ಜಿಯೋದಿಂದ ಇಂಡಿಪೆಂಡೆನ್ಸ್ ಆಫರ್ 2022 ಪ್ರಕಟ! ಏನೆಲ್ಲಾ ಪ್ರಯೋಜನ!

|

ಟೆಲಿಕಾಂ ದೈತ್ಯ ಜಿಯೋ ತನ್ನ ಪ್ರಿಪೇಯ್ಡ್ ಚಂದಾದಾರರಿಗೆ ಹೊಸ '2999 ಇಂಡಿಪೆಂಡೆನ್ಸ್ ಆಫರ್ 2022' ರೀಚಾರ್ಜ್ ಪ್ಲಾನ್‌ ಪ್ರಕಟಿಸಿದೆ. ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಈ ವಿಶೇಷ ಆಫರ್‌ ಅನ್ನು ಘೋಷಿಸಿದೆ. ಈ ಪ್ಲಾನ್‌ನಲ್ಲಿ ಚಂದಾದಾರರು 100% ವ್ಯಾಲ್ಯೂ ಬ್ಯಾಕ್‌ ಆಫರ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ನೀವು 2,999ರೂ. ಮೌಲ್ಯದ ಪ್ರಿಪೇಯ್ಡ್‌ ಪ್ಲಾನ್‌ ರೀಚಾರ್ಜ್‌ ಮಾಡಿದರೆ ಅಷ್ಟೇ ಮೌಲ್ಯದ ಆಫರ್‌ ಅನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.

ಜಿಯೋ

ಹೌದು, ಜಿಯೋ ಹೊಸ '2999 ಇಂಡಿಪೆಂಡೆನ್ಸ್ ಆಫರ್ 2022' ರೀಚಾರ್ಜ್ ಪ್ಲಾನ್‌ ಪರಿಚಯಿಸಿದೆ. ಇದರಲ್ಲಿ ಚಂದಾದಾರರು 100% ಮೌಲ್ಯದ ಆಫರ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್‌ ರೀಚಾರ್ಜ್‌ ಮಾಡಿದ ಗ್ರಾಹಕರು ಆಗಸ್ಟ್ 9 ರಂದು ಅಥವಾ ನಂತರ Netmeds, AJIO, Ixigo ಮತ್ತು 75GB 4G ಡೇಟಾ ಪ್ರಯೋಜನಕ್ಕಾಗಿ ಕೂಪನ್‌ಗಳನ್ನು ರಿಡೀಮ್ ಮಾಡಬಹುದು. ಹಾಗಾದ್ರೆ ಜಿಯೋ ಟೆಲಿಕಾಂನ ಹೊಸ ಇಂಡಿಪೆಂಡೆನ್ಸ್‌ ಆಫರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ

ಜಿಯೋ ಟೆಲಿಕಾಂ ತನ್ನ ಪ್ರಿಪೇಯ್ಡ್ ಚಂದಾದಾರರಿಗೆ '2999 ಇಂಡಿಪೆಂಡೆನ್ಸ್ ಆಫರ್ 2022' ನಲ್ಲಿ ವಿಶೇಷ ಪ್ರಯೋಜನಗಳನ್ನು ನೀಡುತ್ತಿದೆ. ಜಿಯೋ ಚಂದಾದಾರರು 2,999ರೂ. ಪ್ಲಾನ್‌ ಅನ್ನು ಪ್ರಸ್ತುತ ರೀಚಾರ್ಜ್ ಮಾಡಿದರೆ ಅದೇ ಮೊತ್ತದ ಮೌಲ್ಯದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪ್ಲಾನ್‌ ಆಫರ್‌ನಲ್ಲಿ ನಾಲ್ಕು ಕೂಪನ್‌ಗಳನ್ನು ಒಳಗೊಂಡಿದೆ. ಈ ಆಫರ್‌ಗಳನ್ನು ನೀವು ರೀಚಾರ್ಜ್‌ ಮಾಡಿದ 72 ಗಂಟೆಗಳ ಒಳಗೆ ಅರ್ಹ ಚಂದಾದಾರರ MyJio ಅಪ್ಲಿಕೇಶನ್‌ಗೆ ನೇರವಾಗಿ ಕ್ರೆಡಿಟ್ ಮಾಡಲಾಗುತ್ತದೆ.

ಪ್ಲಾನ್‌

ಇನ್ನು ಈ ಪ್ಲಾನ್‌ ಅನ್ನು ನೀವು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡಿದರೂ ಕೂಡ ಆಫರ್‌ ಕೂಪನ್‌ಗಳನ್ನು ಪಡೆದುಕೊಳ್ಳಬಹುದು. ಈ ಆಫರ್‌ ಕೂಪನ್‌ಗಳನ್ನು ಮೈ ಜಿಯೋ ಆಪ್‌ನಲ್ಲಿ ವೋಚರ್ ವಿಭಾಗದಲ್ಲಿ ರಿಡೀಮ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಈ ಆಫರ್‌ ಕೂಪನ್‌ಗಳಲ್ಲಿ ಡೇಟಾ ವೋಚರ್ ಸ್ವತಃ ವರ್ಗಾವಣೆಯಾಗುವುದಿಲ್ಲ. ಈ ಡೇಟಾ ವೋಚರ್‌ಗಳ ಮಾನ್ಯತೆಯ ರಿಡೆಂಪ್ಶನ್ ದಿನಾಂಕದಿಂದ ಆಕ್ಟಿವ್‌ ಪ್ಲಾನ್‌ ಮಾನ್ಯತೆಯನ್ನು ಅವಲಂಬಿಸಿರುತ್ತದೆ.

ಪ್ಲಾನ್‌ನಲ್ಲಿ

ಜಿಯೋದ ಈ ಪ್ಲಾನ್‌ನಲ್ಲಿ ನೀವು ಪಡೆದುಕೊಳ್ಳಬಹುದಾದ ಕೂಪನ್‌ಗಳಲ್ಲಿ Netmeds ಫ್ಲಾಟ್ 25% ಆಫರ್‌ ಕೂಪನ್‌ ಒಂದಾಗಿದೆ. ಈ ಕೂಪನ್‌ Netmeds ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಎರಡರಲ್ಲೂ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಔಷಧಿಗಳ ಆರ್ಡರ್‌ ಮಾಡುವಾಗ ಕೂಪನ್‌ಗಳನ್ನು ಬಳಸಬಹುದು. Netmeds ಕೂಪನ್‌ಗಳು ಆಗಸ್ಟ್ 9 ರಿಂದ ಅಕ್ಟೋಬರ್ 31 ರವರೆಗೆ ಮಾನ್ಯವಾಗಿರುತ್ತವೆ. ಅಲ್ಲದೆ ಶಾಪಿಂಗ್ ಕಾರ್ಟ್‌ನಿಂದ ಚೆಕ್ ಔಟ್ ಮಾಡುವಾಗ, ಬಳಕೆದಾರರು ಪಾವತಿಗಳ ವಿಭಾಗದಲ್ಲಿ ಈ ಕೂಪನ್ ಕೋಡ್ ಅನ್ನು ಸೇರಿಸಬೇಕಾಗುತ್ತದೆ. ಇದರ ಮೂಲಕ ನೀವು ಡಿಸ್ಕೌಂಟ್‌ ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಜಿಯೋ

ಜಿಯೋ ನೀಡುತ್ತಿರುವ ಮತ್ತೊಂದು ಕೂಪನ್‌ ಅಂದರೆ Ixigo ನಲ್ಲಿ 750ರೂ. ಡಿಸ್ಕೌಂಟ್‌ ಕೂಪನ್‌ ಆಗಿದೆ. ಇಕ್ಸಿಗೋ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ಲೈಟ್‌ ಬುಕ್ಕಿಂಗ್‌ ಮಾಡಿದರೆ 750ರೂ. ವರೆಗೆ ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಈ ಕೂಪನ್ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನಕ್ಕಾಗಿ ಡಿಸೆಂಬರ್ 31 ರವರೆಗೆ ಮಾನ್ಯವಾಗಿರುತ್ತದೆ. ಒಂದು ವೇಳೆ ಬಳಕೆದಾರರು ತಮ್ಮ ಟಿಕೆಟ್‌ ಬುಕಿಂಗ್ ಅನ್ನು ಕ್ಯಾನ್ಸಲ್‌ ಮಾಡಿದರೆ ರಿ ಪೇಮೆಂಟ್‌ ಮಾಡುವ ಮೊದಲು ರಿಯಾಯಿತಿಯನ್ನು ಹಿಂತಿರುಗಿಸಲಾಗುತ್ತದೆ ಎಂದು ಜಿಯೋ ಹೇಳಿದೆ.

ರಿಯಾಯಿತಿ

ಇದಲ್ಲದೆ Ajio ನಲ್ಲಿ 1,000ರೂ.ಗಳ ರಿಯಾಯಿತಿ ಕೂಪನ್ ಅನ್ನು ಪಡೆದುಕೊಳ್ಳಬಹುದು. ಅರ್ಹ ಜಿಯೋ ಚಂದಾದಾರರಿಗೆ 2,999. ರೂ ರೀಚಾರ್ಜ್‌ ಮೂಲಕ ಈ ಕೂಪನ್‌ ಪಡೆಯಬಹುದು. ಆದರೆ ವೆಬ್‌ಸೈಟ್ ಅಥವಾ ಆಫ್‌ಲೈನ್ Ajio ಸ್ಟೋರ್‌ನಿಂದ ಖರೀದಿಸಿದ ಆಯ್ದ ಐಟಂಗಳ ಮೇಲೆ ಮಾತ್ರ ರಿಯಾಯಿತಿ ಕೂಪನ್ ಅನ್ನು ರಿಡೀಮ್ ಮಾಡಬಹುದು. ಈ ಕೂಪನ್‌ ಆಫರ್‌ ಅಕ್ಟೋಬರ್ 31 ರವರೆಗೆ ಮಾನ್ಯವಾಗಿರುತ್ತದೆ. ಕೂಪನ್‌ಗಳನ್ನು ಕೇವಲ ಒಂದು ವಹಿವಾಟಿನ ಮೂಲಕ ಮಾತ್ರ ಪಡೆಯಬಹುದು. ಅಲ್ಲದೆ ಈ ಆಫರ್‌ ಅನ್ನು Ajio ನಲ್ಲಿ ಇತರ ಆಫರ್‌ಗಳೊಂದಿಗೆ ಆಡ್‌ ಮಾಡುವುದಕ್ಕೆ ಅವಕಾಶವಿಲ್ಲ ಎನ್ನಲಾಗಿದೆ.

Best Mobiles in India

English summary
Jio has announced a new ‘2999 Independence Offer 2022' for prepaid subscribers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X