ಜಿಯೋ ಗಿಗಾಫೈಬರ್, BSNL ಬ್ರಾಡ್‌ಬ್ಯಾಂಡ್, ಏರ್‌ಟೆಲ್ ವಿ-ಫೈಬರ್: ಯಾವುದು ಬೆಸ್ಟ್?

|

ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಕಾಲಿಟ್ಟಾಗಿನಿಂದಲೂ ಒಂದು ಕ್ರಾಂತಿಯಾಗಿದೆ. ಕನಿಷ್ಟ ಬೆಲೆಯ ಕೋಂಬೋ ಆಫರ್ ಗಳನ್ನು ಇದು ನೀಡಿದ್ದು, ಪ್ರತಿಯೊಬ್ಬರಿಗೂ ಕೈಗೆಟುಕುವ ಬೆಲೆಯಲ್ಲಿ ಅಂತರ್ಜಾಲ ಸೌಲಭ್ಯ ಸಿಗುತ್ತಿದೆ. ಈ ಹಿಂದೆ ಯಾವುದೇ ಕಂಪೆನಿಯೂ ನೀಡದಂತ ಆಫರ್ ಗಳನ್ನು ರಿಲಯನ್ಸ್ ಜಿಯೋ ನಿಡಿದೆ. ತಾರಿಫ್ ಪ್ಲಾನ್ ಗಳಿಂದಾಗಿ ಭಾರೀ ದೊಡ್ಡ ಮಟ್ಟದ ಸ್ಪರ್ಧೆಯನ್ನು ಇದು ಟೆಲಿಕಾಂ ಇಂಡಸ್ಟ್ರಿಯಲ್ಲಿ ಸೃಷ್ಟಿ ಮಾಡಿರುವುದಂತೂ ಸುಳ್ಳಲ್ಲ.

ಜಿಯೋ ಗಿಗಾಫೈಬರ್, BSNL ಬ್ರಾಡ್‌ಬ್ಯಾಂಡ್, ಏರ್‌ಟೆಲ್ ವಿ-ಫೈಬರ್: ಯಾವುದು ಬೆಸ್ಟ್?

4ಜಿ ವೋಲ್ಟ್ ಸೇವೆಯ ನಂತರ ರಿಲಯನ್ಸ್ ಜಿಯೋ ಕಣ್ಣಿಟ್ಟಿರುವುದು ಬ್ರಾಡ್ ಬ್ಯಾಂಡ್ ಸೆಕ್ಟರ್ ಗೆ. ಈ ವರ್ಷದ ಜುಲೈ ನಲ್ಲಿ ನಡೆದ 41 ನೇ ಆನುವಲ್ ಜನರಲ್ ಮೀಟಿಂಗ್ ನಲ್ಲಿ ಕಂಪೆನಿಯು ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯ ಬಗ್ಗೆ ವಿವರಿಸಿದೆ.

ಈ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯು ದೇಶದಾದ್ಯಂತ ಎಲ್ಲಾ ಬಳಕೆದಾರರಿಗೆ ಬಿಡುಗಡೆಗೊಳ್ಳುವುದಕ್ಕೆ ಇನ್ನು ಕೆಲವು ಸಮಯಬೇಕಾಗುತ್ತದೆ. ಆದರೆ ಖಂಡಿತವಾಗಲೂ ಇದು ಏರ್ ಟೆಲ್ ಮತ್ತು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಸ್ಪರ್ಧೆ ನೀಡುವುದರಲ್ಲಿ ಸಂದೇಶವಿಲ್ಲ. ಈ ಎರಡೂ ಕಂಪೆನಿಗಳು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಮತ್ತು ಏರ್ ಟೆಲ್ ವಿ-ಫೈಬರ್ ಎಂಬ ಹೆಸರಿನಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಈಗಾಗಲೇ ಗ್ರಾಹಕರಿಗೆ ನೀಡುತ್ತಿದೆ.

ಹಾಗಾದ್ರೆ ಸದ್ಯ ಲಭ್ಯವಿರುವ ಮಾಹಿತಿಗಳ ಅನ್ವಯವೇ ಹೇಳುವುದಾದರೆ ಗ್ರಾಹಕರಿಗೆ ಲಾಭದಾಯಕವಾಗುವ ಬ್ರಾಡ್ ಬ್ಯಾಂಡ್ ಸೇವೆ ಯಾವುದು? ಈ ಮೂರರಲ್ಲಿ ಯಾವುದರಲ್ಲಿ ಉತ್ತಮ ಆಫರ್ ಮತ್ತು ಬೆನಿಫಿಟ್ ಗಳಿವೆ ಎಂಬ ಬಗೆಗಿನ ಒಂದು ಸಣ್ಣ ಹೋಲಿಕೆ ಇಲ್ಲಿದೆ.

ಜಿಯೋ ಗಿಗಾ ಫೈಬರ್

ಜಿಯೋ ಗಿಗಾ ಫೈಬರ್

ಜಿಯೋ ಗಿಗಾಫೈಬರ್ ನ ರಿಜಿಸ್ಟ್ರೇಷನ್ ಈಗಾಗಲೇ ಅಗಸ್ಟ್ ತಿಂಗಳಿನಿಂದ ಆರಂಭವಾಗಿದ್ದು ಹಲವು ಬಳಕೆದಾರರು ಗಿಗಾಫೈಬರ್ ಗೆ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ಗಿಗಾಫೈಬರ್ ಪ್ಲಾನ್ ಗಳ ಬಗ್ಗೆ ಹಲವು ವರದಿಗಳು ಮತ್ತು ಸುದ್ದಿಗಳು ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪೆನಿಯು ಹೊರಹಾಕಿಲ್ಲ.

ಆದರೆ ಗಿಗಾಫೈಬರ್ ಬಗೆಗಿನ ಊಹೆಯ ಪ್ರಕಾರವೇ ಹೇಳುವುದಾದರೆ ಮತ್ತು ಪ್ರೀವ್ಯೂ ಆಫರ್ ನ್ನು ಈಗಾಗಲೇ ನೀಡಿರುವ ಬಗೆಗಿನ ಮಾಹಿತಿಯ ಪ್ರಕಾರವೇ ಆದರೆ ಈ ಕೆಳಗಿನಂತಿರುವ ಸಾಧ್ಯತೆ ಇದೆ. ಗಿಗಾ ಫೈಬರ್ ಪ್ರೀವ್ಯೂ ಆಫರ್ ನ ಅನ್ವಯ 100ಜಿಬಿ ಡಾಟಾ ಪ್ರತಿ ತಿಂಗಳಿಗೆ 3 ತಿಂಗಳ ಅವಧಿಗೆ ಲಭ್ಯವಾಗಲಿದ್ದು ಅದರ ಸ್ಪೀಡ್ 100Mbps ಆಗಿರಲಿದೆ. ಅಷ್ಟೇ ಅಲ್ಲ ಜಿಯೋ ಸ್ಯೂಟ್ ನ ಆಪ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಇರಲಿದ್ದು 4ಜಿ ಸರ್ವೀಸ್ ನಲ್ಲಿರುವಂತೆಯೇ ಆಫರ್ ಗಳಿರಲಿದೆ. ಆದರೆ ಈ ಆಫರ್ ಗಳನ್ನು ಪಡೆಯಲು ಜಿಯೋ ಬ್ರಾಡ್ ಬ್ಯಾಂಡ್ ಗ್ರಾಹಕರು 4500 ರುಪಾಯಿ ಸೆಕ್ಯುರಿಟಿ ಡೆಪಾಸಿಟ್ ನ್ನು ಪಾವತಿ ಮಾಡಬೇಕಾಗುತ್ತದೆ ಮತ್ತು ಈ ಸೆಕ್ಯುರಿಟಿ ಡೆಪಾಸಿಟ್ ನ್ನು ಗ್ರಾಹಕರು ಕನೆಕ್ಷನ್ ನ್ನು ತೆಗೆದಾಗ ಹಿಂತಿರುಗಿಸಲಾಗುತ್ತದೆ.

ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್

ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್

ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಭಾರಾತದಾದ್ಯಂತ ಲಭ್ಯವಿರುವ ಬ್ರಾಡ್ ಬ್ಯಾಂಡ್ ಸೇವೆಯಾಗಿದೆ. ಇದರ 777 ಪ್ಲಾನ್ ನಲ್ಲಿ 500ಜಿಬಿ ಡಾಟಾ ಪ್ರತಿ ತಿಂಗಳು 50Mbps ಸ್ಪೀಡ್ ನಲ್ಲಿ ಸಿಗುತ್ತದೆ.ರೂಪಾಯಿ 1,277 ಪ್ಲಾನ್ ನಲ್ಲಿ 750GB ಡಾಟಾವು 100Mbps ಸ್ಪೀಡ್ ನಲ್ಲಿ ಲಭ್ಯವಿದೆ. ತಿಂಗಳ ಡಾಟಾ ಖಾಲಿಯಾಗುತ್ತಿದ್ದಂತೆ ಅದರ ಸ್ಪೀಡ್ 20Mbps ಗೆ ಇಳಿಯುತ್ತದೆ. ಸದ್ಯಕ್ಕೆ ಬಿಎಸ್ಎನ್ಎಲ್ ಯಾವುದೇ ಇನ್ಸ್ಟಾಲೇಷನ್ ಚಾರ್ಜ್ ನ್ನು ಬಳಕೆದಾರರಿಂದ ಪಡೆಯುವುದಿಲ್ಲ. ಆದರೆ ರೂಟರ್ ಗೆ ಬಳಕೆದಾರರು ಪಾವತಿ ಮಾಡಬೇಕು ಮತ್ತು ಒಂದು ಬಾರಿಯ ಸೆಕ್ಯುರಿಟಿ ಡೆಪಾಸಿಟ್ ನ್ನು ಕೂಡ ನೀಡಬೇಕಾಗುತ್ತದೆ.

ಏರ್ ಟೆಲ್ ವಿ-ಫೈಬರ್

ಏರ್ ಟೆಲ್ ವಿ-ಫೈಬರ್

ಏರ್ ಟೆಲ್ ವಿ-ಫೈಬರ್ ನ್ನು ಗಣನೆಗೆ ತೆಗೆದುಕೊಂಡಾಗ ಇದರಲ್ಲಿ ಉಚಿತ ಬ್ರಾಡ್ ಬ್ಯಾಂಡ್ ರೂಟರ್ ಸಿಗುತ್ತದೆ ಮತ್ತು ಅಮೇಜಾನ್ ಗೆ ಉಚಿತ ಪ್ರೈಮ್ ಸಬ್ಕ್ರಿಪ್ಶನ್ ಸಿಗುತ್ತದೆ. 799 ರುಪಾಯಿಯ ಏರ್ ಟೆಲ್ ವಿ-ಫೈಬರ್ ಪ್ಲಾನ್ ನಲ್ಲಿ ಉಚಿತ 100ಜಿಬಿ ಡಾಟಾ ಪ್ರತಿ ತಿಂಗಳು 40 Mbps ವೇಗದಲ್ಲಿ ಮತ್ತು ಅನಿಯಮಿತ ಕಾಲಿಂಗ್ ಸೌಲಭ್ಯವಿದೆ. ಇನ್ನು 1,299 ಪ್ಲಾನ್ ನಲ್ಲಿ 500GB ಯು 100Mbps ಸ್ಪೀಡ್ ನಲ್ಲಿ ಲಭ್ಯವಿದೆ ಮತ್ತು ಅನಿಯಮಿತ ಡಾಟಾ ಪ್ಲಾನ್ 1,999 ರುಪಾಯಿಗೆ ಲಭ್ಯವಿದ್ದು ಡಾಟಾ ಸ್ಪೀಡ್ 100Mbps ಆಗಿದೆ.

ಯಾವುದು ಬೆಸ್ಟ್?

ಯಾವುದು ಬೆಸ್ಟ್?

ನಾವಿಲ್ಲಿ ವಿಭಿನ್ನ ಬ್ರಾಡ್ ಬ್ಯಾಂಡ್ ಪ್ಲಾನ್ ಗಳ ಬಗ್ಗೆ ತಿಳಿಸಿದ್ದೇವೆ. ಪ್ರೀವ್ಯೂ ಆಫರ್ ಗಳಲ್ಲಿರುವ ರಿಲಯನ್ಸ್ ಗಿಗಾಫೈಬರ್ ಸದ್ಯದ ಮಟ್ಟಿಗೆ ಬೆಟರ್ ಆಯ್ಕೆ ಅನ್ನುವುದರಲ್ಲಿ ಯಾವುದೇ ಸಂದೇಹ ಬೇಡ.

ಆದರೆ ಇನ್ನು ಹೆಚ್ಚಿನ ಮಾಹಿತಿಗಳು ಕಂಪೆನಿಯು ಸಂಪೂರ್ಣವಾಗಿ ಈ ಪ್ಲಾನ್ ನ್ನು ಜನಸಾಮಾನ್ಯರಿಗೆ ವಿವರಣೆ ಒದಗಿಸಿದಾಗ ಲಭ್ಯವಾಗುವ ಸಾಧ್ಯತೆ ಇದೆ. ಆದರೆ ಗಿಗಾಫೈಬರ್ ಗಿಂತ ಬಿಎಸ್ಎನ್ಎಲ್ ಮತ್ತು ಏರ್ ಟೆಲ್ ಬ್ರಾಡ್ ಬ್ಯಾಂಡ್ ಸೇವೆಗಳು ನಿಗದಿತವಾಗಿರುವ ಎಲ್ಲಾ ಸಿಟಿಗಳಲ್ಲೂ ಲಭ್ಯವಿದೆ.

Best Mobiles in India

English summary
Given that there is a lot of competition, varied benefits and much more in these broadband services, here we come up with a brief comparison between Jio GigaFiber, BSNL Broadband and Airtel V-Fiber services. Take a look!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X