3D ವರ್ಚುವಲ್ ಕ್ಲಾಸ್‌ ಬೆಂಬಲಿಸುವ ಗ್ಲಾಸ್‌ ಬಿಡುಗಡೆ ಮಾಡಿದ ಜಿಯೋ!

|

ಭಾರತದಲ್ಲಿ ಟೆಲಿಕಾಂ ದೈತ್ಯ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ಜಿಯೋ ನಿನ್ನೆ ನಡೆದ ರಿಲಯನ್ಸ್ ಜಿಯೋ 2020ರ ಮೊದಲ ವಾರ್ಷಿಕ ಮಹಾಸಭೆಯಲ್ಲಿ ಕಂಪೆನಿಗೆ ಸಂಬಂದಿಸಿದ ಹಲವಾರು ವಿಷಯಗಳನ್ನ ಹಂಚಿಕೊಂಡಿದೆ. ಅಲ್ಲದೆ ಭಾರತದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳು ಗ್ರಾಹಕರಿಗೆ ಜಿಯೋ ಓದಗಿಸಲಿರುವ ಸೇವೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅಷ್ಟೇ ಅಲ್ಲ ಹೊಸ ತಂತ್ರಜ್ಞಾನ ಮತ್ತು ಸ್ವದೇಶಿ 5G ಸೇವೆಯ ಬಗ್ಗೆ ಕೂಡ ತನ್ನ ಯೋಜನೆಗಳನ್ನ ಹಂಚಿಕೊಂಡಿದೆ. ಇದರ ನಡುವೆ ರಿಲಾಯನ್ಸ್‌ ಜಿಯೋ ಕಂಪೆನಿಯು ಒಂದು ವಿಶಿಷ್ಟವಾದ ಜಿಯೋ ಗ್ಲಾಸ್ ಅನ್ನು ಪರಿಚಯಿಸಿದೆ.

ಜಿಯೋ

ಹೌದು, ಜಿಯೋ ಕಂಪೆನಿ ಇದೇ ಜುಲೈ 15ರಂದು ನಡೆದ ತನ್ನ 2020 ರ ಮೊದಲ ವಾರ್ಷಿಕ ಸಬೆಯಲ್ಲಿ ಹಲವು ಹೊಸತುಗಳನ್ನು ಹಂಚಿಕೊಂಡಿದೆ. ಇದರಲ್ಲಿ ಜಿಯೋ ಗ್ಲಾಸ್ ಕೂಡ ಒಂದಾಗಿದೆ. ಈ ಗ್ಲಾಸ್‌ ಸಂಪೂರ್ಣವಾಗಿ ಹೊಸ ಪರಿಸರ ಮತ್ತು ದೃಶ್ಯಗಳನ್ನು ಕ್ರಿಯೆಟ್‌ ಮಾಡುವ ವಿಶೇಷತೆಯನ್ನು ಹೊಂದಿದೆ. ಅಲ್ಲದೆ ನೈಜ ಮತ್ತು ವಾಸ್ತವ ಅಂಶಗಳನ್ನು ಒಟ್ಟಿಗೆ ವಿಲೀನಗೊಳಿಸಲು ಇದರಿಂದ ಸಾಧ್ಯವಾಗಲಿದೆ. ಇದಲ್ಲದೆ ಈ ಕನ್ನಡಕಕ್ಕೆ ಹೆಚ್ಚಿನ ರೆಸಲ್ಯೂಶನ್ ಡಿಸ್‌ಪ್ಲೇ ಫಿಟ್ ಇದ್ದು, ಇದು ಬಳಕೆದಾರರಿಗೆ ಸುಂದರ ಪರಿಸರವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಅಷ್ಟಕ್ಕೂ ಈ ಗ್ಲಾಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಗ್ಲಾಸ್

ಜಿಯೋ ಗ್ಲಾಸ್ ಎಮ್ಆರ್ ಕನ್ನಡಕವು ಎಲ್ಲಾ ಗುಣಮಟ್ಟದ ಆಡಿಯೊ ಸ್ವರೂಪಗಳನ್ನು ಬೆಂಬಲಿಸುವ ವೈಯಕ್ತಿಕಗೊಳಿಸಿದ ಆಡಿಯೊ ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಕನ್ನಡಕದಿಂದ ನೇರವಾಗಿ ಆಡಿಯೊ ಪ್ರೊಡ್ಯೂಶ್‌ ಮಾಡಲಿದೆ. ಇದರಿಂದ ಬಳಕೆದಾರರು ಆಡಿಯೋಗಾಗಿ ಮತ್ತೊಂದು ಡಿವೈಸ್‌ ಅನ್ನು ಅವಲಂಬಿಸುವ ಅವಶ್ಯಕತೆ ಇರುವುದಿಲ್ಲ.ಅಲ್ಲದೆ ಧ್ವನಿಗಾಗಿ ಹೆಚ್ಚುವರಿ ಇತರೆ ಅಗತ್ಯವನ್ನು ಸಹ ಇದು ನಿವಾರಿಸುತ್ತದೆ. ಇದಲ್ಲದೆ ಇದರಲ್ಲಿ ಸಂವಾದಾತ್ಮಕ 3D ಅವತಾರಗಳ ಜೊತೆಗೆ ಬಳಕೆದಾರರಿಗೆ ಹೊಲೊಗ್ರಾಫಿಕ್ ವೀಡಿಯೊ ಕರೆಗಳಿಗೆ ಸಹ ಇದು ಅವಕಾಶವನ್ನ ಕಲ್ಪಿಸಿದೆ.

ಗ್ಲಾಸ್‌

ಇನ್ನು ಈ ಗ್ಲಾಸ್‌ ಮೂಲಕ ನೀವು ತ್ರಿಡಿ ರೂಪದಲ್ಲಿಯು ಸಹ ಕರೆಗಳನ್ನ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರ ಜೊತೆ ಮಾತನಾಡಬಹುದಾಗಿದೆ. ಇದಲ್ಲದೆ COVID-19 ಸಾಂಕ್ರಾಮಿಕದಂತಹ ಸಮಸ್ಯೆಗಳಿಂದಾಗಿ ಸದ್ಯ ಆನ್‌ಲೈನ್‌ ಕ್ಲಾಸ್‌ ನಡೆಯುತ್ತದೆ. ಈ ಸಮಯದಲ್ಲಿ ತೀವ್ರ ಬೆಳಕು ಸೂಸುವ ಡಿವೈಸ್‌ಗಳ ಮುಂದೆ ಪಾಠ ಕೇಳುವ ಮಕ್ಕಳು 3D ವರ್ಚುವಲ್ ತರಗತಿಗಳಿಗೆ ಜಿಯೋ ಗ್ಲಾಸ್ ಅನ್ನು ಬಳಸಬಹುದು ಎಂದು ಹೇಳಿಕೊಂಡಿದೆ. ಅಲ್ಲಿ ತರಗತಿಗಳನ್ನು ಜಿಯೋ ಮಿಕ್ಸ್ಡ್ ರಿಯಾಲಿಟಿ cloud ಮೂಲಕ ಸಹ ನಡೆಸಬಹುದು.

ಆನ್‌ಲೈನ್

ಇದು ಪ್ರಸ್ತುತ ಆನ್‌ಲೈನ್ ಶಿಕ್ಷಣವನ್ನು ಒಂದು ಹೆಜ್ಜೆ ಮುಂದಿಡುತ್ತದೆ ಏಕೆಂದರೆ ಮಿಶ್ರ ರಿಯಾಲಿಟಿ ಅಂಶವು ವಿದ್ಯಾರ್ಥಿಗಳು ಪ್ರಸ್ತುತ ಸಮತಟ್ಟಾದ, ಎರಡು ಆಯಾಮದ ಆನ್‌ಲೈನ್ ಉಪನ್ಯಾಸಗಳಲ್ಲಿ ಹೇಗೆ ಭಾಗವಹಿಸುತ್ತಾರೆ ಎಂಬುದಕ್ಕೆ ಹೆಚ್ಚು ಸಹಾಯ ಮಾಡುತ್ತದೆ. ಇದಲ್ಲದೆ ಇ ಕನ್ನಡಕವನ್ನು ಸ್ಮಾರ್ಟ್‌ಫೋನ್‌ಗೆ ಜೋಡಿಸುವ ಕೇಬಲ್ ಮೂಲಕ ಕ್ಲೌಡ್‌ಗೆ ಸುಲಭವಾಗಿ ಜೋಡಿಸಬಹುದಾಗಿದೆ. ಅಲ್ಲದೆ ಇದು ಪ್ರಸ್ತುತ 25 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ ಎನ್ನಲಾಗ್ತಿದೆ.

Best Mobiles in India

English summary
The Jio Glass mixed reality glasses also feature a personalized audio system that supports all standard audio formats, without the need of an external attachment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X