, ಭೋಪಾಲ್, ಗಾಝಿಯಾಬಾದ್, ಲುದಿಯಾನ, ಕೋಯಂಬತ್ತೂರ್, ಆಗ್ರಾ, ಮಧುರೈ, ನಾಸಿಕ್, ಫರಿದಾಬಾದ್, ಮೀರತ್, ರಾಜ್ ಕೋಟ್, ಶ್ರೀನಗರ, ಅಮೃತ್ ಸರ, ಪಾಟ್ನಾ, ಅಲಹಾಬಾದ್, ರಾಂಚಿ, ಜೋಧ್ ಪುರ, ಕೋಟಾ. ಗೌಹಾಟಿ, ಚಂಡೀಗಡ, ಸೋಲಾಪುರ ನಗರಗಳಲ್ಲಿ ಜಿಯೋ ಗಿಗಾಫೈಬರ್ ಸೇವೆ ಮೊದಲ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಮೂರು ಹಂತಗಳಲ್ಲಿ ರಾಜ್ಯಗಳಿಗೆ ವಿಸ್ತಾರ!

ಗುಜರಾತ್, ದೆಹಲಿ, ತೆಲಂಗಾಣ, ರಾಜಸ್ತಾನ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಮೊದಲ ಹಂತದಲ್ಲಿ ಗಿಗಾಫೈಬರ್ ಸೇವೆಯನ್ನು ಪಡೆದುಕೊಂಡರೆ, ಕರ್ನಾಟಕ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳು ಎರಡನೇ ಪಟ್ಟಿಯಲ್ಲಿ ಸ್ಥಾನಪಡೆದಿವೆ. ಇನ್ನು ಮಧ್ಯ ಪ್ರದೇಶ, ಕೇರಳ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಗೋವಾ, ಜಾರ್ಖಂಡ್, ಉತ್ತರಾಖಂಡ, ಓರಿಸ್ಸಾ, ಹಿಮಾಚಲ ಪ್ರದೇಶ, ಛತ್ತೀಸ್ ಗಢ ರಾಜ್ಯಗಳು ಮೂರನೇ ಪಟ್ಟಿಯಲ್ಲಿ ಸ್ಥಾನಪಡೆದಿವೆ.

ಮೂರು ತಿಂಗಳು ಉಚಿತ ಸೇವೆ!

ಏರ್‌ಟೆಲ್ ಬ್ರಾಡ್ ಬ್ಯಾಂಡ್ ಮತ್ತು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಗಳ ಜೊತೆಗೆ ಸ್ಪರ್ಧೆಗಿಳಿಯಲು ಸಿದ್ಧವಾಗುತ್ತಿರುವ ರಿಲಾಯನ್ಸ್ ಜಿಯೋ ಮತ್ತೆ ಮೂರು ತಿಂಗಳ ಉಚಿತ ಸೇವೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲು 500 ರೂಪಾಯಿ ಡೆಪಾಸಿಟ್ ಇಡಬೇಕಿದ್ದು, ಈ ಮೊತ್ತವನ್ನು ನಿಮಗೆ ಕನೆಕ್ಷನ್ ಹಿಂಪಡೆದಾಗ ಮರುಪಾವತಿ ಮಾಡಲಾಗುತ್ತದೆ. ಕನೆಕ್ಷನ್ ಪೆಡದ ನಂತರ ಮೂರು ತಿಂಗಳು ಗಿಗಾಫೈಬರ್ ಸೇವೆ ಉಚಿತವಾಗಿರಲಿದೆ.

500 ರೂಪಾಯಿಗಳಿಂದ ಪ್ಲಾನ್ ಆರಂಭ!

ಮನೆಮನೆಯಲ್ಲೂ ಅಂತರ್ಜಾಲ ಸೇವೆ ಒದಗಿಸಿ ಇತರೆ ಕಂಪೆನಿಗಳ ಜೊತೆಗೆ ಸ್ಪರ್ಧೆಯ ಮಟ್ಟವನ್ನು ಹೆಚ್ಚಿಸುವ ನಿರೀಕ್ಷೆ ಇಟ್ಟುಕೊಂಡಿರುವ ಜಿಯೋ ಗಿಗಾ ಪೈಬರ್ ಸೇವೆಯು ಕೇವಲ 500 ರೂಪಾಯಿಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ. ಒಟ್ಟು ಐದಕ್ಕೂ ಹೆಚ್ಚು ಜಿಯೋ ಗಿಗಾ ಪೈಬರ್ ಸೇವೆ ಪ್ಲಾನ್‌ಗಳು ಲೀಕ್ ಆಗಿದ್ದು, ಇತರೆ ಬ್ರಾಡ್‌ಬ್ಯಾಂಡ್ ಕಂಪೆನಿಗಳು ಹೆದರುವಂತೆ ಮಾಡಿದೆ. ಇದರಿಂದ ಬ್ರಾಡ್‌ಬ್ಯಾಂಡ್ ಸೇವಾ ನಿರತರು ಈಗ ಸ್ಪರ್ಧೆಗೆ ಸಿದ್ಧಗೊಳ್ಳಲೇಬೇಕಾಗಿದೆ.

ಕೇಬಲ್ ಮಾರುಕಟ್ಟೆ ಕೂಡ ಧೂಳಿಪಟ!

ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲು ಆಸಕ್ತರಾಗಿದ್ದಲ್ಲಿ ಪ್ರಾಥಮಿಕವಾಗಿ 4,500 ರುಪಾಯಿ ಡೆಪಾಸಿಟ್ ಇಡಬೇಕು ಎಂದು ಹೇಳಿರುವುದು ಕೇಲವ ಜಿಯೋ ಗಿಗಾಫೈಬರ್ ರೂಟರ್‌ಗಾಗಿ ಮಾತ್ರವಲ್ಲ. ಬದಲಾಗಿ ಜಿಯೋಟಿವಿ ರೂಟರ್ ಕೂಡ ಇದೇ ಮೊತ್ತದಲ್ಲಿ . ಈ ಮೊತ್ತವನ್ನು ನಿಮಗೆ ಕನೆಕ್ಷನ್ ಹಿಂಪಡೆದಾಗ ಮರುಪಾವತಿ ಮಾಡಲಾಗುತ್ತದೆ. ಭಾರತವೇ ಎದುರುನೋಡುತ್ತಿದ್ದ ಸೇವೆ ಈಗಅತ್ಯಂತ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರ ಕೈಗೆ ಸಿಗುತ್ತಿದೆ.

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಉಚಿತ!

ರಿಲಯನ್ಸ್ ಇಂಡಸ್ಟ್ರೀಸ್ 41 ನೇ ವಾರ್ಷಿಕ ಸಭೆಯಲ್ಲಿ ಯಾರೂ ಕೂಡ ಊಹಿಸದಂತೆ ಬಿಡುಗಡೆಯಾದ ಒಂದು ಡಿವೈಸ್ ಎಂದರೆ ಅದು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್.! ಜಿಯೋ ಡಿಟಿಹೆಚ್ ಬದಲಿಗೆ ಇಂಟರ್‌ನೆಟ್ ಆಧಾರಿತ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನು ಜಿಯೋ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯ ಜೊತೆ ಜಿಯೋ ಟಿವಿ ರೂಟರ್ ಸಹ ಉಚಿತವಾಗಿ ದೊರೆಯುತ್ತಿರುವುದು ಬಂಪರ್ ಆಫರ್ ಆಗಿದೆ.

ಜಿಯೋ 'ಗಿಗಾ ಟಿವಿ' ವಿಶೇಷತೆಗಳೇನು?

ರಿಲಯನ್ಸ್ ಘೋಷಣೆ ಮಾಡಿರುವ ಜಿಯೋ 'ಗಿಗಾರೂಟರ್' ಬಗೆಗಿನ ವಿಶೇಷತೆಗಳನ್ನು ರಿಲಯನ್ಸ್ ಕಂಪೆನಿ ಈಗಾಗಲೇ ಬಹಿರಂಗಪಡಿಸಿದೆ. 600 ಪ್ಲಸ್ ಚಾನೆಲ್‌ಗಳು, ಲಕ್ಷಾಂತರ ಹಾಡುಗಳು ಮತ್ತು 4K ರೆಸೊಲ್ಯೂಶನ್‌ನಲ್ಲಿ ಅಲ್ಟ್ರಾ ಹೆಚ್‌ಡಿಯಲ್ಲಿ ವೀಡಿಯೋಗಳನ್ನು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಬಳಕೆದಾರರಿಗೆ ಜಿಯೋ ಉಚಿತವಾಗಿ ನೀಡುತ್ತಿದೆ.ಟಿವಿ ಲೋಕಕ್ಕೆ ಆಶ್ಚರ್ಯ ಮೂಡಿಸಿರುವ ರಿಲಾಯನ್ಸ್ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನ ಧ್ವನಿ ಕಮಾಂಡ್ ಮೂಲಕ ಟಿವಿಯಲ್ಲಿ ನಿಯಂತ್ರಿಸುವ ವೈಶಿಷ್ಟ್ಯವನ್ನು ಸಹ ಹೊಂದಿದೆ.

ಜಿಯೋ 'ಗಿಗಾ ಟಿವಿ' ಸೇವೆ ಎಲ್ಲೆಲ್ಲಿ ಲಭ್ಯ

ರಿಲಾಯನ್ಸ್ ಜಿಯೋ ಕಂಪೆನಿ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆಯನ್ನು ಭಾರತದಾದ್ಯಂತ 1100 ನಗರಗಳಲ್ಲಿ ಒದಗಿಸುವುದಾಗಿ ಹೇಳಿಕೊಂಡಿದೆ. ಕರ್ನಾಟಕದಲ್ಲಿ ಮೊದಲು ಬೆಂಗಳೂರಿನಲ್ಲಿ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆ ಸಿಗುವುದು ಈಗಾಗಲೇ ಪಕ್ಕಾ ಆಗಿದೆ. ರಾಜ್ಯದಲ್ಲಿನ ಇನ್ನಿತರ ನಗರಗಳು ಯಾವುವು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದ್ದು, ಬೆಂಗಳೂರಿಗರಿಗೆ ಮೊದಲು ಸಿಹಿಸುದ್ದಿ ಸಿಕ್ಕಿದೆ.

ಕೇಬಲ್ ಟಿವಿ ಮುಳುಗಡೆ?

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆಯಿಂದ ಪ್ರಸ್ತುತದ ಕೇಬಲ್ ಟಿವಿ ದಂಧೆಗೆ ಕಡಿವಾಣ ಬೀಳಲಿರುವುದು ಪಕ್ಕಾ ಆಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್ ಆಧಾರಿತ ಅನ್‌ಲಿಮಿಟೆಡ್ ಟಿವಿ ಲೈವ್‌ ಸ್ಟ್ರೀಮ್ ನೀಡಿದರೆ ಎಲ್ಲರೂ ಜಿಯೋ ಕಡೆ ವಾಲುತ್ತಾರೆ. ಆ ನಂತರ ಕೇಬಲ್ ಟಿವಿ ಮಾರುಕಟ್ಟೆ ಜೊತೆಗೆ ಇತರೆ ಡಿಟಿಹೆಚ್‌ಗಳು ನೆಲಕಚ್ಚಲಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಉಚಿತವಾಗಿ ಗಿಗಾ ರೂಟರ್, ಗಿಗಾ ಟಿವಿ ರೂಟರ್ ಹಾಗೂ 3 ತಿಂಗಳ ಉಚಿತ ಸೇವೆ ನೀಡುತ್ತಿರುವುದು ಟೆಲಿಕಾಂ ಹಾಗೂ ಕೇಬಲ್ ಟಿವಿ ಮುಳುಗಡೆಗೆ ಮುನ್ನುಡಿ ಎನ್ನಬಹುದು.

ಗಿಗಾಫೈಬರ್ ಪ್ಲಾನ್‌ಗಳು!

ಜಿಯೊ ಗಿಗಾಫೈಬರ್ ರೂ. 500 ಯೋಜನೆ: 50Mbps ನ ಡೌನ್ ಲೋಡ್ ವೇಗದೊಂದಿಗೆ ಈ ಯೋಜನೆಯು ಒಂದು ತಿಂಗಳವರೆಗೆ 300GB ವೇಗದ ವೇಗದ ಡೇಟಾವನ್ನು ನೀಡುತ್ತದೆ.

ಜಿಯೊ ಗಿಗಾಫೈಬರ್ ರೂ. 750 ಯೋಜನೆ: 50Mbps ಡೌನ್ಲೋಡ್ ವೇಗದೊಂದಿಗೆ ಈ ಯೋಜನೆಯು 450GB ನಷ್ಟು ಹೆಚ್ಚಿನ ವೇಗದ ಡೇಟಾವನ್ನು ಒಂದು ತಿಂಗಳ ಕಾಲ ನೀಡುತ್ತದೆ.

ಜಿಯೊ ಗಿಗಾಫೈಬರ್ ರೂ. 999 ಯೋಜನೆ: 100Mbps ಡೌನ್ಲೋಡ್ ವೇಗದೊಂದಿಗೆ ಈ ಯೋಜನೆಯು 600GB ನಷ್ಟು ಹೆಚ್ಚಿನ ವೇಗದ ಡೇಟಾವನ್ನು ಒಂದು ತಿಂಗಳ ಕಾಲ ನೀಡುತ್ತದೆ.

ಜಿಯೊ ಗಿಗಾಫೈಬರ್ ರೂ. 1,299 ಯೋಜನೆ: 100 ಎಂಬಿಪಿಎಸ್ ಡೌನ್ಲೋಡ್ ವೇಗದೊಂದಿಗೆ ಈ ಯೋಜನೆಯು ಒಂದು ತಿಂಗಳವರೆಗೆ 750 ಜಿಬಿ ವೇಗದ ವೇಗವನ್ನು ನೀಡುತ್ತದೆ.

ಜಿಯೊ ಗಿಗಾಫೈಬರ್ ರೂ. 1,500 ಯೋಜನೆ: 100Mbps ನ ಡೌನ್ಲೋಡ್ ವೇಗದೊಂದಿಗೆ ಈ ಯೋಜನೆಯು 900GB ನಷ್ಟು ಹೆಚ್ಚಿನ ವೇಗದ ಡೇಟಾವನ್ನು ಒಂದು ತಿಂಗಳ ಕಾಲ ನೀಡುತ್ತದೆ.

Most Read Articles
Best Mobiles in India

English summary
Jio GigaFiber FTTH Broadband services are soon going to launch in India and here are details on Jio GigaFiber plans, prices, coverage cities, availability, Jio GigaFiber preview offer and more. to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more