ಭಾರತದಲ್ಲಿ 5G ಚಾಲಿತ ವೈಫೈ ಸೇವೆ ಪರಿಚಯಿಸಿದ ಜಿಯೋ! ಏನಿದರ ವಿಶೇಷ!

|

ಟೆಲಿಕಾಂ ದೈತ್ಯ ರಿಲಯನ್ಸ್‌ ಜಿಯೋ ದೀಪಾವಳಿಗೂ ಮುನ್ನವೇ ಗುಡ್‌ ನ್ಯೂಸ್‌ ನೀಡಿದೆ. ಇಂದು (ಅ.22) ಭಾರತದಲ್ಲಿ 5G ಚಾಲಿತ ವೈಫೈ ಸೇವೆಗಳನ್ನು ಪ್ರಾರಂಭಿಸಿದೆ. ಭಾರತದಲ್ಲಿನ ಕೆಲವು ಆಯ್ದ ನಗರಗಳಲ್ಲಿ ಜನಸಂದಣಿ ಪ್ರದೇಶಗಳಲ್ಲಿ ಪ್ರಾರಂಭಿಸುವ ಮೂಲಕ ದೀಪಾವಳಿಗೂ ಮುನ್ನ ಶುಭ ಸುದ್ದಿ ನೀಡಿದೆ. ಜಿಯೋ 5G ಚಾಲಿತ ವೈಫೈ ಸೇವೆಗಳ ಮೂಲಕ 5G ಡಿವೈಸ್‌ ಅಥವಾ 5G ಸಿಮ್‌ ಹೊಂದಿಲ್ಲದವರೂ ಕೂಡ 5G ವೇಗದ ನೆಟ್‌ವರ್ಕ್‌ ಅನುಭವಿಸಲು ಸಾಧ್ಯವಾಗಲಿದೆ.

ಜಿಯೋ

ಹೌದು, ಜಿಯೋ ಟೆಲಿಕಾಂ ಭಾರತದಲ್ಲಿ 5G ಚಾಲಿತ ವೈಫೈ ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ 5G ಸ್ಮಾರ್ಟ್‌ಫೋನ್‌ ಬಳಸದವರೂ ಕೂಡ 5G ವೇಗದ ಸೇವೆ ಪಡೆಯುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ವೈಫೈ ಬೆಂಬಲಿಸುವ ಸ್ಮಾರ್ಟ್‌ಫೋನ್‌ ಬಳಕೆದಾರರು 5G ಚಾಲಿತ ವೈಫೈಯನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಹಾಗಾದ್ರೆ ಜಿಯೋ ಟೆಲಿಕಾಂ 5G ಚಾಲಿತ ವೈಫೈ ಸೇವೆಯನ್ನು ಭಾರತದ ಯಾವೆಲ್ಲಾ ನಗರಗಳಲ್ಲಿ ಪರಿಚಯಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

5G

ಜಿಯೋ 5G ವೈಫೈ ಸೇವೆಯನ್ನು ಪರಿಚಯಿಸುವ ಮೂಲಕ ಜಿಯೋ ಟೆಲಿಕಾಂ ಹೊಸ ಹೆಜ್ಜೆ ಇರಿಸಿದೆ. ಈಗಾಗಲೇ ಜಿಯೋ ಟ್ರೂ 5G ಸೇವೆಯನ್ನು ನೀಡಿರುವ ಜಿಯೋ 5G ವೈಫೈ ಸೇವೆ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಇನ್ನು ಜಿಯೋ 5G ಚಾಲಿತ ವೈಫೈ ಸೇವೆಯನ್ನು ಭಾರತದ ಪ್ರಮುಖ ಆಯ್ದ ನಗರಗಳಲ್ಲಿ ಪರಿಚಯಿಸಿದೆ. ಈ ಸೇವೆಯು ಪ್ರಮುಖವಾಗಿ ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ವಾಣಿಜ್ಯ ಕೇಂದ್ರಗಳಲ್ಲಿ ಲಭ್ಯವಾಗಲಿವೆ.

ಜಿಯೋ

ಇದರಿಂದ ಈ ಪ್ರದೇಶಗಳಲ್ಲಿ ಜಿಯೋ 5G ವೈಫೈ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಇದಕ್ಕಾಗಿ 5G ಬೆಂಬಲಿತ ಸ್ಮಾರ್ಟ್‌ಫೋನ್‌ ಬಳಸಬೇಕಾದ ಅವಶ್ಯಕತೆಯಿಲ್ಲ ಅನ್ನೊದು ಪ್ರಮುಖ ವಿಚಾರವಾಗಿದೆ. ಸದ್ಯ ಈ ಸೇವೆ ಯಾವೆಲ್ಲಾ ನಗರಗಳಲ್ಲಿ ಲಭ್ಯವಿದೆ ಅನ್ನೊದರ ವಿವರ ಇನ್ನು ಕೂಡ ಬಹಿರಂಗವಾಗಿಲ್ಲ. ಇದರ ನಡುವೆ ಜಿಯೋ ತನ್ನ 5G ಸೇವೆಯಾದ ಜಿಯೋ ಟ್ರೂ 5G ಸೇವೆಯನ್ನು ರಾಜಸ್ಥಾನದ ನಾಥಧ್ವಾರಕ್ಕೂ ಕೂಡ ವಿಸ್ತರಣೆ ಮಾಡಿದೆ. ಇದಲ್ಲದೆ ಚೆನ್ನೈ ನಲ್ಲಿಯೂ ಕೂಡ 5G ಸೇವೆಯನ್ನು ವಿಸ್ತರಿಸಿರುವುದಾಗಿ ವರದಿಯಾಗಿದೆ.

ಜಿಯೋ

ಈಗಾಗಲೇ ಜಿಯೋ ಟ್ರೂ 5G ಸೇವೆಯನ್ನು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿ ಪ್ರಾರಂಭಿಸಿದೆ. ಮುಂದಿನ ತಿಂಗಳುಗಳಲ್ಲಿ ಸೇವೆಯು ಹೆಚ್ಚಿನ ನಗರಗಳಲ್ಲಿ ಲೈವ್ ಆಗುವ ನಿರೀಕ್ಷೆಯಿದೆ ಎಂದು ಘೋಷಿಸಿದೆ. ಇನ್ನು ಜಿಯೋ ಟ್ರೂ 5G ಒಂದು ಸ್ವತಂತ್ರ ನೆಟ್‌ವರ್ಕ್ ಆಗಿರುವುದರಿಂದ 5G ಸ್ಮಾರ್ಟ್‌ಫೋನ್‌ ಬಳಕೆದಾರರು ಕೂಡ ಇನ್ನು 5G ಸೇವೆ ಪಡೆಯಲು ಸಾಧ್ಯವಾಗ್ತಿಲ್ಲ. ಇದಕ್ಕೆ ಸರಿಯಾದ ಸಾಫ್ಟ್‌ವೇರ್ ಬೆಂಬಲದ ಕೊರತೆಯಿಂದಾಗಿ 5G SA ಸೇವೆಗಳನ್ನು ಬಳಸುವುದಕ್ಕೆ ಸಾಧ್ಯವಾಗ್ತಿಲ್ಲ ಎನ್ನಲಾಗಿದೆ.

ಆಪಲ್

ಇದಕ್ಕಾಗಿ ಆಪಲ್, ಸ್ಯಾಮ್‌ಸಂಗ್ ಮತ್ತು ಗೂಗಲ್‌ನಂತಹ ಪ್ರಮುಖ ಫೋನ್ ತಯಾರಕರು ಮುಂದಿನ ಎರಡು ತಿಂಗಳುಗಳಲ್ಲಿ 5G-ರೆಡಿ OTA (ಓವರ್-ದಿ-ಏರ್) ಅಪ್ಡೇಟ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದಾದ ನಂತರ ಜಿಯೋ ಟ್ರೂ 5G ಸೇವೆಯು 5G ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಈಗಾಗಲೇ ನಥಿಂಗ್ ಫೋನ್ 1 ಜಿಯೋ ಟ್ರೂ 5Gಗೆ ಸೂಕ್ತವಾಗುವ ಅಪ್ಡೇಟ್‌ಗಳನ್ನು ನೀಡಿರುವುದರಿಂದ ಭಾರತದಲ್ಲಿ ಜಿಯೋ ಟ್ರೂ 5G ಬೆಂಬಲಿಸುವ ಮೊದಲ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ. ಇನ್ನು ದೀಪಾವಳಿ ಸಮಯದಲ್ಲಿ ಜಿಯೋ ಟೆಲಿಕಾಂ 5G ಸೇವೆಗ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಕೂಡ ಇದೆ.

Best Mobiles in India

English summary
Jio Has launched its 5G-powered WiFi services in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X