ಜಿಯೋದಿಂದ ಮತ್ತೆ ಎರಡು ಪ್ಲ್ಯಾನ್‌ ಬಿಡುಗಡೆ; ಡೇಟಾ ಎಷ್ಟು ಗೊತ್ತಾ?

|

ಭಾರತೀಯ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ಭಿನ್ನ ಬೆಲೆಯಲ್ಲಿ ಹಲವು ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಆ ಪೈಕಿ ಜಿಯೋ ಅಲ್ಪಾವಧಿ ಬೆಲೆಯಿಂದ ದುಬಾರಿ ಬೆಲೆಯ ವರೆಗೂ ಯೋಜನೆಗಳ ಆಯ್ಕೆ ಹೊಂದಿದೆ. ಅಧಿಕ ವ್ಯಾಲಿಡಿಟಿ ಜೊತೆಗೆ ದೈನಂದಿನ ಡೇಟಾ ಪ್ರಯೋಜನದ ಯೋಜನೆಗಳನ್ನು ರೀಚಾರ್ಜ್ ಮಾಡಲು ಗ್ರಾಹಕರು ಮನಸ್ಸು ಮಾಡುತ್ತಾರೆ. ಈ ನಿಟ್ಟಿನಲ್ಲಿ ಜಿಯೋ ಟೆಲಿಕಾಂ ನೂತನವಾಗಿ ಎರಡು ಭರ್ಜರಿ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಜಿಯೋದಿಂದ ಮತ್ತೆ ಎರಡು ಪ್ಲ್ಯಾನ್‌ ಬಿಡುಗಡೆ; ಡೇಟಾ ಎಷ್ಟು ಗೊತ್ತಾ?

ಹೌದು, ಜಿಯೋ ಟೆಲಿಕಾಂ ತನ್ನ ಬಹುತೇಕ ಪ್ರಿಪೇಯ್ಡ್‌ ಯೋಜನೆಗಳಲ್ಲಿ ಆಕರ್ಷಕ ಡೇಟಾ ಪ್ರಯೋಜನ ನೀಡಿದೆ. ಆ ಸಾಲಿಗೆ ಈಗ ಜಿಯೋ 2878 ರೂ ಮತ್ತು ಜಿಯೋ 2998 ರೂ. ಯೋಜನೆಗಳನ್ನು ಸೇರ್ಪಡೆ ಮಾಡಿದೆ. ಈ ಎರಡು ಹೊಸ ಪ್ರಿಪೇಯ್ಡ್‌ ಯೋಜನೆಗಳು ಆಕರ್ಷಕ ದೈನಂದಿನ ಡೇಟಾ ಪ್ರಯೋಜನ ಪಡೆದಿದ್ದು, ಜೊತೆಗೆ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿರುವುದು ವಿಶೇಷ. ಹೀಗಾಗಿ ಅಧಿಕ ಡೇಟಾ ಅಗತ್ಯ ಇರುವ, ಮನೆಯಿಂದ ಕೆಲಸ ಮಾಡುವವರಿಗೆ ಸೂಕ್ತ ಎನಿಸಲಿವೆ. ಹಾಗಾದರೇ ಜಿಯೋ 2878ರೂ ಮತ್ತು ಜಿಯೋ 2998ರೂ. ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋದಿಂದ ಮತ್ತೆ ಎರಡು ಪ್ಲ್ಯಾನ್‌ ಬಿಡುಗಡೆ; ಡೇಟಾ ಎಷ್ಟು ಗೊತ್ತಾ?

ಜಿಯೋ 2878 ರೂ. ಯೋಜನೆಯ ಪ್ರಯೋಜನಗಳು
ಜಿಯೋ ಟೆಲಿಕಾಂನ ಹೊಸ 2878 ರೂ ಪ್ರಿಪೇಯ್ಡ್ ಯೋಜನೆಯು ಗ್ರಾಹಕರಿಗೆ ಪ್ರತಿದಿನ 2GB ದೈನಂದಿನ ಡೇಟಾ ಒಳಗೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 730GB ಡೇಟಾ ಪ್ರಯೋಜನ ಸಿಗಲಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದೆ. ಬಳಕೆದಾರರು ನಿಗದಿತ ದೈನಂದಿನ ಡೇಟಾ FUP ಬಳಕೆ ಮಾಡಿದ ಬಳಿಕ ಇಂಟರ್ನೆಟ್ ವೇಗವು 64 Kbps ಗೆ ಇಳಿಯುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ.

ಜಿಯೋ 2998 ರೂ. ಯೋಜನೆಯ ಪ್ರಯೋಜನಗಳು
ಜಿಯೋ ಟೆಲಿಕಾಂನ ಹೊಸ 2998 ರೂ. ಪ್ರಿಪೇಯ್ಡ್ ಯೋಜನೆಯು ಗ್ರಾಹಕರಿಗೆ ಪ್ರತಿದಿನ 2.5GB ದೈನಂದಿನ ಡೇಟಾ ಒಳಗೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 912.5GB ಡೇಟಾ ಪ್ರಯೋಜನ ಸಿಗಲಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದೆ. ಬಳಕೆದಾರರು ನಿಗದಿತ ದೈನಂದಿನ ಡೇಟಾ FUP ಬಳಕೆ ಮಾಡಿದ ಬಳಿಕ ಇಂಟರ್ನೆಟ್ ವೇಗವು 64 Kbps ಗೆ ಇಳಿಯುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಜಿಯೋ ಟೆಲಿಕಾಂನ ಇತರೆ ಡೇಟಾ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.

ಜಿಯೋದಿಂದ ಮತ್ತೆ ಎರಡು ಪ್ಲ್ಯಾನ್‌ ಬಿಡುಗಡೆ; ಡೇಟಾ ಎಷ್ಟು ಗೊತ್ತಾ?

ಜಿಯೋದ 2879 ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋದ 2545ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

Best Mobiles in India

English summary
Jio Launches New Rs 2878 and Rs 2998 Plans: Check Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X