ಈಗ ಕಡಿಮೆ ಅಂದ್ರೇ ಕಡಿಮೆ ದರದಲ್ಲಿ ಜಿಯೋ ಗಿಗಾಫೈಬರ್..!

By Gizbot Bureau
|

ಟೆಲಿಕಾಂ ನಂತರ ಬ್ರಾಡ್‌ಬ್ಯಾಂಡ್‌ ಕ್ಷೇತ್ರದಲ್ಲಿ ಧೂಳೆಬ್ಬಿಸಿರುವ ರಿಲಾಯನ್ಸ್‌ ಜಿಯೋ ಈಗ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಹೊಸ ಯೋಜನೆಯೊಂದಿಗೆ ಮಾರುಕಟ್ಟೆಗೆ ಬರ್ತಿದೆ. ಹೌದು, ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಪಣತೊಟ್ಟಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ಹೊಸ ಆಪ್ಟಿಕಲ್ ನೆಟ್‌ವರ್ಕ್‌ ಟರ್ಮಿನಲ್ ಡಿವೈಸ್‌ ಅನ್ನು ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ.

ಅದಲ್ಲದೇ ಇದಕ್ಕೆ ಕಡಿಮೆ ಬೆಲೆ ನಿಗದಿಪಡಿಸಿರುವುದರಿಂದ ಗ್ರಾಹಕರು ಇದರ ಕಡೆ ಆಕರ್ಷಿತರಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆ ಸೇವೆ ಯಾವುದು..? ಏನೆಲ್ಲಾ ವಿಶೇಷತೆ ಹೊಂದಿದೆ..? ಎಂಬುದರ ಮಾಹಿತಿಯನ್ನು ಮುಂದೆ ಓದಿ.

ಗಿಗಾಫೈಬರ್ ಭಾಗವಾಗಿ ಹೊಸ ಸೇವೆ

ಗಿಗಾಫೈಬರ್ ಭಾಗವಾಗಿ ಹೊಸ ಸೇವೆ

ಹೊಸ ಆಪ್ಟಿಕಲ್ ನೆಟ್‌ವರ್ಕ್‌ ಡಿವೈಸ್ ಅಂದ್ರೆ ಗಿಗಾಹಬ್ ಹೋಮ್ ಗೇಟ್‌ವೇ ಅನ್ನು ರಿಲಾಯನ್ಸ್ ಜಿಯೋ ಕಂಪನಿ ಜಿಯೋ ಗಿಗಾಫೈಬರ್‌ ಬ್ರಾಡ್‌ಬ್ಯಾಂಡ್‌ ಸೇವೆಯಲ್ಲಿಯೇ ಗ್ರಾಹಕರಿಗೆ ನೀಡುತ್ತಿದೆ. ಈ ಹೊಸ ಆಫರ್‌ನಿಂದ ಜಿಯೋ ಗಿಗಾಫೈಬರ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪಡೆಯಲು ಇದ್ದ ಅಡೆತಡೆಗಳನ್ನು ನಿವಾರಿಸಿ ಗ್ರಾಹಕರಿಗೆ ಸುಲಭವಾಗಿ ಸೇವೆ ಸಿಗುವಂತೆ ಜಿಯೋ ಮಾಡಿದೆ.

ಕಡಿಮೆ ಅಂದ್ರೆ ಕಡಿಮೆ ದರ..!

ಕಡಿಮೆ ಅಂದ್ರೆ ಕಡಿಮೆ ದರ..!

ಹೊಸ ಸೇವೆಗೆ ಜಿಯೋ ಬಹಳ ದೊಡ್ಡ ರಿಯಾಯಿತಿಯನ್ನೇ ನೀಡಿದೆ. ಹೌದು, ಮೊದಲೆಲ್ಲಾ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆಯಲು ಭದ್ರತಾ ಠೇವಣಿ ಎಂದು 4,500 ರೂ. ನೀಡಬೇಕಾಗಿತ್ತು. ಆದರೆ. ಈಗ ಹೊಸ ಗಿಗಾಹಬ್ ಹೋಮ್ ಗೇಟ್‌ವೇ ಸೇವೆಗೆ ಕೇವಲ 2,500 ರೂ. ನೀಡಿದ್ರೆ ಸಾಕು ಎಂಬ ಆಕರ್ಷಕ ಆಫರ್ ನೀಡಿದ್ದು, ಬರೋಬ್ಬರಿ 2 ಸಾವಿರ ರೂ. ಅನ್ನು ಕಡಿತಗೊಳಿಸಿದ್ದು, ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದೆ.

ಟ್ವಿಟ್ಟರ್‌ನಲ್ಲಿ ಬಹಿರಂಗ

ಟ್ವಿಟ್ಟರ್‌ನಲ್ಲಿ ಬಹಿರಂಗ

ಹೊಸ ಯೋಜನೆಯನ್ನು ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಪ್ರೆಶಿಟ್‌ ಡಿಯೋರುಖ್ಕರ್ ಎಂಬುವವರು ಜಿಯೋ ಗಿಗಾಫೈಬರ್ ಸಂಪರ್ಕ ಪಡೆಯಲು 4,500 ರೂ. ಬದಲಾಗಿ 2,500 ರೂ. ಪಾವತಿಸಿದರೆ ಸಾಕು ಎಂದು ಹೇಳಿದ್ದಾರೆ. 2,500 ರೂ. ಹೊಸ ರೂಟರ್ ಸಿಗುತ್ತೆ ಎಂದು ಬರೆದುಕೊಂಡಿದ್ದು, ಅದಲ್ಲದೇ ಮುಂದಿನ ವಾರಗಳಲ್ಲಿ ವಾಯ್ಸ್ ಸೇವೆಗಳನ್ನು ಸಹ ಈ ಯೋಜನೆಯಲ್ಲಿ ಗ್ರಾಹಕರಿಗೆ ಜಿಯೋ ನೀಡುತ್ತೆ ಎಂದಿದ್ದಾರೆ.

ಎಲ್ಲೆಲ್ಲಿ ಲಭ್ಯ..?

ಎಲ್ಲೆಲ್ಲಿ ಲಭ್ಯ..?

ಸದ್ಯ ಈ ಹೊಸ ಸೇವೆ ಚೆನ್ನೈ ಮತ್ತು ಮುಂಬೈ ಮಹಾನಗರಗಳಲ್ಲಿ ಮಾತ್ರ ಲಭ್ಯವಿದೆ. ಹೊಸ ಸೇವೆಯಲ್ಲಿ ಕಂಪನಿ ರೂಟರ್ ಮಾತ್ರ ನೀಡುತ್ತಿದ್ದು, ಇಂಟರ್‌ನೆಟ್‌ ಸಂಪರ್ಕವನ್ನು ನೀಡುತ್ತಿಲ್ಲ. ಆದರೆ, ಸಿಂಗಲ್ ಬ್ಯಾಂಡ್ ಬೆಂಬಲದೊಂದಿಗೆ 50Mbps ವೇಗದಲ್ಲಿ ಇಂಟರ್‌ನೆಟ್‌ನ್ನು ಜಿಯೋ ನೀಡುತ್ತಿದೆ. ಹೊಸ ಸೇವೆಯಲ್ಲಿ ವಾಯ್ಸ್ ಸೇವೆಗಳನ್ನು ಸೇರಿಸಲಾಗಿದೆ ಎಂದು ಜಿಯೋ ಮೂಲಗಳು ಹೇಳಿವೆ.

ಹೊಸ ಡಿವೈಸ್‌ನಲ್ಲಿ ಏನೀದೆ..?

ಹೊಸ ಡಿವೈಸ್‌ನಲ್ಲಿ ಏನೀದೆ..?

ಹೊಸ ಡಿವೈಸ್ 2.4GHz b/g/n Wi-Fi ಬ್ಯಾಂಡ್‌ನ್ನು ಬೆಂಬಲಿಸುತ್ತದೆ. ಅದಲ್ಲದೇ ಇಥರ್‌ನೆಟ್‌ ಪೋರ್ಟ್ ಹೊಂದಿದ್ದು, RJ45, RJ11 ಮತ್ತು USB 2.0 ಪೋರ್ಟ್‌ಗಳನ್ನು ಹೊಂದಿದೆ, ಇನ್ನು, ಹೊಸ ಜಿಯೋ ಗಿಗಾಫೈಬರ್ ಸೇವೆಯಲ್ಲಿ ಗ್ರಾಹಕರಿಗೆ ತಿಂಗಳಿಗೆ 1,100 GB ಇಂಟರ್‌ನೆಟ್ ದೊರೆಯುತ್ತದೆ.

Best Mobiles in India

English summary
Jio GigaFiber Security Fee Dropped By Rs. 2,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X