ಜಿಯೋ ಕಡೆಯಿಂದ ಗುಡ್‌ ನ್ಯೂಸ್‌! ಹೀಗೆ ಮಾಡಿದ್ರೆ ಸಿಗುತ್ತೆ 100GB ಉಚಿತ ಡೇಟಾ!

|

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಪ್ರಯೋಜನ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ಗಮನ ಸೆಳೆದಿದೆ. ಇದಲ್ಲದೆ ತನ್ನ ಗ್ರಾಹಕರಿಗೆ ವಿಶೇಷ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಜಿಯೋ ಟೆಲಿಕಾಂ ಹೊಸ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ಪ್ಲಾನ್‌ ಅನ್ನು ಆಯ್ಕೆ ಮಾಡಿದ ಗ್ರಾಹಕರು 100GB ಡೇಟಾವನ್ನು ಉಚಿತವಾಗಿ ಪಡೆಯಹುದಾಗಿದೆ. ಆದರೆ ಈ ಆಫರ್‌ ದೊರೆಯಬೇಕಾದರೆ ನೀವು ಹೊಸ HP ಲ್ಯಾಪ್‌ಟಾಪ್ ಅನ್ನು ಖರೀದಿಸಬೇಕಾಗುತ್ತದೆ.

ಲ್ಯಾಪ್‌ಟಾಪ್‌

ಹೌದು, ಎಲ್‌ಟಿಇ ಸಂಪರ್ಕದೊಂದಿಗೆ ಹೊಸ ಹೆಚ್‌ಪಿ ಲ್ಯಾಪ್‌ಟಾಪ್‌ ಖರೀದಿಸುವ ಗ್ರಾಹಕರಿಗೆ ಜಿಯೋ ಟೆಲಿಕಾಂ ಗುಡ್‌ ನ್ಯೂಸ್‌ ನೀಡಿದೆ. ಇದಕ್ಕಾಗಿ 'HP ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್' ಆಫರ್‌ ಅನ್ನು ಪ್ರಕಟಿಸಿದೆ. ಈ ಆಫರ್‌ನಲ್ಲಿ LTE ಸಂಪರ್ಕದೊಂದಿಗೆ ಹೊಸ HP ಲ್ಯಾಪ್‌ಟಾಪ್ ಅನ್ನು ಖರೀದಿಸುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 365 ದಿನಗಳ ಅವಧಿಗೆ 1,500 ರೂ. ವೆಚ್ಚದ 100GB ಡೇಟಾವನ್ನು ನೀಡಲಿದೆ. ಈ ಮೂಲಕ ಲ್ಯಾಪ್‌ಟಾಪ್‌ ಜೊತೆಗೆ ಡೇಟಾವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಲ್ಯಾಪ್‌ಟಾಪ್

ಇನ್ನು LTE ಕನೆಕ್ಟಿವಿಟಿ ಜೊತೆಗೆ HP ಲ್ಯಾಪ್‌ಟಾಪ್ ಖರೀದಿಸುವ ಗ್ರಾಹಕರು ಒಂದು ವರ್ಷದ ಅವಧಿ ನೀಡುವ 100GB ಡೇಟಾ ಪ್ರಯೋಜನ ಪಡೆಯಬಹುದು. ಅಲ್ಲದೆ ಹೊಸ ಜಿಯೋ ಸಿಮ್‌ ಅನ್ನು ಕೂಡ ಪಡೆದುಕೊಳ್ಳಬಹುದು ಎಂದು ಜಿಯೋ ಕಂಪೆನಿ ಹೇಳಿಕೊಂಡಿದೆ. ಇನ್ನು 100GB ಡೇಟಾವನ್ನು ಖಾಲಿ ಮಾಡಿದರೆ, ಉಳಿದ ಮಾನ್ಯತೆಯ ಅವಧಿಯವರೆಗೆ ಇಂಟರ್‌ನೆಟ್ ವೇಗವನ್ನು 64Kbps ಗೆ ಇಳಿಸಲಾಗುತ್ತದೆ ಎಂದು ಹೇಳಿದೆ. ಹಾಗಾದ್ರೆ ಜಿಯೋ ಪ್ರಕಟಿಸಿರುವ 100GB ಉಚಿತ ಡೇಟಾವನ್ನು ಪಡೆಯುವುದಕ್ಕೆ ಹೆಚ್‌ಪಿ ಕಂಪೆನಿಯ ಯಾವ ಲ್ಯಾಪ್‌ಟಾಪ್‌ ಖರೀದಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲ್ಯಾಪ್‌ಟಾಪ್

ಜಿಯೋ ಪರಿಚಯಿಸಿರುವ 'HP ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್' ಆಫರ್‌ ಹೆಚ್‌ಪಿ ಕಂಪೆನಿ ಎಲ್ಲಾ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ದೊರೆಯುವುದಿಲ್ಲ. ಬದಲಿಗೆ HP 14ef1003tu ಮತ್ತು HP 14ef1002tu ಎಂಬ ಮಾದರಿ ಸಂಖ್ಯೆ ಹೊಂದಿರುವ HP ಲ್ಯಾಪ್‌ಟಾಟ್‌ಗಳಿಗೆ ಮಾತ್ರ ಈ ಆಫರ್‌ ಲಬ್ಯವಾಗಲಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ. ಇದಲ್ಲದೆ ಜಿಯೋ ಟೆಲಿಕಾಂನ ಈ ಆಫರ್‌ಗೆ ಅರ್ಹರಾಗಬೇಕಾದರೆ ಗ್ರಾಹಕರು ಆನ್‌ಲೈನ್‌ ಮೂಲಕ ಹೆಚ್‌ಪಿ ಲ್ಯಾಪ್‌ಟಾಪ್‌ ಖರೀದಿಸಬೇಕಾಗುತ್ತದೆ.

ಜಿಯೋಮಾರ್ಟ್‌

ಇದಲ್ಲದೆ ಜಿಯೋಮಾರ್ಟ್‌.ಕಾಮ್‌ ಮೂಲಕ ಹೆಚ್‌ಪಿ ಲ್ಯಾಪ್‌ಟಾಪ್‌ ಖರೀದಿಸಬೇಕು. ಅಲ್ಲದೆ ಎಲ್‌ಟಿಇ ಕನೆಕ್ಟಿವಿಟಿಗಾಗಿ ಜಿಯೋ ಸಿಮ್‌ ಅನ್ನು ಖರೀದಿಸುವ ಗ್ರಾಹಕರಿಗೆ ಈ ಆಫರ್‌ ಲಭ್ಯವಾಗಲಿದೆ. ಇದರಲ್ಲಿ ನಿಮಗೆ ಉಚಿತವಾಗಿ ಜಿಯೋ ಸಿಮ್‌ ಕೂಡ ಲಭ್ಯವಾಗಲಿದೆ. ನೀವು ಲ್ಯಾಪ್‌ಟಾಪ್‌ ಖರೀದಿಸಿದ ನಂತರ ಜಿಯೋ ಸಿಮ್‌ ಪಡೆದುಕೊಂಡು ಈ ಆಫರ್‌ ಅನ್ನು ಆಕ್ಟಿವ್‌ ಮಾಡಬಹುದು. ಅಂದರೆ HP ಲ್ಯಾಪ್‌ಟಾಪ್‌ಗಳನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಮೂಲಕ ಖರೀದಿಸಬೇಕಾಗುತ್ತದೆ.

ಜಿಯೋಮಾರ್ಟ್‌.ಕಾಮ್‌ನಲ್ಲಿ ಜಿಯೋ ಟೆಲಿಕಾಂನ 100GB ಫ್ರೀ ಡೇಟಾ ಆಫರ್‌ ಪಡೆಯಲು ಹೀಗೆ ಮಾಡಿ?

ಜಿಯೋಮಾರ್ಟ್‌.ಕಾಮ್‌ನಲ್ಲಿ ಜಿಯೋ ಟೆಲಿಕಾಂನ 100GB ಫ್ರೀ ಡೇಟಾ ಆಫರ್‌ ಪಡೆಯಲು ಹೀಗೆ ಮಾಡಿ?

ಹಂತ:1 ಮೊದಲನೆಯದಾಗಿ ಜಿಯೋಮಾರ್ಟ್‌.ಕಾಮ್‌ ಮೂಲಕ HP 14ef1003tu ಮತ್ತು HP 14ef1002tu ಮಾದರಿಗಳಲ್ಲಿ ಒಂದು ಲ್ಯಾಪ್‌ಟಾಪ್ ಅನ್ನು ಆರ್ಡರ್‌ ಮಾಡಿ.
ಹಂತ:2 ನೀವು ಆರ್ಡರ್‌ ಮಾಡಿದ ಲ್ಯಾಪ್‌ಟಾಪ್‌ ನಿಮ್ಮ ಕೈ ಸೇರಿದ ನಂತರ ನೀವು ಖರೀದಿಸಿದ 7 ದಿನಗಳೊಳಗೆ ಇನ್‌ವಾಯ್ಸ್ ಮತ್ತು ಲ್ಯಾಪ್‌ಟಾಪ್‌ನೊಂದಿಗೆ ಹತ್ತಿರದ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ.
ಹಂತ:3 HP ಲ್ಯಾಪ್‌ಟಾಪ್‌ನಲ್ಲಿ ಹೊಸ ಜಿಯೋ ಕನೆಕ್ಟಿವಿಟಿಯನ್ನು ಆಕ್ಟಿವ್‌ ಮಾಡಲು ಸ್ಟೋರ್‌ ಎಕ್ಸಿಕ್ಯೂಟಿವ್ ಅನ್ನು ಕೇಳಿ.
ಹಂತ:4 ಇದೀಗ ಹೊಸ ಸಿಮ್‌ ಪಡೆದುಕೊಳ್ಳಲು ನಿಮ್ಮ ಗುರುತಿನ ಪುರಾವೆಯನ್ನು ನೀಡಿರಿ.
ಹಂತ:5 ಸಿಮ್ ಆಕ್ಟಿವ್‌ ಗೊಳಿಸಿದ ನಂತರ HP ಲ್ಯಾಪ್‌ಟಾಪ್‌ನಲ್ಲಿ ಜಿಯೋ SIM ಅನ್ನು ಸೇರಿಸಿ ಮತ್ತು Jio ಸೇವೆಗಳನ್ನು ಬಳಸಿ.
ಹೀಗೆ ಮಾಡುವ ಮೂಲಕ ಜಿಯೋ ಸಿಮ್‌ನಲ್ಲಿ ನೀವು 100GB ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

HP ಲ್ಯಾಪ್‌ಟಾಪ್ 14s-ef1002TU

HP ಲ್ಯಾಪ್‌ಟಾಪ್ 14s-ef1002TU

ಈ ಲ್ಯಾಪ್‌ಟಾಪ್ 14 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದು 11ನೇ ತಲೆಮಾರಿನ ಇಂಟೆಲ್ ಕೋರ್ i3-1115G4 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಹಾಗೆಯೇ 8GB RAM ಮತ್ತು 512GB PCIe ಸ್ಟೋರೇಜ್ ಸ್ಪೇಸ್‌ ಅನ್ನು ಹೊಂದಿದೆ. ಇದು ವಿಂಡೋಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ ಮೂರು ಸೆಲ್‌ 41Wh Li-ion ಬ್ಯಾಟರಿಯೊಂದಿಗೆ 65Wh AC ಅಡಾಪ್ಟರ್‌ನೊಂದಿಗೆ ಬರುತ್ತದೆ. ಇದು ಡ್ಯುಯಲ್ ಸ್ಪೀಕರ್‌ಗಳನ್ನು ಒಳಗೊಂಡಿದ್ದು, ಇಂಟರ್‌ಬಿಲ್ಟ್‌ ಮೈಕ್ರೋಪ್ರೋನ್‌ ಜೊತೆಗೆ 720p HD ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಅನ್ನು ನೀವು ರಿಲಯನ್ಸ್ ಡಿಜಿಟಲ್‌ನಲ್ಲಿ ಕೇವಲ 44,999 ರೂ.ಬೆಲೆಗೆ ಖರೀದಿಸಬಹುದಾಗಿದೆ.

HP ಲ್ಯಾಪ್‌ಟಾಪ್ 14s-ef1003TU

HP ಲ್ಯಾಪ್‌ಟಾಪ್ 14s-ef1003TU

ಈ ಲ್ಯಾಪ್‌ಟಾಪ್ 14 ಇಂಚಿನ ಫುಲ್‌ HD ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 512GB PCIe ಸ್ಟೋರೇಜ್ ಸ್ಪೇಸ್‌ ಅನ್ನು ಹೊಂದಿದೆ. ಇದು 11ನೇ ತಲೆಮಾರಿನ ಇಂಟೆಲ್ ಕೋರ್ i5-1135G & ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ವಿಂಡೋಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ ಕೂಡ ಮೂರು ಸೆಲ್ 41Wh Li-ion ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿ 65Wh AC ಅಡಾಪ್ಟರ್‌ನೊಂದಿಗೆ ಬರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಹಾಗೆಯೇ ಇಂಟರ್‌ಬಿಲ್ಟ್‌ ಮೈಕ್ರೊಫೋನ್‌ ಜೊತೆಗೆ 720pHD ಕ್ಯಾಮೆರಾವನ್ನು ಒಳಗೊಂಡಿದೆ. ಇದನ್ನು ನೀವು ರಿಲಯನ್ಸ್ ಡಿಜಿಟಲ್‌ನಲ್ಲಿ 56,999 ರೂ.ಬೆಲೆಗೆ ಖರೀದಿಸಬಹುದಾಗಿದೆ.

Best Mobiles in India

Read more about:
English summary
Jio is offering free 100GB 4G data when you buy LTE capable HP laptop

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X