ಭರ್ಜರಿ ಸುದ್ದಿ!..ಮತ್ತೆ ಒಂದು ವರ್ಷ ಉಚಿತ ಸೇವೆ ಮುಂದುವರೆಸಿದ 'ಜಿಯೋ'!

|

ಭಾರತದ ಅತ್ಯಂತ ಯಶಸ್ವಿ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಮತ್ತೆ ತನ್ನ ಉಚಿತ ಪ್ರವೇಶಾತಿಯನ್ನು ಮುಂದುವರೆಸಿದೆ. ಜಿಯೋವಿನ ಹೆಚ್ಚುವರಿ ಡೇಟಾ ಮತ್ತು ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಲು ಅನುವು ಮಾಡಿಕೊಡುವ ಚಂದಾದಾರ ಪ್ರಧಾನ ಸದಸ್ಯತ್ವವನ್ನು ಕಂಪನಿಯು ಮತ್ತೊಂದು ವರ್ಷದ ವರೆಗೆ ತನ್ನ ಬಳಕೆದಾರರಿಗೆ ನೀಡಿ ಗಮನಸೆಳೆದಿದೆ.

ಹೌದು, ಪ್ರೈಮ್ ಚಂದಾದಾರಿಕೆ ಅಡಿಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ಹಲವು ಉಚಿತ ಸೇವೆಗಳನ್ನು ನೀಡಿತ್ತು. ಮೂರು ತಿಂಗಳ ವರೆಗೂ ಡೇಟಾ ಆಫರ್ ಸೇರಿದಂತೆ ತನ್ನೆಲ್ಲಾ ಆಪ್‌ಗಳಿಗೆ ಉಚಿತ ಪ್ರವೇಶಕ್ಕೆ ಪ್ರೈಮ್ ಸದಸ್ಯತ್ವವನ್ನು ಒಂದು ವರ್ಷದವರೆಗೆ ನೀಡಿತ್ತು. ಇದೀಗ ಈ ಉಚಿತ ಜಿಯೋಪೈಮ್ ಸದಸ್ಯತ್ವವನ್ನು ಮತ್ತೊಂದು ವರ್ಷ ಸದಸ್ಯತ್ವಕ್ಕೆ ಸ್ವಯಂ-ನವೀಕರಿಸಿದೆ.

ಭರ್ಜರಿ ಸುದ್ದಿ!..ಮತ್ತೆ ಒಂದು ವರ್ಷ ಉಚಿತ ಸೇವೆ ಮುಂದುವರೆಸಿದ 'ಜಿಯೋ'!

ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್, ಜಿಯೋ ಟಿವಿ, ಸೇರಿದಂತೆ ಜಿಯೋವಿನ ಎಲ್ಲಾ ಇತರ ಅಪ್ಲಿಕೇಶನ್‌ಗಳಿಗೆ ಈ ಪ್ರಧಾನ ಸದಸ್ಯತ್ವವು ತಡೆರಹಿತ ಪ್ರವೇಶವನ್ನು ನೀಡುತ್ತದೆ. ಜಿಯೋ ಸಾಮಾನ್ಯ ಸದಸ್ಯರಿಗೆ ಲಭ್ಯವಿಲ್ಲದ ಹೆಚ್ಚುವರಿ ಡೇಟಾ ಮತ್ತು ಪೂರಕ ಕೊಡುಗೆಗಳನ್ನು ಬಳಕೆದಾರರು ಪಡೆಯುತ್ತಾರೆ. ಇದರಿಂದ ಮೂರು ತಿಂಗಳ ಡೇಟಾ ಆಫರ್ ಮತ್ತೆ ಮುಂದುವರೆದಿದೆ.

ಜಿಯೋ ಬಳಕೆದಾರರು ಪ್ರೈಮ್ ಸದಸ್ಯತ್ವದ ಅಡಿಯಲ್ಲಿ ತಮ್ಮ ಪ್ರಧಾನ ಸದಸ್ಯತ್ವವನ್ನು ನವೀಕರಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿಯಬಹುದಾಗಿದ್ದು, ಇದನ್ನು 'ಮೈ ಜಿಯೋ' ಅಪ್ಲಿಕೇಶನ್ ತೆರೆದು ಪರೀಕ್ಷಿಸಬಹುದು. ಮೈ ಜಿಯೋ ಆಪ್ ತೆರೆದು 'ನನ್ನ ಯೋಜನೆಗಳು'ಆಯ್ಕೆಯನ್ನು ಕ್ಲಿಕ್ ಮಾಡಿದರೆ ಜಿಯೋಪ್ರೈಮ್ ಸದಸ್ಯತ್ವದ ಬಗ್ಗೆ ನೀವು ತಿಳಿಯಬಹುದು.

ಭರ್ಜರಿ ಸುದ್ದಿ!..ಮತ್ತೆ ಒಂದು ವರ್ಷ ಉಚಿತ ಸೇವೆ ಮುಂದುವರೆಸಿದ 'ಜಿಯೋ'!

ಟಿವಿ ಪ್ರದರ್ಶನಗಳು, ಚಲನಚಿತ್ರಗಳು, ನಿಯತಕಾಲಿಕೆಗಳು ಮತ್ತು ಹೆಚ್ಚಿನವುಗಳಿಗೆ ಪೂರಕ ಪ್ರವೇಶ ಸೇರಿದಂತೆ ಹೊಸ ಒಪ್ಪಂದಗಳು ಮತ್ತು ಕೊಡುಗೆಗಳಿಗೆ ಜಿಯೋ ಪ್ರೈಮ್ ಪ್ರವೇಶವನ್ನು ಒದಗಿಸುತ್ತದೆ. ಪ್ರಧಾನ ಸದಸ್ಯತ್ವಗಳ ಅಡಿಯಲ್ಲಿ, ಬಳಕೆದಾರರು ಜಿಯೋ ಕೆಬಿಸಿ ಪ್ಲೇ ,ಉಚಿತ ಕ್ರಿಕೆಟ್ ಲೈವ್ ವೀಕ್ಷಣೆ, 24 /7 ಗಂಟೆಗಳ ಲೈವ್ ಟಿವಿಯನ್ನು ಉಚಿತವಾಗಿ ವೀಕ್ಷಸಬಹುದು.

ಓದಿರಿ: 2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

ಒಂದು ಕಾಲದಲ್ಲಿ ಲೈಫ್‌ಟೈಮ್ ಉಚಿತ ವ್ಯಾಲಿಡಿಟಿ ಆಫರ್ ನೀಡುವುದಾಗಿ ಹೇಳಿಕೊಂಡಿದ್ದ ಬಹುತೇಕ ಟೆಲಿಕಾಂ ಕಂಪನಿಗಳು, ಈಗ ಪ್ರತಿ ಕಡಿಮೆ ಬಳಕೆ ಸಿಮ್‌ಗೆ ಮಾಸಿಕ 35 ರೂ.ಗಳ ರೀಚಾರ್ಜ್‌ ಮಾಡಿದರೆ ಮಾತ್ರ ಕರೆ ಮಾಡುವ, ಎಸ್‌ಎಂಎಸ್‌ ಕಳುಹಿಸುವ ತರಹದ ಒಳ ಹಾಗೂ ಹೊರಹೋಗುವ ಸೇವೆಗಳನ್ನು ನೀಡುವುದಾಗಿ ಹೇಳುತ್ತಿವೆ. ಜೊತೆಗೆ ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ಚಾಲ್ತಿಗೆ ತಂದಿವೆ.!

ಏರ್‌ಟೆಲ್‌ನಂಥಹ ಜನಪ್ರಿಯ ಕಂಪನಿಯೇ ತನ್ನ ಲೈಫ್ಟೈಮ್ ಗ್ರಾಹಕರಿಗೆ 2029ರವರೆಗೆ ವ್ಯಾಲಿಡಿಟಿ ಎಂದು ಘೋಷಿಸಿತ್ತು. ಆದರೆ, ಈಗ ಅದಕ್ಕೆ ದಿಢೀರ್‌ ಆಗಿ ಕೊಕ್ ನೀಡಿದೆ. ಈಗ ಚಾಲ್ತಿಯಲ್ಲಿಲ್ಲದ ಸಿಮ್‌ನಿಂದ ಒಂದೊಮ್ಮೆ ಡಿಯಾಕ್ಟೀವ್ ಆದ ಸಿಮ್ ಅನ್ನು ಕೂಡ 35 ರೂ. ರೀಚಾರ್ಜ್‌ ಮೂಲಕ ಮೂರು ತಿಂಗಳಲ್ಲಿ ಮರುಚಾಲನೆಗೊಳಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇವೆಲ್ಲವೂ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗೆ ಟೆಲಿಕಾಂ ಕಂಪೆನಿಗಳ ಚಾಣಾಕ್ಷ ತಂತ್ರಗಳಾಗಿವೆ.

ಇವೆಲ್ಲವೂ ಕಾನೂನು ಉಲ್ಲಂಘನೆಯಾಗಿ ಕಂಡುಬಂದರೂ ದೂರ ಸಂಪರ್ಕ ಇಲಾಖೆ ಕ್ರಮ ತೆಗೆದುಕೊಳ್ಳದೇ ಇರುವುದನ್ನು ನಾವು ನೋಡುತ್ತಿದ್ದೇವೆ. ಮೊತ್ತಮೊದಲಾಗಿ ತನ್ನ ಲೈಫ್ಟೈಮ್ ವ್ಯಾಲಿಡಿಟಿಯ ಭರವಸೆಯನ್ನು ಟೆಲಿಕಾಂ ಕಂಪೆನಿಗಳು ಹಿಂತೆಗೆದುಕೊಂಡಿರುವುದು ಹೇಗೆ?, ವ್ಯಾಲಿಡಿಟಿ ಅವಧಿ ಮುಗಿಯುವುದಕ್ಕೆ ಮುನ್ನ ಸಿಮ್ ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಟ್ರಾಯ್ ಹೇಳಿದ್ದ ನಿಯಮವನ್ನು ಟೆಲಿಕಾಂ ಕಂಪೆನಿಗಳು ಮೀರುತ್ತಿರುವುದು ಏಕೆ ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಕೆಲ ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದೆ.!

ಕೆಲ ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದೆ.!

ಈಗ ಮೊಬೈಲ್‌ ಕಂಪನಿಗಳು ಚಾಲ್ತಿಯಲ್ಲಿಲ್ಲದ ಸಿಮ್‌ನಿಂದ ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ಚಾಲ್ತಿಗೆ ತಂದಿವೆ. ಮಾಸಿಕ 35 ರೂ.ಗಳ ರೀಚಾರ್ಜ್‌ ಮಾಡಿದರೆ ಮಾತ್ರ ಒಳ ಹಾಗೂ ಹೊರ ಹೋಗುವ ನಿಯಮವನ್ನು ತೆಗೆದುಕೊಂಡಿವೆ. ಒಂದೊಮ್ಮೆ ಡಿಯಾಕ್ಟೀವ್ ಆದ ಸಿಮ್ ಅನ್ನು ಕೂಡ 35 ರೂ. ರೀಚಾರ್ಜ್‌ ಮೂಲಕ ಮೂರು ತಿಂಗಳಲ್ಲಿ ಮರುಚಾಲನೆಗೊಳಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದ್ದು ಏಕೆ?

ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದ್ದು ಏಕೆ?

ಟೆಲಿಕಾಂ ಕಂಪೆನಿಗಳಿಗೆ ಲಾಭ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳು ತಮ್ಮ ಪರಿಸ್ಥಿತಿಯನ್ನು ಅವಲೋಕಿಸಿವೆ. ಜಿಯೋ ಬಂದ ನಂತರ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಅತ್ಯಂತ ಕಡಿಮೆ ಕಂದಾಯ ಸಂಗ್ರಹವಾಗುತ್ತಿರುವುದು ಅವುಗಳಿಗೆ ತಲೆಕೆಡಿಸಿದಂತಿದೆ. ಹಾಗಾಗಿ, ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗೆ ಅವುಗಳು ಚಾಣಾಕ್ಷ ತಂತ್ರವನ್ನೇ ಹೆಣೆದಿದ್ದು, ಮೊತ್ತಮೊದಲಾಗಿ ತನ್ನ ಲೈಫ್ಟೈಮ್ ವ್ಯಾಲಿಡಿಟಿಯ ಭರವಸೆಯನ್ನು ಹಿಂತೆಗೆದುಕೊಂಡಿವೆ.

ಟ್ರಾಯ್ ನಿಯಮಗಳು ಹೇಳುವುದು ಏನು?

ಟ್ರಾಯ್ ನಿಯಮಗಳು ಹೇಳುವುದು ಏನು?

ಟ್ರಾಯ್‌ನ ನಿಯಮಗಳ ಪ್ರಕಾರವೇ, ಯಾವುದೇ ಒಂದು ಪ್ಲಾನ್ ಘೋಷಣೆಯಾದ ನಂತರ ಅದಕ್ಕೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುತ್ತದೆ. ಈ ವೇಳೆಯೊಳಗೆ ಗ್ರಾಹಕ ತನ್ನ ಪ್ಲಾನ್ ಬದಲಿಸಬಹುದೇ ವಿನಃ ಕಂಪನಿ ಪ್ಲಾನ್ ಅನ್ನು ಗ್ರಾಹಕನಿಂದ ಕಿತ್ತುಕೊಳ್ಳುವಂತಿಲ್ಲ ಎಂದು ಹೇಳುತ್ತದೆ.ಅಲ್ಲದೆ ಈಗಾಗಲೇ 2029ರವರೆಗೆ ಲೈಫ್ಟೈಮ್‌ ವ್ಯಾಲಿಡಿಟಿ ಎಂದವರಿಂದ ವ್ಯಾಲಿಡಿಟಿಯನ್ನು ಕಸಿದುಕೊಳ್ಳುವುದು ಕೂಡ ಕಾನೂನು ಸಮ್ಮತವಲ್ಲ. ಹಾಗಾಗಿ, ಇದು ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದೆ.

ಕಾನೂನು ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತಿ?

ಕಾನೂನು ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತಿ?

ಟ್ರಾಯ್‌ ಪ್ರಕಾರ, ಮೂರು ರೀತಿಯ ರೀಚಾರ್ಜ್‌ಗಳಿಗೆ ಟೆಲಿಕಾಂ ಕಂಪೆನಿಗಳಿಗೆ ಅವಕಾಶವಿದೆ. ಯಾವುದೇ ಮೌಲ್ಯವರ್ಧಿತ ಸೇವಾ ರೀಚಾರ್ಜ್‌ ಸೇವೆಯು ದರಪಟ್ಟಿಯನ್ನು ಹಾಗೂ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಲೇಬೇಕು. ಆದರೆ, ಬಹುತೇಕ ಕಂಪೆನಿಗಳು 1 ರಿಂದ ಮೂರು ತಿಂಗಳ ವ್ಯಾಲಿಡಿಟಿ ರೀಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸುತ್ತವೆ. ಆರು ತಿಂಗಳ ವ್ಯಾಲಿಡಿಟಿ ಕೊಡದ ಪ್ಲಾನ್ ವೋಚರ್‌ಗಳ ವಿಚಾರದಲ್ಲಿ ಟ್ರಾಯ್‌ ಮಧ್ಯಪ್ರವೇಶಿಸಿ ಗ್ರಾಹಕರ ಪರ ನಿಲ್ಲಬೇಕಿತ್ತು. ಆದರೆ, ಈ ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತವಾಗಿದೆ.

ಲೈಫ್ಟೈಮ್ ಎಂದರೆ ಆರು ತಿಂಗಳು ಮಾತ್ರ!?

ಲೈಫ್ಟೈಮ್ ಎಂದರೆ ಆರು ತಿಂಗಳು ಮಾತ್ರ!?

ಟ್ರಾಯ್‌ನ ನಿಯಮಗಳ ಪ್ರಕಾರವೇ ಒಂದು ಪ್ಲಾನ್‌ ಘೋಷಣೆಯಾದ ನಂತರ ಅದಕ್ಕೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುತ್ತದೆ. ಈ ವೇಳೆಯೊಳಗೆ ಗ್ರಾಹಕ ತನ್ನ ಪ್ಲಾನ್‌ ಬದಲಿಸಬಹುದೇ ವಿನಃ ಕಂಪನಿ ಪ್ಲಾನ್‌ಅನ್ನು ಗ್ರಾಹಕನಿಂದ ಕಿತ್ತುಕೊಳ್ಳುವಂತಿಲ್ಲ. ಅಲ್ಲದೆ ಈಗಾಗಲೇ 2029ರವರೆಗೆ ಲೈಫ್ಟೈಮ್‌ ವ್ಯಾಲಿಡಿಟಿ ಎಂದವರಿಂದ ವ್ಯಾಲಿಡಿಟಿಯನ್ನು ಕಸಿದುಕೊಳ್ಳುವುದು ಕೂಡ ಕಾನೂನು ಸಮ್ಮತವಲ್ಲ. ಆದರೆ, ಈಗ ಹೊಸದಾಗಿ ಬರುವವರಿಗೆ ಲೈಫ್ಟೈಮ್‌ ಎಂದರೆ ಆರು ತಿಂಗಳು ಮಾತ್ರ ಎಂಬಂತಾಗಿದೆ.

ಮೂರು ತಿಂಗಳಿಗೆ 20 ರೂ. ಕನ್ನವೇಕೆ?

ಮೂರು ತಿಂಗಳಿಗೆ 20 ರೂ. ಕನ್ನವೇಕೆ?

ಈಗ ಟೆಲಿಕಾಂ ಕಂಪೆನಗಳು ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ತಂದಿವೆ. ಚಾಲನೆಯಲ್ಲಿ ಇಲ್ಲದ ಸಿಮ್‌ನಲ್ಲಿ ಭಾರೀ ಹಣ ಖಾಲಿ ಉಳಿದಿರುವುದನ್ನು ಕಬಳಿಸಲು ಈ ರೀತಿ ಅವುಗಳು ಪ್ಲ್ಯಾನ್ ಮಾಡಿಕೊಂಡಿವೆ. ನಿಮಗೆ ಗೊತ್ತಾ?, ಬಿಲಿಯನ್‌ಗಟ್ಟಲೆ ಹಣ ಹೀಗೆ ಚಾಲ್ತಿಯ ಸಿಮ್‌ಗಳ ಟಾಕ್‌ಟೈಮ್‌ನಲ್ಲಿದೆ. ಇದನ್ನು ಕಬಳಿಸಲು ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನಹಾಕಲಾಗುತ್ತಿದೆ.

ರಂಗೋಲಿ ಕೆಳಗೆ ಟೆಲಿಕಾಂ ಕಂಪೆನಿಗಳು!

ರಂಗೋಲಿ ಕೆಳಗೆ ಟೆಲಿಕಾಂ ಕಂಪೆನಿಗಳು!

ಜಿಯೋ ಬಂದ ನಂತರ ಇತರೆ ಟೆಲಿಕಾಂ ಕಂಪೆನಿಗಳು ರಂಗೋಲಿ ಕೆಳಗೆ ತೂರಲು ಶುರು ಮಾಡಿವೆ. ಸಿಮ್ ಖರೀದಿಸಿದ ಸಮಯದಲ್ಲಿ ಸಿಮ್ ಶುಲ್ಕ, ಆಕ್ಟಿವೇಶನ್ ಶುಲ್ಕಗಳನ್ನು ಪಡೆದಿರುವ ಟೆಲಿಕಾಂ ಕಂಪೆನಿಗಳು ಅವುಗಳೆಲ್ಲವನ್ನು ಗಾಳಿಗೆ ತೂರಿವೆ. ಒಂದು ಬಾರಿ ಗ್ರಾಹಕರಿಗೆ ಮಾತು ನೀಡಿರುವ ಸೇವಾ ಕಂಪನಿಗಳು ಸಿಮ್‌ ಡಿಯಾಕ್ಟೀವ್ ಮುಂದಾಗುವುದು ಸಮ್ಮತವಲ್ಲ. ಆದರೆ, ಟ್ರಾಯ್‌ನ ಒಂದು ಅವಕಾಶವನ್ನೇ ಮೊಬೈಲ್‌ ಕಂಪನಿಗಳು ದುರುಪಯೋಗಪಡಿಸಿಕೊಂಡು ಈಗ ಹೊಸ ಸೂತ್ರಗಳನ್ನು ರೂಪಿಸುತ್ತಿವೆ. ಇದಕ್ಕೆ ಬ್ರೇಕ್ ಸಿಗದೇ ಮುಂದುವರೆದಿದೆ.

ಟ್ರಾಯ್‌ನ ಒಂದು ಅವಕಾಶ ಅವಾಂತರಕ್ಕೆ ಕಾರಣ?

ಟ್ರಾಯ್‌ನ ಒಂದು ಅವಕಾಶ ಅವಾಂತರಕ್ಕೆ ಕಾರಣ?

ಒಂದು ನಂಬರ್‌ನಿಂದ ಒಳಬರುವ ಕರೆಗಳನ್ನು ಸ್ವೀಕರಿಸಿರುವುದು ಅಥವಾ ಕರೆ ಮಾಡಿರುವುದು ಸಿಮ್ ಚಾಲ್ತಿಯ ಸಂಕೇತ. ಬೇರೆಯವರಿಗೆ ಎಸ್‌ಎಂಎಸ್‌ ಕಳುಹಿಸಿದ್ದನ್ನೂ ಸಹ ಸಿಮ್ ಚಾಲ್ತಿ ಎಂದು ಹೇಳಲಾಗಿದೆ. ಡಾಟಾ ಬಳಕೆ ಮಾಡುತ್ತಿದ್ದರೆ, ಮೌಲ್ಯ ವರ್ಧಿತ ಸೇವೆ ಚಾಲನೆಯಲ್ಲಿದ್ದರೆ ಸಿಮ್ ಅನ್ನು ಅನೂರ್ಜಿತಗೊಳಿಸುವಂತಿಲ್ಲ. ಆದರೆ, ಟ್ರಾಯ್‌ ಇನ್ನೂ ಮುಂದುವರೆದು, ಈ ನಿಯಮಗಳ ಹೊರತಾಗಿ ಸಿಮ್‌ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ ಎಂದು ಘೋಷಿಸಿದೆ. ಇದರಿಂದ ಈ ಅವಾಂತರ ಸೃಷ್ಟಿಯಾಗಿದೆ ಎನ್ನಲಾಗುತ್ತದೆ.

ಪುನರ್ವಿಮರ್ಶೆಗೆ ಮುಂದಾಗದಿದ್ದರೆ ಕಷ್ಟಕಷ್ಟ!

ಪುನರ್ವಿಮರ್ಶೆಗೆ ಮುಂದಾಗದಿದ್ದರೆ ಕಷ್ಟಕಷ್ಟ!

ಆ ಸಮಯದಲ್ಲಿ ಸಿಮ್‌ ಶುಲ್ಕ, ಆಕ್ಟಿವೇಶನ್ ಶುಲ್ಕಗಳನ್ನು ಪಡೆದಿರುವ ಮೊಬೈಲ್ ಕಂಪೆನಿಗಳು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿವೆ. ಸಿಮ್ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ ಎಂದು ಟ್ರಾಯ್‌ ಘೋಷಿಸಿ ಒಂದು ರಿತಿಯಲ್ಲಿ ಇಂಗುತಿಂದ ಮಂಗನಂತಾಗಿದೆ. ಇಡೀ ದೇಶದ ಎಲ್ಲ ಮೊಬೈಲ್ ಗ್ರಾಹಕರನ್ನು ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ಟ್ರಾಯ್ ತಕ್ಷಣ ಪುನರ್ವಿಮರ್ಶೆಗೆ ಮುಂದಾಗಬೇಕಿದೆ. ಮೂಲ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಟ್ರಾಯ್‌ ನಿರ್ದೇಶನ ನೀಡುವುದನ್ನು ನಾವು ಕಾಯುತ್ತಿದ್ದೇವೆ.!

Best Mobiles in India

English summary
Jio is Offering Free JioPrime Subscription to Users for One Year, Here’s How You Can Check.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X