ಫುಟ್ಬಾಲ್‌ ಪ್ರೇಮಿಗಳಿಗಾಗಿ ಜಿಯೋ ಕಡೆಯಿಂದ ಐದು ಹೊಸ ಪ್ಲಾನ್‌ ಲಾಂಚ್‌!

|

ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ವೀಕ್ಷಿಸಲು ಬಯಸುವ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದೆ. ಕತಾರ್‌ನಲ್ಲಿ ಪ್ರಾರಂಭವಾಗುವ 2022ರ ಫಿಪಾ ಫುಟ್ಬಾಲ್‌ ವಿಶ್ವಕಪ್‌ ಅನ್ನು ವೀಕ್ಷಿಸಲು ಬಯಸುವ ಅಭಿಮಾನಿಗಳಿಗಾಗಿ ಐದು ಹೊಸ ಇಂಟರ್‌ ನ್ಯಾಷನಲ್‌ ರೋಮಿಂಗ್‌(IR) ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಕತಾರ್, ಯುಎಇಗೆ ಪ್ರಯಾಣಿಸುವ ಫುಟ್‌ಬಾಲ್ ಅಭಿಮಾನಿಗಳಿಗೆ ಲಭ್ಯವಾಗಲಿದೆ ಎಂದು ಜಿಯೋ ಟೆಲಿಕಾಂ ಹೇಳಿದೆ.

ಜಿಯೋ

ಹೌದು, ಜಿಯೋ ಟೆಲಿಕಾಂ ಐದು ಹೊಸ ಇಂಟರ್‌ ನ್ಯಾಷನಲ್‌ ರೋಮಿಂಗ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಸೌದಿ ಅರೇಬಿಯಾ ಮತ್ತು ಕತಾರ್‌ನಲ್ಲಿ ನಡೆಯಲಿರುವ ಫಿಫಾ ಪುಟ್ಬಾಲ್‌ ವಿಶ್ವಕಪ್‌ ಪಂದ್ಯಗಳ ಸಂಖ್ಯೆಯನ್ನು ಆಧರಿಸಿ ಸೂಕ್ತವಾದ ಪ್ಲಾನ್‌ ಖರೀದಿಸಲು ಚಂದಾದಾರರಿಗೆ ಅವಕಾಶ ನೀಡಲಿದೆ. ಈ ಅಂತರರಾಷ್ಟ್ರೀಯ ರೋಮಿಂಗ್ ಪ್ಲಾನ್‌ಗಳು jio.com ನಲ್ಲಿ ಅಥವಾ ಕಂಪನಿಯ ಮೈಜಿಯೋ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಜಿಯೋ ಹೊಸದಾಗಿ ಪರಿಚಯಿಸಿರುವ ರೋಮಿಂಗ್‌ ಪ್ಲಾನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ 1,122ರೂ. IR ರೋಮಿಂಗ್ ಪ್ಲಾನ್‌

ಜಿಯೋ 1,122ರೂ. IR ರೋಮಿಂಗ್ ಪ್ಲಾನ್‌

ಜಿಯೋ ಟೆಲಿಕಾಂನ ಹೊಸ ರೋಮಿಂಗ್‌ ಪ್ಲಾನ್‌ ಡೇಟಾ ಪ್ಲಾನ್‌ ಆಗಿದೆ. ಇದು ಐದು ದಿನಗಳ ಮಾನ್ಯತೆಯನ್ನು ಪಡೆದಿದ್ದು, 1GB ಡೇಟಾವನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ನೀವು ಒಮ್ಮೆ ಎಲ್ಲಾ ಡೇಟಾವನ್ನು ಬಳಸಿದ ನಂತರ ಪ್ರಮಾಣಿತ PayGo ದರಗಳು ಅನ್ವಯವಾಗಲಿವೆ.

ಜಿಯೋ 1,599ರೂ. IR ರೋಮಿಂಗ್ ಪ್ಲಾನ್‌

ಜಿಯೋ 1,599ರೂ. IR ರೋಮಿಂಗ್ ಪ್ಲಾನ್‌

ಈ ಪ್ಲಾನ್‌ 15 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಲೋಕಲ್‌ ಕಾಲ್‌, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 150 ನಿಮಿಷಗಳ ವಾಯ್ಸ್‌ ಕಾಲ್‌ಗಳನ್ನು ನೀಡುತ್ತದೆ. ಇದು 1GB ಡೇಟಾ ಮತ್ತು 100 SMS ಗಳನ್ನು ಸಹ ನೀಡುತ್ತದೆ. ಇದರಲ್ಲಿ ವೈಫೈ ಕರೆಗಳ ಮೂಲಕ ಒಳಬರುವ ಕರೆಗಳಿಗೆ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಜಿಯೋ 3,999ರೂ. IR ರೋಮಿಂಗ್ ಪ್ಲಾನ್‌

ಜಿಯೋ 3,999ರೂ. IR ರೋಮಿಂಗ್ ಪ್ಲಾನ್‌

ಜಿಯೋ ಟೆಲಿಕಾಂನ ಈ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ಇದು 250 ನಿಮಿಷಗಳ ಲೋಕಲ್‌ ವಾಯ್ಸ್‌ ಕಾಲ್‌ ಮತ್ತು ಹೆಚ್ಚುವರಿ 250 ನಿಮಿಷಗಳ ಇನ್‌ಕಮಿಂಗ್‌ ಕಾಲ್‌ಗಳು, ಭಾರತಕ್ಕೆ ರಿಟರ್ನ್‌ ಕಾಲ್‌ಗಳನ್ನು ನೀಡಲಿದೆ. ಇದು 3GB ಡೇಟಾ ಮತ್ತು 100 SMS ಗಳನ್ನು ಸಹ ನೀಡುತ್ತದೆ. ಇದರಲ್ಲಿ ವೈಫೈ ಕಾಲ್‌ಗಳ ಮೂಲಕ ಇನ್‌ಕಮಿಂಗ್‌ ಕಾಲ್‌ಗಳ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಜಿಯೋ ಹೇಳಿದೆ.

ಜಿಯೋ 5,122ರೂ. IR ರೋಮಿಂಗ್ ಪ್ಲಾನ್‌

ಜಿಯೋ 5,122ರೂ. IR ರೋಮಿಂಗ್ ಪ್ಲಾನ್‌

ಜಿಯೋ 5,122ರೂ. IR ರೋಮಿಂಗ್ ಪ್ಲಾನ್‌ 5GB ಡೇಟಾವನ್ನು ನೀಡಲಿದೆ. ಈ ಪ್ಲಾನ್‌ 21 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರಲ್ಲಿ ಎಲ್ಲಾ ಡೇಟಾವನ್ನು ಬಳಸಿದ ನಂತರ ಪ್ರಮಾಣಿತ PayGo ರೇಟ್‌ಗಳು ಅನ್ವಯವಾಗುತ್ತವೆ.

ಜಿಯೋ 6,799ರೂ. IR ರೋಮಿಂಗ್ ಪ್ಲಾನ್‌

ಜಿಯೋ 6,799ರೂ. IR ರೋಮಿಂಗ್ ಪ್ಲಾನ್‌

ಜಿಯೋ ಟೆಲಿಕಾಂ 6,799ರೂ. IR ರೋಮಿಂಗ್ ಪ್ಲಾನ್‌ 500 ನಿಮಿಷಗಳ ವಾಯ್ಸ್‌, 100 SMS ಮತ್ತು 5GB ಡೇಟಾ ಪ್ರಯೋಜನ ನೀಡಲಿದೆ. ಇದರಲ್ಲಿ Wi-Fi ಕಾಲ್‌ಗಳ ಮೂಲಕ ಒಳಬರುವ ಕರೆಗಳಿಗೆ ನಿಗದಿತ ಮಿತಿಯು ಮುಕ್ತಾಯಗೊಂಡ ನಂತರ, ಚಂದಾದಾರರಿಗೆ 1 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ ಔಟ್‌ ಗೋಯಿಂಗ್‌ ಕಾಲ್‌ಗಳ ವ್ಯಾಲಿಡಿಟಿ ಮುಕ್ತಾಯಗೊಂಡಾಗ ಸ್ಟ್ಯಾಂಡರ್ಡ್ PayGo ದರಗಳು ಅನ್ವಯಿಸುತ್ತವೆ ಎಂದು ಜಿಯೋ ಟೆಲಿಕಾಂ ಹೇಳಿದೆ.

Best Mobiles in India

Read more about:
English summary
Jio launched five new international roaming plans for football fans

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X