DTH ಮಾರುಕಟ್ಟೆ ಅಲ್ಲಾಡಿಸಲು ಬರುತ್ತಿರುವ ಜಿಯೋ 'ಗಿಗಾ TV': ಲೈಫ್‌ಟೈಮ್ ಉಚಿತ HD ಚಾನಲ್‌ಗಳು..!

|

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ದೇಶಿಯ DTH ಮಾರುಕಟ್ಟೆಯನ್ನು ಅಲ್ಲಾಡಿಸಲು ಬರುತ್ತಿದೆ. ಈಗಾಗಲೇ DTH ಸೇವೆಯನ್ನು ನೀಡುವುದಿಲ್ಲ ಎಂದು ತಿಳಿಸಿರುವ ಜಿಯೋ, DTH ಸೇವೆಯೂ ಮುಳುಗುವ ಹಾಗೆ ಇಂಟರ್ನೆಟ್ ಮೂಲಕವೇ ಕಾರ್ಯನಿರ್ವಹಿಸುವ 'ಗಿಗಾ TV' ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಇದಕ್ಕಾಗಿ ವೇದಿಕೆಯೂ ನಿರ್ಮಾಣವಾಗಿದೆ.

ಜಿಯೋ 'ಗಿಗಾ TV': ಲೈಫ್‌ಟೈಮ್ ಉಚಿತ HD ಚಾನಲ್‌ಗಳು..!

ಈಗಾಗಲೇ ಆಗಸ್ಟ್ 15 ರಂದು ದೇಶದಲ್ಲಿ 'ಜಿಯೋ ಗಿಗಾ ಫೈಬರ್' ಬ್ರಾಂಡ್ ಬ್ರಾಂಡ್ ಸೇವೆಯೂ ಆರಂಭವಾಗಲಿದ್ದು, ಅದರೊಂದಿಗೆ ಗಿಗಾ TV ಸೇವೆಯೂ ಜಾರಿಗೆ ಬರಲಿದೆ. ಈಗಾಗಲೇ ತನ್ನ ಜಿಯೋ TV ಆಪ್ ಮೂಲಕ 500ಕ್ಕೂ ಹೆಚ್ಚು ಚಾನಲ್‌ಗಳನ್ನು ಪ್ರಸಾರ ಮಾಡುತ್ತಿರುವ ಜಿಯೋ, ಇದನ್ನು ತನ್ನ ಗಿಗಾ TV ಸೇವೆಯಲ್ಲಿ ಇವುಗಳನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಇದು ದೊಡ್ಡ ಪ್ರಮಾಣದ ಬದಲಾವಣೆಗೆ ಕಾರಣವಾಗಲಿದೆ.

ರಿಜಿಸ್ಟರ್ ಮಾಡಿ:

ರಿಜಿಸ್ಟರ್ ಮಾಡಿ:

ನೀವು ಜಿಯೋ ಗಿಗಾ ಫೈಬರ್ ಸೇವೆಯನ್ನು ಪಡೆದುಕೊಂಡರೆ ಸಾಕು. ಇದರ ಜೊತೆಯಲ್ಲಿಯೇ ಜಿಯೋ ಗಿಗಾ TV ಸೇವೆಯೂ ಉಚಿತವಾಗಿ ದೊರೆಯಲಿದೆ. ಇದಕ್ಕಾಗಿ ಮೊದಲು ನೀವು ಜಿಯೋ ಆಪ್ ಇಲ್ಲವೇ ಜಿಯೋ ವೆಬ್‌ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಮಾಡಿಕೊಂಡರೆ ಮಾತ್ರವೇ ಲಾಭ ದೊರೆಯಲಿದೆ.

ಜಿಯೋ ಗಿಗಾ TV:

ಜಿಯೋ ಗಿಗಾ TV:

ಮಾರುಕಟ್ಟೆಯಲ್ಲಿ ಜಿಯೋ ಗಿಗಾ ಫೈಬರ್ ಬುಕ್ ಮಾಡಿದ ಸಂದರ್ಭದಲ್ಲಿ ಇಂಟರ್ನೆಟ್ ಮಾಡೊಮ್ ನೊಂದಿಗೆ ನಿಮಗೆ ಜಿಯೋ ಗಿಗಾ TV ಬಾಕ್ಸ್ ಸಹ ದೊರೆಯಲಿದೆ ಎನ್ನಲಾಗಿದೆ. ಈ ಕುರಿತು ಜಿಯೋ ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ನೀವು ಈ ಬಾಕ್ಸ್ ಮೂಲಕ ಉಚಿತ ಟಿವಿ ಸೇವೆಯನ್ನು ಪಡೆಯಬಹುದಾಗಿದೆ.

ಉಚಿತ ಸಂಪೂರ್ಣ:

ಉಚಿತ ಸಂಪೂರ್ಣ:

ಇದಲ್ಲದೇ ಜಿಯೋ ಗಿಗಾ TV ಸಂಪೂರ್ಣವಾಗಿ ಉಚಿತ ಎನ್ನಲಾಗಿದೆ. ಆಪಲ್ ಟಿವಿ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಈ ಬಾಕ್ಸ್, ಆನ್‌ಲೈನ್‌ ಕಂಟೆಂಟ್ ಗಳನ್ನು ಉಚಿತವಾಗಿ ನೋಡುವ ಮತ್ತು HD ವಿಡಿಯೋ ಕಾಲಿಂಗ್ ಮಾಡುವ ಆಯ್ಕೆಯನ್ನು ನಿಮಗೆ ಮಾಡಿಕೊಡಲಿದೆ. ಮಾರುಕಟ್ಟೆಯಲ್ಲಿ ಬಹು ಬೇಡಿಕೆ ನಿರ್ಮಾಣವಾಗಲಿದೆ.

HD ಕಂಟೆಂಟ್:

HD ಕಂಟೆಂಟ್:

ಸದ್ಯ ಮಾರುಕಟ್ಟೆಯಲ್ಲಿ ನೀವು HD ಕಂಟೆಂಟ್ ಗಳನ್ನು ಬಳಕೆ ಮಾಡಿಕೊಳ್ಳಲು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ಪಾವತಿ ಮಾಡಬೇಕಾಗಿದೆ. ಇದರಿಂದಾಗಿ HD ಚಾನಲ್‌ಗಳನ್ನು ಉಚಿತವಾಗಿ ನೋಡಬಹುದಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ.

ಜಿಯೋನೇ ಬೆಸ್ಟ್:

ಜಿಯೋನೇ ಬೆಸ್ಟ್:

ಮಾರುಕಟ್ಟೆಯಲ್ಲಿ ಜಿಯೋ ಗಿಗಾ TV ಶುರುವಾದರೆ ಬೇರೆ ಚಾನಲ್‌ಗಳನ್ನು ಕೇಳುವವರೆ ಇಲ್ಲ ಎನ್ನಲಾಗಿದೆ. ಏಕೆಂದರೆ ಜಿಯೋದಲ್ಲಿಯೇ ಎಲ್ಲಾ ಮಾದರಿಯ ಚಾನಲ್‌ಗಳು ಉಚಿತವಾಗಿ ದೊರೆಯುತ್ತಿರುವುದರಿಂದಾಗಿ ಬೇರೆ DTH ಗಳು ಬೇಡಿಕೆಯನ್ನು ಕಳೆದುಕೊಳ್ಳುವುದು ಎನ್ನಲಾಗಿದೆ.

ಜಿಯೋ Free ಬ್ರಾಡ್‌ಬ್ಯಾಂಡ್ ರಿಜಿಸ್ಟರ್ ಮಾಡಿದವರಿಗೆ ಮಾತ್ರ...! ಇಲ್ಲಿದೆ ಈ ಕುರಿತು ಮಾಹಿತಿ..!

ಜಿಯೋ Free ಬ್ರಾಡ್‌ಬ್ಯಾಂಡ್ ರಿಜಿಸ್ಟರ್ ಮಾಡಿದವರಿಗೆ ಮಾತ್ರ...! ಇಲ್ಲಿದೆ ಈ ಕುರಿತು ಮಾಹಿತಿ..!

ಇಷ್ಟು ಆಮೆ ವೇಗದ ಇಂಟರ್ನೆಟ್ ಅನ್ನು ಬಿಟ್ಟು ಮಿಂಚಿನ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಬಳಸಲು ಸಿದ್ದರಾಗಿ, ಈಗಾಗಲೇ ಮೊಬೈಲ್‌ಗೆ ವೇಗದ ಸೇವೆಯನ್ನು ನೀಡಿದ್ದ ಜಿಯೋ, ಈಗ ಬ್ರಾಡ್ ಬ್ಯಾಂಡ್ ಲೋಕಕ್ಕೆ ಕಾಲಿಟಿದೆ. ನೀವು ಹಿಂದೆಂದೂ ಕಾಣದ ವೇಗದ ಇಂಟರ್‌ನೆಟ್ ಸೇವೆಯನ್ನು ಸಿದ್ಧವಾಗಿದೆ. ಈಗಾಗಲೇ ಮಾಹಿತಿಯೂ ದೊರೆತಿರುವಂತೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಯೋ ಫೈಬರ್ ಬ್ರಾಡ್ ಬ್ರಾಂಡ್ ಸೇವೆ ಗಿಗಾ ಫೈಬರ್ ಕಾರ್ಯರ್ಚರಣೆಯನ್ನು ಆರಂಭವಿಸಲಿದೆ.

ಈಗಾಗಲೇ ಟೆಲಿಕಾ ಮಾರುಕಟ್ಟೆಯಲ್ಲಿ ನಡೆಸಿರುವ ಮ್ಯಾಜಿಕ್ ಅನ್ನು ಬ್ರಾಡ್ ಬ್ಯಾಂಡ್ ಲೋಕದಲ್ಲಿಯೂ ಪರೀಕ್ಷಿಸಲು ಮುಂದಾಗಿದೆ. ಇದಲ್ಲಿಯೂ ದರ ಸಮರವನ್ನು ಆರಂಭಿಸಲು ದೊಡ್ಡ ಪ್ರಮಾಣದಲ್ಲಿ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಬ್ರಾಂಡ್ ಬ್ಯಾಂಡ್ ಬಳಕೆದಾರರಾಗಿದ್ದರೇ ಈಗಲೇ ಜಿಯೋ ಹಾಕಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.ಇಷ್ಟು ಆಮೆ ವೇಗದ ಇಂಟರ್ನೆಟ್ ಅನ್ನು ಬಿಟ್ಟು ಮಿಂಚಿನ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಬಳಸಲು ಸಿದ್ದರಾಗಿ, ಈಗಾಗಲೇ ಮೊಬೈಲ್‌ಗೆ ವೇಗದ ಸೇವೆಯನ್ನು ನೀಡಿದ್ದ ಜಿಯೋ, ಈಗ ಬ್ರಾಡ್ ಬ್ಯಾಂಡ್ ಲೋಕಕ್ಕೆ ಕಾಲಿಟಿದೆ. ನೀವು ಹಿಂದೆಂದೂ ಕಾಣದ ವೇಗದ ಇಂಟರ್‌ನೆಟ್ ಸೇವೆಯನ್ನು ಸಿದ್ಧವಾಗಿದೆ. ಈಗಾಗಲೇ ಮಾಹಿತಿಯೂ ದೊರೆತಿರುವಂತೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಯೋ ಫೈಬರ್ ಬ್ರಾಡ್ ಬ್ರಾಂಡ್ ಸೇವೆ ಗಿಗಾ ಫೈಬರ್ ಕಾರ್ಯರ್ಚರಣೆಯನ್ನು ಆರಂಭವಿಸಲಿದೆ.

ಈಗಾಗಲೇ ಟೆಲಿಕಾ ಮಾರುಕಟ್ಟೆಯಲ್ಲಿ ನಡೆಸಿರುವ ಮ್ಯಾಜಿಕ್ ಅನ್ನು ಬ್ರಾಡ್ ಬ್ಯಾಂಡ್ ಲೋಕದಲ್ಲಿಯೂ ಪರೀಕ್ಷಿಸಲು ಮುಂದಾಗಿದೆ. ಇದಲ್ಲಿಯೂ ದರ ಸಮರವನ್ನು ಆರಂಭಿಸಲು ದೊಡ್ಡ ಪ್ರಮಾಣದಲ್ಲಿ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಬ್ರಾಂಡ್ ಬ್ಯಾಂಡ್ ಬಳಕೆದಾರರಾಗಿದ್ದರೇ ಈಗಲೇ ಜಿಯೋ ಹಾಕಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸ್ಮಾರ್ಟ್‌ ಹೋಮ್:

ಸ್ಮಾರ್ಟ್‌ ಹೋಮ್:

ಜಿಯೋ ಆರಂಭಿಸುತ್ತಿರುವ ಬ್ರಾಂಡ್ ಬ್ಯಾಂಡ್ ಸೇವೆಯಲ್ಲಿ ವೇಗದ ಇಂಟರ್ನೆಟ್ ಸೇವೆಯೂ ದೊರೆಯಲಿದ್ದು, ಒಂದೇ ಕನೆಕ್ಷನ್ ಅನ್ನು ನಿಮ್ಮ ಮನೆಯನ್ನು ಸ್ಮಾರ್ಟ್ ಮನೆಯಾಗಿಸಿ ಕೊಳ್ಳಬಹುದಾಗಿದೆ. ಮನೆಯಲ್ಲಿರುವ ಟಿವಿ, ಸಿಸಿಟಿವಿ, ಸ್ಮಾರ್ಟ್‌ ಸ್ಪೀಕರ್ ಸೇರಿಂದಂತೆ ಎಲ್ಲಾ ವಸ್ತುಗಳನ್ನು ಕೆನೆಕ್ಟ್ ಮಾಡಿಕೊಳ್ಳಬಹುದಾಗಿದೆ.

1 Gbps ವೇಗ:

1 Gbps ವೇಗ:

ಗಿಗಾ ಫೈಬರ್ 1 Gbps ವೇಗದಲ್ಲಿ ಕಾರ್ಯನಿರ್ವಹಿಸಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಎಂದರೆ 100 Mbps ವೇಗದ ಸೇವೆಯನ್ನು ಮಾತ್ರವೇ ಕಾಣಬಹುದಾಗಿದೆ. ಆದರೆ ಜಿಯೋ ಅದರ ಹತ್ತು ಪಟ್ಟು ವೇಗದಲ್ಲಿ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ಇಂಟರ್ನೆಟ್‌ನಲ್ಲಿ ನಿಮಗೆ ಬೇಕಾಗಿರುವುದು ಕ್ಷಣ ಮಾತ್ರಕ್ಕೆ ದೊರೆಯಲಿದೆ.

ರಿಜಿಸ್ಟರ್ ಮಾಡಿ:

ರಿಜಿಸ್ಟರ್ ಮಾಡಿ:

ನೀವು ಸಹ ಜಿಯೋ ಆರಂಭಿಸಲಿರುವ ಗಿಗಾ ಫೈಬರ್ ಸೇವೆಯನ್ನು ಪಡೆದುಕೊಳ್ಳಬೇಕಾದಲ್ಲಿ ಮೊದಲಿಗೆ ನೀವು ರಿಜಿಸ್ಟರ್ ಆಗಬೇಕಾಗಿದೆ. ಇದಕ್ಕಾಗಿ ಈಗಾಗಲೇ ನೀವು ಬಳಕೆ ಮಾಡುತ್ತರುವ ಮೈ ಜಿಯೋ ಆಪ್ ಇಲ್ಲವೇ ಜಿಯೋ ಡಾಟ್ ಕಾಮ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ.

ಮೂರು ತಿಂಗಳು ಉಚಿತ ಸಾಧ್ಯತೆ:

ಮೂರು ತಿಂಗಳು ಉಚಿತ ಸಾಧ್ಯತೆ:

ಜಿಯೋ ತನ್ನ ನೂತನ ಗಿಗಾ ಫೈಬರ್ ಸೇವೆಯನ್ನು ಆರಂಭಿಸುವ ಬಗ್ಗೆ ಮಾತ್ರವೇ ಮಾಹಿತಿ ಬಿಟ್ಟುಕೊಟ್ಟಿದ್ದು, ಇದಕ್ಕಿಂತ ಹೆಚ್ಚಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಮೊದಲ ಮೂರು ತಿಂಗಲು ಉಚಿತ ಸೇವೆಯೂ ಬಳಕೆದಾರರಿಗೆ ಮಿಸ್ ಆಗದೆ ದೊರೆಯಲಿದೆ.

ಮೊದಲಿಗೆ:

ಮೊದಲಿಗೆ:

ಜಿಯೋ ಜಿಗಾ ಫೈಬರ್ ಪಡೆದುಕೊಳ್ಳಲು ಗ್ರಾಹಕರು ಮೊದಲಿಗೆ ರೂ. 4,500 ಪಾವತಿಸಬೇಕಿದ್ದು, ಇದು ಜಿಯೋ ಫೋನ್ ಮಾದರಿಯಲ್ಲಿ ಮರು ಪಾವತಿಸಬಹುದಾದ ಮೊತ್ತವಾಗಿರುತ್ತದೆ. ಅಂದರೆ ಆರಂಭಿಕ ಹಂತದಲ್ಲಿ ರೂ. 4,500 ಭದ್ರತಾ ಠೇವಣಿ ಇಡಬೇಕಾಗುತ್ತದೆ. ನಿಮಗೆ ಸೇವೆಯೂ ಬೇಡವದಲ್ಲಿ ಮತ್ತೆ ಹಣವನ್ನು ಹಿಂಪಡೆಯಬಹದಾಗಿದೆ.

ಕಂಪನಿಯಿಂದಲೇ ಇನ್‌ಸ್ಟಾಲ್:

ಕಂಪನಿಯಿಂದಲೇ ಇನ್‌ಸ್ಟಾಲ್:

ನೀವು ರಿಲಯನ್ಸ್ ಜಿಯೋ ಸೇವೆಯನ್ನು ಪಡೆದುಕೊಳ್ಳಲು ಭದ್ರತಾ ಠೇವಣಿಯನ್ನು ಇಟ್ಟ ನಂತರದಲ್ಲಿ ನಿಮಗೆ ಕಂಪನಿಯಿಂದಲೇ ಇನ್ಸ್ಟಾಲೆಷನ್ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ. ಇದರಿಂದಾಗಿ ನಿಮ್ಮ ಮನೆಯಲ್ಲಿ ಜಿಯೋ ಬೇಕು ಎಂದರೆ ಯಾವುದೇ ತೊಂದರೆ ಪಡುವ ಅಗತ್ಯವಿಲ್ಲ.

ಜಿಯೋ ಸಿಮ್ ಯೂಸ್‌ ಮಾಡುವವರಿಗೆ ಈ ವಿಷಯ ತಿಳಿದಿರಬೇಕು..!

ಜಿಯೋ ಸಿಮ್ ಯೂಸ್‌ ಮಾಡುವವರಿಗೆ ಈ ವಿಷಯ ತಿಳಿದಿರಬೇಕು..!

ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಚಿನ್ನದ ರೀತಿಯಲ್ಲಿ ಡೇಟಾ ಮಾರಾಟ ಮಾಡುತ್ತಾ ಅತೀ ಹೆಚ್ಚು ಆದಾಯವನ್ನುಗಳಿಸುತ್ತಾ, ಬಳೆದಾರರಿಂದ ಸಾಕಷ್ಟು ದುಡ್ಡು ಪೀಕುತ್ತಿದ್ದ ಟೆಲಿಕಾಂ ಕಂಪನಿಗಳಿಗೆ ಒಂದೇ ಹೊಡೆತದಲ್ಲಿ ಮೇಲೆ ಎಳಲಾಗದಂತೆ ಮಾಡಿದ ರಿಲಯನ್ಸ್ ಮಾಲೀಕತ್ವದ ಜಿಯೋ, ತಿಂಗಳಿಗೆ ಒಂದು GB ಬಳಕೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದವರಿಗೆ ದಿನಕ್ಕೆ ಅತೀ ವೇಗದಲ್ಲಿ 1 GB ಡೇಟಾವನ್ನು ಬಳಕೆ ಮಾಡಲು ಉಚಿತವಾಗಿ ನೀಡಿತ್ತು. ಇದೇ ಮಾದರಿಯಲ್ಲಿ ಇಂದಿಗೂ ತನ್ನ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ನಿತ್ಯ 2 GB ಡೇಟಾವನ್ನು ನೀಡುತ್ತಾ ಬಂದಿದೆ.

ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರರೂ ಈ ತ್ರೈಮಾಸಿಕದಲ್ಲಿ ಬರೋಬ್ಬರಿ 642 ಕೋಟಿ GB ಡೇಟಾವನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಎಷ್ಟೊ ದೇಶಗಳಲ್ಲಿ ಇಷ್ಟು ಪ್ರಮಾಣದ ಡೇಟಾವನ್ನು ಒಂದು ವರ್ಷದಲ್ಲಿಯೂ ಬಳಕೆ ಮಾಡುತ್ತಿಲ್ಲ ಎನ್ನಲಾಗಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಮೊಬೈಲ್ ಡೇಟಾವನ್ನು ಬಳಕೆ ಮಾಡುತ್ತಿರುವ ದೇಶ ಎಂದರೆ ಭಾರತವೇ, ಆದರೆ ವೇಗದ ವಿಚಾರದಲ್ಲಿ ಕೊಂಚ ಪ್ರಮಾಣದಲ್ಲಿ ಹಿನ್ನಡೆಯನ್ನು ಅನುಭವಿಸಿದರೂ ಸಹ ವಿಶ್ವದಲ್ಲಿ ಅತೀ ಹೆಚ್ಚು ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿದೆವೆ.

ಪ್ರತಿಯೊಬ್ಬ ತಿಂಗಳಿಗೆ 10.6 GB ಡೇಟಾ:

ಪ್ರತಿಯೊಬ್ಬ ತಿಂಗಳಿಗೆ 10.6 GB ಡೇಟಾ:

ಜಿಯೋ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯನ್ನು ಮಾಡಿಕೊಳ್ಳುತ್ತಿದೆ. ಸದ್ಯ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರದಲ್ಲಿ ಪ್ರತಿ ಜಿಯೋ ಬಳಕೆದಾರರು ಪ್ರತಿ ತಿಂಗಳು 10.6 GBವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿಮಗೆ ಕೇವಲ 10 GB ಎನ್ನಿಸಬಹುದು ಆದರೆ ಮಾರುಕಟ್ಟೆಯಲ್ಲಿ ಇದು ಅತೀ ದೊಡ್ಡ ಪ್ರಮಾಣದಾಗಿದೆ.

44,871 ಕೋಟಿ ನಿಮಿಷಗಳ ಮಾತುಕತೆ:

44,871 ಕೋಟಿ ನಿಮಿಷಗಳ ಮಾತುಕತೆ:

ಜಿಯೋ ಬಳಕೆದಾರರು ಕೇವಲ ಡೇಟಾ ಬಳಕೆಯನ್ನು ಮಾತ್ರವೇ ಮುಂದಿಲ್ಲ, ಪ್ರತಿ ತಿಂಗಳು 44,871 ಕೋಟಿ ನಿಮಿಷಗಳ ಮಾತುಕತೆ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಜಿಯೋ ದಲ್ಲಿ ಔಟ್ ಗೋಯಿಂಗ್ ಮತ್ತು ರೋಮಿಂಗ್ ಫುಲ್ ಪ್ರೀ ಇರುವುದು. ಇದರಲ್ಲಿ ಪ್ರತಿಯೊಬ್ಬ ಬಳಕೆದಾರು ಪ್ರತಿ ತಿಂಗಳು 744 ನಿಮಿಷಗಳಷ್ಟು ಸಮಯ ಜಿಯೋದಲ್ಲಿ ಔಟ್ ಗೋಯಿಂಗ್ ಮಾಡಿರುತ್ತಾರೆ ಎನ್ನಲಾಗಿದೆ.

ವಿಡಿಯೋ ನೋಡುವ ಸಂಖ್ಯೆ:

ವಿಡಿಯೋ ನೋಡುವ ಸಂಖ್ಯೆ:

ಇದಲ್ಲದೇ ಜಿಯೋ ವೇಗದ 4G ನೀಡುತ್ತಿರುವ ಹಿನ್ನಲೆಯಲ್ಲಿ ಬಳಕೆದಾರರು ವಿಡಿಯೋ ನೋಡುವ ಸಂಖ್ಯೆಯೂ ಉತ್ತಮವಾಗಿದೆ. ಪ್ರತಿ ತಿಂಗಳು ಜಿಯೋ ಬಳಕೆದಾರರು 340 ಕೋಟಿ ನಿಮಿಷಗಳ ವಿಡಿಯೋವನ್ನು ನೋಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಪ್ರತಿಯೊಬ್ಬರು ತಿಂಗಳಿನಲ್ಲಿ 15.4 ಗಂಟೆಗಳ ಕಾಲ ವಿಡಿಯೋವನ್ನು ನೋಡುತ್ತಿದ್ದಾರೆ.

215 ಮಿಲಿಯನ್ ಬಳಕೆದಾರರು:

215 ಮಿಲಿಯನ್ ಬಳಕೆದಾರರು:

ಜಿಯೋ ಸೇವೆಯನ್ನು ಆರಂಭಿಸಿದ 22 ತಿಂಗಳ ನಂತರದಲ್ಲಿ 215 ಮಿಲಿಯನ್ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಈ ಸಂಖ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಜಿಯೋ ಸೇವೆಯ ಲಾಭವು ಬಳಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಇಳಿಕೆ ಹಾದಿಯಲ್ಲಿ ಏರ್‌ಟೆಲ್:

ಇಳಿಕೆ ಹಾದಿಯಲ್ಲಿ ಏರ್‌ಟೆಲ್:

ಜಿಯೋ ಆರಂಭದ ನಂತರದಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಏರ್‌ಟೆಲ್ ಇಳಿಕೆ ಹಾದಿಯಲ್ಲಿ ಸಾಗಿದೆ. ಇಂದು ಏರ್‌ಟೆಲ್ 344 ಮಿಲಿಯನ್ ಬಳಕೆದಾರರನ್ನು ಮಾತ್ರವೇ ಹೊಂದಿದೆ. ಆದರೆ ಶಾರ್ಟ್ ಟೈಮಿನಲ್ಲಿ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುವ ಬದಲು ಇಳಿಕೆಯಾಗುತ್ತಿರುವುದು ಏರ್‌ಟೆಲ್‌ಗೆ ತಲೆನೋವು ತಂದಿದೆ.

ಪೋಸ್ಟ್‌ಪೇಯ್ಡ್ ನಲ್ಲಿಯೂ:

ಪೋಸ್ಟ್‌ಪೇಯ್ಡ್ ನಲ್ಲಿಯೂ:

ಇದೇ ಮಾದರಿಯಲ್ಲಿ ಪೋಸ್ಟ್ ಪೇಯ್ಡ್ ಮಾರುಕಟ್ಟೆಯಲ್ಲಿ ಏರ್‌ಟೆಲ್‌ 940.4 ಕೋಟಿ ನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ. ಇದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಜಿಯೋ ರೂ.612 ಕೋಟಿ ಲಾಭವನ್ನು ಮಾಡಿಕೊಂಡಿದೆ. ಇದರಿಂದಾಗಿ ಬಳಕೆದಾರರಿಗೆ ಜಿಯೋನೆ ಬೆಸ್ಟ್‌..!

Best Mobiles in India

English summary
Jio GigaTV a DTH service. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X